ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಚಿನ್ನ

Web (29)

ಇಂಗ್ಲೆಂಡ್‌ನ ಲಿವರ್‌ಪೂಲ್ನಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ 2025ರಲ್ಲಿ ಹರ್ಯಾಣದ ಜಾಸ್ಮಿನ್ ಲಂಬೋರಿಯಾ ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಮಹಿಳೆಯರ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಪೋಲೆಂಡ್‌ನ ಒಲಿಂಪಿಕ್ ಬೆಳ್ಳಿ ಪದಕವಿನತೆ ಜೂಲಿಯಾ ಸ್ಜೆರೆಮೆಟಾ ಅವರನ್ನು 4-1 ಅಂಕಗಳಿಂದ ಸೋಲಿಸಿ, ಭಾರತಕ್ಕೆ ಮೊದಲ ಬಾರಿಗೆ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗಳಿಸಿಕೊಟ್ಟಿದ್ದಾರೆ.

ಸೆಮಿಫೈನಲ್‌ನಲ್ಲಿ ವೆನೆಜುವೆಲಾದ ಒಮೈಲಿನ್ ಅಲ್ಕಾಲಾ ಅವರನ್ನು 5-0 ಅಂಕಗಳಿಂದ ಸುಲಭವಾಗಿ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದ ಜಾಸ್ಮಿನ್, ಫೈನಲ್‌ನಲ್ಲಿ 2024ರ ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕವಿನತೆಯನ್ನು ಎದುರಿಸಿದರು. ಆದರೂ, ತಮ್ಮ ಗಟ್ಟಿ ಪರಿಶ್ರಮ ಮತ್ತು ತಂತ್ರಜ್ಞಾನದಿಂದ 4-1 ಅಂಕಗಳಿಂದ ಗೆಲುವು ಸಾಧಿಸಿ, ಭಾರತದ ಬಾಕ್ಸಿಂಗ್ ಇತಿಹಾಸದಲ್ಲಿ ಮೊದಲ ಚಿನ್ನದ ಪದಕವನ್ನು ಗಳಿಸಿದ್ದಾರೆ.

ಜಾಸ್ಮಿನ್ ಲಂಬೋರಿಯಾ: 

ಹರ್ಯಾಣದ ಭಿವಾನಿನಲ್ಲಿ ಜನಿಸಿದ ಜಾಸ್ಮಿನ್ ಲಂಬೋರಿಯಾ ಅವರಿಗೆ ಬಾಕ್ಸಿಂಗ್ ರಕ್ತದಲ್ಲಿ ಒಲಿಯುವಂತಿದೆ. ಅವರ ಕುಟುಂಬದಲ್ಲಿ ಬಾಕ್ಸಿಂಗ್ ಮತ್ತು ಕುಸ್ತಿ ಮನೆತನವಿದ್ದು, ಅವರ ಮುತ್ತಾತ ಹೆವಿವೇಯ್ಟ್ ಬಾಕ್ಸರ್ ಆಗಿದ್ದರು. ತಾತ ಕ್ಯಾಪ್ಟನ್ ಚಂದರ್ ಭಾನ್ ಲಂಬೋರಿಯಾ ಕುಸ್ತಿಪಟು ಆಗಿದ್ದರು. ಜಾಸ್ಮಿನ್‌ರ ಚಿಕ್ಕಪ್ಪಂದಿರಾದ ಸಂದೀಪ್ ಮತ್ತು ಪರ್ವಿಂದರ್ ಇಬ್ಬರೂ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಗಳು. ಇಂತಹ ಮನೆತನದಿಂದ ಬಂದ ಜಾಸ್ಮಿನ್, ಚಿಕ್ಕ ವಯಸ್ಸಿನಿಂದಲೇ ಬಾಕ್ಸಿಂಗ್ ರಿಂಗ್‌ಗೆ ಇಳಿದರು ಮತ್ತು ನಿರಂತರ ಪರಿಶ್ರಮದಿಂದ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಜಾಸ್ಮಿನ್‌ರ ಹಿಂದಿನ ಸಾಧನೆಗಳು

ಜಾಸ್ಮಿನ್ ಅವರು ಈ ಹಿಂದೆ ಹಲವು ಅಂತರರಾಷ್ಟ್ರೀಯ ಸಾಧನೆಗಳನ್ನು ಮಾಡಿದ್ದಾರೆ. 2021ರಲ್ಲಿ ದುಬೈನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್ನಲ್ಲಿ ಕಂಚಿನ ಪದಕ ಗೆದ್ದು ಗಮನ ಸೆಳೆದರು. 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ನಲ್ಲೂ ಕಂಚಿನ ಪದಕ ಗೆದ್ದರು. ಆದರೆ, ಕಳೆದ ವರ್ಷದ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೇಗನೇ ಸೋತು ಹೊರಬಿದ್ದಿದ್ದರು. ಆದರೂ, 2025ರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟು ಇತಿಹಾಸ ನಿರ್ಮಿಸಿದ್ದಾರೆ.

ಭಾರತದ ಬಾಕ್ಸಿಂಗ್‌ಗೆ ಹೊಸ ಆಯಾಮ

ಜಾಸ್ಮಿನ್‌ರ ಈ ಸಾಧನೆಯು ಭಾರತದ ಮಹಿಳಾ ಬಾಕ್ಸಿಂಗ್‌ಗೆ ಹೊಸ ಉತ್ಸಾಹವನ್ನು ತಂದಿದ್ದು, ಯುವ ಬಾಕ್ಸರ್‌ಗಳಿಗೆ ಪ್ರೇರಣೆಯಾಗಿದೆ. ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ ಗಳಿಸಿದ್ದು ಇದೇ ಮೊದಲು. ಈ ಗೆಲುವು ಭಾರತದ ಬಾಕ್ಸಿಂಗ್ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ.

Exit mobile version