ಮುಂಬೈ ಮಣಿಸಿ ಭರ್ಜರಿ ಜಯಸಾಧಿಸಿದ ಪಂಜಾಬ್ ಕಿಂಗ್ಸ್: 11 ವರ್ಷಗಳ ಬಳಿಕ ಫೈನಲ್​ಗೆ ಎಂಟ್ರಿ!

ಮಿಂಚಿದ ನಾಯಕ ಶ್ರೇಯಸ್ ಅಯ್ಯರ್, ಇಂಗ್ಲಿಸ್!

Befunky collage 2025 06 02t070201.823

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ಕ್ವಾಲಿಫೈಯರ್ 2 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ. ನಾಯಕ ಶ್ರೇಯಸ್ ಅಯ್ಯರ್‌ರ ಸಮಯೋಚಿತ ಬ್ಯಾಟಿಂಗ್‌ನ ನೆರವಿನಿಂದ 204 ರನ್‌ಗಳ ಗುರಿಯನ್ನು 19 ಓವರ್‌ಗಳಲ್ಲಿ ತಲುಪಿದ ಪಂಜಾಬ್ ಕಿಂಗ್ಸ್, ಜೂನ್ 3, 2025ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಫೈನಲ್‌ನಲ್ಲಿ ಎದುರಿಸಲಿದೆ. 2014ರ ಬಳಿಕ ಮೊದಲ ಬಾರಿಗೆ ಪಂಜಾಬ್ ಕಿಂಗ್ಸ್ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಮಳೆಯಿಂದಾಗಿ ಪಂದ್ಯವು ಎರಡು ಗಂಟೆಗಳ ಕಾಲ ತಡವಾಗಿ ರಾತ್ರಿ 9:45ಕ್ಕೆ ಆರಂಭವಾಯಿತು. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.

ADVERTISEMENT
ADVERTISEMENT

ಮೊದಲು ಬ್ಯಾಟಿಂಗ್‌ಗೆ ಇಳಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 203 ರನ್ ಗಳಿಸಿತು. ರೋಹಿತ್ ಶರ್ಮ (3) ಆರಂಭದಲ್ಲೇ ಔಟಾದರೂ, ತಿಲಕ್ ವರ್ಮ (44, 29 ಎಸೆತ), ಸೂರ್ಯಕುಮಾರ್ ಯಾದವ್ (44, 26 ಎಸೆತ), ಮತ್ತು ನಮನ್ ಧಿರ್ (37, 18 ಎಸೆತ) ತಂಡಕ್ಕೆ ಉತ್ತಮ ಆರಂಭ ನೀಡಿದರು. ಅಜ್ಮತ್‌ಉಲ್ಲಾ ಓಮರ್‌ಜೈ (2/43) ಪಂಜಾಬ್‌ಗೆ ಮುಂಚಿನ ವಿಕೆಟ್‌ಗಳನ್ನು ಒಡ್ಡಿದರು.ಪಂಜಾಬ್ ಕಿಂಗ್ಸ್‌ನ ಆರಂಭ ಚೆನ್ನಾಗಿರಲಿಲ್ಲ. ಪ್ರಭಸಿಮ್ರಾನ್ ಸಿಂಗ್ (6, 9 ಎಸೆತ) ಟ್ರೆಂಟ್ ಬೌಲ್ಟ್‌ಗೆ ವಿಕೆಟ್ ಒಪ್ಪಿಸಿದರು. ಆದರೆ, ಪ್ರಿಯಾಂಶ ಆರ್ಯ (20, 10 ಎಸೆತ) ಮತ್ತು ಜೋಶ್ ಇಂಗ್ಲಿಷ್ (38, 21 ಎಸೆತ) ಪವರ್‌ಪ್ಲೇನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ 55 ರನ್‌ಗಳನ್ನು ಕಲೆಹಾಕಿದರು. ಆದರೆ, ಈ ಇಬ್ಬರೂ ಬಹುಬೇಗ ಔಟಾದರು.

ಮಿಂಚಿದ ಇಂಗ್ಲಿಸ್:

ಆರ್ಯ ವಿಕೆಟ್ ಬೆನ್ನಲ್ಲೇ ಜೋಶ್ ಇಂಗ್ಲಿಸ್ ಕೂಡ ಔಟಾದರು. 21 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ 38 ರನ್​ಗಳಿಸಿ ಹಾರ್ದಿಕ್ ಪಾಂಡ್ಯ ಬೌಲಿಂಗ್​​ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಔಟ್ ಆದರು. ಆದರೆ 4ನೇ ವಿಕೆಟ್​ಗೆ ಒಂದಾದ ನಾಯಕ ಶ್ರೇಯಸ್ ಅಯ್ಯರ್ ಮತ್ತು ನೇಹಾಲ್ ವಧೇರಾ ಮುಂಬೈ ಬೌಲರ್​ಗಳನ್ನ ಬೆಂಡೆತ್ತಿದರು. ಈ ಇಬ್ಬರು ಆಟಗಾರರು 47 ಎಸೆತಗಳಲ್ಲಿ 84 ರನ್​ಗಳ ಜೊತೆಯಾಟ ನಡೆಸಿ ಮುಂಬೈ ಕೈಯಿಂದ ಗೆಲುವನ್ನ ಕಸಿದುಕೊಳ್ಳುವ ಯತ್ನ ಮಾಡಿದ್ದರು.ಆದರೆ ಈ ಹಂತದಲ್ಲಿ ಬೌಲಿಂಗ್​​ ಇಳಿದ ಅಶ್ವನಿ ಕುಮಾರ್ 29 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್​ಗಳ ಸಹಿತ 48 ರನ್​ಗಳಿಸಿದ್ದ ವಧೇರಾ ವಿಕೆಟ್ ಪಡೆದಯ ಬ್ರೇಕ್ ನೀಡಿದರು. ಇವರ ಬೆನ್ನಲ್ಲೇ ಫಿನಿಶರ್ ಶಶಾಂಕ್ ಸಿಂಗ್ ಸಿಂಗಲ್ ಕದಿಯುವ ಯತ್ನದಲ್ಲಿ ಕೇವಲ 2 ರನ್ಗಳಿಸಿ ರನ್ ಔಟ್ ಆದರು.

ಫಿನಿಶ್ ಮಾಡಿದ ನಾಯಕ ಶ್ರೇಯಸ್ ಅಯ್ಯರ್
ಆದರೆ ನಾಯಕ ಶ್ರೇಯಸ್ ಅಯ್ಯರ್ 41 ಎಸೆತಗಳಲ್ಲಿ 5 ಬೌಂಡರಿ, 8 ಸಿಕ್ಸರ್​ಗಳ ಸಹಿತ ಅಜೇಯ 87 ರನ್​ಗಳಿಸಿ ತಂಡವನ್ನು ಇನ್ನು 6 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಗಡಿ ದಾಟಿಸಿದರು.  ಕೊನೆಯ 2 ಓವರ್​ಗಳಲ್ಲಿ 23 ರನ್​ಗಳ ಅಗತ್ಯವಿತ್ತು. ಆದರೆ ಶ್ರೇಯಸ್ ಅಯ್ಯರ್ ತಾವೊಬ್ಬರೆ 19ನೇ ಓವರ್​ನಲ್ಲಿ 4 ಸಿಕ್ಸರ್​ ಸಿಡಿಸಿ ತಂಡವನ್ನು ಫೈನಲ್ ಪ್ರವೇಶಿಸುವಂತೆ ಮಾಡಿದರು.
ಮೊದಲ ಬಾರಿಗೆ ಮುಂಬೈ ವಿರುದ್ಧ 200 ಪ್ಲಸ್ ಯಶಸ್ವಿ ಚೇಸ್:
ಪಂಜಾಬ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ  ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. ಐಪಿಎಲ್ ಇತಿಹಾಸದಲ್ಲೇ ಮುಂಬೈ ವಿರುದ್ಧ 200ಕ್ಕೂ ಹೆಚ್ಚು ರನ್​ಗಳ ಗುರಿಯನ್ನ ಬೆನ್ನಟ್ಟಿ ಗೆದ್ದ ಮೊದಲ ತಂಡ ಎನಿಸಿಕೊಂಡಿತು. ಕಳೆದ 18 ವರ್ಷಗಳಲ್ಲಿ ಮುಂಬೈ 17 ಬಾರಿ 200 ರನ್​ಗಳಿಸಿ ಯಶಸ್ವಿಯಾಗಿ ಡಿಫೆಂಡ್​ ಮಾಡಿಕೊಂಡಿತ್ತು. ಆದರೆ ಇಂದು ಶ್ರೇಯಸ್ ಅಬ್ಬರಕ್ಕೆ ಮುಂಬೈ ಸಂಪೂರ್ಣ ಶರಣಾಯಿತು. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ 200ಕ್ಕೂ ಹೆಚ್ಚು ರನ್​ಗಳ ಗುರಿಯನ್ನ ಬೆನ್ನಟ್ಟಿ ಗೆದ್ದ ತಂಡ ಎಂಬ ತನ್ನ ದಾಖಲಿಯನ್ನ ಮತ್ತಷ್ಟು ಬಲಿಷ್ಠಪಡಿಸಿಕೊಂಡಿದೆ. ಪಂಜಾಬ್ 8 ಬಾರಿ ಈ ಸಾಧನೆ ಮಾಡಿದೆ.

ಸಂಕ್ಷಿಪ್ತ ಸ್ಕೋರ್

ಚೊಚ್ಚಲ ಟ್ರೋಫಿಗಾಗಿ ಆರ್​ಸಿಬಿ ವಿರುದ್ಧ ಸೆಣಸಾಟ
ಬಲಿಷ್ಟ ಮುಂಬೈ ಇಂಡಿಯನ್ಸ್​ ವಿರುದ್ದ 5 ವಿಕೆಟ್​ಗಳ ರೋಚಕ ಜಯ ಸಾಧಿಸಿದ ಪಂಜಾಬ್ ಕಿಂಗ್ಸ್ ತಂಡ ಫೈನಲ್​​ನಲ್ಲಿ ಜೂನ್ 3ರಂದು ಆರ್​ಸಿಬಿ ವಿರುದ್ಧ ಚೊಚ್ಚಲ ಟ್ರೋಫಿಗಾಗಿ ಕಾದಾಡಲಿದೆ. ಯಾರೇ ಗೆದ್ದರು ಇದು ಪ್ರಥಮ ಟ್ರೋಫಿಯಾಗಲಿದೆ. ಆರ್​ಸಿಬಿ 2016ರ ಬಳಿಕ ಫೈನಲ್ ಪ್ರವೇಶಿಸಿದರೆ, ಇತ್ತ ಪಂಜಾಬ್ 2014ರ ಬಳಿಕ ಫೈನಲ್ ಪ್ರವೇಶಿಸಿದೆ.

ಜೂನ್ 3, 2025ರಂದು ನಡೆಯುವ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ಇದುವರೆಗೆ ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ. ಈ ಪಂದ್ಯದಲ್ಲಿ ಯಾರು ಗೆದ್ದರೂ, ಚೊಚ್ಚಲ ಚಾಂಪಿಯನ್ ಆಗಿ ಹೊರಹೊಮ್ಮಲಿದ್ದಾರೆ.

Exit mobile version