ಕಾಮನ್‌ವೆಲ್ತ್ 2026 ಮುಕ್ತಾಯ: 39 ಪದಕಗಳೊಂದಿಗೆ ಭಾರತ ಭರ್ಜರಿ ಸಾಧನೆ

Untitled design (11)

2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಅಭಿಯಾನ ಯಶಸ್ವಿಯಾಗಿ ಅಂತ್ಯಗೊಂಡಿದೆ. ಒಟ್ಟು 39 ಪದಕಗಳನ್ನು ಗೆದ್ದಿರುವ ಭಾರತ, ಪದಕಗಳ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದು ಮತ್ತೊಮ್ಮೆ ಜಾಗತಿಕ ಕ್ರೀಡಾ ವೇದಿಕೆಯಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಭಾರತದ ಪಾಲಿಗೆ 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳು ಬಂದಿದ್ದು, ಬಾಕ್ಸಿಂಗ್, ಅಥ್ಲೆಟಿಕ್ಸ್, ವೇಟ್‌ಲಿಫ್ಟಿಂಗ್, ಜೂಡೋ ಮತ್ತು ಪ್ಯಾರಾ ಕ್ರೀಡೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಕ್ರೀಡಾಕೂಟದ 11ನೇ ಹಾಗೂ ಅಂತಿಮ ದಿನ ಭಾರತಕ್ಕೆ ಯಾವುದೇ ಪದಕ ಸಿಗಲಿಲ್ಲ. ಮಹಿಳೆಯರ -78 ಕೆಜಿ ಜೂಡೋ ವಿಭಾಗದಲ್ಲಿ ಇಶ್ರೂಪ್ ನಾರಂಗ್ ಕಂಚಿನ ಪದಕದ ಪಂದ್ಯದಲ್ಲಿ ಸೋಲು ಕಂಡರೆ, ಪ್ಯಾರಾ ಸೈಕ್ಲಿಸ್ಟ್ ಲಿಶಾ ದಾಸ್ ಮಹಿಳೆಯರ C4-C5 ಟೈಮ್ ಟ್ರಯಲ್ ಫೈನಲ್‌ನಲ್ಲಿ ಆರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ಫಲಿತಾಂಶದೊಂದಿಗೆ ಭಾರತದ ಅಭಿಯಾನ ಮುಕ್ತಾಯಗೊಂಡಿತು.

ಭಾರತದ ಪದಕ ಬೇಟೆಯಲ್ಲಿ ಬಾಕ್ಸರ್‌ಗಳ ಕೊಡುಗೆ ವಿಶೇಷವಾಗಿತ್ತು. ಪ್ರೀತಿ ಪವಾರ್, ಜಾಸ್ಮಿನ್ ಲಂಬೋರಿಯಾ, ಸಾಕ್ಷಿ ಚೌಧರಿ, ಪ್ರಿಯಾ ಘಂಘಾಸ್, ಅರುಂಧತಿ ಚೌಧರಿ, ಸಚಿನ್ ಸಿವಾಚ್ ಹಾಗೂ ಅಂಕುಶ್ ಪಂಗಲ್ ಚಿನ್ನದ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದರು. ಲವ್ಲಿನಾ ಬೊರ್ಗೊಹೈನ್, ಜಾದುಮಣಿ ಸಿಂಗ್ ಹಾಗೂ ನರೇಂದ್ರ ಬೆರ್ವಾಲ್ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡರು.

ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದು ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು. ರಿಷಿಕಾಂತ್ ಸಿಂಗ್, ಮುತ್ತುಪಾಂಡಿ ರಾಜ, ಜ್ಞಾನೇಶ್ವರಿ ಯಾದವ್, ವಲ್ಲೂರಿ ಅಜಯ್ ಬಾಬು, ಹರ್ಜಿಂದರ್ ಕೌರ್ ಮತ್ತು ಲವ್‌ಪ್ರೀತ್ ಸಿಂಗ್ ಬೆಳ್ಳಿ ಪದಕಗಳನ್ನು ಗೆದ್ದರೆ, ಬಿಂದ್ಯಾರಾಣಿ ದೇವಿ ಕಂಚು ಗೆದ್ದರು.

ಅಥ್ಲೆಟಿಕ್ಸ್ ಹಾಗೂ ಪ್ಯಾರಾ ಅಥ್ಲೆಟಿಕ್ಸ್‌ನಲ್ಲೂ ಭಾರತ ಅತ್ಯುತ್ತಮ ಪ್ರದರ್ಶನ ನೀಡಿತು. ಶರ್ಮಿಳಾ ಧಂಕರ್, ದಿಲೀಪ್ ಗವಿತ್ ಹಾಗೂ ಶುಭಂ ಜುಯಾಲ್ ಚಿನ್ನದ ಪದಕ ಗೆದ್ದರೆ, ಸರ್ವೇಶ್ ಕುಶಾರೆ, ಗುಲ್ವೀರ್ ಸಿಂಗ್, ಮುರಳಿ ಶ್ರೀಶಂಕರ್, ಪ್ರವೀಣ್ ಚಿತ್ರಾವೆಲ್ ಸೇರಿದಂತೆ ಹಲವು ಅಥ್ಲೀಟ್‌ಗಳು ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ದೇಶಕ್ಕೆ ತಂದುಕೊಟ್ಟರು. ಜೂಡೋದಲ್ಲೂ ಅಸ್ಮಿತಾ ಡೇ ಮತ್ತು ಹರ್ಷ್ ಸಿಂಗ್ ಚಿನ್ನದ ಪದಕ ಗೆದ್ದು ಭಾರತದ ಯಶಸ್ಸಿಗೆ ಮೆರಗು ತಂದರು.

ಒಟ್ಟಾರೆ 39 ಪದಕಗಳೊಂದಿಗೆ ಭಾರತದ ಕ್ರೀಡಾಪಟುಗಳು ಮತ್ತೊಮ್ಮೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ

Exit mobile version