ಸಂಖ್ಯಾಶಾಸ್ತ್ರ ಭವಿಷ್ಯ: ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಂದಿನ ದಿನಭವಿಷ್ಯ ತಿಳಿಯಿರಿ

Untitled design (64)

ಸಂಖ್ಯಾಶಾಸ್ತ್ರವು ವ್ಯಕ್ತಿಯ ಜೀವನಶೈಲಿ, ಸ್ವಭಾವ ಮತ್ತು ದಿನದ ಶಕ್ತಿಗಳನ್ನು ಅರ್ಥಮಾಡಿಕೊಳ್ಳುವ ಒಂದು ವಿಶಿಷ್ಟ ವಿಧಾನ. ಜನ್ಮ ದಿನಾಂಕದ ಮೊತ್ತವನ್ನು ಸೇರಿಸಿ ಬಂದ ಸಂಖ್ಯೆಯನ್ನು ಜನ್ಮಸಂಖ್ಯೆ ಎಂದು ಕರೆಯಲಾಗುತ್ತದೆ. ನವೆಂಬರ್ 17ರ ಸೋಮವಾರದ ವಿಶೇಷ ದಿನಭವಿಷ್ಯವನ್ನು ಇಲ್ಲಿ ನಿಮ್ಮ ಜನ್ಮಸಂಖ್ಯೆಯ ಆಧಾರದ ಮೇಲೆ ನೀಡಲಾಗಿದೆ.

ಜನ್ಮಸಂಖ್ಯೆ 1 (1, 10, 19, 28 ತಾರೀಕು ಹುಟ್ಟಿದವರು): ಇಂದು ನಿಮ್ಮ ವೈಯಕ್ತಿಕ ಆರೈಕೆ, ವಿಶೇಷವಾಗಿ ಟ್ಯಾಟೂ ಅಥವಾ ಮೆಹೆಂದಿ ಹಾಕಿಸುವಂಥ ಕಾರ್ಯಗಳಲ್ಲಿ ಸಮಯ ಮತ್ತು ಹಣ ವ್ಯಯವಾಗುವ ಸಾಧ್ಯತೆ ಇದೆ. ಮನೆಯ ಸ್ವಚ್ಛತೆ ಮತ್ತು ಸೌಕರ್ಯಗಳ ಮೇಲೆ ಗಮನ ಹರಿಸಿ, ಗೃಹೋಪಯೋಗಿ ಯಂತ್ರಗಳನ್ನು ಖರೀದಿಸುವ ಯೋಚನೆ ಮೂಡಬಹುದು. ಉದ್ಯೋಗ ಬದಲಾವಣೆ ಕುರಿತು ಚಿಂತಿಸುತ್ತಿರುವವರು ಸ್ನೇಹಿತರ ಸಲಹೆ ಪಡೆದು ಹೊಸ ಕೋರ್ಸ್‌ಗಳಿಗೆ ಸೇರ್ಪಡೆ ಬಗ್ಗೆ ಚರ್ಚಿಸಬಹುದು. ನೀವು ಹಿಂದೆ ಮಾಡಿದ್ದ ಒಳ್ಳೆಯದಕ್ಕೆ ಪ್ರತಿಫಲವಾಗಿ ಯಾರೋ ಸಹಾಯ ಮಾಡಲು ಮುಂದಾಗುತ್ತಾರೆ.

ಜನ್ಮಸಂಖ್ಯೆ 2 (2, 11, 20, 29 ತಾರೀಕು ಹುಟ್ಟಿದವರು): ಹೋಟೆಲ್‌ಗಳಲ್ಲಿ ಹೆಚ್ಚು ಖರ್ಚು ಆಗುವ ದಿನ. ನಿವೃತ್ತಿ ನಂತರದ ಉಳಿತಾಯಕ್ಕಾಗಿ ಲೆಕ್ಕಾಚಾರ ಮಾಡಿ, ಖರ್ಚು ಕಡಿಮೆ ಮಾಡುವ ನಿರ್ಧಾರ ತೆಗೆದುಕೊಳ್ಳುವಿರಿ. ಇತ್ತೀಚೆಗೆ ಖರೀದಿಸಿದ ಎಲೆಕ್ಟ್ರಾನಿಕ್ ವಸ್ತುವನ್ನು ಉಚಿತವಾಗಿ ಅಥವಾ ಕಡಿಮೆ ಬೆಲೆಗೆ ಬೇರೆಯವರಿಗೆ ನೀಡಬಹುದು. ಕೋಪವನ್ನು ನಿಯಂತ್ರಿಸಿ. ಇದು ಪಶ್ಚಾತ್ತಾಪಕ್ಕೆ ಕಾರಣವಾಗಬಹುದು.

ಜನ್ಮಸಂಖ್ಯೆ 3 (3, 12, 21, 30 ತಾರೀಕು ಹುಟ್ಟಿದವರು): ವಿದೇಶಿ ಪ್ರವಾಸದ ಸುಳಿವು ಮೇಲಧಿಕಾರಿಗಳಿಂದ ಬರಬಹುದು. ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ವ್ಯವಹಾರಗಳು ಸಮಯ ತೆಗೆದುಕೊಳ್ಳುತ್ತವೆ. ಪ್ರವಾಸೋದ್ಯಮದಲ್ಲಿ ಕೆಲಸ ಮಾಡುವವರಿಗೆ ಆದಾಯ ಹೆಚ್ಚಳ. ಸಿನಿಮಾ ಕ್ಷೇತ್ರಕ್ಕೆ ಸ್ಥಿರ ಪ್ರಾಜೆಕ್ಟ್ ದೊರೆಯಬಹುದು. ಅವಕಾಶಗಳ ಬಗ್ಗೆ ಇತರರೊಂದಿಗೆ ಚರ್ಚಿಸಬೇಡಿ. ಕಾಲಿನ ಆರೋಗ್ಯಕ್ಕೆ ಗಮನ ನೀಡಿ, ಗಾಯಗಳಿದ್ದರೆ ವೈದ್ಯಕೀಯ ಸಲಹೆ ಪಡೆಯಿರಿ.

ಜನ್ಮಸಂಖ್ಯೆ 4 (4, 13, 22, 31 ತಾರೀಕು ಹುಟ್ಟಿದವರು): ಪಶು ಸಾಕಣೆ ವಿಸ್ತರಣೆಗೆ ಪ್ರಯತ್ನ ಶುರು. ಚಿನ್ನ ಅಡವಿಟ್ಟು ಹಣಕಾಸು ನಿಭಾಯಿಸುವ ನಿರ್ಧಾರ. ಸಣ್ಣ ಭೂಮಿ ಪಡೆಯುವ ಮಾತುಕತೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಶಾಲೆಯ ಸಹಕಾರ. ಖಾಸಗಿ ಕೆಲಸದಲ್ಲಿ ರಜಾ ಸಮಸ್ಯೆ ಬಂದರೂ ಪರಿಹಾರವಾಗುತ್ತದೆ. ತಾಳ್ಮೆ ಇರಲಿ.

ಜನ್ಮಸಂಖ್ಯೆ 5 (5, 14, 23 ತಾರೀಕು ಹುಟ್ಟಿದವರು): ಕುಟುಂಬಕ್ಕೆ ಮರೆಮಾಚಿದ ಸಂಗತಿ ಬಯಲಾಗಬಹುದು. ವಾದ ಮಾಡದೆ ಮೌನವಾಗಿರಿ. ಮಾಧ್ಯಮ ಕ್ಷೇತ್ರದಲ್ಲಿ ಉತ್ತಮ ಸಂಬಳದ ಕೆಲಸ ಸಿಗಬಹುದು. ಸಾಹಿತ್ಯದಲ್ಲಿ ಸನ್ಮಾನ ಮತ್ತು ನಗದು ಬಹುಮಾನ. ಪ್ರಕ್ರಿಯೆ ಮುಗಿಯುವವರೆಗೆ ರಹಸ್ಯವಾಗಿರಿ.

ಜನ್ಮಸಂಖ್ಯೆ 6 (6, 15, 24 ತಾರೀಕು ಹುಟ್ಟಿದವರು): ಮೇಲಧಿಕಾರಿ ಮತ್ತು ಸಹೋದ್ಯೋಗಿಗಳೊಂದಿಗೆ ಎಚ್ಚರಿಕೆ. ಭಿನ್ನಾಭಿಪ್ರಾಯದಿಂದ ವಾತಾವರಣ ಹಾಳಾಗಬಹುದು. ಬ್ರ್ಯಾಂಡೆಡ್ ವಸ್ತುಗಳ ಖರೀದಿ. ಸ್ನೇಹಿತರ ಮಧ್ಯಸ್ಥಿಕೆಗೆ ಹೋಗಬೇಡಿ. ದೇವತಾ ಕಾರ್ಯಗಳು ಒತ್ತಡ ಕಡಿಮೆ ಮಾಡುತ್ತವೆ. 10 ನಿಮಿಷ ಧ್ಯಾನ ಮಾಡಿ.

ಜನ್ಮಸಂಖ್ಯೆ 7 (7, 16, 25 ತಾರೀಕು ಹುಟ್ಟಿದವರು): ಕಠಿಣ ಕೆಲಸಕ್ಕೆ ಹಿರಿಯರ ಸಲಹೆ ಸಿಗುತ್ತದೆ. ಮನೆ ಕಾರ್ಯಕ್ರಮ ದೊಡ್ಡದಾಗಿ ಮಾಡುವ ನಿರ್ಧಾರ. ಉದ್ಯೋಗ ಬಿಡುವಿನಲ್ಲಿ ಹೊಸ ಅವಕಾಶಗಳು. ಸ್ನೇಹಿತರ ರೆಫರೆನ್ಸ್ ಗಂಭೀರವಾಗಿ ತೆಗೆದುಕೊಳ್ಳಿ. ಆಹಾರ ಪಥ್ಯ ಪಾಲಿಸಿ.

ಜನ್ಮಸಂಖ್ಯೆ 8 (8, 17, 26 ತಾರೀಕು ಹುಟ್ಟಿದವರು): ದೊಡ್ಡ ವ್ಯಾಪಾರಕ್ಕೆ ತಂದೆಯ ಸಹಾಯ. ಸಾಲ ಮಂಜೂರಾತಿ ಸುದ್ದಿ. ಚಿಂತೆಯಿಂದ ಮುಕ್ತಿ. ಸ್ವಂತ ಕಚೇರಿ ಆರಂಭದ ಯೋಚನೆ. ಮಾಧ್ಯಮದಲ್ಲಿ ಪುಸ್ತಕ ಅಥವಾ ಆಡಿಯೋ ಬುಕ್. ಅಧ್ಯಯನ ಪ್ರವಾಸ.

ಜನ್ಮಸಂಖ್ಯೆ 9 (9, 18, 27 ತಾರೀಕು ಹುಟ್ಟಿದವರು): ಸಣ್ಣ ವಿಷಯಕ್ಕೆ ಅತಿಯಾಗಿ ಪ್ರತಿಕ್ರಿಯಿಸಬೇಡಿ. ಕುಟುಂಬದ ಮೇಲೆ ಕೋಪ ಬೇಡ. ಮೌನವಾಗಿರಿ. ಧಾನ್ಯ ವ್ಯಾಪಾರಿಗಳಿಗೆ ಆದಾಯ ತಡ. ಸಾಲ ಅನಿವಾರ್ಯ. ದೇವತಾ ಆರಾಧನೆಯಲ್ಲಿ ಸಮಾಧಾನ.

Exit mobile version