ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025ರ ಗ್ರ್ಯಾಂಡ್ ಫೈನಲ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪ್ರಶಸ್ತಿಗಾಗಿ ಕಾದಾಟ ನಡೆಸುತ್ತಿವೆ. ಮಳೆಯಿಂದ ಸುಮಾರು ಎರಡು ಗಂಟೆಗಳ ವಿಳಂಬದ ನಂತರ ನಡೆದ ಟಾಸ್‌ನಲ್ಲಿ ದಕ್ಷಿಣ ಆಫ್ರಿಕಾ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ. ಎರಡೂ ತಂಡಗಳು ತಮ್ಮ ಮೊದಲ ವಿಶ್ವಕಪ್ ಟ್ರೋಫಿ ಗೆಲ್ಲುವ ತವಕದಲ್ಲಿವೆ, ಆದರೆ ಭಾರತ ಲೀಗ್ ಹಂತದ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿಯಲ್ಲಿದೆ.
ಮಳೆಯ ಕಾರಣದಿಂದಾಗಿ ಪಂದ್ಯದ ಆರಂಭಕ್ಕೆ ವಿಳಂಬವಾದರೂ, ಟಾಸ್ ಸಮಯಕ್ಕೆ ಸರಿಯಾಗಿ ನಡೆದಿದೆ. ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೊಲ್ವಾರ್ಡ್ಟ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಉಭಯ ತಂಡಗಳು ತಮ್ಮ ಪ್ಲೇಯಿಂಗ್ 11ನ್ನು ಪ್ರಕಟಿಸಿದ್ದು, ಸೆಮಿಫೈನಲ್‌ಗೆ ಹೋಲಿಸಿದರೆ ಯಾವುದೇ ಬದಲಾವಣೆಗಳಿಲ್ಲ.
ಭಾರತದ ಮೂರನೇ ಫೈನಲ್, ಆಫ್ರಿಕಾದ ಮೊದಲ:
- ಟೀಂ ಇಂಡಿಯಾ ಮೂರನೇ ಬಾರಿಗೆ ಮಹಿಳಾ ವಿಶ್ವಕಪ್ ಫೈನಲ್ಗೆ ಅರ್ಹತೆ ಪಡೆದಿದೆ. ಹಿಂದೆ 2005 ಮತ್ತು 2017ರಲ್ಲಿ ಆಡಿದ್ದು, ಇದೀಗ ಮೊದಲ ಟ್ರೋಫಿ ಗೆಲ್ಲುವ ಆಸೆಯಲ್ಲಿದೆ.
- ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದೆ. ಲೀಗ್ ಹಂತದಲ್ಲಿ ಭಾರತವನ್ನು ಸೋಲಿಸಿದ್ದ ಆತ್ಮವಿಶ್ವಾಸದಲ್ಲಿದೆ.
ಲೀಗ್ ಹಂತದಲ್ಲಿ ನಡೆದ ಮುಖಾಮುಖಿಯಲ್ಲಿ ದಕ್ಷಿಣ ಆಫ್ರಿಕಾ ಭಾರತವನ್ನು ಸೋಲಿಸಿತ್ತು. ಇದೀಗ ಟೀಂ ಇಂಡಿಯಾ ಆ ಸೋಲಿಗೆ ಸೇಡು ತೀರಿಸಿಕೊಂಡು ಕಿರೀಟ ಎತ್ತಿ ಹಿಡಿಯುವ ಇರಾದೆಯಲ್ಲಿದೆ.
ವಿಶ್ವಕಪ್ ಮುಖಾಮುಖಿ:
ವಿಶ್ವಕಪ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಆರು ಬಾರಿ ಮುಖಾಮುಖಿಯಾಗಿದ್ದು:
- ತಲಾ 3 ಗೆಲುವುಗಳು (ಸಮಬಲ).
- ಕಳೆದ ಬಾರಿ ಭಾರತ ಗೆದ್ದಿದ್ದು 2005ರಲ್ಲಿ – ಅಂದಿನಿಂದ ಸತತ 3 ಪಂದ್ಯಗಳಲ್ಲಿ ಆಫ್ರಿಕಾ ಗೆದ್ದಿದೆ (ಲೀಗ್ ಹಂತ ಸೇರಿ).
- ಭಾರತಕ್ಕೆ 20 ವರ್ಷಗಳ ಸೋಲಿನ ಸರಣಿ ಮುರಿಯುವ ಚಾಲೆಂಜ್.
ಉಭಯ ತಂಡಗಳ ಪ್ಲೇಯಿಂಗ್ 11:
ಭಾರತ: ಶೆಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್‌ಕೀಪರ್), ಅಮಂಜೋತ್ ಕೌರ್, ರಾಧಾ ಯಾದವ್, ಕ್ರಾಂತಿ ಗೌಡ್, ಶ್ರೀ ಚರಣಿ, ರೇಣುಕಾ ಸಿಂಗ್ ಠಾಕೂರ್.
ದಕ್ಷಿಣ ಆಫ್ರಿಕಾ: ಲಾರಾ ವೊಲ್ವಾರ್ಡ್ಟ್ (ನಾಯಕಿ), ತಾಜ್ಮಿನ್ ಬ್ರಿಟ್ಸ್, ಅನ್ನಿಕ್ ಬಾಷ್, ಸುನೆ ಲೂಸ್, ಮರಿಜಾನ್ನೆ ಕಪ್, ಸಿನಾಲೊ ಜಾಫ್ತಾ (ವಿಕೆಟ್ ಕೀಪರ್), ಅನ್ರಿ ಡೆರ್ಕ್ಸೆನ್, ಕ್ಲೋಯ್ ಟ್ರಾಯೆನ್, ನಾಡಿನ್ ಡಿ ಕ್ಲರ್ಕ್, ಅಯಾಬೊಂಗಾ ಖಾಕಾ, ಎನ್ ಮ್ಲಾಬಾ.
