ಅಫ್ಘಾನ್ ಸರಣಿಗೆ ಟೀಮ್ ಇಂಡಿಯಾ ತಂಡ ಪ್ರಕಟ: ಶುಭ್‌ಮನ್ ಗಿಲ್ ನಾಯಕ

Untitled design 2026 05 19T180524.089

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗಳಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಿದೆ. ಟಿ20 ತಂಡದಲ್ಲಿ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಅವಕಾಶ ನೀಡದೇ, ಯುವ ಆಟಗಾರ ಶುಭ್‌ಮನ್ ಗಿಲ್ ಅವರನ್ನು ನಾಯಕನನ್ನಾಗಿ ಘೋಷಿಸಲಾಗಿದೆ ಈದು ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದಂತಾಗಿದೆ.

ಟಿ20 ಸರಣಿಗಾಗಿ ಆಯ್ಕೆಯಾದ ತಂಡದಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಾಯಕತ್ವದ ಹೊಣೆ ಹೊತ್ತಿರುವ ಶುಭ್‌ಮನ್ ಗಿಲ್‌ಗೆ ಕೆ.ಎಲ್. ರಾಹುಲ್ ಉಪನಾಯಕನಾಗಿ ಸಾಥ್ ನೀಡಲಿದ್ದಾರೆ. ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್ ಮತ್ತು ದೇವದತ್ ಪಡಿಕ್ಕಲ್‌ರಂತಹ ಪ್ರತಿಭಾವಂತ ಬ್ಯಾಟರ್‌ಗಳು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇನ್ನು ವಿಕೆಟ್ ಕೀಪರ್ ವಿಭಾಗದಲ್ಲಿ ರಿಷಭ್ ಪಂತ್ ದೀರ್ಘ ವಿರಾಮದ ಬಳಿಕ ತಂಡಕ್ಕೆ ಮರಳಿದ್ದಾರೆ. ಅಪಘಾತದ ನಂತರ ಮತ್ತೆ ತಮ್ಮ ಫಿಟ್‌ನೆಸ್ ಮತ್ತು ಫಾರ್ಮ್ ಸಾಬೀತುಪಡಿಸಿರುವ ಪಂತ್ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಧ್ರುವ್ ಜುರೆಲ್ ಬ್ಯಾಕಪ್ ವಿಕೆಟ್ ಕೀಪರ್ ಆಗಿ ಅವಕಾಶ ಪಡೆದಿದ್ದಾರೆ.

ಆಲ್‌ರೌಂಡರ್ ವಿಭಾಗದಲ್ಲಿ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ತಂಡಕ್ಕೆ ಸಮತೋಲನ ನೀಡಲಿದ್ದಾರೆ. ಸ್ಪಿನ್ ದಾಳಿಯಲ್ಲಿ ಕುಲದೀಪ್ ಯಾದವ್ ಜೊತೆಗೆ ಯುವ ಸ್ಪಿನ್ನರ್ ಮಾನವ್ ಸುತಾರ್ ಅವಕಾಶ ಪಡೆದಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ , ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್ ಮತ್ತು ಹರ್ಷ್ ದುಬೆ ತಮ್ಮ ಸಾಮರ್ಥ್ಯ ತೋರಿಸಬೇಕಾದ ಸವಾಲಿನಲ್ಲಿದ್ದಾರೆ.

ಇನ್ನೊಂದೆಡೆ, ಏಕದಿನ ಸರಣಿಗೆ ಪ್ರಕಟಿಸಲಾದ ತಂಡದಲ್ಲಿ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮರಳಿದ್ದಾರೆ. ಆದರೆ ಇಲ್ಲಿ ಕೂಡ ನಾಯಕತ್ವವನ್ನು ಶುಭ್‌ಮನ್ ಗಿಲ್ ಅವರಿಗೇ ಮುಂದುವರಿಸಿದ್ದಾರೆ.  ಮುಂದಿನ ದಿನಗಳಲ್ಲಿ ಭಾರತದ ಶಾಶ್ವತ ನಾಯಕನಾಗಿ ಗಿಲ್ ಅವರನ್ನು ರೂಪಿಸಲು BCCI ಹಾಗೂ ಆಯ್ಕೆ ಸಮಿತಿ ಸಿದ್ಧತೆ ನಡೆಸುತ್ತಿದೆ ಎಂಬ ಸಂದೇಶ ಇದರಿಂದ ಸ್ಪಷ್ಟವಾಗಿದೆ.

ಏಕದಿನ ತಂಡದಲ್ಲಿ ಶ್ರೇಯಸ್ ಅಯ್ಯರ್ ಉಪನಾಯಕನಾಗಿ ಜವಾಬ್ದಾರಿ ವಹಿಸಲಿದ್ದು, ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ. ಕೆ.ಎಲ್. ರಾಹುಲ್ ಮತ್ತು ಇಶಾನ್ ಕಿಶನ್ ವಿಕೆಟ್ ಕೀಪರ್ ಆಯ್ಕೆಗಳಲ್ಲಿ ಸ್ಥಾನ ಪಡೆದಿದ್ದಾರೆ. ಅನುಭವಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಿರುವುದು ಹೆಚ್ಚುವರಿ ಬಲವಾಗಿದೆ.

ವೇಗದ ಬೌಲಿಂಗ್ ವಿಭಾಗದಲ್ಲಿ ಅರ್ಶ್‌ದೀಪ್ ಸಿಂಗ್ ಮತ್ತು ಪ್ರಸಿದ್ಧ್ ಕೃಷ್ಣ ಜೊತೆಗೆ ಯುವ ವೇಗಿ ಪ್ರಿನ್ಸ್ ಯಾದವ್ ಮೊದಲ ಬಾರಿಗೆ ಗಮನ ಸೆಳೆದಿದ್ದಾರೆ. ಟೆಸ್ಟ್ ತಂಡದಲ್ಲಿರುವ ನಿತೀಶ್ ಕುಮಾರ್ ರೆಡ್ಡಿ, ಗುರ್ನೂರ್ ಬ್ರಾರ್ ಹಾಗೂ ಹರ್ಷ್ ದುಬೆ ಏಕದಿನ ತಂಡದಲ್ಲೂ ಸ್ಥಾನ ಉಳಿಸಿಕೊಂಡಿರುವುದು ಆಯ್ಕೆ ಸಮಿತಿಯ ವಿಶ್ವಾಸವನ್ನು ತೋರಿಸುತ್ತದೆ. ಆದರೆ ಹಿರಿಯ ಆಟಗಾರರ ಅಂತಿಮ ಆಯ್ಕೆ ಅವರ ಫಿಟ್‌ನೆಸ್ ಆಧಾರಿತವಾಗಿರುತ್ತದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

Exit mobile version