ಜನ್ಮಸಂಖ್ಯೆ 1, 10, 19, 28
ಆರೋಗ್ಯದ ವಿಷಯದಲ್ಲಿ ನಾಲಿಗೆಯ ರುಚಿಗೆ ಮರುಳಾಗಬೇಡಿ, ಮಿತ ಆಹಾರ ಸೇವನೆ ಇಂದಿನ ಮಂತ್ರವಾಗಲಿ. ಅಧ್ಯಾತ್ಮ ಮತ್ತು ಧ್ಯಾನದ ಕಡೆಗೆ ನಿಮ್ಮ ಮನಸ್ಸು ವಾಲುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ.
ಜನ್ಮಸಂಖ್ಯೆ 2, 11, 20, 29
ನಿಮ್ಮ ಬದುಕಿನಲ್ಲಿ ಹೊಸ ಬೆಳಕು ಮೂಡಲಿದೆ. ಅಪರಿಚಿತರು ಅಥವಾ ಹೊಸ ವ್ಯಕ್ತಿಗಳ ಆಗಮನದಿಂದ ನಿಮ್ಮ ವೃತ್ತಿಜೀವನದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ಇದುವರೆಗೆ ನಿಮ್ಮ ಮಾತಿಗೆ ಬೆಲೆ ಸಿಗುತ್ತಿಲ್ಲ ಎಂಬ ಕೊರಗು ನಿಮಗಿದ್ದರೆ, ಇಂದು ಪರಿಸ್ಥಿತಿ ಬದಲಾಗಲಿದೆ.
ಜನ್ಮಸಂಖ್ಯೆ 3,12, 21, 30
ನಿಧಾನವೇ ಪ್ರಧಾನ ಎಂಬಂತೆ ನಿಮ್ಮ ಕೆಲಸಗಳು ಸಾಗಲಿವೆ. ಫಲಿತಾಂಶ ತಡವಾದರೂ ಅತ್ಯುತ್ತಮವಾಗಿರುತ್ತದೆ. ಆರ್ಥಿಕ ನಿರ್ಧಾರಗಳಲ್ಲಿ ನಿಮ್ಮ ಜಾಣ್ಮೆ ಭವಿಷ್ಯದಲ್ಲಿ ದೊಡ್ಡ ಲಾಭ ತಂದುಕೊಡಲಿದೆ. ಕುಟುಂಬದಲ್ಲಿ ಶಾಂತಿ ನೆಲೆಸಲು ನಿಮ್ಮ ಮಿತಭಾಷಿತನವೇ ಕಾರಣವಾಗಲಿದೆ.
ಜನ್ಮಸಂಖ್ಯೆ 4 ,13, 22, 31
ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಲು ಇದು ಸಕಾಲ. ಕಠಿಣ ಶ್ರಮಕ್ಕೆ ಪರ್ಯಾಯವಿಲ್ಲ ಎಂಬುದನ್ನು ನೆನಪಿಡಿ. ಪ್ರೀತಿಪಾತ್ರರ ಮುಂದೆ ನಿಮ್ಮ ಬದ್ಧತೆಯನ್ನು ಸಾಬೀತುಪಡಿಸಲು ಇಂದು ಹೆಚ್ಚಿನ ಸಮಯ ಮೀಸಲಿಡುತ್ತೀರಿ. ದಂಪತಿಗಳ ನಡುವೆ ಸಾಮರಸ್ಯ ಹೆಚ್ಚಲಿದೆ.
ಜನ್ಮಸಂಖ್ಯೆ 5 ,14, 23
ಉದ್ಯೋಗಿಗಳಿಗೆ ಮತ್ತು ಸ್ವಂತ ವ್ಯವಹಾರ ಮಾಡುವವರಿಗೆ ಇಂದು ಸುವರ್ಣಾವಕಾಶಗಳ ದಿನ. ನಿಮ್ಮ ಯೋಜನೆಗಳನ್ನು ಮಂಡಿಸುವ ಶೈಲಿ ಎಲ್ಲರ ಗಮನ ಸೆಳೆಯಲಿದೆ. ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ನೀವು ಹಿಂದೆ ಮಾಡಿದ್ದ ಸಣ್ಣ ಹೂಡಿಕೆ ಇಂದು ನಿರೀಕ್ಷೆಗೂ ಮೀರಿದ ಲಾಭ ನೀಡಲಿದೆ. ನಿಮ್ಮ ನಿರ್ಧಾರಗಳ ಮೇಲೆ ನಂಬಿಕೆ ಇರಲಿ, ಹಿಂಜರಿಕೆ ಬೇಡ.
ಜನ್ಮಸಂಖ್ಯೆ 6, 15, 24
ಮನೆಯ ನೆಮ್ಮದಿಯೇ ಜೀವನದ ಅಡಿಪಾಯ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳಿ. ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯುವುದು ನಿಮ್ಮ ದೈಹಿಕ ಶಕ್ತಿಯನ್ನು ಹೆಚ್ಚಿಸಲಿದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಬುದ್ಧಿವಂತಿಕೆಗೆ ಪ್ರಶಂಸೆ ಸಿಗಲಿದೆ. ಬೇರೆಯವರ ತಪ್ಪುಗಳನ್ನು ಕ್ಷಮಿಸುವ ಗುಣ ಬೆಳೆಸಿಕೊಳ್ಳಿ, ಇದು ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ.
ಜನ್ಮಸಂಖ್ಯೆ 7, 16, 25
ಅನಗತ್ಯ ಚಿಂತೆಗಳಿಂದ ದೂರವಿರಿ, ನೀವು ಸಮಸ್ಯೆ ಎಂದು ಭಾವಿಸಿರುವುದು ಕೇವಲ ನಿಮ್ಮ ಕಲ್ಪನೆಯಾಗಿರಬಹುದು. ಮದುವೆಗಾಗಿ ಕಾಯುತ್ತಿರುವವರಿಗೆ ಸೂಕ್ತ ಸಂಬಂಧಗಳು ಒದಗಿ ಬರಲಿವೆ. ಹಣಕಾಸಿನ ಖರ್ಚುಗಳ ಮೇಲೆ ನಿಗಾ ಇರಲಿ, ಸ್ಪಷ್ಟ ಗುರಿ ಇಲ್ಲದೆ ಖರ್ಚು ಮಾಡಬೇಡಿ.
ಜನ್ಮಸಂಖ್ಯೆ 8,17, 26
ಸಕ್ಸಸ್ ತಲೆಗೆ ಏರದಂತೆ ನೋಡಿಕೊಳ್ಳಿ. ಅಹಂಕಾರ ಮತ್ತು ಕೋಪ ನಿಮ್ಮ ಪ್ರಗತಿಗೆ ಮುಳ್ಳಾಗಬಹುದು. ಇಂದು ತಾಳ್ಮೆಯಿಂದ ವರ್ತಿಸಿದರೆ ಮಾತ್ರ ಜಯ ನಿಮ್ಮದಾಗುತ್ತದೆ. ನಿಮ್ಮ ಆಪ್ತರಿಂದ ಅಥವಾ ಸಂಬಂಧಿಕರಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಆಹ್ವಾನ ಬರಲಿದೆ. ಸಾಮಾಜಿಕ ಗೌರವ ಹೆಚ್ಚುವ ಸಮಯವಿದು.
ಜನ್ಮಸಂಖ್ಯೆ 9,18, 27
ವ್ಯಾಪಾರದಲ್ಲಿ ನಿಮ್ಮ ಜಾಣ್ಮೆಯ ಮಾತುಗಳು ಭವಿಷ್ಯದ ಹಾದಿಯನ್ನು ಸುಗಮಗೊಳಿಸಲಿವೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ ನಿಮಗೆ ಸಿಗಲಿದೆ. ಆರ್ಥಿಕ ವ್ಯವಹಾರಗಳಲ್ಲಿ ಸಂಯಮ ಅಗತ್ಯ. ಕುಟುಂಬ ಸದಸ್ಯರಿಗೆ ನಿಮ್ಮ ಭರವಸೆಯ ಮಾತುಗಳು ಮತ್ತು ಬೆಂಬಲ ಅತೀ ಅವಶ್ಯಕವಾಗಿದೆ. ಮನೆಯ ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ.
