ಒಂದೇ ಶಾಲು ಹಾಕಿಕೊಂಡು ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿದ ಹಾರ್ದಿಕ್ ಪಾಂಡ್ಯ-ಮಾಹಿಕಾ

Untitled design 2026 03 27T144439.137

ಮುಂಬೈ, ಮಾರ್ಚ್ 27: ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಅವರ ಗೆಳತಿ, ನಟಿ ಮಾಹಿಕಾ ಶರ್ಮಾ ಅವರು ಮುಂಬೈನ ಸುಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಈ ಜೋಡಿ ದೇವಸ್ಥಾನಕ್ಕೆ ಆಗಮಿಸಿ ಆಶೀರ್ವಾದ ಪಡೆದುಕೊಂಡಿದೆ.

ಒಂದೇ ಶಾಲು ಹಂಚಿಕೊಂಡ ಜೋಡಿ

ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಹಾರ್ದಿಕ್ ಮತ್ತು ಮಾಹಿಕಾ ಒಂದೇ ಶಾಲನ್ನು ಹಂಚಿಕೊಂಡಿರುವುದು ಗಮನ ಸೆಳೆಯಿತು. ಹಾರ್ದಿಕ್ ಸಾಂಪ್ರದಾಯಿಕ ಕುರ್ತಾ ಧರಿಸಿದ್ದರೆ, ಮಾಹಿಕಾ ಶರ್ಮಾ ಸಲ್ವಾರ್ ಸೂಟ್‌ನಲ್ಲಿ ಕಂಗೊಳಿಸಿದರು. ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದ ಈ ಜೋಡಿಯ ವಿಡಿಯೋಗಳು ಮತ್ತು ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ದೇವಸ್ಥಾನದ ಆವರಣದಲ್ಲಿ ಸಾಕಷ್ಟು ಸಮಯ ಕಳೆದ ಈ ಜೋಡಿ, ನಂತರ ಮುಂಬೈನ ಇತರ ಪ್ರದೇಶಗಳಿಗೆ ತೆರಳಿದರು.

ಡೇಟಿಂಗ್ ವದಂತಿ

ಕಳೆದ ಕೆಲವು ತಿಂಗಳುಗಳಿಂದ ಹಾರ್ದಿಕ್ ಮತ್ತು ಮಾಹಿಕಾ ಡೇಟಿಂಗ್ ಮಾಡುತ್ತಿರುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದವು. ಇತ್ತೀಚೆಗೆ ಮಾಹಿಕಾ ಕೈಬೆರಳಲ್ಲಿ ವಜ್ರದ ಉಂಗುರ ಕಂಡಿದ್ದರಿಂದ ಇವರಿಬ್ಬರ ನಿಶ್ಚಿತಾರ್ಥವಾಗಿದೆಯೇ ಎಂಬ ಚರ್ಚೆಯೂ ನಡೆದಿತ್ತು. ಆದರೆ ಮಾಹಿಕಾ ಅದನ್ನು ನಿರಾಕರಿಸಿದ್ದರು.

ಈಗ ದೇವಸ್ಥಾನದಲ್ಲಿ ಒಂದೇ ಶಾಲು ಹಂಚಿಕೊಂಡು ಪೂಜೆ ಸಲ್ಲಿಸಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಇವರ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ನತಾಶಾ ಹುಟ್ಟುಹಬ್ಬದಂದೇ ಕಾಣಿಸಿಕೊಂಡ ಜೋಡಿ

ಹಾರ್ದಿಕ್ ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಅವರ 34ನೇ ಹುಟ್ಟುಹಬ್ಬದಂದೇ ಈ ಜೋಡಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ. ನತಾಶಾ ಅವರಿಗೆ ಮಾರ್ಚ್ 27ರಂದು ಜನ್ಮ ದಿನವಾಗಿದ್ದು, ಅವರ ಹುಟ್ಟುಹಬ್ಬದ ದಿನದಂದೇ ಹಾರ್ದಿಕ್ ಮಾಹಿಕಾ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ.

ಮಾಹಿಕಾ ಶರ್ಮಾ ಯಾರು?

ಮಾಹಿಕಾ ಶರ್ಮಾ ಭಾರತೀಯ ದೂರದರ್ಶನ ಮತ್ತು ಚಲನಚಿತ್ರ ರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಹಾಗೂ ಮಾಡೆಲ್. ಅಸ್ಸಾಂ ಮೂಲದವರಾಗಿರುವ ಮಾಹಿಕಾ ಅವರು ತಮ್ಮ ವೃತ್ತಿಜೀವನವನ್ನು ಮಾಡೆಲಿಂಗ್ ಮೂಲಕ ಆರಂಭಿಸಿದರು. ‘ಮಿಸ್ ಟೀನ್ ನಾರ್ತ್ ಈಸ್ಟ್’ ಪ್ರಶಸ್ತಿಯನ್ನು ಗೆದ್ದುಕೊಂಡಿರುವ ಇವರು, ಹಲವಾರು ಪ್ರಚಾರ ಚಿತ್ರಗಳು ಮತ್ತು ಸಂಗೀತ ವೀಡಿಯೋಗಳಲ್ಲಿ ಅಭಿನಯಿಸಿದ್ದಾರೆ. 

Exit mobile version