ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನಿಮ್ಮ ಭವಿಷ್ಯ ತಿಳಿಯಿರಿ!

Untitled design 5 8 350x250
ಜನ್ಮಸಂಖ್ಯೆ 1 (1, 10, 19, 28 ರಂದು ಜನಿಸಿದವರು)

ಇಂದು ನಿಮ್ಮ ಬುದ್ಧಿವಂತಿಕೆಗಿಂತ ಸಮಯಪ್ರಜ್ಞೆ ಮುಖ್ಯವಾಗುತ್ತದೆ. ಅರೆಬರೆ ತಿಳಿದಿರುವ ವಿಷಯಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡದಿರಿ, ವಿಶೇಷವಾಗಿ ಸಾರ್ವಜನಿಕ ಸಭೆಗಳಲ್ಲಿ. ಹೊಸ ಬಟ್ಟೆ ಅಥವಾ ಅಲಂಕಾರಿಕ ವಸ್ತುಗಳ ಖರೀದಿಗೆ ಯೋಜನೆ ಇದೆ. ಮಾಧ್ಯಮ ಕ್ಷೇತ್ರದವರಿಗೆ ಉದ್ಯೋಗಾವಕಾಶಗಳು ಕಾಣಿಸಿಕೊಳ್ಳಲಿವೆ. ಪ್ರೀತಿ-ಪ್ರೇಮ ವಿಷಯಗಳಿಗೆ ಆದ್ಯತೆ ನೀಡುವಿರಿ, ಆದರೆ ಕೆಲವು ಕೆಲಸಗಳನ್ನು ಮೊದಲಿನಿಂದ ಆರಂಭಿಸಬೇಕಾದ ಸಾಧ್ಯತೆ ಇದೆ.

ಜನ್ಮಸಂಖ್ಯೆ 2 (2, 11, 20, 29 ರಂದು ಜನಿಸಿದವರು)

ಆರಾಮವಾಗಿರಬೇಕೆಂಬ ಆಸೆಯಿಂದ ಹೊರಬರಲು ಕಷ್ಟವಾಗಬಹುದು, ಆದರೆ ಯಾವುದೂ ಸುಲಭವಾಗಿ ಸಿಗದು ಎಂಬ ಸತ್ಯ ಇಂದು ಮನದಟ್ಟಾಗಲಿದೆ. ಸಹಾಯ ಕೇಳುವ ಮೊದಲು, ಪ್ರತಿಫಲವಾಗಿ ಏನು ನೀಡಬೇಕು ಎಂಬುದನ್ನು ಆಲೋಚಿಸಿ. ಹಳೆಯ ಸ್ನೇಹಿತರಿಂದ ಬೇಸರವಾಗುವ ಸಾಧ್ಯತೆ ಇದೆ. ಅತಿ ಉತ್ಸಾಹದಿಂದ ಜವಾಬ್ದಾರಿಗಳನ್ನು ತೆಗೆದುಕೊಂಡು, ನಂತರ ಪರಿತಪಿಸಬಹುದು. ಖರ್ಚಿನ ವಿಷಯದಲ್ಲಿ ಎಚ್ಚರಿಕೆಯಿಂದಿರಿ, ಕೈಮೀರಿ ಖರ್ಚಾಗುವ ಸಂಭವವಿದೆ.

ಜನ್ಮಸಂಖ್ಯೆ 3 (3, 12, 21, 30 ರಂದು ಜನಿಸಿದವರು)

ತಂದೆ-ತಾಯಿಯ ಆರ್ಥಿಕ ಸ್ಥಿತಿಯಿಂದ ಒತ್ತಡ ಅನುಭವಿಸಬಹುದು. ಸಾಲದ ವಾಪಸಾತಿ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಆತಂಕ ತರಬಹುದು. ನಂಬಿಕೆಯಿಟ್ಟ ವ್ಯಕ್ತಿಯಿಂದ ದೂರವಾಗುವ ಸಾಧ್ಯತೆ ಇದೆ. ಅಂತರಂಗದ ವಿಷಯಗಳನ್ನು ಹೊಸಬರ ಜೊತೆ ಹಂಚಿಕೊಳ್ಳದಿರಿ. ಹಳೆಯ ಆರೋಗ್ಯ ಸಮಸ್ಯೆಗಳು ಮರುಕಳಿಸಬಹುದು. ದುರ್ಗಾ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ಅಥವಾ ದೇವಿಯ ಚಿತ್ರವನ್ನು ಮೊಬೈಲ್ ಸ್ಕ್ರೀನ್‌ ಮೇಲೆ ಇರಿಸಿಕೊಳ್ಳಿ.

ಜನ್ಮಸಂಖ್ಯೆ 4 (4, 13, 22, 31 ರಂದು ಜನಿಸಿದವರು)

ಕೌಟುಂಬಿಕ ವಿಷಯಗಳು ಆದ್ಯತೆ ಪಡೆಯಲಿವೆ. ಜವಾಬ್ದಾರಿಗಳಿಂದ ಒತ್ತಡ ಅನುಭವಿಸಬಹುದು, ಇದರಿಂದ ಕೆಲವು ಮುಖ್ಯ ವಿಷಯಗಳನ್ನು ಮರೆಯಬಹುದು. ಕೆಲಸದಲ್ಲಿ ಅಚ್ಚುಕಟ್ಟಾಗಿರಲು ಪ್ರಯತ್ನಿಸುವಾಗ ಗಡುವು ಮೀರಬಹುದು. ಹೆಣ್ಣುಮಕ್ಕಳ ಜೊತೆ ಸಲುಗೆಯಿಂದ ವರ್ತಿಸಿ. ಬೆಳ್ಳಿ ಅಥವಾ ಚಿನ್ನದ ಹೂಡಿಕೆಯಿಂದ ಲಾಭ ಸಿಗಬಹುದು, ಆದರೆ ಆತುರದಿಂದ ಮರುಹೂಡಿಕೆ ಮಾಡಬೇಡಿ. ದೂರ ಪ್ರಯಾಣದ ಸಿದ್ಧತೆಗೆ ಗಮನ ಕೊಡಿ.

ಜನ್ಮಸಂಖ್ಯೆ 5 (5, 14, 23 ರಂದು ಜನಿಸಿದವರು)

ಪ್ರಶಸ್ತಿ ಅಥವಾ ಸನ್ಮಾನದ ಸೂಚನೆ ದೊರೆಯಲಿದೆ. ಹಿಂದಿನ ಹೂಡಿಕೆಗಳಿಂದ ಉತ್ತಮ ಲಾಭ ಸಿಗಲಿದೆ. ಷೇರು ಅಥವಾ ಚಿನ್ನದ ಹೂಡಿಕೆಯಿಂದ ಲಾಭವಾಪಸಾತಿಗೆ ತೀರ್ಮಾನಿಸುವಿರಿ. ಪರಿಸರ ಪ್ರೇಮಿಗಳು ಮತ್ತು ಪ್ರಾಣಿ ದಯಾ ಸಂಘದವರಿಗೆ ಮಹತ್ವದ ದಿನ. ಪ್ರೀತಿಪಾತ್ರರ ಯಶಸ್ಸಿನಿಂದ ಸಂತೋಷ ದೊರೆಯಲಿದೆ.

ಜನ್ಮಸಂಖ್ಯೆ 6 (6, 15, 24 ರಂದು ಜನಿಸಿದವರು)

ಮನೆ, ಜಮೀನು, ಅಥವಾ ವಾಹನ ಖರೀದಿಯಲ್ಲಿ ಹಿಂದಿಡಬಹುದು. ಬಜೆಟ್‌ಗೆ ಸರಿಹೊಂದದಿರುವುದರಿಂದ ಆತಂಕ ಉಂಟಾಗಬಹುದು, ಆದರೆ ಇಷ್ಟದೇವರನ್ನು ನೆನೆದು ತೀರ್ಮಾನಿಸಿ. ಕುಟುಂಬದ ಸಣ್ಣ ಮನಸ್ತಾಪಗಳು ಚಿಂತೆಗೆ ಕಾರಣವಾಗಬಹುದು. ಉದ್ಯಮಿಗಳಿಗೆ ಹೊಸ ಪ್ರತಿಸ್ಪರ್ಧಿಗಳಿಂದ ಸವಾಲು ಎದುರಾಗಲಿದೆ. ಅಸಹಾಯಕರಿಗೆ ಊಟ ಕೊಡಿಸುವುದರಿಂದ ಆತ್ಮವಿಶ್ವಾಸ ಹೆಚ್ಚಾಗಲಿದೆ. ರಾತ್ರಿ ಪ್ರಯಾಣವನ್ನು ತಪ್ಪಿಸಿ, ಸಿಹಿತಿಂಡಿಗಳಿಂದ ದೂರವಿರಿ.

ಜನ್ಮಸಂಖ್ಯೆ 7 (7, 16, 25 ರಂದು ಜನಿಸಿದವರು)

ನಿಮ್ಮ ತಾಕತ್ತಿಗಿಂತ ದೊಡ್ಡ ಜವಾಬ್ದಾರಿಗಳು ಬರಬಹುದು. ಆಕರ್ಷಕವೆನಿಸಿದರೂ, ಹಣ ಅಥವಾ ಹುದ್ದೆಗಾಗಿ ಒಪ್ಪಿಕೊಂಡರೆ ಮಾನಸಿಕ ಶಾಂತಿ ಕಳೆದುಕೊಳ್ಳಬಹುದು. ಮದುವೆಯ ಅವಕಾಶಗಳ ಬಗ್ಗೆ ಭವಿಷ್ಯ ಮತ್ತು ಕುಟುಂಬದ ಜವಾಬ್ದಾರಿಯನ್ನು ಆಲೋಚಿಸಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಒತ್ತಡ ಉಂಟಾಗಬಹುದು. ಹಣಕಾಸಿನ ತೀರ್ಮಾನಗಳಿಗೆ ದಿಢೀರ್ ನಿರ್ಧಾರ ಬೇಡ.

ಜನ್ಮಸಂಖ್ಯೆ 8 (8, 17, 26 ರಂದು ಜನಿಸಿದವರು)

ಮಾನಸಿಕ ತೊಳಲಾಟದಿಂದ ಸಂಬಂಧಗಳಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಿ. ಹಿಂದಿನ ಒಪ್ಪಂದಗಳಿಂದ ಹೊರಬರಲು ಯೋಚಿಸಬಹುದು. ಸ್ವಂತ ಕಚೇರಿ ಆರಂಭಕ್ಕೆ ಚರ್ಚೆ ನಡೆಸುವಿರಿ. ಕೆಲಸದ ಒತ್ತಡದಿಂದ ಕುಟುಂಬಕ್ಕೆ ಸಮಯ ಕೊಡಲು ಕಷ್ಟವಾಗಬಹುದು. ಬಡ್ಡಿ ವ್ಯವಹಾರದವರು ಸುರಕ್ಷಿತ ಉಳಿತಾಯಕ್ಕೆ ಆದ್ಯತೆ ನೀಡಿ.

ಜನ್ಮಸಂಖ್ಯೆ 9 (9, 18, 27 ರಂದು ಜನಿಸಿದವರು)

ಹಳೆಯ ಸ್ನೇಹಿತರೊಂದಿಗೆ ಆಪ್ತ ಕ್ಷಣಗಳು ಸಿಗಲಿವೆ. ಮೇಕಪ್ ಉತ್ಪನ್ನಗಳ ಬಗ್ಗೆ ಎಚ್ಚರಿಕೆಯಿಂದಿರಿ, ಅಲರ್ಜಿಯ ಸಾಧ್ಯತೆ ಇದೆ. ಸಂಗಾತಿಯ ಧೋರಣೆಯಿಂದ ಬೇಸರ ಉಂಟಾಗಬಹುದು. ಮಾಧ್ಯಮ ಕ್ಷೇತ್ರದವರಿಗೆ ಉದ್ಯೋಗಾವಕಾಶಗಳು ಲಭಿಸಲಿವೆ. ಲಕ್ಷ್ಮೀನಾರಾಯಣರನ್ನು ನೆನೆದು ನಾಮಸ್ಮರಣೆ ಮಾಡಿದರೆ ಒಳಿತು.

Exit mobile version