ಐಪಿಎಲ್ 2025 ಫೈನಲ್: ಆರ್‌ಸಿಬಿಗೆ ಸ್ಪೋಟಕ ಬ್ಯಾಟರ್ ಟಿಮ್ ಡೇವಿಡ್‌ ಎಂಟ್ರಿ!

ಡೇವಿಡ್‌ನ ಮರಳುವಿಕೆಯಿಂದ ಅಭಿಮಾನಿಗಳಲ್ಲಿ ಹೆಚ್ಚಿದ ಉತ್ಸಾಹ!

Befunky collage 2025 06 03t160928.672

ಐಪಿಎಲ್‌ 2025 ರ ರೋಚಕ ಫೈನಲ್‌ ಘಟ್ಟಕ್ಕೆ ಬಂದು ತಲುಪಿದೆ. ಇಂದು ರಾತ್ರಿ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮತ್ತು ಪಂಜಾಬ್‌ ಕಿಂಗ್ಸ್‌ (ಪಿಬಿಕೆಎಸ್‌) ತಂಡಗಳ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭರ್ಜರಿ ಕಾದಾಟ ನಡೆಯಲಿದೆ. ಈ ನಡುವೆ ಆರ್‌ಸಿಬಿಗೆ ಸ್ಫೋಟಕ ಬ್ಯಾಟರ್‌ ಟಿಮ್ ಡೇವಿಡ್‌ ಗಾಯದಿಂದ ಚೇತರಿಸಿಕೊಂಡು ಫೈನಲ್‌ಗೆ ಕಮ್‌ಬ್ಯಾಕ್‌ ಮಾಡಲಿದ್ದಾರೆ ಎಂಬ ಶುಭ ಸುದ್ದಿಯು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಆರ್‌ಸಿಬಿ ಈ ಬಾರಿಯ ಐಪಿಎಲ್‌ನಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ತೋರಿದೆ. ಲೀಗ್‌ ಹಂತದಲ್ಲಿ 14 ಪಂದ್ಯಗಳಲ್ಲಿ 9 ಗೆಲುವುಗಳೊಂದಿಗೆ ಎರಡನೇ ಸ್ಥಾನ ಪಡೆದ ಆರ್‌ಸಿಬಿ, ಕ್ವಾಲಿಫೈಯರ್‌ 1ರಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಫೈನಲ್‌ಗೆ ಪ್ರವೇಶಿಸಿತು. ಈ ಸೀಸನ್‌ನಲ್ಲಿ ತಂಡದ ಸ್ಥಿರತೆ ಮತ್ತು ಆಕ್ರಮಣಕಾರಿ ಆಟದ ಶೈಲಿಯಿಂದಾಗಿ ಅಭಿಮಾನಿಗಳಲ್ಲಿ ಟ್ರೋಫಿ ಗೆಲುವಿನ ಭರವಸೆ ಮೂಡಿದೆ.

ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್‌ ಕಮ್‌ಬ್ಯಾಕ್‌:

ಆರ್‌ಸಿಬಿ ತಂಡಕ್ಕೆ ಶುಭ ಸುದ್ದಿಯೊಂದು ಲಭ್ಯವಾಗಿದೆ. ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್‌ ಟಿಮ್ ಡೇವಿಡ್‌, ಗಾಯದಿಂದ ಚೇತರಿಸಿಕೊಂಡು ಫೈನಲ್‌ ಪಂದ್ಯದಲ್ಲಿ ಆಡಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಎರಡು ಪಂದ್ಯಗಳಲ್ಲಿ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದ ಡೇವಿಡ್‌, ಈ ಹಿಂದೆ ಏಪ್ರಿಲ್‌ 18, 2025ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಒಬ್ಬರೇ ಸ್ಫೋಟಕ ಆಟವಾಡಿದ್ದರು.

ಆ ಪಂದ್ಯದಲ್ಲಿ ಆರ್‌ಸಿಬಿ ಕೇವಲ 42/7 ರನ್‌ಗಳಿಗೆ ಕುಸಿದಿತ್ತು. ಆದರೆ, ಟಿಮ್ ಡೇವಿಡ್‌ ಕೇವಲ 26 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 50* ರನ್‌ ಗಳಿಸಿ ತಂಡವನ್ನು 95/9ಕ್ಕೆ ಕೊಂಡೊಯ್ದಿದ್ದರು. ಆದರೂ ಆ ಪಂದ್ಯದಲ್ಲಿ ಆರ್‌ಸಿಬಿ 5 ವಿಕೆಟ್‌ಗಳಿಂದ ಸೋಲನುಭವಿಸಿತ್ತು. ಡೇವಿಡ್‌ರ ಈ ಪ್ರದರ್ಶನ ತಂಡಕ್ಕೆ ಆಸರೆಯಾಗಿತ್ತು ಮತ್ತು ಅವರ ಕಮ್‌ಬ್ಯಾಕ್‌ ಫೈನಲ್‌ನಲ್ಲಿ ಆರ್‌ಸಿಬಿಯ ಬ್ಯಾಟಿಂಗ್‌ ಶಕ್ತಿಯನ್ನು ಮತ್ತಷ್ಟು ಬಲಪಡಿಸಲಿದೆ.

ಐಪಿಎಲ್‌ನ 17 ಸೀಸನ್‌ಗಳಲ್ಲಿ ಒಂದೇ ಒಂದು ಟ್ರೋಫಿ ಗೆದ್ದಿಲ್ಲದ ಆರ್‌ಸಿಬಿ, 18ನೇ ಸೀಸನ್‌ನಲ್ಲಿ ತಮ್ಮ ಮೊದಲ ಟ್ರೋಫಿಯನ್ನು ಗೆಲ್ಲಲು ಪಣತೊಟ್ಟಿದೆ. ಈ ಋತುವಿನಲ್ಲಿ ತಂಡದ ಬೌಲಿಂಗ್‌ ಘಟಕದಲ್ಲಿ ಜೋಶ್ ಹ್ಯಾಜಲ್‌ವುಡ್‌, ಭುವನೇಶ್ವರ್ ಕುಮಾರ್‌, ಮತ್ತು ಸುಯಶ್ ಶರ್ಮಾ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಕ್ವಾಲಿಫೈಯರ್‌ 1ರಲ್ಲಿ ಸುಯಶ್ ಶರ್ಮಾ 3/17 ರನ್‌ಗೆ 3 ವಿಕೆಟ್‌ ಕಿತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.

ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ 14 ಪಂದ್ಯಗಳಲ್ಲಿ 614 ರನ್‌ ಗಳಿಸಿ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಫಿಲ್ ಸಾಲ್ಟ್‌ ಕೂಡ ತಮ್ಮ ಆಕ್ರಮಣಕಾರಿ ಆರಂಭದಿಂದ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ. ಇವರ ಜೊತೆಗೆ ಟಿಮ್ ಡೇವಿಡ್‌ನ ಕಮ್‌ಬ್ಯಾಕ್‌ ಆರ್‌ಸಿಬಿಯ ಫಿನಿಶಿಂಗ್‌ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಲಿದೆ.

ಪಂಜಾಬ್ ಕಿಂಗ್ಸ್‌ ಕೂಡ ಈ ಋತುವಿನಲ್ಲಿ ಶ್ರೇಯಸ್ ಅಯ್ಯರ್‌ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ತೋರಿದೆ. ಕ್ವಾಲಿಫೈಯರ್‌ 2ರಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ 5 ವಿಕೆಟ್‌ ಗೆಲುವಿನೊಂದಿಗೆ ಫೈನಲ್‌ಗೆ ಪ್ರವೇಶಿಸಿದ್ದಾರೆ. ಶ್ರೇಯಸ್ ಅಯ್ಯರ್‌ (87*) ಮತ್ತು ನೆಹಾಲ್ ವಾಧೇರಾ ಅವರ ಬ್ಯಾಟಿಂಗ್‌, ಜೊತೆಗೆ ಆರ್ಶದೀಪ್ ಸಿಂಗ್‌ ಮತ್ತು ಕೈಲ್ ಜೇಮೀಸನ್‌ರ ಬೌಲಿಂಗ್‌ ತಂಡದ ಶಕ್ತಿಯಾಗಿದೆ.

ಆರ್‌ಸಿಬಿಯ ತಂಡದ ಸಂಭಾವ್ಯ ಆಡುವ ಆಟಗಾರರು:11 
Exit mobile version