ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತು ಉದ್ಯಮಿ ಸಾನಿಯಾ ಚಂದೋಕ್ ಅವರ ಮದುವೆ ಮಾರ್ಚ್ 5, 2026ರಂದು ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ದಕ್ಷಿಣ ಮುಂಬೈನಲ್ಲಿ ನಡೆದ ಈ ವೈವಾಹಿಕ ಸಮಾರಂಭಕ್ಕೆ ಬಾಲಿವುಡ್, ಕ್ರಿಕೆಟ್, ಉದ್ಯಮ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ದಂಡೇ ಹಾಜರಾಗಿದರು.
ಕಳೆದ ಒಂದು ವಾರದಿಂದ ಪ್ರಿ-ವೆಡ್ಡಿಂಗ್ ಕಾರ್ಯಕ್ರಮಗಳು (ಮೆಹೆಂಡಿ, ಸಂಗೀತ್, ಪೂಜೆ) ಜಾಮ್‌ನಗರ್ ಮತ್ತು ಮುಂಬೈನಲ್ಲಿ ಅದ್ಧೂರಿಯಾಗಿ ನಡೆದಿದ್ದವು. ಮುಖ್ಯ ಮದುವೆ ಸಮಾರಂಭದಲ್ಲಿ ಅರ್ಜುನ್ ಮತ್ತು ಸಾನಿಯಾ ಕೆಂಪು ಬಣ್ಣದ ಟ್ವಿನ್ನಿಂಗ್ ಔಟ್‌ಫಿಟ್‌ನಲ್ಲಿ ಮಿಂಚಿದರು. ಸಚಿನ್ ತೆಂಡೂಲ್ಕರ್ ಸಿಲ್ವರ್ ಶೆರ್ವಾನಿಯಲ್ಲಿ, ಅಂಜಲಿ ತೆಂಡೂಲ್ಕರ್ ಮತ್ತು ಸಾರಾ ತೆಂಡೂಲ್ಕರ್ ಪಿಂಕ್ ಸೀರೆಯಲ್ಲಿ ಕಂಗೊಳಿಸಿದರು. ಹಾರ ಬದಲಾಯಿಸುವ ಸಮಯದಲ್ಲಿ ಮಂಟಪದಲ್ಲಿ ಹೂವಿನ ಮಳೆ ಸುರಿದ ವಾತಾವರಣ ಸೃಷ್ಟಿಯಾಯಿತು.
ಬಾಲಿವುಡ್ ಸೆಲೆಬ್ರಿಟಿಗಳ ಉಪಸ್ಥಿತಿ ಶಾರುಖ್ ಖಾನ್ ಮತ್ತು ಕುಟುಂಬ, ಅಮೀರ್ ಖಾನ್, ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ, ನೀಲ್ ನಿತಿನ್ ಮುಕೇಶ್ ಸೇರಿದಂತೆ ಬಾಲಿವುಡ್‌ನ ಹಲವು ದಿಗ್ಗಜರು ಹಾಜರಾಗಿದ್ದರು. ಮುಕೇಶ್ ಅಂಬಾನಿ ಕುಟುಂಬದವರು ಸಹ ಭಾಗವಹಿಸಿ ಸಮಾರಂಭಕ್ಕೆ ಹೆಚ್ಚು ಔಟ್‌ವಿಡ್ ನೀಡಿದರು.
ಕ್ರಿಕೆಟ್ ಜಗತ್ತಿನ ದಿಗ್ಗಜರು ಎಂಎಸ್ ಧೋನಿ ಮತ್ತು ಸಾಕ್ಷಿ ಧೋನಿ, ಯುವರಾಜ್ ಸಿಂಗ್ ಮತ್ತು ಕುಟುಂಬ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ರವಿ ಶಾಸ್ತ್ರಿ, ಗೌತಮ್ ಗಂಭೀರ್ (ಟೀಂ ಇಂಡಿಯಾ ಮುಖ್ಯ ಕೋಚ್), ಸುನಿಲ್ ಗವಾಸ್ಕರ್, ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಸೇರಿದಂತೆ ಭಾರತೀಯ ಕ್ರಿಕೆಟ್‌ನ ಹಲವು ಮಾಜಿ ಮತ್ತು ಹಾಲಿ ಆಟಗಾರರು ಹಾಜರಾಗಿದ್ದರು.
Arjun Tendulkar, the son of Sachin Tendulkar, got married to Saaniya Chandhok today in Mumbai.❤️
Congratulations to Arjun and Saaniya. Best wishes for a happy life together. 💐 pic.twitter.com/HhkU9is64F
— 𝐑𝐮𝐬𝐡𝐢𝐢𝐢⁴⁵ (@rushiii_12) March 5, 2026
ರಾಜಕೀಯ ಮತ್ತು ಉದ್ಯಮ ಗಣ್ಯರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಸೇರಿದಂತೆ ರಾಜಕೀಯ ನಾಯಕರು ಪಾಲ್ಗೊಂಡಿದ್ದರು. ಉದ್ಯಮ ಜಗತ್ತಿನಿಂದ ಮುಕೇಶ್ ಅಂಬಾನಿ ಕುಟುಂಬ ಮತ್ತು ಸಾನಿಯಾ ಅವರ ತಂದೆಯವರ ಸಂಬಂಧಿಕರು ಸಹ ಭಾಗವಹಿಸಿದ್ದರು.
ಅರ್ಜುನ್ (ಗೋವಾ ತಂಡದ ಪರ ಆಡುವ ಕ್ರಿಕೆಟಿಗ) ಮತ್ತು ಸಾನಿಯಾ (ಉದ್ಯಮಿ ಮತ್ತು ಪ್ರಾಣಿ ಪ್ರೇಮಿ) ಅವರ ಮದುವೆ ಖಾಸಗಿ ಎಂಗೇಜ್‌ಮೆಂಟ್ (ಆಗಸ್ಟ್ 2025) ನಂತರದ ಅದ್ಧೂರಿ ಸಮಾರಂಭವಾಗಿ ಮಾರ್ಪಟ್ಟಿತು. ಈ ಮದುವೆ ಕ್ರೀಡೆ, ಸಿನಿಮಾ ಮತ್ತು ವ್ಯಾಪಾರ ಕ್ಷೇತ್ರಗಳ ಸಂಗಮವಾಗಿ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
