ಶಾಲಿವಾಹನ ಶಕೆ 1947 (ವಿಶ್ವಾವಸು ಸಂವತ್ಸರ), ಮಾರ್ಗಶೀರ್ಷ ಶುಕ್ಲ ದಶಮಿ, ಅನೂರಾಧಾ ನಕ್ಷತ್ರ, ಭಾನುವಾರ (ನವೆಂಬರ್ 30, 2025). ಸೂರ್ಯೋದಯ: 6:26 ಬೆಳಗ್ಗೆ, ಸೂರ್ಯಾಸ್ತ: 5:49 ಸಾಯಂಕಾಲ. ರಾಹುಕಾಲ: 4:25 – 5:50 ಸಂಜೆ, ಯಮಗಂಡ: 12:08 – 1:34 ಮಧ್ಯಾಹ್ನ, ಗುಳಿಕಕಾಲ: 2:59 – 4:25 ಸಂಜೆ.
ಮೇಷ ರಾಶಿ ಆಧ್ಯಾತ್ಮಿಕ ಚಿಂತನೆ ಹೆಚ್ಚು. ಹಿರಿಯರ ಮೃದು ಮಾತು ಆಶೀರ್ವಾದವಾಗುವುದು. ಸಣ್ಣ ಹಣಕಾಸಿನ ಲಾಭ. ಸಿಟ್ಟನ್ನು ನಿಯಂತ್ರಿಸಿ ಶಾಂತವಾಗಿರಿ. ಮನೆಕೆಲಸ ಬಿಟ್ಟು ಬಾಂಧವ್ಯಕ್ಕೆ ಹೋಗುವ ಯೋಗ. ಉದ್ಯಮದಲ್ಲಿ ನೌಕರರೊಂದಿಗೆ ಚರ್ಚಿಸಿ ಆದಾಯ ಹೆಚ್ಚಿಸಿ. ಕಲಾ-ಸಾಹಿತ್ಯ-ಸಂಗೀತದಲ್ಲಿ ಮನಸ್ಸು ಮಧುರವಾಗುವುದು. ಕಟ್ಟಡ ನಿರ್ಮಾಣಕಾರರಿಗೆ ದೊಡ್ಡ ಯೋಜನೆ ಸಿಗುವ ಸಾಧ್ಯತೆ.
ವೃಷಭ ರಾಶಿ ಕಾರ್ಯದಲ್ಲಿ ವಿಭಿನ್ನ ಚಿಂತನೆ ಮೆಚ್ಚುಗೆ ತರುತ್ತದೆ. ಸ್ನೇಹಿತರೊಂದಿಗೆ ಖುಷಿಯ ಸಮಯ. ಅಪರಿಚಿತರು ಆಪ್ತರಾಗುವರು. ಪ್ರಯಾಣದ ಆಯಾಸ, ಆರ್ಥಿಕ ತೊಂದರೆ ಮನೆಯಲ್ಲಿ ಹಂಚಿಕೊಳ್ಳುವಿರಿ. ಫಲಾಪೇಕ್ಷೆ ಇಲ್ಲದೆ ಸ್ನೇಹ ಸಂಪಾದಿಸುವಿರಿ. ದೀರ್ಘಕಾಲದ ಯೋಜನೆ ಸ್ಪಷ್ಟವಾಗುವುದು. ಅಪ್ರತೀಕ್ಷಿತ ಸುಖ.
ಮಿಥುನ ರಾಶಿ ಕಛೇರಿಯಲ್ಲಿ ನಿಶ್ಚಲ ಮನೋಭಾವ ಯಶಸ್ಸು ತರುತ್ತದೆ. ಮನೆಯಲ್ಲಿ ಒಳ್ಳೆಯ ಸುದ್ದಿ. ದೈವಾನುಗ್ರಹದಿಂದ ಶಾಂತಿ. ಸಂಗಾತಿಯೊಂದಿಗೆ ಕಲಹದಿಂದ ಅಸ್ತವ್ಯಸ್ತತೆ. ಸ್ವತಃ ತಂದ ತೊಂದರೆಗಳು. ಖಾಸಗಿ ಸಂಸ್ಥೆಯಲ್ಲಿ ಪದೋನ್ನತಿ ಸಾಧ್ಯತೆ. ಹಿರಿಯರ ಗೌರವ, ಹಣಕಾಸಿನ ಸ್ಥಿರತೆ.
ಕರ್ಕಾಟಕ ರಾಶಿ ಯೋಚನೆಗಳಿಗೆ ದೈವ ಪ್ರೇರಣೆ. ಹಳೆಯ ಸಂಕಟ ನಿವಾರಣೆ. ವ್ಯಾಪಾರದಲ್ಲಿ ಹೊಸ ಪ್ರಾರಂಭ. ಹಣ ಖರ್ಚಿನಲ್ಲಿ ಜಿಪುಣತನ. ಅಗ್ನಿ ಭೀತಿ ಕಾಡಬಹುದು. ಗೊಂದಲ ಹೆಚ್ಚಿದರೂ ಚುರುಕುತನದಿಂದ ಸಮಸ್ಯೆ ಬಗೆಹರಿಯುವುದು. ಚಿಕ್ಕ ಕೆಲಸದಿಂದ ದೊಡ್ಡ ಫಲ.
ಸಿಂಹ ರಾಶಿ ಜೀವನದ ಗಂಭೀರ ವಿಚಾರಗಳ ಚರ್ಚೆ. ದೀರ್ಘಕಾಲದ ಆಸೆ ಪೂರೈಸುವ ಯೋಗ. ಆರ್ಥಿಕ ಜಾಣ್ಮೆಯಿಂದ ಲಾಭ. ವಿದೇಶ ಪ್ರವಾಸದ ಸಾಧ್ಯತೆ. ಉದ್ಯಮದಲ್ಲಿ ತುರ್ತು ಸಭೆ. ಸ್ನೇಹಿತರಿಂದ ಹಣ ಕೇಳುವಿಕೆ. ಅಧ್ಯಾತ್ಮ ಚಿಂತನೆಯಿಂದ ಮನೋಭದ್ರತೆ.
ಕನ್ಯಾ ರಾಶಿ ಸೃಜನಶೀಲತೆ ಬೆಳಗುವ ದಿನ. ಕಲಾತ್ಮಕ ಕೆಲಸದಲ್ಲಿ ಯಶಸ್ಸು. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಎಲ್ಲರಿಗೂ ಇಷ್ಟವಾಗುವಿರಿ. ಮನೆಯಲ್ಲಿ ಚೋರ ಭಯ. ಅನುಭವಿಗಳ ಮಾರ್ಗದರ್ಶನ. ದೂರದಿಂದ ಶುಭ ಸಂದೇಶ. ಸಂಬಂಧಗಳಲ್ಲಿ ಸಮತೋಲನ.
ತುಲಾ ರಾಶಿ ಕೆಲಸದಲ್ಲಿ ಶ್ರಮ ಗುರುತಿಸಲ್ಪಡುವುದು. ಹೊಸ ಯೋಜನೆಗಳಿಗೆ ಅನುಕೂಲ. ಆಪ್ತರ ಮೃದು ಮಾತು ಶಾಂತಿ ನೀಡುವುದು. ಮೇಲಧಿಕಾರಿಗಳ ಕಿರುಕುಳ ಸಹಿಸಬೇಕು. ರಾಜಕೀಯ ಕ್ಷೇತ್ರದಲ್ಲಿ ಮಾತು ನಡೆಯುವುದು. ಗೊಂದಲಕ್ಕೆ ಸ್ಪಷ್ಟ ಪರಿಹಾರ. ಕೃಷಿಯಲ್ಲಿ ಸ್ವಲ್ಪ ನಷ್ಟ.
ವೃಶ್ಚಿಕ ರಾಶಿ ಸಾರ್ವಜನಿಕ ವೇದಿಕೆಯಲ್ಲಿ ಮಾತಿಗೆ ವಿಶೇಷ ಸ್ಥಾನ. ಹಿರಿಯರ ಸಲಹೆಯಿಂದ ಸಕಾರಾತ್ಮಕ ಬದಲಾವಣೆ. ಸಣ್ಣ ಸಮಸ್ಯೆಯನ್ನು ದೊಡ್ಡದಾಗಿಸದಿರಿ. ಪ್ರಾಮಾಣಿಕತೆ ವರದಾನವಾಗುವುದು. ಕಠಿಣ ಪರಿಶ್ರಮಕ್ಕೆ ಮೆಚ್ಚುಗೆ.
ಧನು ರಾಶಿ ಶಾಂತ ಸ್ವಭಾವ ಯಶಸ್ಸು ತರುತ್ತದೆ. ಪುಣ್ಯಕರ್ಮದಿಂದ ದೈವಾನುಗ್ರಹ. ಆರ್ಥಿಕ ಸ್ಥಿರತೆ. ವ್ಯಾಪಾರದಲ್ಲಿ ಜಾಗರೂಕತೆ ಅಗತ್ಯ. ಕುಟುಂಬದಲ್ಲಿ ಸಂತೋಷದ ವಾತಾವರಣ. ಆರೋಗ್ಯ ಸುಧಾರಣೆ. ಹೊಸ ಕೆಲಸಕ್ಕೆ ಉತ್ಸಾಹ.
ಮಕರ ರಾಶಿ ನಿರ್ಧಾರಗಳಲ್ಲಿ ಜಾಣತನ. ಸಂವಹನ ಶಕ್ತಿ ಬಲಗೊಳ್ಳುವುದು. ದೂರದ ಶುಭ ಸಂದೇಶ. ಸಂಗಾತಿಯಿಂದ ಹಣ ಸಹಾಯ. ಸಂಶೋಧಕರಿಗೆ ಅವಕಾಶ. ಬೌದ್ಧಿಕ ಶಕ್ತಿ ಜಾಗೃತ. ಬಂಧುಗಳ ಆಗಮನದಿಂದ ಖುಷಿ.
ಕುಂಭ ರಾಶಿ ಕಳೆದುಕೊಂಡಿದ್ದ ಮನೋದೈರ್ಯ ಮರಳುವುದು. ಹಳೆಯ ವೈರ ನಿವಾರಣೆ. ಉಪಕಾರ ಮಾಡಲು ಹೋಗಿ ಸಂಕಷ್ಟ ಬರಬಹುದು. ಸಾಲದ ಚಿಂತೆ. ಕುಟುಂಬದಲ್ಲಿ ತಪ್ಪು ಗ್ರಹಿಕೆ ನಿವಾರಣೆ. ಆರ್ಥಿಕ ಸುಂದರ ಸೂಚನೆ.
ಮೀನ ರಾಶಿ ಕೆಲಸದಲ್ಲಿ ಕೇಂದ್ರೀಕರಣ, ಸ್ಪಷ್ಟ ನಿರ್ಧಾರ. ಅಪ್ರತೀಕ್ಷಿತ ಅವಕಾಶ. ಹಳೆಯ ದ್ವಂದ್ವ ನಿವಾರಣೆ. ತಪ್ಪು ಮರುಕಳಿಸದಿರಿ. ಖರ್ಚು ಹೆಚ್ಚಿ ಆತಂಕ. ಕೆಲಸಕ್ಕೆ ಪ್ರಶಂಸೆ-ಸಂಪತ್ತು. ಸಂಗಾತಿಯನ್ನು ಸಂತೋಷಪಡಿಸುವ ಪ್ರಯತ್ನ.
