ND-W vs SL-W: ಟಾಸ್ ಗೆದ್ದ ಶ್ರೀಲಂಕಾ, ಭಾರತ ಮೊದಲು ಬ್ಯಾಟಿಂಗ್!

BeFunky collage (39)

ಭಾರತ-ಶ್ರೀಲಂಕಾ ಮಹಿಳಾ ಟಿ20 ಸರಣಿಯ ನಾಲ್ಕನೇ ಪಂದ್ಯ ಇಂದು ತಿರುವನಂತಪುರಂನ ಗ್ರೀನ್‌ಫೀಲ್ಡ್ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈಗಾಗಲೇ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿ ಸರಣಿ ಗೆಲ್ಲಿಸಿಕೊಂಡಿರುವ ಟೀಂ ಇಂಡಿಯಾಗೆ ಈ ಪಂದ್ಯ ಔಪಚಾರಿಕವಾದರೂ, ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ಮೊದಲ ಮೂರು ಪಂದ್ಯಗಳಲ್ಲಿ ಮಾಡಿದ ಕೆಲವು ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಹರ್ಮನ್‌ಪ್ರೀತ್ ಕೌರ್ ಪಡೆಗೆ ಉಳಿದಿರುವ ಎರಡು ಪಂದ್ಯಗಳು ಉತ್ತಮ ಅವಕಾಶವಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡವು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ. ಈ ಸರಣಿಯಲ್ಲಿ ಲಂಕಾ ತಂಡ ಟಾಸ್ ಗೆದ್ದಿರುವುದು ಇದೇ ಮೊದಲು. ಮೊದಲ ಮೂರು ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದ ಭಾರತ ತಂಡವೇ ಪಂದ್ಯವನ್ನು ಗೆದ್ದುಕೊಂಡಿತ್ತು.

ಟೀಂ ಇಂಡಿಯಾದಲ್ಲಿ 2 ಬದಲಾವಣೆಗಳು: ಈ ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಬದಲಾವಣೆಗಳಿವೆ. ಜೆಮಿಮಾ ರೊಡ್ರಿಗಸ್ ಹಾಗೂ ಕ್ರಾಂತಿ ಗೌಡ್ ಅವರು ಹೊರಗುಳಿದಿದ್ದು, ಅವರ ಬದಲಿಗೆ ಹರ್ಲೀನ್ ಡಿಯೋಲ್ ಮತ್ತು ಅರುಂಧತಿ ರೆಡ್ಡಿ ಅವರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಉಭಯ ತಂಡಗಳು:

ಭಾರತ ಮಹಿಳಾ ತಂಡ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಅಮಂಜೋತ್ ಕೌರ್, ವೈಷ್ಣವಿ ಶರ್ಮಾ, ಶ್ರೀ ಚರಣಿ, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ.

ಶ್ರೀಲಂಕಾ ಮಹಿಳಾ ತಂಡ: ಹಾಸಿನಿ ಪೆರೇರಾ, ಚಾಮರಿ ಅಟಾಪಟು (ನಾಯಕಿ), ಹರ್ಷಿತಾ ಸಮರವಿಕ್ರಮ, ಇಮೇಶಾ ದುಲಾನಿ, ನೀಲಾಕ್ಷಿಕಾ ಸಿಲ್ವಾ, ಕವಿಶಾ ದಿಲ್ಹಾರಿ, ಕೌಶಿನಿ ನುತ್ಯಂಗನಾ (ವಿಕೆಟ್ ಕೀಪರ್), ಮಲ್ಶಾ ಶೆಹಾನಿ, ನಿಮಾಶಾ ಮೀಪಗೆ, ಕಾವ್ಯಾ ಕವಿಂದಿ, ರಶ್ಮಿಕಾ ಸೆವ್ವಂಡಿ.

ಸರಣಿಯಲ್ಲಿ ಆತ್ಮವಿಶ್ವಾಸದಿಂದ ಆಡುತ್ತಿರುವ ಭಾರತ ತಂಡವು ಈ ಪಂದ್ಯದಲ್ಲಿಯೂ ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವು ಭಾರತಕ್ಕೆ ದೊಡ್ಡ ಸ್ಕೋರ್ ಕಟ್ಟಲು ಸಹಾಯಕವಾಗಬಹುದು.

Exit mobile version