IPL 2026 ಫೈನಲ್: ಕಪ್ ಗೆದ್ದ ಆರ್‌ಸಿಬಿಗೆ ಗಣ್ಯರಿಂದ ಅಭಿನಂದನೆಗಳ ಮಹಾಪೂರ!

BeFunky collage (23)

ಕ್ರಿಕೆಟ್ ಪ್ರೇಮಿಗಳ ದಶಕಗಳ ಕನಸನ್ನು ನನಸು ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಇದೀಗ ಐಪಿಎಲ್ 2026ರ ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಮಣಿಸಿದ ಆರ್‌ಸಿಬಿ, ಮತ್ತೊಮ್ಮೆ ಐಪಿಎಲ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ.

 ಮುಖ್ಯಾಂಶಗಳು:

ಗಲ್ಲಿ ಗಲ್ಲಿಯಲ್ಲೂ ಸಂಭ್ರಮ, ಕೊಹ್ಲಿ ವಿರಾಟ ರೂಪಕ್ಕೆ ಫ್ಯಾನ್ಸ್ ಫಿದಾ!

‘ಈ ಸಲವೂ ಕಪ್ ನಮ್ಮದೇ’ ಎಂದು ಸಾರಿದ್ದ ಅಭಿಮಾನಿಗಳ ಸಂಭ್ರಮವೀಗ ಮುಗಿಲು ಮುಟ್ಟಿದೆ. ಆರ್​​ಸಿಬಿ ಜಯಭೇರಿ ಬಾರಿಸುತ್ತಿದ್ದಂತೆ ರಾಜ್ಯದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸುತ್ತಿದ್ದಾರೆ. ಇಡೀ ಟೂರ್ನಿಯುದ್ದಕ್ಕೂ ಹಾಗೂ ಫೈನಲ್ ಪಂದ್ಯದಲ್ಲಿ ರನ್ ಬೆನ್ನಟ್ಟುವಾಗ ವಿರಾಟ್ ಕೊಹ್ಲಿ ಪ್ರದರ್ಶಿಸಿದ ‘ವಿರಾಟ ರೂಪ’ ಹಾಗೂ ನಾಯಕ ರಜತ್ ಪಟಿದಾರ್ ಅವರ ತಾಳ್ಮೆಯ ಆಟ ಎಲ್ಲರ ಗಮನ ಸೆಳೆದಿದೆ. ಗೆಲುವಿನ ಸಂಭ್ರಮದ ನಡುವೆ ಟ್ವೀಟ್ ಮಾಡಿರುವ ಆರ್‌ಸಿಬಿ ಫ್ರಾಂಚೈಸಿ, “ಇದು ನಿಮ್ಮ ಗೆಲುವು, ಮನೆಯಲ್ಲಿಯೇ ಸುರಕ್ಷಿತವಾಗಿ ಸಂಭ್ರಮಿಸಿ” ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದೆ.

ಗಣ್ಯಾತಿಗಣ್ಯರಿಂದ ಅಭಿನಂದನೆಗಳ ಮಹಾಪೂರ

ರೆಡ್ ಆರ್ಮಿಯ ಈ ಐತಿಹಾಸಿಕ ಸಾಧನೆಗೆ ರಾಜಕೀಯ ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ:

 

Exit mobile version