ಪಂಜಾಬ್‌ ಮಣಿಸಿ ಗೆಲುವಿನ ನಗೆ ಬೀರುತ್ತಾ ಆರ್‌ಸಿಬಿ

ಇಂದು ಪಂಜಾಬ್ ಆರ್‌ಸಿಬಿ ಹೈವೋಲ್ಟೇಜ್‌ ಪಂದ್ಯ

123 (2)

ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಇಂದು ಪ್ರತಿಷ್ಟೆಯ ಪಂದ್ಯವಾಗಿದೆ. ಈಗಾಗಲೇ ಸತತ ಎರಡು ಪಂದ್ಯವನ್ನು ತವರು ನೆಲದಲ್ಲೇ ಸೋತಿರುವ ಆರ್‌ಸಿಬಿ, ಇಂದು  ಪಂಜಾಬ್ ಕಿಂಗ್ಸ್ ತಂಡವನ್ನು ಭಾರೀ ಅಂತರದಿಂದ ಮಣಿಸಿ ಗೆಲುವಿನ ನಗೆ ಬೀರಬೇಕಿದೆ.

ಆರ್ಸಿಬಿ ಪಾಲಿಗೆ ಟಾಸ್ ಪ್ರಮುಖ

ಗುಜರಾತ್ ಮತ್ತು ಡೆಲ್ಲಿ ವಿರುದ್ಧ ಟಾಸ್ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್ ನಡೆಸಿತ್ತು. ಆ ಎರಡೂ ಪಂದ್ಯಗಳಲ್ಲಿ ಆರ್​ಸಿಬಿ, 170 ಸ್ಕೋರ್ ದಾಟಲಿಲ್ಲ. ಹಾಗಾಗಿ ಇಂದು ಬೆಂಗಳೂರು ತಂಡದ ನಾಯಕ ರಜತ್‌ ಪಾಟೀದಾರ್, ಮೊದಲು ಟಾಸ್ ಗೆಲ್ಲಬೇಕಿದೆ. ಟಾಸ್ ಗೆದ್ದರೆ ಮ್ಯಾಚ್ ಗೆದ್ದಂತೆ. ಯಾಕೆಂದರೆ ಚೇಸಿಂಗ್​ನಲ್ಲಿ ಆರ್​ಸಿಬಿ ಬಲಿಷ್ಟವಾಗಿದೆ.

ಪಡಿಕ್ಕಲ್ಅಟ್ಟರ್ ಫ್ಲಾಪ್

ಚಿನ್ನಸ್ವಾಮಿಯಲ್ಲಿ ಕ್ರೀಡಾಂಗಣದಲ್ಲಿ ಲೋಕಲ್ ಬಾಯ್ ಪಡಿಕ್ಕಲ್ ಫ್ಲಾಪ್ ಶೋ ನೀಡಿರೋದು ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಗುಜರಾತ್ ವಿರುದ್ಧ 12 ರನ್, ಡೆಲ್ಲಿ ವಿರುದ್ಧ ಕೇವಲ 1 ರನ್​ಗಳಿಸಿದ್ದ ಪಡಿಕ್ಕಲ್ ಬ್ಯಾಟಿಂಗ್​ನಲ್ಲಿ ತಂಡಕ್ಕೆ ಕೈಕೊಟ್ಟಿದ್ದರು. ಇಂದಿನ ಪಂದ್ಯದಲ್ಲಿ ಪಡಿಕ್ಕಲ್ ಸಿಡಿದೇಳಬೇಕಿದೆ. ಇಲ್ಲದಿದ್ದರೆ ತವರಿನಲ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗುವುದರಲ್ಲಿ ಅನುಮಾನವಿಲ್ಲ.

ತವರಿನಲ್ಲಿ ಪಾಟೀದಾರ್ ಪರದಾಟ

ಆರ್​ಸಿಬಿ ನಾಯಕ ಹಲವು ಮ್ಯಾಚ್​ಗಳಲ್ಲಿ ಬ್ಯಾಟಿಂಗ್​ನಲ್ಲಿ ಮಿಂಚಿದ್ದಾರೆ. ತವರಿನಲ್ಲಿ ಮಾತ್ರ ಪಟಿದಾರ್ ಪರದಾಡಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧ 12 ಎಸೆತಗಳಲ್ಲಿ 12 ರನ್​ಗಳಿಸಿದ್ರೆ, ಕ್ಯಾಪಿಟಲ್ಸ್ ವಿರುದ್ಧ 23 ಎಸೆತಗಳಲ್ಲಿ 25 ರನ್​ ಮಾತ್ರ ಗಳಿಸಿದ್ದಾರೆ. ಹೋಂ ಗ್ರೌಂಡ್​​ನಲ್ಲಿ ಪಾಟೀದಾರ್ ಪರದಾಡಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಬೇಕಿಲ್ಲ.

ಟಿಮ್ ಡೇವಿಡ್ ಸ್ಫೋಟ

ಆರ್​ಸಿಬಿಗೆ ಸಮಾಧಾನಕರ ವಿಷಯ ಅಂದ್ರೆ ಅದು ಟಿಮ್ ಡೇವಿಡ್​​ರ ಬ್ಯಾಟಿಂಗ್. ಬೆಂಗಳೂರಿನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಟಿಮ್ ಎದುರಾಳಿ ಬೌಲರ್​ಗಳನ್ನ ಚಿಂದಿ ಉಡಾಯಿಸಿದ್ದಾರೆ. ಟೈಟನ್ಸ್ ವಿರುದ್ಧ 178ರ ಸ್ಟ್ರೈಕ್​ ರೇಟ್​ನಲ್ಲಿ 32 ರನ್​ ಮತ್ತು ಡೆಲ್ಲಿ ವಿರುದ್ಧ 185ರ ಸ್ಟ್ರೈಕ್​ರೇಟ್​ನಲ್ಲಿ 37 ರನ್​ಗಳಿಸಿರುವ ಟಿಮ್ ಡೇವಿಡ್ ಆರ್​ಸಿಬಿಯ ಗ್ರೇಟ್ ಫಿನಿಷರ್ ಆಗಿ ಗುರುತಿಸಿಕೊಂಡಿದ್ದಾರೆ. ಇದೇ ರೆಡ್ ಆರ್ಮಿ ತಂಡದ ಬಲ ಹೆಚ್ಚಿಸಿರೋದು.

ಭುವಿ ಮತ್ತು ದಯಾಳ್ ಹೋಂ ಪಿಚ್​ನಲ್ಲಿ ಡೀಸೆಂಟ್ ಪರ್ಫಾಮೆನ್ಸ್ ನೀಡಿದ್ದಾರೆ. ಹೇಜಲ್​​ವುಡ್, ತವರಿನಲ್ಲಿ ಜೋಶ್ ಕಳೆದುಕೊಂಡವರಂತೆ ಬೌಲಿಂಗ್ ಮಾಡ್ತಿದ್ದಾರೆ. ಗುಜರಾತ್ ವಿರುದ್ಧ 3.5 ಓವರ್ ಬೌಲ್ ಮಾಡಿದ್ದ ಹೇಜಲ್​ವುಡ್ 11.21ರ ಎಕಾನಮಿಯಲ್ಲಿ 43 ರನ್​ ನೀಡಿದ್ದರು. ಡೆಲ್ಲಿ ವಿರುದ್ಧ 3 ಓವರ್​ ಬೌಲ್ ಮಾಡಿ 13.33ರ ಎಕಾನಮಿಯಲ್ಲಿ 40 ರನ್​ ನೀಡಿದ್ದರು. ಚಿನ್ನಸ್ವಾಮಿಯಲ್ಲಿ ಸೂಪರ್ ಸ್ಪೆಲ್​ ಹಾಕೋದೇ ಹೇಜಲ್​​ವುಡ್ ಮುಂದಿರೋ ದೊಡ್ಡ ಚಾಲೆಂಜ್. ಒಟ್ಟಿನಲ್ಲಿ ಪಂಜಾಬ್ ಕಿಂಗ್ಸ್, ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್​ನಲ್ಲಿ ಎಕ್ಸಲೆಂಟ್ ತಂಡವಾಗಿ ಕಾಣ್ತಿದೆ. ಒಟ್ಟಿನಲ್ಲಿ ಪಂಜಾಬ್‌ನ ಸೋಲಿಸಿ ಗೆಲುವಿನ ನಗೆ ಬೀರುತ್ತಾ ಕಾದುನೋಡಬೇಕಿದೆ.

Exit mobile version