ಸಂಖ್ಯಾಶಾಸ್ತ್ರ ಭವಿಷ್ಯ: ಈ ದಿನಾಂಕದಂದು ಜನಿಸಿದವರಿಗೆ ಅದೃಷ್ಟ ಕುಲಾಯಿಸಲಿದೆ!

ನಿಮ್ಮ ಜನ್ಮಸಂಖ್ಯೆಯ ದಿನ ಭವಿಷ್ಯ ತಿಳಿಯಿರಿ!

Untitled design (5)

ನಿಮ್ಮ ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 26, 2025ರ ಶನಿವಾರದ ದಿನದ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಜನ್ಮಸಂಖ್ಯೆ ತಿಳಿಯಲು, ನಿಮ್ಮ ಜನ್ಮ ದಿನಾಂಕದ ಅಂಕಿಗಳನ್ನು ಒಟ್ಟುಗೂಡಿಸಿ ಒಂದಂಕಿಯ ಸಂಖ್ಯೆಗೆ ಇಳಿಸಿ. ಉದಾಹರಣೆಗೆ, 19ನೇ ತಾರೀಕು ಹುಟ್ಟಿದವರಿಗೆ: 1+9=10, 1+0=1. ಆದ್ದರಿಂದ ಜನ್ಮಸಂಖ್ಯೆ 1.

ಜನ್ಮಸಂಖ್ಯೆ 1 (1, 10, 19, 28ನೇ ತಾರೀಕು ಹುಟ್ಟಿದವರು)

ನೀವು ಗಮನ ನೀಡದ ವಿಷಯವೊಂದರಲ್ಲಿ ಈ ದಿನ ಅನುಕೂಲಕರ ಬೆಳವಣಿಗೆಗಳು ಸಂಭವಿಸಲಿವೆ. ಸಮಸ್ಯೆಯಾಗಬಹುದೆಂದು ಭಾವಿಸಿದ್ದ ವಿಷಯವು ನಿಮಗೆ ಸಾಧಕವಾಗಿ ಪರಿಣಮಿಸಬಹುದು. ನಿಮ್ಮ ನಿರ್ಧಾರದಲ್ಲಿ ಖಾತರಿಯಿದ್ದರೆ, ಯಾವುದಕ್ಕೂ ಹೆದರದಿರಿ. ಆದರೆ, ನಿಮ್ಮ ಉದ್ದೇಶವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದು ಮುಖ್ಯ. ಹಿರಿಯರಿಗೆ ಕಾಣದಂತಹ ಒಳನೋಟಗಳು ಈ ದಿನ ನಿಮಗೆ ಗೋಚರಿಸಬಹುದು. ಪ್ರಮುಖ ಕೆಲಸಕ್ಕೆ ತೆರಳುವ ಮುನ್ನ ಭೂವರಾಹ ಸ್ವಾಮಿಯನ್ನು ಸ್ಮರಿಸಿ ಅಥವಾ ಪೂಜಿಸಿ; ಇದರಿಂದ ಉತ್ತಮ ಫಲಿತಾಂಶ ಸಿಗಲಿದೆ.

ಜನ್ಮಸಂಖ್ಯೆ 2 (2, 11, 20, 29ನೇ ತಾರೀಕು ಹುಟ್ಟಿದವರು)

ಬದಲಾವಣೆಗಳನ್ನು ಸ್ವೀಕರಿಸಲು ಮಾನಸಿಕವಾಗಿ ಸಿದ್ಧರಾಗಿರಿ. ನೀವು ಯೋಜಿಸಿದಂತೆ ವ್ಯವಹಾರಗಳು ಇತ್ಯರ್ಥವಾಗದಿರಬಹುದು, ಆದರೆ ಇದರಿಂದ ಕುಗ್ಗುವ ಅಗತ್ಯವಿಲ್ಲ. ಹೊಸದಾಗಿ ಪರಿಚಿತರಾದವರ ಮೇಲೆ ಅತಿಯಾದ ಅವಲಂಬನೆ ಬೇಡ. ಗೊಂದಲವಿದ್ದರೆ, ಹಿರಿಯರ ಸಲಹೆ ಪಡೆಯಿರಿ. ಕ್ರೀಡಾಪಟುಗಳಿಗೆ ಪ್ರಾಯೋಜಕತ್ವದ ಭರವಸೆ ಕೊನೆ ಕ್ಷಣದಲ್ಲಿ ವಿಫಲವಾಗಬಹುದು. ಭಾರವಾದ ವಸ್ತುಗಳನ್ನು ಎತ್ತುವಾಗ ಎಚ್ಚರಿಕೆ ವಹಿಸಿ, ಇಲ್ಲವಾದರೆ ಕಾಲು ಅಥವಾ ಬೆನ್ನಿನ ಗಾಯವಾಗಬಹುದು.

ಜನ್ಮಸಂಖ್ಯೆ 3 (3, 12, 21, 30ನೇ ತಾರೀಕು ಹುಟ್ಟಿದವರು)

ಕ್ರೆಡಿಟ್ ಕಾರ್ಡ್ ಬಳಕೆಯ ಬಗ್ಗೆ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ. ಸ್ನೇಹಿತರು ಅಥವಾ ಸಂಬಂಧಿಕರು ಸಾಲಕ್ಕಾಗಿ ಕೇಳಬಹುದು. ಈ ದಿನ ಬೆಳ್ಳಿಯ ಒಡವೆ ಖರೀದಿಗೆ ಒಳ್ಳೆಯ ಯೋಗವಿದೆ. ಕೆಲವರು ದಾನ-ಧರ್ಮ ಕಾರ್ಯಗಳಲ್ಲಿ ತೊಡಗಲಿದ್ದಾರೆ. ತೆರಿಗೆ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದು. ಸಂತಾನಾಪೇಕ್ಷಿತರಿಗೆ ಶುಭ ಸುದ್ದಿ ಕೇಳಬಹುದು. ಹಿರಿಯರ ಆಶೀರ್ವಾದದಿಂದ, ಸಂಘ-ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆ ದೊರೆಯಬಹುದು. ಸ್ವಂತ ಉದ್ಯಮಿಗಳು ಹೊಸ ವ್ಯವಹಾರ ಸೇರ್ಪಡೆಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

ಜನ್ಮಸಂಖ್ಯೆ 4 (4, 13, 22, 31ನೇ ತಾರೀಕು ಹುಟ್ಟಿದವರು)

ವೈಯಕ್ತಿಕ ಮತ್ತು ಪ್ರೀತಿ-ಮದುವೆ ಸಂಬಂಧಿತ ವಿಷಯಗಳಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪ ಗಮನಕ್ಕೆ ಬರಲಿದೆ. ಆದಾಯ ಹೆಚ್ಚಿಸಲು ಯೋಜನೆಗಳು ಆರಂಭವಾಗಲಿವೆ. ಆಸ್ತಿ ಮಾರಾಟಕ್ಕೆ ಇಟ್ಟಿದ್ದರೆ, ಬೇಡಿಕೆ ಹೆಚ್ಚಾಗಬಹುದು. ಕೆಲವರು ಬಾಡಿಗೆ ಆದಾಯಕ್ಕಾಗಿ ಮನೆ ಅಥವಾ ಮಳಿಗೆ ನಿರ್ಮಾಣದ ಯೋಚನೆ ಮಾಡಲಿದ್ದಾರೆ. ದುರ್ಗಾದೇವಿ ಆರಾಧನೆ ಮತ್ತು ವಿಷ್ಣು ಸಹಸ್ರನಾಮ ಪಠಣದಿಂದ ಆಲೋಚನೆಯ ಸ್ಪಷ್ಟತೆ ಮತ್ತು ಆತ್ಮವಿಶ್ವಾಸ ಹೆಚ್ಚಲಿದೆ. ಫೋಟೋಗ್ರಾಫರ್‌ಗಳಿಗೆ ಹೊಸ ಅವಕಾಶಗಳು ದೊರೆಯಬಹುದು.

ಜನ್ಮಸಂಖ್ಯೆ 5 (5, 14, 23ನೇ ತಾರೀಕು ಹುಟ್ಟಿದವರು)

ನಿಮ್ಮ ಮಾತಿಗೆ ಕುಟುಂಬದಲ್ಲಿ ಗೌರವ ದೊರೆಯಲಿದೆ. ಆಕರ್ಷಕವಾಗಿ ಮಾತನಾಡುವಿರಿ. ಸೈಟ್ ಖರೀದಿಗೆ ಅಥವಾ ಮನೆ ನಿರ್ಮಾಣಕ್ಕೆ ಸಾಲಕ್ಕಾಗಿ ಪ್ರಯತ್ನಿಸುತ್ತಿದ್ದರೆ, ಒಳ್ಳೆಯ ಬೆಳವಣಿಗೆಗಳು ಆಗಲಿವೆ. ಹಣಕಾಸಿನ ಆತಂಕಗಳು ದೂರವಾಗಲಿದೆ. ಆತ್ಮವಿಶ್ವಾಸದ ಕೊರತೆ ತೊಲಗಲಿದೆ. ಸ್ವಂತ ವ್ಯಾಪಾರ ಆರಂಭಕ್ಕೆ ಸ್ನೇಹಿತರು ಮತ್ತು ಸಂಬಂಧಿಕರಿಂದ ನೆರವು ದೊರೆಯಲಿದೆ. ನಿಮ್ಮನ್ನು ದಿಕ್ಕುತಪ್ಪಿಸಲು ಪ್ರಯತ್ನಿಸುವವರು ಸ್ವತಃ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ನಿಮ್ಮ ಸಲಹೆಯನ್ನು ಒಪ್ಪಿದವರು ಫಲಿತಾಂಶದಿಂದ ಬೆರಗಾಗಲಿದ್ದಾರೆ.

ಜನ್ಮಸಂಖ್ಯೆ 6 (6, 15, 24ನೇ ತಾರೀಕು ಹುಟ್ಟಿದವರು)

ಈ ದಿನ ಸಂತೋಷ ಮತ್ತು ಗೊಂದಲದ ಮಿಶ್ರಣವಿರಲಿದೆ. ದೊರೆಯುವ ಅವಕಾಶ ಅಥವಾ ಜವಾಬ್ದಾರಿಯು ಒಳ್ಳೆಯದೋ ಕೆಟ್ಟದ್ದೋ ಎಂದು ನಿರ್ಧರಿಸಲು ಸಮಯ ಬೇಕಾಗಬಹುದು. ಇತರರ ಭರವಸೆಯನ್ನು ನಂಬಿ ಗಂಭೀರ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕೆಲಸದ ಸ್ಥಳದಲ್ಲಿ ಒಪ್ಪಿಸಿದ ಕಾರ್ಯವನ್ನು ಶ್ರದ್ಧೆಯಿಂದ ಮಾಡಿದರೆ ಒಳ್ಳೆಯ ಫಲಿತಾಂಶ ಕಾಣಲಿದ್ದೀರಿ. ಹೂಡಿಕೆಗೆ ಸಂಬಂಧಿತ ನಿರ್ಧಾರಗಳನ್ನು ಮುಂದಕ್ಕೆ ಹಾಕುವುದು ಒಳಿತು.

ಜನ್ಮಸಂಖ್ಯೆ 7 (7, 16, 25ನೇ ತಾರೀಕು ಹುಟ್ಟಿದವರು)

ಸಂಗಾತಿಯ ಹಠದಿಂದ ಸಾರ್ವಜನಿಕವಾಗಿ ಅವಮಾನವಾಗಬಹುದು. ಇತ್ತೀಚೆಗೆ ಮನೆ ನಿರ್ಮಾಣ ಅಥವಾ ರಿನೊವೇಷನ್‌ನಿಂದ ಹಣಕಾಸಿನ ಒತ್ತಡದಲ್ಲಿದ್ದರೆ, ಪರಿಹಾರದ ಮಾರ್ಗಗಳು ಕಾಣಲಿದೆ. ಸ್ವಂತ ಉದ್ಯಮಿಗಳಿಗೆ ವಿಸ್ತರಣೆಗೆ ಅವಕಾಶಗಳು ದೊರೆಯಲಿವೆ. ಬ್ಯಾಂಕ್ ಸಾಲಕ್ಕೆ ಪ್ರಯತ್ನಿಸುವವರಿಗೆ ಅಥವಾ ಸಂಬಂಧಿಕರಿಂದ ನೆರವು ಸಿಗಬಹುದು. ಮರೆತಿರುವ ಅವಕಾಶವೊಂದು ಮತ್ತೆ ಬರಬಹುದು; ಒಪ್ಪಿಕೊಳ್ಳುವ ಮುನ್ನ ಹಿರಿಯರ ಸಲಹೆ ಪಡೆಯಿರಿ.

ಜನ್ಮಸಂಖ್ಯೆ 8 (8, 17, 26ನೇ ತಾರೀಕು ಹುಟ್ಟಿದವರು)

ಎಲ್ಲವೂ ಯೋಜಿತವಾಗಿ ಸಾಗುತ್ತಿದ್ದರೂ, ಕೊನೆಯ ಕ್ಷಣದಲ್ಲಿ ಅಡೆತಡೆಗಳು ಚಿಂತೆಗೆ ಕಾರಣವಾಗಬಹುದು. ಒಳಿತು ಅಥವಾ ಕೆಡುಕು ಬಯಸುವವರನ್ನು ಗುರುತಿಸಲು ಗೊಂದಲವಾಗಬಹುದು. ಒತ್ತಡದಲ್ಲಿ ವಾದ-ವಿವಾದಕ್ಕೆ ಇಳಿಯಬೇಡಿ. ಸರಿಯೋ ತಪ್ಪೋ ಎಂದು ಸಾಬೀತುಪಡಿಸುವ ಹಠ ಬೇಡ. ಮುಖ್ಯ ವಿಷಯಗಳನ್ನು ಲಿಖಿತವಾಗಿ ದಾಖಲಿಸಿ. ಮೇಲಧಿಕಾರಿಗಳು ಅಥವಾ ಸರ್ಕಾರಿ ಅಧಿಕಾರಿಗಳ ಜೊತೆ ವ್ಯವಹರಿಸುವಾಗ ದಾಖಲೆಗಳನ್ನು ಸಿದ್ಧವಿಟ್ಟುಕೊಳ್ಳಿ.

ಜನ್ಮಸಂಖ್ಯೆ 9 (9, 18, 27ನೇ ತಾರೀಕು ಹುಟ್ಟಿದವರು)

ಯಾರ ಜೊತೆ ಎಷ್ಟು ಮಾತನಾಡಬೇಕು ಎಂಬ ಸ್ಪಷ್ಟತೆ ಮುಖ್ಯ. ಅತಿಯಾದ ಸಲುಗೆಯಿಂದ ಭಾರೀ ಬೆಲೆ ತೆರಬೇಕಾಗಬಹುದು. ಇತರರ ತಪ್ಪಿಗೆ ನೀವು ಜವಾಬ್ದಾರರಾಗಬಹುದು. ಯಾರ ಜೊತೆ ಗುರುತಿಸಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ನೆಮ್ಮದಿ ನಿರ್ಧಾರವಾಗಲಿದೆ. ಮೇಲುನೋಟಕ್ಕೆ ನಂಬಿದರೆ, ನಂತರ ಪರಿತಪಿಸಬೇಕಾಗಬಹುದು. ರಕ್ತದೊತ್ತಡದ ಏರುಪೇರು, ತಲೆಸುತ್ತುವಿಕೆಯಂತಹ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. ಎತ್ತರದ ಸ್ಥಳಗಳಲ್ಲಿ ಕೆಲಸ ಮಾಡುವವರು ಎಚ್ಚರಿಕೆಯಿಂದಿರಿ. ದಿಢೀರ್ ಪ್ರಯಾಣಗಳನ್ನು ಒಪ್ಪಿಕೊಳ್ಳಬೇಡಿ.

Exit mobile version