ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಶನಿವಾರ (ಡಿಸೆಂಬರ್ 13) ನಡೆದ ಲಿಯೋನೆಲ್ ಮೆಸ್ಸಿ ಗೋಟ್ ಇಂಡಿಯಾ ಹಠಾತ್ ಕಾರ್ಯಕ್ರಮ ರದ್ದಾದರಿಂದ ನಿರಾಶೆಗೊಂಡ ಮೆಸ್ಸಿ ಅಭಿಮಾನಿಗಳು ದಾಂದಲೆ ಎಬ್ಬಿಸಿದ್ದರು.ಈ ಘಟನೆಯ ನಂತರ ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತ ಅವರನ್ನು ಪೊಲೀಸರು ಬಂಧಿಸಿದ್ದರು. ಭಾನುವಾರ (ಡಿ.14) ನ್ಯಾಯಾಲಯವು ಅವರಿಗೆ ಜಾಮೀನು ನಿರಾಕರಿಸಿ 14 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಅರ್ಜೆಂಟೀನಾದ ಪುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರ ಗೋಟ್ ಇಂಡಿಯಾ ಪ್ರವಾಸದ ಭಾಗವಾಗಿ ಕೋಲ್ಕತ್ತಾದಲ್ಲಿ ಕಾರ್ಯಕ್ರಮ ನಿಗದಿತವಾಗಿತ್ತು. ಆದರೆ, ಶನಿವಾರ ಸಂಜೆ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಹಠಾತ್ ರದ್ದಾಯಿತು. ಇದರಿಂದ ಕೋಪಗೊಂಡ ಸಾವಿರಾರು ಅಭಿಮಾನಿಗಳು ದಾಂದಲೆ ನಡೆಸಲು ಆರಂಭಿಸಿದರರು. ತಡೆಗೋಡೆಗಳನ್ನ ಉರುಳಿಸಿ ಕ್ರೀಡಾಂಗಣದೊಳಗೆ ನುಗ್ಗಿ, ಪಿಚ್ಗೆ ಹಾನಿ ಮಾಡಿದರು. ಬ್ಯಾನರ್ಗಳು ಮತ್ತು ಟೆಂಟ್‌ಗಳನ್ನ ಕಿತ್ತು ಹಾಕಿದರು. ಕ್ರೀಡಾಂಗಣ ಪ್ರದೇಶದಲ್ಲಿನ ಸಾಮಗ್ರಿಗಳನ್ನು ಹಾನಿಮಾಡಿದರು.
ಘಟನೆ ತೀವ್ರ ಸ್ವರೂಪ ಪಡೆದ ನಂತರ ಪೊಲೀಸರು ಹಸ್ತಕ್ಷೇಪ ಮಾಡಿ ಅಭಿಮಾನಿಗಳನ್ನ ಸಮಾಧಾನಗೊಳಿಸಲು ಯತ್ನಿಸಿದರು. ಆದರೆ ಅಷ್ಟೊತ್ತಿಗಾಗಲೇ ಅಭಿಮಾನಿಗಳ ದಾಳಿಯಿಂದ ಕ್ರೀಡಾಂಗಣಕ್ಕೆ ಗಣನೀಯ ಹಾನಿಯಾಗಿತ್ತು. ಈ ದಾಂದಲೆ ಮತ್ತು ತೀವ್ರ ಹಾನಿಗೆ ಆಯೋಜಕರು ಸರಿಯಾಗಿ ಕಾರ್ಯಕ್ರಮ ನಿಗದಿ ಮಾಡಿಲ್ಲ, ಸಮರ್ಪಕ ಯೋಜನೆಯಿಲ್ಲದ ನಿರ್ವಹಣೆ ಕಾರಣ ಎಂದು ಪರಿಗಣಿಸಲಾಗಿದೆ.
ಘಟನೆಯ ತನಿಖೆಗಾಗಿ ಮುಖ್ಯ ಆಯೋಜಕ ಶತಾದ್ರು ದತ್ತ ಅವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಆರೋಪಿಯನ್ನನ ಬಂಧಿಸಲಾಗಿದೆ. ಭಾನುವಾರ ನ್ಯಾಯಾಲಯದಲ್ಲಿ ಮಂಡಿಸಿದಾಗ, ಶತಾದ್ರು ದತ್ತ ಅವರ ಜಾಮೀನು ಮನವಿಯನ್ನು ನಿರಾಕರಿಸಲಾಯಿತು. ನ್ಯಾಯಾಲಯವು ಅವರನ್ನು 14 ದಿನಗಳ ಕಾಲ ನ್ಯಾಯಿಕ ಕಸ್ಟಡಿಗೆ ಕಳುಹಿಸುವ ತೀರ್ಪು ನೀಡಿತು. ಪಶ್ಚಿಮ ಬಂಗಾಳದ ಡಿಜಿಪಿ ರಾಜೀವ್ ಕುಮಾರ್ ಅವರು ಟಿಕೆಟ್ ಹಣವನ್ನು ಮರಳಿ ನೀಡಲು ಆಯೋಜಕರಿಗೆ ನಿರ್ದೇಶನ ನೀಡಿದ್ದಾರೆ. ಹೀಗೆ ಮಾಡದಿದ್ದರೆ ಕಾನೂನು ಕ್ರಮ ಕೈಗೊಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ದಾಂದಲೆ ಕೇವಲ ಒಂದು ಕಾರ್ಯಕ್ರಮ ರದ್ದಾದ್ದರಿಂದ ಮಾತ್ರ ಉಂಟಾಗಿಲ್ಲ. ಬದಲಿಗೆ, ಮೆಸ್ಸಿ ಹಠಾತ್ ನಿರ್ಗಮನದ ಕುರಿತು ಸ್ಪಷ್ಟ ಕಾರಣ ತಿಳಿಸಿಲ್ಲ ಜೊತೆಗೆ ಪಾರದರ್ಶಕತೆಯ ಕೊರತೆ ಅಭಿಮಾನಿಗಳ ಕೋಪವನ್ನು ಹೆಚ್ಚಿಸಿತು. ದೊಡ್ಡ ಪ್ರಮಾಣದ ಟಿಕೆಟ್ ಹಣ ಪಾವತಿ ಮಾಡಿ, ದೂರದಿಂದೆಲ್ಲ ಅಭಿಮಾನಿಗಳು ಬಂದಿದ್ದರು. ತಕ್ಷಣ ಕಾರ್ಯಕ್ರಮ ರದ್ದಾದ ಕಾರಣ ಅಭಿಮಾನಿಗಳು ತಾಳ್ಮೆ ಕಳೆದುಕೊಂಡಿದ್ದರಿಂದ ಪರಿಸ್ಥಿತಿ ಹದಗೆಟ್ಟಿತು. ಪ್ರಸ್ಥುತ ಕಾರ್ಯಕ್ರಮ ಆಯೋಜಕ ಶತಾದ್ರು ದತ್ತ ಅವರನ್ನು ಪೊಲೀಸರು ಬಂಧಿಸಿದ್ದು ಮುಂದೆ ಏನು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ.
