ಸಂಖ್ಯಾಶಾಸ್ತ್ರ ಭವಿಷ್ಯ: ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಆರೋಗ್ಯ, ಹಣದ, ಭವಿಷ್ಯ ತಿಳಿಯಿರಿ

Untitled design 2025 12 04T071408.916

ಸಂಖ್ಯಾಶಾಸ್ತ್ರದ ಪ್ರಕಾರ ನಮ್ಮ ಜನ್ಮ ದಿನಾಂಕವು ವ್ಯಕ್ತಿತ್ವ, ಚಿಂತನೆ ಮತ್ತು ಜೀವನದ ದಿಕ್ಕಿನ ಮೇಲೆ ಪ್ರಭಾವ ಬೀರುತ್ತದೆ. ಜನ್ಮ ದಿನಾಂಕದ ಅಂಕಿಗಳನ್ನು ಸೇರಿಸಿ ಒಂದಂಕಿಯ ಸಂಖ್ಯೆಯಾಗಿ ಬರುವ ಸಂಖ್ಯೆಯೇ ನಿಮ್ಮ ಜನ್ಮಸಂಖ್ಯೆ. ಉದಾಹರಣೆಗೆ, ನೀವು ತಿಂಗಳಿನ 21ರಂದು ಹುಟ್ಟಿದ್ದರೆ 2+1 = 3, ಅಂದರೆ ನಿಮ್ಮ ಜನ್ಮಸಂಖ್ಯೆ 3.

ಇಲ್ಲಿ ಜನ್ಮಸಂಖ್ಯೆ 1ರಿಂದ 9ರವರೆಗೆ ಹೊಂದಿರುವವರಿಗೆ ಡಿಸೆಂಬರ್ 30ರಂದು ಆರೋಗ್ಯ, ವೃತ್ತಿ, ಹಣಕಾಸು ಮತ್ತು ಸಂಬಂಧಗಳಲ್ಲಿ ಏನು ಫಲಿತಾಂಶ ಸಿಗಲಿದೆ ಎಂಬುದರ ವಿವರವಾದ ಭವಿಷ್ಯವನ್ನು ನೀಡಲಾಗಿದೆ.

ಜನ್ಮಸಂಖ್ಯೆ 1 (1, 10, 19, 28 ರಂದು ಹುಟ್ಟಿದವರು)

ಇಂದು ಇತರರನ್ನು ಮೆಚ್ಚಿಸಲು ಹೆಚ್ಚು ಶ್ರಮವಹಿಸುವ ದಿನ. ಆದರೆ ಆ ಪ್ರಯತ್ನಕ್ಕೆ ತಕ್ಕ ಫಲ ಸಿಗದಿರುವ ಸಾಧ್ಯತೆ ಹೆಚ್ಚು. ಉದ್ಯೋಗ ಕ್ಷೇತ್ರದಲ್ಲಿ ಅಥವಾ ಕ್ಲೈಂಟ್‌ಗಳ ವಿಷಯದಲ್ಲಿ ನಿರೀಕ್ಷಿತ ಪ್ರತಿಫಲ ದೊರಕದಿರಬಹುದು. ಧೂಮಪಾನ ಮಾಡುವವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸೂಚನೆ ಇದೆ. ಸಂಬಂಧಿಗಳಿಗೆ ನೀಡಿದ ಸಾಲ ವಾಪಸ್ ಪಡೆಯಲು ಜಾಗರೂಕತೆ ಅಗತ್ಯ. ಪಶುಸಂಗೋಪನೆ ಅಥವಾ ವ್ಯಾಪಾರ ಮಾಡುವವರು ತಪ್ಪು ಮಾಹಿತಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಿ.

ಜನ್ಮಸಂಖ್ಯೆ 2 (2, 11, 20, 29 ರಂದು ಹುಟ್ಟಿದವರು)

ನೀವು ಮಾಡಿದ ಶ್ರಮದ ಶ್ರೇಯಸ್ಸು ಬೇರೆಯವರಿಗೆ ಹೋಗುವ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ನಿಮ್ಮ ಕೆಲಸದ ಬಗ್ಗೆ ಸ್ಪಷ್ಟವಾಗಿ ಹೇಳಿಕೊಳ್ಳುವುದು ಅಗತ್ಯ. ಸೋದರ ಸಂಬಂಧಿಗಳ ಜೊತೆಗಿನ ಹಳೆಯ ವಿಚಾರಗಳು ಜಗಳಕ್ಕೆ ಕಾರಣವಾಗಬಹುದು, ಸಹನೆ ವಹಿಸಿ. ವಾಸ್ತು ಅಥವಾ ಆಧ್ಯಾತ್ಮಿಕ ವೃತ್ತಿಯಲ್ಲಿ ಇರುವವರಿಗೆ ಆದಾಯ ಹೆಚ್ಚಾಗುವ ಯೋಗ ಇದೆ. ಸಾಹಿತ್ಯ ಅಥವಾ ಗ್ರಂಥ ರಚನೆ ಆರಂಭಿಸುವ ಆಲೋಚನೆ ಕೆಲವರಲ್ಲಿ ಮೂಡಲಿದೆ.

ಜನ್ಮಸಂಖ್ಯೆ 3 (3, 12, 21, 30 ರಂದು ಹುಟ್ಟಿದವರು)

ಇದು ಜಯದ ದಿನ. ಸ್ಪರ್ಧೆಗಳಲ್ಲಿ ಯಶಸ್ಸು, ಉದ್ಯೋಗದಲ್ಲಿ ಉತ್ತಮ ಬದಲಾವಣೆಗಳ ಸಾಧ್ಯತೆ ಇದೆ. ಮೇಲ್ನೋಟಕ್ಕೆ ಕಷ್ಟವಾಗುವ ಅವಕಾಶಗಳು ನಿಮಗೆ ಲಾಭಕಾರಿಯಾಗುತ್ತವೆ. ಶಿಕ್ಷಣ, ಸಂಶೋಧನೆ ಅಥವಾ ಅಧ್ಯಯನ ಕ್ಷೇತ್ರದಲ್ಲಿ ಇರುವವರಿಗೆ ಅನುದಾನದ ಸೂಚನೆ ಸಿಗಬಹುದು. ವಿವಾಹಕ್ಕೆ ಯತ್ನಿಸುವವರಿಗೆ ಉತ್ತಮ ಸಂಬಂಧ ದೊರೆಯುವ ಸಾಧ್ಯತೆ ಇದೆ. ಕೋರ್ಟ್ ಅಥವಾ ಕಚೇರಿ ಸಂಬಂಧಿತ ವ್ಯಾಜ್ಯಗಳು ಮಾತುಕತೆಯಿಂದ ಬಗೆಹರಿಯುವ ಲಕ್ಷಣಗಳಿವೆ.

ಜನ್ಮಸಂಖ್ಯೆ 4 (4, 13, 22, 31 ರಂದು ಹುಟ್ಟಿದವರು)

ಪಾರ್ಟ್ನರ್‌ಶಿಪ್ ವ್ಯವಹಾರಗಳಲ್ಲಿ ಲಾಭ ದೊರೆಯುವ ದಿನ. ಹೊಸ ಆಫರ್‌ಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ. ಹಿಂದಿನ ಅನುಭವಗಳ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ, ಅಚ್ಚರಿಯ ಒಳ್ಳೆಯ ಬೆಳವಣಿಗೆಗಳು ನಡೆಯುತ್ತವೆ. ಪ್ರೇಮಿಗಳಿಗೆ ಅತ್ಯುತ್ತಮ ದಿನ. ಮದುವೆ ಕುರಿತು ಕುಟುಂಬದ ಮುಂದೆ ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಇದೆ. ಧಾರ್ಮಿಕ ಪ್ರವಾಸದ ಯೋಗವೂ ಇದೆ.

ಜನ್ಮಸಂಖ್ಯೆ 5 (5, 14, 23 ರಂದು ಹುಟ್ಟಿದವರು)

ನಿಮಗೆ ಬೇಕಾದುದನ್ನು ನೇರವಾಗಿ ಕೇಳಿ ಪಡೆಯುವ ಧೈರ್ಯ ಇರುತ್ತದೆ. ಕೆಲಸದ ನಿಮಿತ್ತ ದೂರದ ಊರು ಅಥವಾ ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ಆದಾಯ ತೆರಿಗೆ ರೀಫಂಡ್ ಕುರಿತು ಮಾಹಿತಿ ಬರಲಿದೆ. ಆದರೆ ಸರ್ಕಾರಿ ಕೆಲಸಗಳು ಕೊನೆಯ ಹಂತದಲ್ಲಿ ಅಡಚಣೆಗೆ ಸಿಲುಕಬಹುದು. ನಯವಾಗಿ ಮತ್ತು ತಾಳ್ಮೆಯಿಂದ ಕೆಲಸ ಮುಗಿಸುವುದು ಮುಖ್ಯ.

ಜನ್ಮಸಂಖ್ಯೆ 6 (6, 15, 24 ರಂದು ಹುಟ್ಟಿದವರು)

ಇಂದು ನೀವು ಕಠಿಣ ನಿರ್ಧಾರ ತೆಗೆದುಕೊಳ್ಳುವ ಮನಸ್ಥಿತಿಯಲ್ಲಿ ಇರುತ್ತೀರಿ. ಷೇರು ಮಾರುಕಟ್ಟೆಯಲ್ಲಿ ಹೊಸ ಹೂಡಿಕೆ ಮಾಡಿದವರಿಗೆ ಲಾಭದ ಅನುಭವವಾಗಲಿದೆ. ಫ್ರೀಲ್ಯಾನ್ಸರ್‌ಗಳು ಕೆಲಸಕ್ಕೆ ಬೇಕಾದ ಉಪಕರಣಗಳಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಇದೆ. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಕಾಡಬಹುದು. ಭಾರವಾದ ವಸ್ತುಗಳನ್ನು ಎತ್ತುವಾಗ ಎಚ್ಚರಿಕೆ ವಹಿಸಿ.

ಜನ್ಮಸಂಖ್ಯೆ 7 (7, 16, 25 ರಂದು ಹುಟ್ಟಿದವರು)

ನಿಮ್ಮ ಕಾಳಜಿಗೆ ಪ್ರತಿಫಲ ಸಿಗುತ್ತಿಲ್ಲ ಎಂಬ ಭಾವನೆ ಕಾಡಬಹುದು.. ಮಾತಿನ ಶೈಲಿಯಿಂದ ತಪ್ಪು ಅರ್ಥೈಸಿಕೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಕಲಾ ಕ್ಷೇತ್ರಗಳಲ್ಲಿ ತರಬೇತಿ ಪಡೆಯಲು ಅವಕಾಶ ಸಿಗಬಹುದು. ಕ್ಯಾಟರಿಂಗ್ ಉದ್ಯಮಿಗಳಿಗೆ ಆದಾಯ ಹೆಚ್ಚಾಗಲಿದೆ.

ಜನ್ಮಸಂಖ್ಯೆ 8 (8, 17, 26 ರಂದು ಹುಟ್ಟಿದವರು)

ನೀವು ಆಸಕ್ತಿಯಿಂದ ನಡೆಸಿಕೊಂಡು ಬಂದ ಪ್ರಾಜೆಕ್ಟ್‌ನಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಎದುರಾಗಬಹುದು. ಆದರೆ ಹೊಸ ಜವಾಬ್ದಾರಿಗಳು ನಿಮ್ಮ ಮುಂದಿರುವುದರಿಂದ ನಿರಾಶರಾಗಬೇಡಿ. ಬಾಕಿ ಹಣ ವಸೂಲಿಗೆ ಸಹಾಯ ದೊರೆಯಲಿದೆ. ವ್ಯವಹಾರಕ್ಕಾಗಿ ಸಾಲ ಪಡೆಯುವ ಅಗತ್ಯ ಬರುವ ಸೂಚನೆ ಇದೆ.

ಜನ್ಮಸಂಖ್ಯೆ 9 (9, 18, 27 ರಂದು ಹುಟ್ಟಿದವರು)

ಅತಿಯಾದ ಕಲ್ಪನೆಗಳು ಗಾಬರಿಗೆ ಕಾರಣವಾಗಬಹುದು. ವಾಸ್ತವದ ಮೇಲೆ ಗಮನಹರಿಸಿ. ಮನೆಯ ಸ್ವಚ್ಛತೆಗಾಗಿ ಹೆಚ್ಚಿನ ವೆಚ್ಚ ಆಗಬಹುದು. ಕೆಲಸದ ಒತ್ತಡದಿಂದ ಕೋಪ ಉಂಟಾದರೂ ಕುಟುಂಬದವರ ಮೇಲೆ ತೋರಿಸಿಕೊಳ್ಳಬೇಡಿ. ಕೃಷಿಕರಿಗೆ, ವಿಶೇಷವಾಗಿ ಹತ್ತಿ ಬೆಳೆಗಾರರಿಗೆ, ಆದಾಯ ಹೆಚ್ಚಾಗುವ ಯೋಗ ಇದೆ.

Exit mobile version