ಬುಮ್ರಾಗೆ ಐಪಿಎಲ್‌ನಲ್ಲಿ ವಿಶ್ರಾಂತಿ ಕೊಡಬೇಕಿತ್ತು: ದಿಲೀಪ್ ವೆಂಗ್‌ಸರ್ಕಾರ್!

ಐಪಿಎಲ್ ರನ್‌ಗಳಿಗಿಂತ ಟೆಸ್ಟ್ ಸಾಧನೆ ಮುಖ್ಯ!

1 (38)

ಮುಂಬೈ: ಭಾರತ ತಂಡದ ಸ್ಟಾರ್ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಕಾರ್ಯದೊತ್ತಡದಿಂದಾಗಿ ಆಯಾಸಗೊಂಡಿದ್ದರೆ, ಕಳೆದ ಐಪಿಎಲ್‌ನಲ್ಲಿ ವಿಶ್ರಾಂತಿ ಪಡೆಯಬೇಕಿತ್ತು ಎಂದು ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕಾರ್ ಅಭಿಪ್ರಾಯಪಟ್ಟಿದ್ದಾರೆ. ಇಂಗ್ಲೆಂಡ್ ಸರಣಿಯ ವೇಳೆ ಬುಮ್ರಾಗೆ ವಿಶ್ರಾಂತಿ ನೀಡುವ ಬದಲು, ಐಪಿಎಲ್‌ನಿಂದಲೇ ಅವರಿಗೆ ವಿರಾಮ ಕೊಡಬಹುದಿತ್ತು ಎಂದು ಅವರು ಸಲಹೆ ನೀಡಿದ್ದಾರೆ.

“ಜಸ್‌ಪ್ರೀತ್ ಬುಮ್ರಾ ಐಪಿಎಲ್‌ನಲ್ಲಿ ಆಡದೇ ಇದ್ದರೆ ಉತ್ತಮವಾಗಿತ್ತು. ಬಿಸಿಸಿಐ ಮತ್ತು ಆಯ್ಕೆ ಸಮಿತಿಯು ಮುಂಬೈ ಇಂಡಿಯನ್ಸ್ ತಂಡದ ಮಾಲೀಕ ಮುಕೇಶ್ ಅಂಬಾನಿ ಅವರೊಂದಿಗೆ ಈ ಬಗ್ಗೆ ಚರ್ಚಿಸಿ, ಬುಮ್ರಾಗೆ ವಿಶ್ರಾಂತಿ ನೀಡುವಂತೆ ಮನವೊಲಿಸಬೇಕಿತ್ತು. ಐಪಿಎಲ್‌ನ ರನ್‌ಗಳು ಮತ್ತು ವಿಕೆಟ್‌ಗಳು ಯಾರಿಗೂ ದೀರ್ಘಕಾಲ ನೆನಪಿನಲ್ಲಿ ಉಳಿಯುವುದಿಲ್ಲ.

ಆದರೆ, ಅಂತಾರಾಷ್ಟ್ರೀಯ ಸರಣಿಗಳಲ್ಲಿ ಮಾಡಿದ ಸಾಧನೆ ಚಿರಕಾಲ ಅಭಿಮಾನಿಗಳ ಮನದಲ್ಲಿ ನೆಲೆಯೂರುತ್ತದೆ. ಇಂಗ್ಲೆಂಡ್‌ನಲ್ಲಿ ಶುಭ್‌ಮನ್ ಗಿಲ್, ಕೆಎಲ್ ರಾಹುಲ್, ರವೀಂದ್ರ ಜಡೇಜ, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಮೊಹಮ್ಮದ್ ಸಿರಾಜ್, ಮತ್ತು ವಾಷಿಂಗ್ಟನ್ ಸುಂದರ್ ಅವರ ಪ್ರದರ್ಶನ ಇದಕ್ಕೆ ಉತ್ತಮ ಉದಾಹರಣೆ,” ಎಂದು ವೆಂಗ್‌ಸರ್ಕಾರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Exit mobile version