ಹಾಕಿ ಏಷ್ಯಾಕಪ್‌ನಲ್ಲಿ ವಿಜೇತರಾದ ತಂಡಕ್ಕೆ ಮುಂದಿನ ವರ್ಷದ ಹಾಕಿ ವಿಶ್ವಕಪ್‌ಗೆ ನೇರ ಪ್ರವೇಶ ಲಭಿಸಲಿದೆ. ಆತಿಥೇಯ ತಂಡಗಳಾದ ಭಾರತ, ಜಪಾನ್, ದಕ್ಷಿಣ ಕೊರಿಯಾ, ಚೀನಾ, ಮಲೇಷ್ಯಾ, ಓಮನ್ ಮತ್ತು ಚೈನೀಸ್ ತೈಪೆ ತಂಡಗಳು ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸಲಿವೆ.
ಆಗಸ್ಟ್ 29 ರಿಂದ ಸೆಪ್ಟೆಂಬರ್ 7 ರವರೆಗೆ ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯಲಿರುವ ಹಾಕಿ ಏಷ್ಯಾಕಪ್ 2025 ರಲ್ಲಿ ಪಾಕಿಸ್ತಾನದ ಪುರುಷರ ತಂಡ ಭಾಗವಹಿಸುವುದಿಲ್ಲ ಎಂದು ಹಾಕಿ ಇಂಡಿಯಾ ಅಧಿಕಾರಿಗಳು ದೃಢಪಡಿಸಿದ್ದಾರೆ. ಭಾರತ ಸರ್ಕಾರ ವೀಸಾ ನೀಡಲು ಸಿದ್ಧವಿದ್ದರೂ, ಪಾಕಿಸ್ತಾನ ಹಾಕಿ ಫೆಡರೇಶನ್ (ಪಿಎಚ್ಎಫ್) ತಂಡವು, ಭದ್ರತಾ ಅಪಾಯ ಕಾರಣ ನೀಡಿ ಟೂರ್ನಮೆಂಟ್‌ನಿಂದ ಹಿಂದೆ ಸರಿದಿದೆ.
ಪಿಎಚ್ಎಫ್ ಮುಖ್ಯಸ್ಥ ರಾರಿಕ್ ಬುಗ್ತಿ, ಎರಡೂ ದೇಶಗಳ ನಡುವಿನ ಪ್ರಸ್ತುತ ಸನ್ನಿವೇಶದ ಕಾರಣ ಆಟಗಾರರು ಭಾರತಕ್ಕೆ ಬರಲು ಸಿದ್ಧರಿಲ್ಲ. ಹಾಗಾಗಿ ಈ ಸ್ಪರ್ಧೆಯನ್ನು ಬೇರೆ ಸ್ಥಳದಲ್ಲಿ ನಡೆಸುವಂತೆ ಕೋರಿದ್ದೆವು, ಆದರೆ ಹಾಕಿ ಇಂಡಿಯಾ ಇದಕ್ಕೆ ಒಪ್ಪಲಿಲ್ಲ. ಹಾಗಾಗಿ ಸ್ಪರ್ಧಿಸುತ್ತಿಲ್ಲ ಎಂದು ಹೇಳಿದ್ದಾರೆ.
ವೀಸಾ ನೀಡಲು ಸಿದ್ಧರಿದ್ದರೂ ಭದ್ರತೆಯ ಕಾರಣ ನೀಡಿ ಪಾಕಿಸ್ತಾನ ಬರಲು ಹಿಂದೇಟು ಹಾಕಿದೆ. ಈಗ ಬಾಂಗ್ಲಾದೇಶವನ್ನು ಆಹ್ವಾನಿಸಿದ್ದೇವೆ ಎಂದು ಭಾರತೀಯ ಹಾಕಿ ಫೆಡರೇಶನ್ ತಿಳಿಸಿದೆ.
ಈ ನವೆಂಬರ್-ಡಿಸೆಂಬರ್‌ನಲ್ಲಿ ಚೆನ್ನೈ ಮತ್ತು ಮಧುರೈನಲ್ಲಿ ನಡೆಯಲಿರುವ ಜೂನಿಯರ್ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಭಾಗವಹಿಸುವಿಕೆ ಕೂಡಾ ಇನ್ನೂ ಗ್ಯಾರಂಟಿ ಆಗಿಲ್ಲ. ಕಳೆದ ವರ್ಷ ಚೆನ್ನೈನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಐದನೇ ಸ್ಥಾನ ಪಡೆದಿತ್ತು. ಹಾಕಿ ಏಷ್ಯಾಕಪ್ ವಿಜೇತ ತಂಡ ಮುಂದಿನ ವರ್ಷದ ಹಾಕಿ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯುತ್ತದೆ. ಈ ಟೂರ್ನಾಮೆಂಟ್‌ನಲ್ಲಿ ಆತಿಥೇಯ ರಾಷ್ಟ್ರ ಭಾರತದ ಜೊತೆಗೆ ಜಪಾನ್, ದಕ್ಷಿಣ ಕೊರಿಯಾ, ಚೀನಾ, ಮಲೇಷ್ಯಾ, ಓಮನ್ ಮತ್ತು ಚೈನೀಸ್ ತೈಪೆ ತಂಡಗಳು ಭಾಗವಹಿಸಲಿವೆ.