IND vs NAM T20 world Cup 2026: ಟಾಸ್ ಗೆದ್ದ ನಮೀಬಿಯಾ ಬೌಲಿಂಗ್ ಆಯ್ಕೆ, ಭಾರತ ಮೊದಲು ಬ್ಯಾಟಿಂಗ್!

BeFunky collage 2026 02 12T184846.592

2026ರ ಟಿ20 ವಿಶ್ವಕಪ್‌ನ ಗ್ರೂಪ್ ಎನ್‌ನ 18ನೇ ಪಂದ್ಯದಲ್ಲಿ ಭಾರತ ಮತ್ತು ನಮೀಬಿಯಾ ಇಂದು ಮುಖಾಮುಖಿಯಾಗಿವೆ. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ನಮೀಬಿಯಾ ನಾಯಕ ಏರಿಕ್ ಎಡ್ಮಂಡ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ.

ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ USA ವಿರುದ್ಧ 29 ರನ್‌ಗಳ ಗೆಲುವು ಸಾಧಿಸಿ ಉತ್ತಮ ಆರಂಭ ಪಡೆದಿದೆ. ಇಂದು ಸತತ ಎರಡನೇ ಗೆಲುವಿನೊಂದಿಗೆ ಸೂಪರ್-8ಕ್ಕೆ ದೊಡ್ಡ ಹೆಜ್ಜೆ ಇಡಲು ಸಜ್ಜಾಗಿದೆ. ಇತ್ತ ನಮೀಬಿಯಾ ತಂಡ ಮೊದಲ ಪಂದ್ಯದಲ್ಲಿ ಸೋತ ನಂತರ ತನ್ನ ಖಾತೆ ತೆರೆಯಲು ಭರವಸೆಯೊಂದಿಗೆ ಕಣಕ್ಕಿಳಿದಿದೆ.

ಪಂದ್ಯದ ಮುಖ್ಯ ಅಂಶಗಳು :

ಪಂದ್ಯದ ಆರಂಭ ಸಂಜೆ 7:00ಕ್ಕೆ ನಿಗದಿಯಾಗಿದ್ದು, ಟಾಸ್ ಸಂಜೆ 6:30ಕ್ಕೆ ನಡೆಯಿತು. ಭಾರತ ತಂಡದಲ್ಲಿ ಯಾವ ಬದಲಾವಣೆಗಳು ಆಗಿವೆ, ಇಂದು ಯಾರು ಮಿಂಚಬಹುದು ಎಂಬುದು ಈಗ ಎಲ್ಲರ ಕುತೂಹಲ.

Exit mobile version