ಕೊಲಂಬೊ: ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯವೆಂದರೆ ಅಲ್ಲಿ ಒತ್ತಡ ಸಾಮಾನ್ಯ. ಆದರೆ ಭಾರತದ ಯುವ ಆರಂಭಿಕ ಆಟಗಾರ ಇಶಾನ್ ಕಿಶನ್ ಅದನ್ನ ಗಾಳಿಗೆ ತೂರಿದ ರೀತಿ ಅದ್ಭುತವಾಗಿತ್ತು. ಪಾಕಿಸ್ತಾನದ ಬಲಿಷ್ಠ ವೇಗಿ ಶಾಹೀನ್ ಶಾ ಅಫ್ರಿದಿ ಎಸೆದ ಇನ್ನಿಂಗ್ಸ್‌ನ ಮೊದಲ ಓವರ್‌ನ ಮೊದಲ ಎಸೆತವನ್ನೇ ಸಿಕ್ಸರ್ ಬಾರಿಸಿದ್ದಾರೆ.
ಕಳೆದ ವರ್ಷ ದುಬೈನಲ್ಲಿ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರು ಅಫ್ರಿದಿಯ ಮೊದಲ ಎಸೆತವನ್ನು ಸಿಕ್ಸರ್‌ಗೆ ಬಾರಿಸಿದರು. ಇಂದು ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಇಶಾನ್ ಕಿಶನ್ ಅದೇ ಇತಿಹಾಸವನ್ನು ಪುನರಾವರ್ತಿಸಿದರು. ಆ ಮೂಲಕ ಪಾಕಿಸ್ತಾನದ ಪ್ರಮುಖ ಬೌಲರ್‌ನ ಆತ್ಮವಿಶ್ವಾಸವನ್ನು ಮೊದಲ ಎಸೆತದಲ್ಲೇ ಧೂಳೀಪಟ ಮಾಡಿದರು.
ಅಬ್ಬರದ ಅರ್ಧಶತಕ ಮತ್ತು ತಿಲಕ್ ವರ್ಮಾ ಸಾಥ್
ಪಂದ್ಯದ ಆರಂಭದಲ್ಲೇ ಅಭಿಷೇಕ್ ಶರ್ಮಾ ಔಟಾಗಿ ಆಘಾತ ನೀಡಿದರೂ, ಇಶಾನ್ ಕಿಶನ್ ಭಯಪಡಲಿಲ್ಲ. ಎರಡನೇ ಓವರ್‌ನಲ್ಲಿ ಇಶಾನ್ ಮತ್ತು ತಿಲಕ್ ವರ್ಮಾ ಜೋಡಿ ಪಾಕ್ ಬೌಲರ್‌ಗಳಿಗೆ ಶಾಕ್ ಮೇಲೆ ಶಾಕ್ ನೀಡಿದೆ. ಆ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಸೇರಿದಂತೆ ಒಟ್ಟು 15 ರನ್ ಗಳಿಸಿದೆ.
Different batter, same result! 👀@ishankishan51 greets Shaheen Afridi with a maximum! 💪
ICC Men’s #T20WorldCup | #INDvPAK | LIVE NOW 👉https://t.co/SpqYo6n3dL pic.twitter.com/yLRPn0yFwH
— Star Sports (@StarSportsIndia) February 15, 2026
ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಇಶಾನ್ ಕಿಶನ್, ಅಂತಿಮವಾಗಿ 40 ಎಸೆತಗಳಲ್ಲಿ 77 ರನ್ (10 ಬೌಂಡರಿ, 3 ಸಿಕ್ಸರ್) ಚಚ್ಚಿ ಔಟಾದರು. ಅವರ ಈ ಇನ್ನಿಂಗ್ಸ್ ಭಾರತಕ್ಕೆ ಬೃಹತ್ ಮೊತ್ತ ಭರಿಸಲು ಬುನಾದಿ ಹಾಕಿಕೊಟ್ಟಿತು.
ಬ್ಯಾಟಿಂಗ್ ವೈಭವದ ಹೈಲೈಟ್ಸ್:
-
87 ರನ್ಗಳ ಜೊತೆಯಾಟ: ಎರಡನೇ ವಿಕೆಟ್ಗೆ ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಜೋಡಿ ಕೇವಲ 46 ಎಸೆತಗಳಲ್ಲಿ 87 ರನ್ ಸೇರಿಸಿದರು.
-
ಒಬ್ಬಂಟಿ ಹೋರಾಟ: ಈ ಜೊತೆಯಾಟದ 87 ರನ್ಗಳಲ್ಲಿ ಇಶಾನ್ ಕಿಶನ್ ಒಬ್ಬರೇ 76 ರನ್ ಸಿಡಿಸುವ ಮೂಲಕ ಪಾಕ್ ಬೌಲಿಂಗ್ ಪಡೆಯನ್ನು ನಲುಗುವಂತೆ ಮಾಡಿದರು.
ಟೀಂ ಇಂಡಿಯಾ 88 ರನ್ ಗಳಿಸಿದ್ದಾಗ ಇಶಾನ್ ಕಿಶನ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಆದರೆ ಅಷ್ಟರಲ್ಲಾಗಲೇ ಪಾಕಿಸ್ತಾನದ ಬೌಲರ್‌ಗಳ ಲಯ ತಪ್ಪಿಸುವಲ್ಲಿ ಇಶಾನ್ ಯಶಸ್ವಿಯಾಗಿದ್ದರು.
