ಸಂಖ್ಯಾಶಾಸ್ತ್ರ (Numerology) ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಜನ್ಮಸಂಖ್ಯೆಗೆ ಮಹತ್ವದ ಸ್ಥಾನವಿದೆ. ನಿಮ್ಮ ಹುಟ್ಟಿದ ದಿನಾಂಕವನ್ನು ಸೇರಿಸಿ ಒಂದು ಅಂಕೆಯ ಸಂಖ್ಯೆಗೆ ತಂದುಕೊಂಡರೆ ಅದೇ ನಿಮ್ಮ ಜನ್ಮಸಂಖ್ಯೆ. ಉದಾಹರಣೆಗೆ, ಯಾವುದೇ ತಿಂಗಳಿನ 1, 10, 19, 28ರಂದು ಜನಿಸಿದವರ ಜನ್ಮಸಂಖ್ಯೆ 1. ಹಾಗೆಯೇ 2, 11, 20, 29ಕ್ಕೆ 2; 3, 12, 21, 30ಕ್ಕೆ 3; 4, 13, 22, 31ಕ್ಕೆ 4; 5, 14, 23ಕ್ಕೆ 5; 6, 15, 24ಕ್ಕೆ 6; 7, 16, 25ಕ್ಕೆ 7; 8, 17, 26ಕ್ಕೆ 8; ಮತ್ತು 9, 18, 27ಕ್ಕೆ 9 ಎಂದು ತಿಳಿಯಬೇಕು.
ಇದೀಗ ಮಾರ್ಚ್ 27ರ ಶುಕ್ರವಾರದ ದಿನದಲ್ಲಿ ಪ್ರತಿ ಜನ್ಮಸಂಖ್ಯೆಯವರಿಗೆ ಏನು ಫಲಿತಾಂಶ ಇದೆ ಎಂಬುದನ್ನು ವಿವರವಾಗಿ ನೋಡೋಣ.
ಜನ್ಮಸಂಖ್ಯೆ 1
ಇಂದು ನಿಮಗೆ ಸಕಾರಾತ್ಮಕ ಸನ್ನಿವೇಶ ಎದುರಾಗಲಿದೆ. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಶುಭ ಸುದ್ದಿ ಕೇಳಿಬರಬಹುದು. ಈಗಾಗಲೇ ವಿದೇಶದಲ್ಲಿರುವವರಿಗೆ ವೇತನ ಹೆಚ್ಚಳ ಅಥವಾ ಉತ್ತಮ ಸಂಸ್ಥೆಯಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಮನೆ ಖರೀದಿಗೆ ಹುಡುಕಾಟ ನಡೆಸುತ್ತಿರುವವರಿಗೆ ಮನಸ್ಸಿಗೆ ಒಪ್ಪುವ ಆಯ್ಕೆ ದೊರೆಯಲಿದೆ.
ಜನ್ಮಸಂಖ್ಯೆ 2
ಗೃಹಾಲಂಕಾರ, ಟೀವಿ, ಕರ್ಟನ್ ಮುಂತಾದವುಗಳಿಗೆ ಅನಿರೀಕ್ಷಿತ ಖರ್ಚಾಗಲಿದೆ. ಬಜೆಟ್ ನಿಯಂತ್ರಣ ಕಷ್ಟವಾಗಬಹುದು. ಸ್ವಂತ ಉದ್ಯಮಿಗಳಿಗೆ ಆದಾಯದ ಇಳಿಕೆ ಆತಂಕ ತಂದೊಡ್ಡಬಹುದು. ಅತಿಯಾದ ಉತ್ಸಾಹದಲ್ಲಿ ಒಪ್ಪಿಕೊಂಡ ಕೆಲಸಗಳು ನಂತರ ಕಷ್ಟವೆನಿಸಬಹುದು. ಎಚ್ಚರಿಕೆಯಿಂದಿರಿ.
ಜನ್ಮಸಂಖ್ಯೆ 3
ಸಂಭ್ರಮದ ವಾತಾವರಣ ನಿಮ್ಮದು. ಮಕ್ಕಳು ಅಥವಾ ಚಿಕ್ಕ ವಯಸ್ಸಿನವರೊಂದಿಗೆ ಸಮಯ ಕಳೆಯಲು ಅವಕಾಶ ಸಿಗಲಿದೆ. ರುಚಿಯಾದ ಊಟ-ತಿಂಡಿಗಳ ಸವಿಯಲಿದ್ದೀರಿ. ಮನೆ, ಜಮೀನು ಅಥವಾ ಅಪಾರ್ಟ್ಮೆಂಟ್ ಖರೀದಿಗೆ ಯೋಗ್ಯವಾದ ಆಯ್ಕೆ ಸಿಗಬಹುದು.
ಜನ್ಮಸಂಖ್ಯೆ 4
ಏಕಕಾಲಕ್ಕೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಯಾವುದೇ ಕೆಲಸವನ್ನು ಸರಳವಾಗಿ ತೆಗೆದುಕೊಳ್ಳಬೇಡಿ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಅನುಕೂಲಕರ ಬೆಳವಣಿಗೆ ಆಗಬಹುದು. ಪ್ರಮುಖ ದಾಖಲೆಗಳನ್ನು ಸಾಗಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸಿ.
ಜನ್ಮಸಂಖ್ಯೆ 5
ಮಾಡುವ ಖರ್ಚಿನಿಂದ ಸಂತೋಷ, ತೃಪ್ತಿ ದೊರಕಲಿದೆ. ಕುಟುಂಬದೊಂದಿಗೆ ಪ್ರವಾಸದ ಯೋಜನೆ ರೂಪಿಸಿಕೊಳ್ಳುವಿರಿ. ನಿಮ್ಮನ್ನು ಅವಮಾನಿಸಿದವರಿಗೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧತೆ ಮಾಡಿಕೊಳ್ಳುವಿರಿ. ಸೋಲಾರ್ ಉಪಕರಣಗಳು ಅಥವಾ ಎಲೆಕ್ಟ್ರಿಕ್ ವಾಹನ ಖರೀದಿಗೆ ಅಡ್ವಾನ್ಸ್ ಪಾವತಿಸಬಹುದು.
ಜನ್ಮಸಂಖ್ಯೆ 6
ಇಂದು ತಾಳ್ಮೆ, ಸಮಾಧಾನ ಕಾಯ್ದುಕೊಳ್ಳುವುದು ಕಷ್ಟವಾಗಬಹುದು. ಆವೇಶದಲ್ಲಿ ಮಾತನಾಡುವುದು, ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ತಾತ್ಕಾಲಿಕ ಲಾಭಕ್ಕಾಗಿ ದೀರ್ಘಕಾಲೀನ ವಿಚಾರಗಳನ್ನು ಕಡೆಗಣಿಸಬೇಡಿ. ಕುಟುಂಬ ವ್ಯವಹಾರವನ್ನು ವಿಸ್ತರಿಸುವ ಆಲೋಚನೆ ಮೂಡಬಹುದು.
ಜನ್ಮಸಂಖ್ಯೆ 7
ಮನಸ್ಸು ವಿರಾಮವಾಗಿದ್ದು, ಪಾರ್ಟಿ-ಗೆಟ್ ಟುಗೆದರ್ಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಸಂಬಂಧಿಗಳು, ಸ್ನೇಹಿತರನ್ನು ಭೇಟಿಯಾಗುವಿರಿ. ಹಣಕಾಸಿನ ವಿಚಾರಗಳಿಗೆ ಆಪ್ತರೊಂದಿಗೆ ಚರ್ಚೆ ನಡೆಸುವಿರಿ. ಮನೆ ಬದಲಾಯಿಸುವವರಿಗೆ ಅಗತ್ಯ ಮಾಹಿತಿ ಸಿಗಬಹುದು. ಅನಿರೀಕ್ಷಿತ ಉದ್ಯೋಗ ಬದಲಾವಣೆಯ ಅವಕಾಶ ತೆರೆದುಕೊಳ್ಳಬಹುದು.
ಜನ್ಮಸಂಖ್ಯೆ 8
ಸಂಬಂಧಿಕರು, ಸ್ನೇಹಿತರು ಅಥವಾ ಪೋಷಕರು ಹಣಕಾಸಿನ ನೆರವು ನೀಡಲು ಮುಂದಾಗಬಹುದು. ಹಿಂದೆ ಪ್ರಸ್ತಾಪಿಸಿದ ಪ್ರಾಜೆಕ್ಟ್ ಅಥವಾ ವ್ಯವಹಾರಕ್ಕೆ ಹೂಡಿಕೆ ದೊರೆಯುವ ಸಾಧ್ಯತೆ ಇದೆ. ಕುಟುಂಬ ಸಮೇತ ಮನರಂಜನಾ ಸ್ಥಳಗಳಿಗೆ ತೆರಳುವ ಯೋಗವಿದೆ. ವಾಹನ ಪಾರ್ಕಿಂಗ್ನಲ್ಲಿ ಎಚ್ಚರಿಕೆ ಅಗತ್ಯ.
ಜನ್ಮಸಂಖ್ಯೆ 9
ದಿನದ ಆರಂಭದಲ್ಲಿ 10 ನಿಮಿಷ ಧ್ಯಾನ ಮಾಡುವುದು ಒಳಿತು. ಒಂದೇ ವಿಷಯದ ಬಗ್ಗೆ ಹಲವರು ನಿಮ್ಮನ್ನು ವಿಚಾರಿಸಬಹುದು ಅಥವಾ ಶಿಫಾರಸು ಕೇಳಬಹುದು. ಕಿರಿಕಿರಿಗೆ ಕೋಪ ತೋರಿಸದಿರಿ. ಸಂಗಾತಿಯ ಕಡೆಯ ಸಂಬಂಧಿಕರು ಭೇಟಿಗೆ ಬರುವ ಸಾಧ್ಯತೆ ಇದೆ.
