ಇಂದಿನ ಆರ್‌ಸಿಬಿ vs ಡೆಲ್ಲಿ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿ?

Untitled design 2026 04 27T092902.038

ನವದೆಹಲಿ, ಏಪ್ರಿಲ್ 27: ಐಪಿಎಲ್ 2026 ರ ಸೋಮವಾರದ ಹೈವೋಲ್ಟೇಜ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಅಭಿಮಾನಿಗಳಲ್ಲಿ ಉತ್ಸಾಹ ಮನೆ ಮಾಡಿದೆ. ಇದೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡವು 264 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿದರೂ ಸೋಲು ಕಂಡಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಮತ್ತೊಮ್ಮೆ ರನ್ ಮಳೆ ಸುರಿಯುವ ಸಾಧ್ಯತೆ ಹೆಚ್ಚು.

ಹವಾಮಾನ ವರದಿ: ಮಳೆಯಿಲ್ಲ, ಆದರೆ ಇಬ್ಬನಿ ಇದೆ

ಪಂದ್ಯಕ್ಕೆ ಯಾವುದೇ ರೀತಿಯ ಮಳೆ ಭೀತಿ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪಂದ್ಯ ಆರಂಭದ ಸಮಯಕ್ಕೆ ತಾಪಮಾನ ಸುಮಾರು 28–29°C ಇರುವ ನಿರೀಕ್ಷೆಯಿದೆ. ಸ್ವಲ್ಪ ಪ್ರಮಾಣದ ತೇವಾಂಶವಿರಬಹುದು. ಆದರೆ, ಪಂದ್ಯ ಮುಂದುವರೆದಂತೆ ಹಗಲಿನಲ್ಲಿ 40°C ವರೆಗೆ ತಾಪಮಾನ ಏರಲಿದೆ. ಸಂಜೆಯ ವೇಳೆಗೆ ಪಂದ್ಯ ನಡೆಯುವಾಗ ಇಬ್ಬನಿ (dew) ಬೀಳುವ ಸಾಧ್ಯತೆ ಇದೆ. ಇದು ಎರಡನೇ ಇನ್ನಿಂಗ್ಸ್ ನಲ್ಲಿ ಬೌಲರ್‌ಗಳಿಗೆ ಸವಾಲಾಗಿ ಪರಿಣಮಿಸಬಹುದು. ಚೆಂಡು ಕೈಜಾರುವ ಸಾಧ್ಯತೆ ಹೆಚ್ಚಿರುವುದರಿಂದ, ಟಾಸ್ ಗೆದ್ದ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರೆ ಅನುಕೂಲಕರವಾಗಿರುತ್ತದೆ.

ಅರುಣ್ ಜೇಟ್ಲಿ ಸ್ಟೇಡಿಯಂ ಅಂಕಿಅಂಶಗಳು: ಚೇಸಿಂಗ್ ಕಿಂಗ್

ಈ ಕ್ರೀಡಾಂಗಣದಲ್ಲಿ ಇದುವರೆಗೆ 100 ಟಿ20 ಪಂದ್ಯಗಳು ನಡೆದಿವೆ. ಇವುಗಳಲ್ಲಿ ಶೇಕಡ 51 ರಷ್ಟು ಪಂದ್ಯಗಳಲ್ಲಿ ಎರಡನೇ ಬ್ಯಾಟಿಂಗ್ ಮಾಡಿದ ತಂಡಗಳೇ ಗೆಲುವು ಸಾಧಿಸಿವೆ. ಶೇಕಡ 46 ರಷ್ಟು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಜಯಭೇರಿ ಬಾರಿಸಿವೆ. 

ಕಳೆದ ಪಂದ್ಯದ ಪಾಠ: 264 ರನ್‌ಗೂ ಸೋಲು

ಶನಿವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 264 ರನ್ಗಳ ಬೃಹತ್ ಮೊತ್ತ ಪೇರಿಸಿಯೂ ಪಂಜಾಬ್ ವಿರುದ್ಧ ಸೋಲು ಕಂಡಿತ್ತು. ಕೈಚೆಲ್ಲಿದ ಕ್ಯಾಚ್‌ಗಳು ಅವರಿಗೆ ದುಬಾರಿಯಾದವು. ಇಂದಿನ ಪಂದ್ಯದಲ್ಲೂ ಅದೇ ತಪ್ಪನ್ನು ಪುನರಾವರ್ತಿಸಿದರೆ, RCBಯಂತಹ ಅಪಾಯಕಾರಿ ಬ್ಯಾಟಿಂಗ್ ತಂಡದ ವಿರುದ್ಧ ಅದು ದುಬಾರಿಯಾಗಬಹುದು.

ವಿರಾಟ್ ಸೇನೆ ಎಚ್ಚರಿಕೆಯಲ್ಲಿದೆ

ಆರ್‌ಸಿಬಿ ಪರ ವಿರಾಟ್ ಕೊಹ್ಲಿ, ದೇವದತ್ತ ಪಡಿಕ್ಕಲ್, ನಾಯಕ ರಜತ್ ಪಾಟಿದಾರ್, ಟಿಮ್ ಡೇವಿಡ್, ಜಿತೇಶ್ ಶರ್ಮಾ, ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಈ ಸ್ಫೋಟಕ ಬ್ಯಾಟಿಂಗ್ ಲೈನ್ಅಪ್ ಅನ್ನು ಕಟ್ಟಿಹಾಕುವುದು ಡೆಲ್ಲಿ ಬೌಲರ್‌ಗಳಿಗೆ ದೊಡ್ಡ ಸವಾಲಾಗಿದೆ.

ಸಂಭಾವ್ಯ ತಂಡಗಳು

ಡೆಲ್ಲಿ ಕ್ಯಾಪಿಟಲ್ಸ್ (Playing XI)
ಪೃಥ್ವಿ ಶಾ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್ (ನಾಯಕ), ಡೇವಿಡ್ ಮಿಲ್ಲರ್, ಕೈಲ್ ಜೇಮಿಸನ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಟಿ ನಟರಾಜನ್, ದುಷ್ಮಂತ ಚಮೀರ.
ಇಂಪ್ಯಾಕ್ಟ್ ಆಟಗಾರ: ಸಮೀರ್ ರಿಜ್ವಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು (Playing XI)
ವಿರಾಟ್ ಕೊಹ್ಲಿ, ಜೇಕೋಬ್ ಬೆಥೆಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಮಂಗೇಶ್ ಯಾದವ್, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ.
ಇಂಪ್ಯಾಕ್ಟ್ ಪ್ಲೇಯರ್: ದೇವದತ್ ಪಡಿಕ್ಕಲ್

Exit mobile version