‘ನಮ್ಮ ಮೌನ..ದುಃಖದಿಂದ ತುಂಬಿದ ಮೌನ’: RCB ಭಾವುಕ ಪೋಸ್ಟ್

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ದುರಂತ: ಆರ್‌ಸಿಬಿ ಭಾವುಕ ಪೋಸ್ಟ್

Untitled design 2025 08 28t122110.396

ಬೆಂಗಳೂರು: ಐಪಿಎಲ್ 2025 ಸಮಯದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ದುರಂತ ಕಾಲ್ತುಳಿತ ಪ್ರಕರಣದ ನಂತರ ಸುಮಾರು ಮೂರು ತಿಂಗಳ ಕಾಲ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಟ್ವಿಟರ್‌ನಲ್ಲಿ (ಎಕ್ಸ್) ಒಂದು ಪೋಸ್ಟ್‌ನೊಂದಿಗೆ ಮರಳಿದೆ.

ಈ ಪೋಸ್ಟ್‌ನಲ್ಲಿ, ಫ್ರಾಂಚೈಸಿ ತಂಡವು ತನ್ನ ಅಭಿಮಾನಿಗಳಿಗೆ ನೇರವಾಗಿ ಮನವಿ ಮಾಡಿಕೊಂಡಿದೆ. ಆರ್‌ಸಿಬಿ ತನ್ನ ಪೋಸ್ಟ್‌ನಲ್ಲಿ, “ನಮ್ಮ ಮೌನ, ಖಾಲಿತನದಿಂದಷ್ಟೇ ಅಲ್ಲ, ದುಃಖದಿಂದ ತುಂಬಿದ ತೀವ್ರವಾದ ಮೌನ” ಎಂದು ಭಾವನಾತ್ಮಕವಾಗಿ ಬರೆದಿದೆ.

ಪೋಸ್ಟ್‌ನಲ್ಲಿ ಮುಂದೆ ವಿವರಿಸಿರುವಂತೆ, ಈ ಮಾಧ್ಯಮದ ಮುಖಾಂತರ ನೀವೆಲ್ಲಾ ಸಂತೋಷದಿಂದ ಸಂಭ್ರಮಿಸುವ ವಿಷಯಗಳನ್ನು ಮತ್ತು ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದೆವು. ಆದರೆ ಜೂನ್ 4ರ ಘಟನೆ ಎಲ್ಲವನ್ನೂ ಬದಲಾಯಿಸಿತ್ತು. ಆ ದಿನ ನಮ್ಮ ಹೃದಯವನ್ನು ಮುರಿಯಿತು. ನಂತರದ ಮೌನವು ಕೇವಲ ನಿಶ್ಯಬ್ದವಲ್ಲ, ಅದು ಶ್ರದ್ಧೆಯಿಂದ ತುಂಬಿದ ಶಾಂತ ಶ್ರದ್ಧಾಂಜಲಿ.”

ಈ ಮೌನದೊಳಗೆ ನೋವನ್ನು ಅನುಭವಿಸುತ್ತಾ ನಾವು ಆಳವಾಗಿ ಯೋಚಿಸಿದ್ದವು ಮತ್ತು ಅನೇಕ ವಿಷಯಗಳನ್ನು ಕಲಿತೆವು ನೋವನ್ನೇ ಶ್ರದ್ಧೆಯಾಗಿ, ನಂಬಿಕೆಯಾಗಿ ರೂಪಿಸಬೇಕೆಂದು ತೀರ್ಮಾನಿಸಿದ್ದೆವು. ಅದರ ಫಲವೇ ಆರ್ಸಿಬಿ ಕೇರ್ಸ್. ನಮ್ಮ ಅಭಿಮಾನಿಗಳು ಮತ್ತು ಸಮುದಾಯಕ್ಕಾಗಿ ನಿಷ್ಠೆಯಿಂದ ರೂಪಿಸಿದ ಒಂದು ಯೋಜನೆ ಎಂದು ತಿಳಿಸಿದೆ.

ಇಂದು ನಾವು ಮರಳಿದ್ದೇವೆ; ನಿಮ್ಮೊಂದಿಗೆ ನಿಲ್ಲುವ ಭರವಸೆಯನ್ನು ನೀಡುತ್ತ, ಕರ್ನಾಟಕದ ಹೆಮ್ಮೆಯಾಗಿ ಮುಂದೆ ಸಾಗುತ್ತೇವೆ. ಇದು ನಮ್ಮ ಕಾಳಜಿ, ನಮ್ಮ ಪ್ರತಿಜ್ಞೆ. ಆರ್ಸಿಬಿ ಕೇರ್ಸ್. ನಾವು ಸದಾ ನಿಮ್ಮೊಂದಿಗಿದ್ದೇವೆ. ಹೆಚ್ಚಿನ ಮಾಹಿತಿ… ಶೀಘ್ರದಲ್ಲೇ ಎಂದು ಆರ್‌ಸಿಬಿ ತಮ್ಮ ಪೊಸ್ಟ್‌ನಲ್ಲಿ ತಿಳಿಸಿದೆ.

Exit mobile version