IPL 2026: ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಗ್ರೀನ್ ಜೆರ್ಸಿ ಧರಿಸಿ ಕಣಕ್ಕಿಳಿಯುವ ವಿಶೇಷತೆ ಏನು?

BeFunky collage (17)

ಐಪಿಎಲ್ 2026ರ 26ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗ್ರೀನ್ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ. ಏಪ್ರಿಲ್ 18ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಈ ಮಧ್ಯಾಹ್ನ 3:30ರ ಪಂದ್ಯವು ಕನ್ನಡಿಗರಿಗೆ ವಿಶೇಷವಾಗಲಿದೆ. ಡೆಲ್ಲಿ ತಂಡದಲ್ಲಿ ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ಕರುಣ್ ನಾಯರ್ ಇರುವುದರಿಂದ ಈ ಪಂದ್ಯವನ್ನು “ಕನ್ನಡಿಗರು vs ಕರ್ನಾಟಕ” ಎಂದೂ ಕರೆಯಲಾಗುತ್ತಿದೆ.

ಗ್ರೀನ್ ಜೆರ್ಸಿ ತೊಡುವುದು ಏಕೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು 2011ರಿಂದ ಪ್ರತಿ ಋತುವಿನಲ್ಲಿ ಒಂದು ಪಂದ್ಯದಲ್ಲಿ ಗ್ರೀನ್ ಜೆರ್ಸಿ ಧರಿಸುತ್ತಾ ಬಂದಿದೆ. ಇದು ಪರಿಸರ ಜಾಗೃತಿ ಮತ್ತು ಸುಸ್ಥಿರತೆಯ ಬಗ್ಗೆ ಅಭಿಮಾನಿಗಳಲ್ಲಿ ಅರಿವು ಮೂಡಿಸುವ ಅಭಿಯಾನದ ಭಾಗವಾಗಿದೆ. ಗ್ರೀನ್ ಜೆರ್ಸಿಯು ಮರುಬಳಕೆಯ ವಸ್ತುಗಳಿಂದ ತಯಾರಿಸಲ್ಪಟ್ಟಿದ್ದು, ಪರಿಸರ ಸ್ನೇಹಿ ಸಂದೇಶವನ್ನು ನೀಡುತ್ತದೆ.

ಈ ಬಾರಿ ಆರ್‌ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗ್ರೀನ್ ಜೆರ್ಸಿ ಧರಿಸಿ ಆಡಲಿದೆ. ಜೆರ್ಸಿಯಲ್ಲಿ ಹಸಿರು ಮತ್ತು ನೀಲಿ ಬಣ್ಣಗಳ ಸುಂದರ ಸಂಯೋಜನೆಯಿದ್ದು, ತುಂಬಾ ಆಕರ್ಷಕವಾಗಿ ಕಾಣುತ್ತಿದೆ.

ಗ್ರೀನ್ ಜೆರ್ಸಿಯಲ್ಲಿ ಆರ್‌ಸಿಬಿ ದಾಖಲೆ :

ಕಳೆದ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗ್ರೀನ್ ಜೆರ್ಸಿ ತೊಟ್ಟು ಆಡಿದ್ದ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿತ್ತು. ಆ ಪಂದ್ಯದಲ್ಲಿ ಫಿಲ್ ಸಾಲ್ಟ್ (65) ಮತ್ತು ವಿರಾಟ್ ಕೊಹ್ಲಿ (62) ಅರ್ಧಶತಕಗಳು ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದವು.

ಈ ಬಾರಿಯೂ ಆರ್‌ಸಿಬಿ ಗ್ರೀನ್ ಜೆರ್ಸಿಯಲ್ಲಿ ಅದೇ ರೀತಿಯ ಆಕ್ರಮಣಕಾರಿ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ಪಂದ್ಯವು ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಹಾಟ್‌ಸ್ಟಾರ್ನಲ್ಲಿ ನೇರ ಪ್ರಸಾರವಾಗಲಿದೆ.

 

Exit mobile version