ಪಾಕಿಸ್ತಾನ ಕ್ರಿಕೆಟ್ ಆಟಗಾರರಿಗೆ 33 ಲಕ್ಷ ರೂ. ದಂಡ ವಿಧಿಸಿದ ಪಿಸಿಬಿ

Befunky collage 2025 03 15t140536.083

ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಬೋರ್ಡ್ (ಪಿಸಿಬಿ) ತನ್ನ ಆಟಗಾರರ ಮೇಲೆ ಕಠಿಣ ಶಿಸ್ತು ಕ್ರಮಗಳನ್ನು ಜಾರಿಗೊಳಿಸಿದೆ. ಇತ್ತೀಚೆಗೆ, ಆಟಗಾರರ ಅಶಿಸ್ತು ಮತ್ತು ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಒಟ್ಟು 33 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇದರೊಂದಿಗೆ, ದೇಶೀಯ ಕ್ರಿಕೆಟ್ ಆಟಗಾರರ ವೇತನ ಕಡಿತದ ನಿರ್ಧಾರವೂ ಸಾರ್ವಜನಿಕವಾಗಿದೆ.

ಪಾಕಿಸ್ತಾನಿ ಮಾಧ್ಯಮಗಳ ವರದಿಗಳ ಪ್ರಕಾರ, ಸೈಮ್ ಅಯ್ಯೂಬ್, ಸಲ್ಮಾನ್ ಅಲಿ ಅಘಾ, ಮತ್ತು ಅಬ್ದುಲ್ಲಾ ಶಫೀಕ್ರಂತಹ ಯುವ ಆಟಗಾರರಿಗೆ ತಲಾ 5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇದರ ಹಿಂದಿನ ಕಾರಣ, ಆಸ್ಟ್ರೇಲಿಯಾ ಸರಣಿಯ ಸಮಯದಲ್ಲಿ ಹೋಟೆಲ್‌ಗೆ ತಡರಾತ್ರಿ ತಲುಪಿದ್ದು. ಇದೇ ರೀತಿ, ಸೌತ್ ಆಫ್ರಿಕಾ ಸರಣಿಯಲ್ಲಿ ಸೂಫಿಯಾನ್ ಮುಖೀಮ್, ಉಸ್ಮಾನ್ ಖಾನ್, ಮತ್ತು ಅಬ್ಬಾಸ್ ಅಫ್ರಿದಿಯವರು ರಾತ್ರಿ 2:00 AMಗೆ ಹೋಟೆಲ್ ತಲುಪಿದ್ದಕ್ಕೆ ತಲಾ 18 ಸಾವಿರ ರೂಪಾಯಿ (200 ಡಾಲರ್) ದಂಡ ಹೊರಿಸಲಾಗಿದೆ.

ADVERTISEMENT
ADVERTISEMENT

ಹೆಚ್ಚು ಚರ್ಚೆಯಾಗಿರುವ ದಂಡವೆಂದರೆ, ವೇಗದ ಬೌಲರ್ ಅಮೀರ್ ಜಮಾಲ್‌ಗೆ ವಿಧಿಸಲಾದ 14 ಲಕ್ಷ ರೂಪಾಯಿ ಶಿಕ್ಷೆ. ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ, ಅವರು ಖೈದಿ ಸಂಖ್ಯೆ 804″ ಎಂಬುದು ಬರೆದಿರುವ ಕ್ಯಾಪ್ ಧರಿಸಿದ್ದರು. ಇದು ಜೈಲಿನಲ್ಲಿರುವ ಮಾಜಿ ನಾಯಕ ಇಮ್ರಾನ್ ಖಾನ್‌ರವರನ್ನು ಬೆಂಬಲಿಸುವ ಸಂಕೇತವಾಗಿತ್ತು. ಪಿಸಿಬಿ ಇದನ್ನು ರಾಜಕೀಯ ಚಟುವಟಿಕೆ ಎಂದು ಪರಿಗಣಿಸಿ ಜಮಾಲ್‌ರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ.

ಈ ಘಟನೆಗಳು ಪಾಕಿಸ್ತಾನ್ ಕ್ರಿಕೆಟ್ ತಂಡದ ಚಾಂಪಿಯನ್ಸ್ ಟ್ರೋಫಿ ಸಾಧನೆಗೆ ನೇರ ಸಂಬಂಧ ಹೊಂದಿವೆ. ಟೂರ್ನಮೆಂಟ್‌ನಲ್ಲಿ ತಂಡದ ಸಾಧನೆ ಕಳಪೆಯಾಗಿದ್ದು, ಇದರ ಪರಿಣಾಮವಾಗಿ ಪಿಸಿಬಿ ಆಡಳಿತವು ಆಟಗಾರರ ನಿರ್ವಹಣೆ ಮತ್ತು ಶಿಸ್ತನ್ನು ಗಂಭೀರವಾಗಿ ಪರಿಶೀಲಿಸುತ್ತಿದೆ. ಇದರ ಭಾಗವಾಗಿ, ದೇಶೀಯ ಟೂರ್ನಿ ಆಟಗಾರರ ವೇತನವನ್ನು 30% ಕಡಿತ ಮಾಡಲಾಗಿದೆ.

ಕ್ರಿಕೆಟ್ ವಿಶ್ಲೇಷಕರು, ಪಿಸಿಬಿಯ ಈ ನಡವಳಿಕೆಯನ್ನು ಶಿಸ್ತಿನ ಹೆಸರಿನಲ್ಲಿ ಸ್ಪಷ್ಟ ಸಂದೇಶ” ಎಂದು ಪರಿಗಣಿಸಿದ್ದಾರೆ. ಆದರೆ, ಕೆಲವು ವಿಮರ್ಶಕರು, “ಆಟಗಾರರ ಮೇಲೆ ಹೆಚ್ಚಿನ ಒತ್ತಡ ಹೇರುವುದು ತಂಡದ ಮನಸ್ಥಿತಿಗೆ ಪರಿಣಾಮ ಬೀರಬಹುದು” ಎಂದು ಎಚ್ಚರಿಸಿದ್ದಾರೆ.

ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತನ್ನ ಆಟಗಾರರನ್ನು ನಿಯಂತ್ರಿಸಲು ಸಖ್ತ್ ನೀತಿಗಳನ್ನು ಅನುಸರಿಸುತ್ತಿದೆ. ಆದರೆ, ಈ ಕ್ರಮಗಳು ಭವಿಷ್ಯದ ಪರಿಣಾಮಗಳನ್ನು ಹೇಗೆ ರೂಪಿಸುತ್ತವೆ ಎಂಬುದು ಕಾಣಬೇಕಿದೆ.

Exit mobile version