ಸಂಖ್ಯಾಶಾಸ್ತ್ರದ ಪ್ರಕಾರ ಇಂದಿನ ನಿಮ್ಮ ದಿನಭವಿಷ್ಯ ತಿಳಿದುಕೊಳ್ಳಿ!

Untitled design 5 8 350x250

ಸಂಖ್ಯಾಶಾಸ್ತ್ರವು ವ್ಯಕ್ತಿಯ ಜನ್ಮದಿನಾಂಕದ ಆಧಾರದ ಮೇಲೆ ಭವಿಷ್ಯವನ್ನು ವಿವರಿಸುವ ಒಂದು ಪ್ರಾಚೀನ ವಿಜ್ಞಾನ. ನಿಮ್ಮ ಜನ್ಮಸಂಖ್ಯೆಯನ್ನು ಅರಿತುಕೊಂಡರೆ, ದಿನದ ಪ್ರವೃತ್ತಿಗಳು, ಅವಕಾಶಗಳು ಮತ್ತು ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಸೆಪ್ಟೆಂಬರ್ 2ಕ್ಕೆ ಸಂಬಂಧಿಸಿದಂತೆ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾದ ದಿನಭವಿಷ್ಯವನ್ನು ಇಲ್ಲಿ ನೋಡೋಣ.

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19 ಅಥವಾ 28ರಂದು ಜನಿಸಿದವರು): ವಿವಾಹಿತರಾಗಿದ್ದರೆ, ಸಂಗಾತಿಯ ಹಠಮಾರಿ ಧೋರಣೆಯು ನಿಮ್ಮನ್ನು ಕಿರಿಕಿರಿಗೊಳಿಸಬಹುದು. ಸ್ನೇಹಿತರು ಅಥವಾ ಸಂಬಂಧಿಕರಿಂದ ಪಡೆದ ಸಾಲವನ್ನು ಹಿಂದಿರುಗಿಸುವಂತೆ ಒತ್ತಾಯ ಬರಬಹುದು. ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಥೈರಾಯ್ಡ್ ಸಮಸ್ಯೆಯುಳ್ಳವರು ಆತಂಕಕ್ಕೆ ಗುರಿಯಾಗಬಹುದು, ಎಚ್ಚರಿಕೆಯಿಂದಿರಿ. ಇದು ಸವಾಲಿನ ದಿನವಾಗಿದ್ದರೂ, ಧೈರ್ಯದಿಂದ ಎದುರಿಸಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20 ಅಥವಾ 29ರಂದು ಜನಿಸಿದವರು): ಆದಾಯ ತೆರಿಗೆ ರೀಫಂಡ್ ಅಥವಾ ಸರ್ಕಾರಿ ಹಣವು ಕೈಸೇರಬಹುದು. ಕೆಲಸ ಮುಗಿದಿದ್ದರೂ ಪಾವತಿ ಬಾಕಿ ಇದ್ದರೆ, ಅದು ಬರಬಹುದು. ಮನೆಯ ಹಿರಿಯರ ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ ದೊರೆಯಲಿದೆ. ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ, ತರಬೇತಿ ಸೇರಿಸುವ ನಿರ್ಧಾರ ಮಾಡಬಹುದು. ಕಡಿಮೆ ಖರ್ಚಿನಲ್ಲಿ ಮುಗಿಯಬೇಕೆಂದುಕೊಂಡ ಕಾರ್ಯಕ್ರಮಕ್ಕೆ ಹೆಚ್ಚು ವೆಚ್ಚವಾಗಬಹುದು,.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21 ಅಥವಾ 30ರಂದು ಜನಿಸಿದವರು): ಕನ್ಸಲ್ಟಂಟ್ ಅಥವಾ ಫೈನಾನ್ಷಿಯಲ್ ಪ್ಲಾನರ್‌ಗಳಿಗೆ ಸಮಾಧಾನಕರ ಬೆಳವಣಿಗೆಗಳು ಸಂಭವಿಸಲಿವೆ. ಇತರರು ನಿಮ್ಮ ಸಹಾಯ ಕೋರಬಹುದು. ಹೊಸ ವ್ಯಾಪಾರ ಆರಂಭಿಸಿದವರಿಗೆ ಹಿಡಿತ ಸಿಗಲಿದ್ದು, ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೌಟುಂಬಿಕ ವಿಚಾರಗಳಲ್ಲಿ ಮೌನವಹಿಸಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22 ಅಥವಾ 31ರಂದು ಜನಿಸಿದವರು): ಹತ್ತಿರದವರ ನೆನಪು ಬಲವಾಗಿ ಕಾಡಲಿದೆ, ಭೇಟಿ ಅಥವಾ ಫೋನ್ ಮಾಡಿ ಸಂಪರ್ಕಿಸಿ. ಪುಸ್ತಕ ಖರೀದಿ, ಒಟಿಟಿ ಸಬ್‌ಸ್ಕ್ರಿಪ್ಷನ್ ಅಥವಾ ವೈಫೈ ಪ್ಲಾನ್ ಬದಲಾವಣೆ ಮಾಡಬಹುದು. ಆಯುರ್ವೇದ ಮೂಲಿಕೆ, ಕೃಷಿಯಲ್ಲಿರುವವರಿಗೆ ದೊಡ್ಡ ಕಂಪನಿಗಳೊಂದಿಗೆ ಒಪ್ಪಂದ ಬರಬಹುದು. ಭೂಮಿ ಹೂಡಿಕೆಗೆ ಸೂಕ್ತ ಸ್ಥಳ ದೊರೆಯಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14 ಅಥವಾ 23ರಂದು ಜನಿಸಿದವರು): ಮನೆಯಲ್ಲಿ ಇತರರ ಅಭಿಪ್ರಾಯವು ಕಿರಿಕಿರಿಗೊಳಿಸಲಿದೆ. ಮಕ್ಕಳ ನಿರ್ಲಕ್ಷ್ಯವು ಕೆರಳಿಸಬಹುದು. ಸರ್ಕಾರಿ ಉದ್ಯೋಗಿಗಳಿಗೆ ಹೆಚ್ಚು ಜವಾಬ್ದಾರಿ ಬರಲಿದೆ. ವೈಯಕ್ತಿಕ ಕೆಲಸಗಳಿಗೆ ಸಮಯ ಕಡಿಮೆಯಾಗಬಹುದು. ಬಯಸಿದ ಹೋಟೆಲ್ ಅಥವಾ ರೆಸ್ಟೋರೆಂಟ್‌ಗೆ ತೆರಳಬಹುದು.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15 ಅಥವಾ 24ರಂದು ಜನಿಸಿದವರು): ನಿಮ್ಮ ನಿರ್ಧಾರಗಳಿಗೆ ಕುಟುಂಬದಿಂದ ಮೆಚ್ಚುಗೆ ಸಿಗಲಿದೆ. ನಿಮ್ಮ ಧೈರ್ಯದ ಮಾತುಗಳು ಇತರರಲ್ಲಿ ವಿಶ್ವಾಸ ತುಂಬಲಿವೆ. ಹಳೇ ವಸ್ತುಗಳ ರಿಪೇರಿಗೆ ಖರ್ಚು ಮಾಡಬಹುದು. ಕಾಲಿನ ಸಂದಿಯಲ್ಲಿ ಸೋಂಕು ಸಾಧ್ಯತೆ, ಮುನ್ನೆಚ್ಚರಿಕೆ ವಹಿಸಿ. ಈಗಾಗಲೇ ಸಮಸ್ಯೆಯಿದ್ದರೆ ಚಿಕಿತ್ಸೆ ಪಡೆಯಿರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16 ಅಥವಾ 25ರಂದು ಜನಿಸಿದವರು): ಆರೋಗ್ಯ ಸಮಸ್ಯೆಗಳು ಆತ್ಮಸ್ಥೈರ್ಯ ಕುಗ್ಗಿಸಬಹುದು. ಉದ್ಯೋಗದಲ್ಲಿ ಬಯಸಿದ್ದನ್ನು ಹೇಳಲು ಸಾಧ್ಯವಾಗದಿರಬಹುದು. ಹೋಲಿಕೆ ಮಾಡಬೇಡಿ. ಹಳೇ ನೆನಪುಗಳು ಕಾಡಿ, ಪುರಾಣ ಸ್ಥಳಗಳಿಗೆ ತೆರಳುವ ಇಚ್ಛೆ ಮೂಡಲಿದೆ. ಸಣ್ಣ ಸಾಲ ಕೋರಿಕೆ ಬರಬಹುದು, ವಿಶೇಷವಾಗಿ ತಾಯಿಯ ಕಡೆಯಿಂದ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17 ಅಥವಾ 26ರಂದು ಜನಿಸಿದವರು): ಚುಚ್ಚುಮಾತುಗಳು ಕೇಳಿಸಿಕೊಳ್ಳಬೇಕಾಗಬಹುದು. ಹಳೇ ತಪ್ಪುಗಳ ನೆನಪು ಬಾಧಿಸಲಿದೆ. ಕಾರ್ಯಗಳು ಸರಿಯಾಗಿ ಮುಗಿಯದಿರಬಹುದು, ಆತುರ ಬೇಡ. ದೂರದ ವ್ಯಾಪಾರಕ್ಕೆ ಗಮನ ಹೆಚ್ಚಿಸಿ, ಮೇಲುಸ್ತುವಾರಿ ಮಾಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18 ಅಥವಾ 27ರಂದು ಜನಿಸಿದವರು): ದೇವತಾ ಕಾರ್ಯಗಳಲ್ಲಿ ಭಾಗವಹಿಸಿ, ದೇಣಿಗೆ ನೀಡಿ. ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಹಣಕಾಸು ಇಕ್ಕಟ್ಟು ಮುಗಿಯಲಿದೆ. ಬಾಕಿ ಹಣ ಬರಬಹುದು. ಸಂಶೋಧನಾ ಕ್ಷೇತ್ರದಲ್ಲಿ ತಾತ್ಕಾಲಿಕ ಹಿನ್ನಡೆ ಸಂಭವಿಸಬಹುದು.

Exit mobile version