ಏಷ್ಯಾ ಕಪ್ 2025: ಭಾರತ-ಪಾಕ್‌ ಕಾದಾಟ ಯಾವಾಗ ಗೊತ್ತಾ?

Untitled design 2025 09 08t123802.625

ಕ್ರಿಕೆಟ್ ಅಭಿಮಾನಿಗಳು ಎದುರುನೋಡುತ್ತಿದ್ದ ಕ್ಷಣ ಕೊನೆಗೂ ಬಂದಿದೆ! ಸೆಪ್ಟೆಂಬರ್ 9ರಿಂದ ಯುಎಇನಲ್ಲಿ ಏಷ್ಯಾ ಕಪ್ ಟೂರ್ನಮೆಂಟ್ ಭರ್ಜರಿಯಾಗಿ ಆರಂಭವಾಗಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಹಾಂಗ್ ಕಾಂಗ್, ಒಮಾನ್ ಮತ್ತು ಯುಎಇ ತಂಡಗಳು ಈ ಟಿ20 ಫಾರ್ಮೆಟ್‌ನ ಕ್ರಿಕೆಟ್ ನಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲು ಸಜ್ಜಾಗಿವೆ. ಈ ಬಾರಿಯ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿದೆ.

ಭಾರತ-ಪಾಕ್‌ ಪಂದ್ಯ ಯಾವಾಗ?

ಎಲ್ಲರ ಕಣ್ಣು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸೆಪ್ಟೆಂಬರ್ 14ರಂದು ನಡೆಯಲಿರುವ ಪಂದ್ಯದ ಮೇಲಿದೆ. ಈ ಪಂದ್ಯವು ಕೇವಲ ಕ್ರೀಡಾಪಟುಗಳ ಸಾಮರ್ಥ್ಯದ ಪರೀಕ್ಷೆಯಷ್ಟೇ ಅಲ್ಲ, ಎರಡು ರಾಷ್ಟ್ರಗಳ ನಡುವಿನ ತೀವ್ರ ಸ್ಪರ್ಧೆಯ ಸಂಕೇತವಾಗಿದೆ. ಭಾರತ ತನ್ನ ದಿಟ್ಟ ಬ್ಯಾಟಿಂಗ್‌ ಶಕ್ತಿಯಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಬೌಲರ್‌ಗಳೊಂದಿಗೆ ಮೈದಾನಕ್ಕಿಳಿಯಲಿದೆ. ಇನ್ನೊಂದೆಡೆ, ಪಾಕಿಸ್ತಾನ ತನ್ನ ವೇಗದ ಬೌಲಿಂಗ್‌ ದಾಳಿಯಾದ ಶಾಹೀನ್ ಆಫ್ರಿದಿ ಮತ್ತು ಬಾಬರ್ ಆಜಂನಂತಹ ಆಟಗಾರರೊಂದಿಗೆ ಎದುರಾಳಿಗಳಿಗೆ ಸವಾಲು ಒಡ್ಡಲು ಸಿದ್ಧವಾಗಿದೆ.

ಏಷ್ಯಾ ಕಪ್ ಟೂರ್ನಿಯು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಲೀಗ್ ಹಂತದಲ್ಲಿ ಎಂಟು ತಂಡಗಳು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ 4 ಹಂತಕ್ಕೆ ತಲುಪಲಿವೆ. ಸೂಪರ್ 4 ಹಂತದಲ್ಲಿ, ಆಯ್ಕೆಯಾದ ನಾಲ್ಕು ತಂಡಗಳು ಒಂದಕ್ಕೊಂದು ಸೆಣಸಾಡಲಿವೆ. ಈ ಹಂತದಲ್ಲಿ ಯಾವುದೇ ಗುಂಪು ವಿಭಾಗ ಇರುವುದಿಲ್ಲ, ಮತ್ತು ಎಲ್ಲಾ ತಂಡಗಳು ಉಳಿದ ಮೂರು ತಂಡಗಳ ವಿರುದ್ಧ ಆಡಬೇಕಾಗುತ್ತದೆ. ಸೂಪರ್ 4ನಲ್ಲಿ ಟಾಪ್ 2 ಸ್ಥಾನಗಳನ್ನು ಗಳಿಸಿದ ತಂಡಗಳು ಸೆಪ್ಟೆಂಬರ್ 28ರಂದು ದುಬೈನಲ್ಲಿ ನಡೆಯಲಿರುವ ಫೈನಲ್‌ಗೆ ಪ್ರವೇಶ ಪಡೆಯಲಿವೆ.

ಈ ಟೂರ್ನಿಯನ್ನು ಭಾರತ ಆಯೋಜಿಸುತ್ತಿದ್ದರೂ, ಎಲ್ಲಾ ಪಂದ್ಯಗಳು ಯುಎಇನಲ್ಲಿ ನಡೆಯಲಿವೆ. ಭಾರತ ತನ್ನ ಅಭಿಯಾನವನ್ನು ಸೆಪ್ಟೆಂಬರ್ 10 ರಿಂದ ಆರಂಭಿಸಲಿದೆ. ಭಾರತ-ಪಾಕ್‌ ಪಂದ್ಯಕ್ಕೆ ಸಂಬಂಧಿಸಿದಂತೆ ಕೆಲವು ಟೀಕೆಗಳು ಕೇಳಿಬಂದಿದ್ದವು, ಆದರೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಭಾರತ ಸರ್ಕಾರದ ನೀತಿಯನ್ವಯ, ಐಸಿಸಿ ಮತ್ತು ಏಷ್ಯಾ ಕಪ್‌ನಂತಹ ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಆಡಬಹುದು. ಆದರೆ, ದ್ವಿಪಕ್ಷೀಯ ಸರಣಿಗಳಿಗೆ ಈ ನೀತಿ ಅನ್ವಯವಾಗುವುದಿಲ್ಲ. ಈ ನಿಯಮವು ಕ್ರಿಕೆಟ್‌ಗೆ ಮಾತ್ರವಲ್ಲ, ಎಲ್ಲಾ ಕ್ರೀಡೆಗಳಿಗೂ ಅನ್ವಯಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

Exit mobile version