IND vs SA: ಆಫ್ರಿಕಾಗೆ 51 ರನ್‌ಗಳ ಭರ್ಜರಿ ಗೆಲುವು, ಭಾರತಕ್ಕೆ ಹೀನಾಯ ಸೋಲು

Untitled design 2025 12 11T232738.637

ಚಂಡೀಗಢ: ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಸಂಪೂರ್ಣ ವೈಫಲ್ಯ ಕಂಡು 51 ರನ್‌ಗಳ ಭಾರೀ ಸೋಲನ್ನು ಅನುಭವಿಸಿದೆ. ಮಲ್ಲನ್‌ಪುರ್‌ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ, ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಹೀನಾಯ ಪ್ರದರ್ಶನ ನೀಡಿದೆ. ಮೊದಲ ಪಂದ್ಯದಲ್ಲಿ 101 ರನ್‌ಗಳ ಭರ್ಜರಿ ಜಯ ದಾಖಲಿಸಿದ್ದ ತಂಡ, ಈ ಪಂದ್ಯದಲ್ಲಿ ಸಂಪೂರ್ಣ ತತ್ತರಿಸಿ ಸರಣಿಯನ್ನು 1-1ರಲ್ಲಿ ಸಮಬಲಕ್ಕೆ ತಂದುಕೊಟ್ಟಿದೆ.

ದಕ್ಷಿಣ ಆಫ್ರಿಕಾದ ಸ್ಫೋಟಕ ಆರಂಭ

ಪ್ರೋಟಿಯಾಸ್ ಪರ ಮೊದಲಿನಿಂದಲೇ ಆಕ್ರಮಣಕಾರಿ ಆಟ ಆರಂಭವಾಯಿತು. ವಿಶೇಷವಾಗಿ ಕ್ವಿಂಟನ್‌ ಡಿಕಾಕ್‌  46 ಎಸೆತಗಳಲ್ಲಿ 90 ರನ್‌ಗಳ ಸ್ಫೋಟಕ ಇನ್ನಿಂಗ್ಸ್‌ ಆಡಿದರು. 7 ಭರ್ಜರಿ ಸಿಕ್ಸ್ ಮತ್ತು 5 ಬೌಂಡರಿಗಳಿಂದ ಅಲಂಕರಿಸಿದ್ದ ಅವರ ಇನ್ನಿಂಗ್ಸ್ ಭಾರತೀಯ ಬೌಲಿಂಗ್ ಲೈನ್‌ಅಪ್‌ ಅನ್ನು ಧೂಳಿಪಟ ಮಾಡಿತ್ತು.

ಡೊನಿವಾನ್‌ ಫೆರೇರಾ ವೇಗದ 30 (16 ಎಸೆತ), ಕ್ಯಾಪ್ಟನ್ ಏಡನ್‌ ಮಾರ್ಕ್ರಂ 29, ಟ್ರಿಸ್ಟನ್ ಬ್ರೇವಿಸ್ 14 ಹಾಗೂ ಡೇವಿಡ್‌ ಮಿಲ್ಲರ್‌ ಅಜೇಯ 20 ರನ್‌ಗಳ ಮೂಲಕ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ ಕೇವಲ ನಾಲ್ಕು ವಿಕೆಟ್‌ ನಷ್ಟಕ್ಕೆ 213 ಎಂಬ ದೊಡ್ಡ ಮೊತ್ತ ಕಲೆ ಹಾಕಿತ್ತು. ಆದರೆ ಭಾರತೀಯ ಬೌಲರ್‌ಗಳಲ್ಲಿ ಯಾರೊಬ್ಬರೂ ಉತ್ತಮ ಪ್ರದರ್ಶನ ನೀಡಲು ವಿಫಲರಾದರು.

ಅರ್ಷ್‌ದೀಪ್‌ ಸಿಂಗ್‌ನ ‘ವೈಡ್‌’ ಓವರ್- ಮೈದಾನದಲ್ಲಿ ಗೊಂದಲ

ಪಂದ್ಯದಲ್ಲಿ ಚರ್ಚೆಗೆ ಗ್ರಾಸವಚಾಗಿದ್ದು, ಅರ್ಶದೀಪ್‌ ಸಿಂಗ್ ಎಸೆದ 11ನೇ ಓವರ್‌. ಅವರು, ಈ ಓವರ್‌ನಲ್ಲಿ ಸಂಪೂರ್ಣ ಲಯ ತಪ್ಪಿದರು. ಓವರ್‌ನ ಮೊದಲ ಎಸೆತವನ್ನೇ ಡಿಕಾಕ್‌ ಸೈಟ್‌ಸ್ಕ್ರೀನ್‌ಗೆ ಸಿಕ್ಸ್ ಹೊಡೆದು ಪ್ರಾರಂಭಿಸಿದರು. ನಂತರ ಒತ್ತಡಕ್ಕೆ ಒಳಗಾದ ಅರ್ಶದೀಪ್‌ ಸತತ ವೈಡ್ಗಳನ್ನು ಎಸೆದು ಮೈದಾನದಲ್ಲೇ ಅಸಮಾನ್ಯ ದೃಶ್ಯ ಕಂಡುಬಂದಿತ್ತು. ಮೂರನೇ ಎಸೆತವನ್ನು ಪೂರ್ಣಗೊಳಿಸಲು ಅವರು ಬರೋಬ್ಬರಿ 5 ಬಾರಿ ಚೆಂಡು ಎಸೆಯಬೇಕಾಯಿತು.

ಒಟ್ಟು 7 ವೈಡ್‌ಗಳು ಒಂದೇ ಓವರ್‌ನಲ್ಲಿ!. ಆ ಓವರ್‌ನಲ್ಲಿ ಒಟ್ಟು 18 ರನ್‌ಗಳು ಹರಿದುಬಂದವು. ಇದನ್ನು ಕಂಡ ಟೀಂ ಇಂಡಿಯಾ ಬೌಲಿಂಗ್ ಕೋಚ್‌ ಮಾರ್ನೆ ಮಾರ್ಕೆಲ್ ಕೂಡ ಗಂಭೀರವಾಗಿ ತೆಗೆದುಕೊಂಡು ಆತಂಕಕ್ಕೆ ಒಳಗಾಗದರು. ಈ ಓವರ್‌ ಪಂದ್ಯದಲ್ಲಿ ಟೀಂ ಇಂಡಿಯಾ ಮೇಲೆ ನಿರ್ಣಾಯಕ ಒತ್ತಡ ತಂದಿತ್ತು.

214 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭದಲ್ಲೇ ಕುಸಿತ ಕಂಡುಬಂದಿತ್ತು. ಶುಭಮನ್‌ ಗಿಲ್ ಮೊದಲ ಓವರ್‌ನ ಮೊದಲ ಚೆಂಡಿನಲ್ಲೇ ಔಟ್ ಆದರು. ಅಭಿಷೇಕ್‌ ಶರ್ಮಾ- 17 ರನ್‌ ಮಾಡಿ ಔಟ್ ಆದರು. ನಾಯಕ ಸೂರ್ಯಕುಮಾರ್ ಯಾದವ್ – ಕೇವಲ 5 ರನ್, ಅಕ್ಷರ್‌ ಪಟೇಲ್ – ನಿಧಾನ ಇನ್ನಿಂಗ್ಸ್ ಬಳಿಕ ಕ್ಯಾಚ್‌ ನೀಡಿ ವಾಪಾಸ್ ಆದರು. ಪವರ್‌ಪ್ಲೇಯಲ್ಲೇ ಪ್ರಮುಖ ಮೂರು ವಿಕೆಟ್‌ ಕಳಕೊಂಡ ಭಾರತ ದೊಡ್ಡ ಚೇಸ್‌ಗೆ ಬೇಕಾದ ಮೊತ್ತವನ್ನು ಕಳೆದುಕೊಂಡಿತ್ತು.

Exit mobile version