ಆರ್‌ಸಿಬಿ vs ಸಿಎಸ್‌ಕೆ: ಹೈವೋಲ್ಟೇಜ್ ಪಂದ್ಯಕ್ಕೆ ಮಳೆಯ ಭೀತಿ

Befunky collage (6)

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವಿನ ಪಂದ್ಯ ಎಂದರೆ ಕ್ರಿಕೆಟ್ ಅಭಿಮಾನಿಗಳಿಗೆ ಕುತೂಹಲದ ಕ್ಷಣ. ಈ ಬದ್ಧವೈರಿಗಳ ಕಾದಾಟವು ಐಪಿಎಲ್‌ನಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಸೆಳೆಯುತ್ತದೆ. ಎರಡೂ ತಂಡಗಳ ಆಟಗಾರರು ಗೆಲುವಿನ ಗುರಿಯೊಂದಿಗೆ ಕಣಕ್ಕಿಳಿಯುತ್ತಾರೆ. ಆದರೆ, ಈ ಬಾರಿಯ ಪಂದ್ಯಕ್ಕೆ ಮಳೆಯ ಸಾಧ್ಯತೆ ಒಂದು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.

ಈಗಾಗಲೇ ಈ ಟೂರ್ನಿಯ ಆರಂಭದ ಎರಡನೇ ಪಂದ್ಯದಲ್ಲಿ ಆರ್‌ಸಿಬಿ, ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಸಿಎಸ್‌ಕೆಯನ್ನು 50 ರನ್‌ಗಳಿಂದ ಮಣಿಸಿ ಐತಿಹಾಸಿಕ ಗೆಲುವು ಸಾಧಿಸಿತ್ತು. ಇದು 17 ವರ್ಷಗಳ ಬಳಿಕ ಚೆನ್ನೈಯ ತವರಿನಲ್ಲಿ ಆರ್‌ಸಿಬಿ ಸಾಧಿಸಿದ ಗೆಲುವಾಗಿತ್ತು. ಈಗ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಮತ್ತೊಮ್ಮೆ ಗೆದ್ದರೆ, ಅಭಿಮಾನಿಗಳಿಗೆ ಅದು ದೊಡ್ಡ ಸಂಭ್ರಮವಾಗಲಿದೆ. ಆದರೆ, ಸಿಎಸ್‌ಕೆ ತಮ್ಮ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಕಾತರದಿಂದ ಕಾಯುತ್ತಿದೆ.

ಮಳೆಯ ಸಾಧ್ಯತೆ

ಪಂದ್ಯದ ವೇಳೆ ಮಳೆಯ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಪಂದ್ಯ ಆರಂಭವಾದ ನಂತರ ಶೇಕಡಾ 40ರಷ್ಟು ಮಳೆ ಬರುವ ಸಂಭವವಿದೆ. ಗಂಟೆಗೆ 13 ಕಿ.ಮೀ ವೇಗದಲ್ಲಿ ನೈಋತ್ಯ ದಿಕ್ಕಿನಿಂದ ಗಾಳಿ ಬೀಸಲಿದೆ. ಜೊತೆಗೆ, ಶೇಕಡಾ 99ರಷ್ಟು ಮೋಡ ಕವಿದ ವಾತಾವರಣವೂ ಇರಲಿದೆ. ಈ ಕಾರಣದಿಂದಾಗಿ, ಈ ಹೈವೋಲ್ಟೇಜ್ ಪಂದ್ಯವು ಮಳೆಯಿಂದ ಕೆಲವು ಅಡೆತಡೆಗಳನ್ನು ಎದುರಿಸುವ ಸಾಧ್ಯತೆಯಿದೆ.

Exit mobile version