3 ವರ್ಷಗಳ ಹಿಂದೆ ಥಾಯ್ಲಾಂಡ್‌ನ ಐಲ್ಯಾಂಡ್‌ವೊಂದಕ್ಕೆ ರಜೆಯ ಮೋಜಿಗೆ ತೆರಳಿದ್ದ ಆಸ್ಟ್ರೇಲಿಯಾದ ಸ್ಪಿನ್ ದಂತಕತೆ ಶೇನ್ ವಾರ್ನ್ ಶವವಾಗಿ ದೊರೆತಾಗ ಇಡೀ ಕ್ರಿಕೆಟ್ ಜಗತ್ತನ್ನು ಬೆಚ್ಚಿಬಿದ್ದಿತ್ತು. ಏಕಾಏಕಿ ಕಾರ್ಡಿಯಾಕ್ ಅರೆಸ್ಟ್ ಆಗಿ ಶೇನ್ ವಾರ್ನ್ ಸಾವನ್ನಪ್ಪಿದ್ದಾರೆ ಅಂತ ವರದಿಯಾಗಿತ್ತು. ಆದರೆ 3 ವರ್ಷಗಳ ಬಳಿಕ ಶೇನ್ ವಾರ್ನ್ ಸಾವಿನ ನಿಜನವಾದ ಕಾರಣ ರಿವೀಲ್ ಆಗಿದೆ. ಶೇನ್ ವಾರ್ನ್ ಹೃದಯಾಘಾತದಿಂದ ಸತ್ತಿಲ್ಲ ವಯಾಗ್ರ ಮಾತ್ರೆ ಓವರ್ ಡೋಸ್‌ನಿಂದ ಅತ್ತಿದ್ದಾರೆ ಅಂತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬಾಯ್ಬಿಟ್ಟಿದ್ದಾರೆ. ಅಂದು ಶೇನ್ ವಾರ್ನ್ ಉಳಿದುಕೊಂಡಿದ್ದ ಹೋಟೆಲ್ ರೂಂನಲ್ಲಿ ಲೈಂಗಿಕ ಮಾದಕ ವಸ್ತು ದೊರೆತಿದೆ ಎಂಬ ಆಘಾತಕಾರಿ ಅಂಶ ಬಹಿರಂಗಗೊಂಡಿದೆ.
ಸ್ಪಿನ್ ಬೌಲಿಂಗ್ ದಂತಕತೆ ಶೇನ್ ವಾರ್ನ್ ಅವರು ವಿವಾದಗಳೊಂದಿಗೇ ಬದುಕಿದ್ದವರು. ಸ್ಪಿಕ್ ಮಾಂತ್ರಿಕನಾಗಿ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದ ಶೇನ್ ವಾರ್ನ್ ಸಾವಿನ ರಹಸ್ಯವನ್ನು ಮರೆಮಾಚುವ ಪ್ರಯತ್ನ ನಡೆದಿತ್ತು, ಸ್ವತಃ ಆಸ್ಟೇಲಿಯಾ ಸರ್ಕಾರವೇ ಮುತುವರ್ಜಿ ವಹಿಸಿ ಸಾವಿನ ಸತ್ಯವನ್ನು ಸೈಲೆಂಟಾಗಿ ಮುಚ್ಚಿ ಹಾಕಿತ್ತು ಅನ್ನೋದ್ರ ಬಗ್ಗೆ ಅಂದಿನ ತನಿಖಾಧಿಕಾರಿಯೊಬ್ಬರು ಬಹಿರಂಗ ಪಡಿಸಿದ್ದಾರೆ.
ಥಾಯ್ಲಾಂಡ್‌ನ ಕೊಹ್ ಸಮುಯಿ ದ್ವೀಪದಲ್ಲಿ 2022ರ ಮಾರ್ಚ್ 4ರಂದು ಶೇನ್ ವಾರ್ನ್ ಶವ ದೊರೆತಿತ್ತು. ಹೃದಯಾಘಾತದಿಂದ ಆದ ಸಹಜ ಸಾವು ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಗೊಂಡಿತ್ತು. ಇದೀಗ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿಯೊಬ್ಬರಿಂದ ಹಲವು ವಿಚಾರಗಳ ಮಾಹಿತಿ ದೊರಕಿದೆ, ವಾರ್ನ್ ಶವ ದೊರೆತ ಕೋಣೆಯಲ್ಲಿ ಅಪಾಯಕಾರಿ ವಯಾಗ್ರ ಮಾದಕ ದ್ರವ್ಯ ಸಿಕ್ಕಿತ್ತು ಎಂದು ಬಹಿರಂಗವಾಗಿದೆ. ಶೇನ್ ವಾರ್ನ್ ಸಾವಿಗೀಡಾಗಿದ್ದ ಕೋಣೆಯಲ್ಲಿ ಸಿಕ್ಕ ಮಾತ್ರೆಗಳ ಬಾಟಲಿಯನ್ನು ಯಾರಿಗೂ ತಿಳಿಯದಂತೆ ಎತ್ತಿಡಲು ಮತ್ತು ಸಾಕ್ಷ್ಯ ನಾಶಪಡಿಸಲು ಆದೇಶಿಸಲಾಗಿತ್ತು ಎಂದು ಮಾಜಿ ಅಧಿಕಾರಿ ಆರೋಪಿಸಿದ್ದಾರೆ.
ಲೈಂಗಿಕ ಮಾದಕ ದ್ರವ್ಯವನ್ನು ನಿಮಿರುವಿಕೆಯ ದೌರ್ಬಲ್ಯಕ್ಕೆ ಬಳಸುತ್ತಾರೆ. ಈ ಔಷಧವು ವಯಾಗ್ರದಲ್ಲಿ ಕಂಡುಬರುವ ಸಿಲ್ಡೆನಾಫಿಲ್ ಸಿಟ್ರೇಟ್ ಅನ್ನು ಒಳಗೊಂಡಿತ್ತು. ಹೃದಯ ದೌರ್ಬಲ್ಯ ಹೊಂದಿರೋ ವ್ಯಕ್ತಿ ವಯಾಗ್ರ ಮಾತ್ರಗಳನ್ನು ಸೇವಿಸಿದ್ರೆ ಜೀವಕ್ಕೆ ಅಪಾಯವೆಂದು ವೈದ್ಯರು ಹೇಳುತ್ತಾರೆ. ಶೇನ್ ವಾರ್ನ್ ಎಷ್ಟು ಮಾತ್ರೆಗಳನ್ನು ತೆಗೆದುಕೊಂಡನೆಂದು ನಮಗೆ ತಿಳಿದಿಲ್ಲ. ಘಟನಾ ಸ್ಥಳದಲ್ಲಿ ವಾಂತಿ ಮತ್ತು ರಕ್ತವೂ ಬಿದ್ದಿತ್ತು. ಆದರೆ ನಮಗೆ ಬಂದ ಆದೇಶದಂತೆ ನಾವು ಅದನ್ನೆಲ್ಲಾ ತೆರವುಗೊಳಿಸಿದೆವು” ಎಂದು ಹೇಳಿದ್ದಾರೆ.
ಥೈಲ್ಯಾಂಡ್‌ನಲ್ಲಿ ನಿಷೇಧಿತ ವಸ್ತುವಾಗಿರುವ ವಯಾಗ್ರ ಡ್ರಗ್ ಹೇಗೆ ಲಭ್ಯವಾಯಿತು ಎಂಬುದು ಸಹ ಈವರೆಗೂ ಬಗೆಹರಿಯದ ಮತ್ತೊಂದು ಪ್ರಶ್ನೆಯಾಗಿದೆ. ಇದನ್ನು ನಾನು ಕೋಣೆಯಿಂದ ಸಂಗ್ರಹಿಸಿದಾಗ ಹಿರಿಯ ಅಧಿಕಾರಿಗಳು ಮಾತ್ರೆಗಳ ಬಾಟಲಿಯನ್ನು ಬಹಿರಂಗಪಡಿಸದಂತೆ ಆದೇಶಿಸಿದರು. ಈ ಪ್ಲಾನ್‌ನಲ್ಲಿ ಆಸ್ಟ್ರೇಲಿಯಾದ ಅಧಿಕಾರಿಗಳು ಭಾಗಿಯಾಗಿರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ನಮ್ಮ ಹಿರಿಯ ಅಧಿಕಾರಿಗಳು ಬಾಟಲಿಯನ್ನು ವಿಲೇವಾರಿ ಮಾಡಲು ನಮಗೆ ಆದೇಶಿಸಿದರು. ಆಸ್ಟ್ರೇಲಿಯಾದ ಹಿರಿಯ ಅಧಿಕಾರಿಗಳು ಸಹ ಇದರಲ್ಲಿ ಭಾಗಿಯಾಗಿದ್ದರು. ಏಕೆಂದರೆ ಅವರು ತಮ್ಮ ರಾಷ್ಟ್ರೀಯ ಐಕಾನ್ ಈ ರೀತಿಯ ದುರಂತ ಅಂತ್ಯವನ್ನು ಬಯಸಿರಲಿಲ್ಲ. ಹೀಗಾಗಿ ಅವರಿಗೆ ಹೃದಯಾಘಾತವಾಗಿತ್ತು ಎಂದು ಸಾವಿನ ಸಂದರ್ಭದಲ್ಲಿ ವರದಿಯಾಗಿತ್ತು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.