ಸಂಖ್ಯಾಶಾಸ್ತ್ರದ ಪ್ರಕಾರ ಇಂದು ಯಾರಿಗೆ ಧನಲಾಭ, ಯಾರಿಗೆ ಎಚ್ಚರಿಕೆ?

Untitled design 2025 10 24T063901.590

ಸಂಖ್ಯಾಶಾಸ್ತ್ರದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಜನ್ಮಸಂಖ್ಯೆ ಇರುತ್ತದೆ. ಯಾವ ತಿಂಗಳ ಯಾವ ದಿನ ಜನಿಸಿದವರಾಗಿದೀರಿ ಎಂಬುದರ ಆಧಾರದಲ್ಲಿ ನಿಮ್ಮ ದಿನದ ಫಲಿತಾಂಶವು ಬದಲಾಗುತ್ತದೆ. ನವೆಂಬರ್ 19ರಂದು, ನಿಮ್ಮ ಜನ್ಮಸಂಖ್ಯೆ ಯಾವ ರೀತಿಯ ಶುಭ-ಅಶುಭ ಸೂಚನೆಯನ್ನು ನೀಡುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಜನ್ಮಸಂಖ್ಯೆ 1 (1, 10, 19, 28 ರಂದು ಹುಟ್ಟಿದವರು)

ಇಂದು ಹಣಕಾಸಿನ ಚಿಂತೆಗಳು ಕಡಿಮೆಯಾಗುತ್ತವೆ. ಹೊಸ ಆದಾಯ ಮೂಲಗಳು ತೆರೆದುಕೊಳ್ಳುವ ಸಾಧ್ಯತೆ ಹೆಚ್ಚು. ವಾಹನ ಖರೀದಿಯ ಯೋಚನೆಯಲ್ಲಿದ್ದವರಿಗೆ ಲೋನ್ ಅಥವಾ ಅಡ್ವಾನ್ಸ್ ವ್ಯವಸ್ಥೆ ಸಿಗಬಹುದು. ಹೂಡಿಕೆ ವಿಷಯದಲ್ಲಿ ಇತರರಿಗೆ ಸಲಹೆ ನೀಡುವುದು ತಪ್ಪಿ, ಇದು ನಂತರ ನಿಮಗೆ ಹೊಣೆಗಾರಿಕೆಯಾಗಬಹುದು. ಆಪ್ತರಿಂದ ಉಡುಗೊರೆಗಳ ಲಾಭವೂ ಇದೆ.

ಜನ್ಮಸಂಖ್ಯೆ 2 (2, 11, 20, 29 )

ಮನೆಗೆ ಇಂಟರ್‌ನೆಟ್ ಅಥವಾ ವೈಫೈ ಸಂಬಂಧಿತ ಹೊಸ ಸಾಧನ ಅಳವಡಿಕೆ ಮಾಡಲು ಉತ್ತಮ ದಿನ. ಹಿರಿಯ ಅಧಿಕಾರಿಗಳಿಗೆ ನೀವು ತೆಗೆದುಕೊಂಡ ನಿರ್ಧಾರಗಳ ಕುರಿತು ವಿವರಿಸಬೇಕಾಗಬಹುದು. ಸಂಬಂಧಿಕರ ಜತೆ ಇದ್ದ ಆಸ್ತಿ ವಿಚಾರದ ಭಿನ್ನಾಭಿಪ್ರಾಯ ಬಗೆಹರಿಸುವ ಅವಕಾಶ ಸಿಗಬಹುದು. ಬಾಕಿ ಹಣ ವಸೂಲಿ ಮಾಡಲು ಇದು ಅತ್ಯುತ್ತಮ ದಿನ. ಒಂದು ಫೋನ್ ಕರೆ ಸಾಕು.

ಜನ್ಮಸಂಖ್ಯೆ 3 (3, 12, 21, 30)

ಅತಿಯಾದ ಬುದ್ಧಿವಂತಿಕೆ ಪ್ರಯೋಗಿಸದೆ ನಿರ್ಧಾರ ತೆಗೆದುಕೊಳ್ಳಿ. ಪ್ರಯಾಣ ಬುಕ್ಕಿಂಗ್‌ಗಳಲ್ಲಿ ತಪ್ಪು ತಪ್ಪಿಸಲು ಜವಾಬ್ದಾರಿ ಇತರರಿಗೆ ಕೊಡುವುದು ಸೂಕ್ತ. ಸೆಕೆಂಡ್ ಹ್ಯಾಂಡ್ ವಾಹನ ವ್ಯವಹಾರದಲ್ಲಿ ಇದ್ದವರಿಗೆ ಇಂದು ಲಾಭದ ಸೂಚನೆ. ರೀ–ಸೇಲ್ ಸೈಟ್ ಅಡ್ವಾನ್ಸ್ ಕುರಿತ ಮಾತುಕತೆ ಯಶಸ್ವಿ. ಗಣಪತಿ ದರ್ಶನ ಅಥವಾ ಅಥರ್ವಶೀರ್ಷ ಪಠಣ ಮನಸ್ಸಿಗೆ ಶಾಂತಿ ನೀಡುತ್ತದೆ.

ಜನ್ಮಸಂಖ್ಯೆ 4 (4, 13, 22, 31)

ನಿಮ್ಮ ಶಿಸ್ತಿನ ಪ್ರವೃತ್ತಿ ಇತರರಿಗೆ ಕಿರಿಕಿರಿ ಆಗಬಹುದು. ವ್ಯವಹಾರದಲ್ಲಿ ಹೆಚ್ಚು ಕಠಿಣತನ ತೋರಬೇಡಿ. ಕುಟುಂಬದಿಂದ ಬಂದ ಆಸ್ತಿ ಅಥವಾ ಒಡವೆ ಮಾರಾಟ ಮಾಡುವ ಯೋಚನೆ ಇದ್ದರೆ ನಾಲ್ಕು ಬಾರಿ ಆಲೋಚಿಸಿ. ಕ್ರೀಡಾಪಟುಗಳಿಗೆ ಇದು ಭಾಗ್ಯಯುಕ್ತ ದಿನ. ಹೆಚ್ಚಿನ ತರಬೇತಿ ಅಥವಾ ವಿದೇಶಾವಕಾಶ ಸಿಗಬಹುದು. ಸಹೋದರ–ಸಹೋದರಿಯರ ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ.

ಜನ್ಮಸಂಖ್ಯೆ 5 (5, 14, 23)

ಹಳೆಯ ಗೆಳೆಯ/ಗೆಳತಿಯ ನೆನಪುಗಳು ಮನಸ್ಸನ್ನು ತಲ್ಲಣ ಮಾಡಬಹುದು. ಹೊಸ ವಾಹನ ಖರೀದಿ ಮಾಡಿದವರು ಚಾಲನೆಯಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕು. ಕ್ರೆಡಿಟ್ ಕಾರ್ಡ್ ಬಿಲ್ ಮಿಸ್ ಮಾಡುವ ಸಾಧ್ಯತೆ. ಪ್ರಭಾವಿ ವ್ಯಕ್ತಿಗಳ ಭೇಟಿ ಇದ್ದರೆ ಸಮಯಕ್ಕೆ ಮುಂಚಿತವಾಗಿ ತೆರಳಿರಿ.

ಜನ್ಮಸಂಖ್ಯೆ 6 (6, 15, 24)

ದಂಪತಿಗಳ ಮಧ್ಯೆ ಮಕ್ಕಳ ವಿಷಯಕ್ಕೆ ಚರ್ಚೆಗಳು ಉಜ್ಜಲಿಸಬಹುದು. ಹಠ ಬೇಡ. ಮನೆ ಅಲಂಕಾರಕ್ಕೆ ಹೆಚ್ಚು ಹಣ ಖರ್ಚಾಗುವ ಸೂಚನೆ. ನಿಮ್ಮನ್ನು ಒಪ್ಪಿಕೊಳ್ಳುವ ವ್ಯಕ್ತಿಗಳಿಗೂ ಮಾತ್ರ ಸಲಹೆ ನೀಡಿ. ದುರ್ಗಾದೇವಿ ದರ್ಶನ ಅಥವಾ ದೇವಿಯ ಚಿತ್ರವನ್ನು ಫೋನ್ ವಾಲ್‌ಪೇಪರ್ ಆಗಿ ಇಡುವುದು ಮನಸ್ಸಿಗೆ ಶಾಂತಿ. ಮನೆ/ಸೈಟ್ ಖರೀದಿಯನ್ನು ತಾತ್ಕಾಲಿಕವಾಗಿ ಮುಂದೂಡಲು ಇದು ಸರಿಯಾದ ಸಮಯ.

ಜನ್ಮಸಂಖ್ಯೆ 7 (7, 16, 25)

ನಿಮ್ಮ ಮಾತಿನ ಪ್ರಭಾವ ಇತರರ ಮೇಲೆ ಹೆಚ್ಚಾಗಿರುತ್ತದೆ. ವಿದೇಶ ಪ್ರಯತ್ನಗಳಲ್ಲಿ ಬಂದ ಅಡೆತಡೆಗಳಿಗೆ ಪರಿಹಾರಗಳು ಸಿಗಬಹುದು. ಊಟದ ವಿಷಯಕ್ಕೆ ಸಣ್ಣಮಟ್ಟದ ಜಗಳ ಸಂಭವಿಸಬಹುದು. ಎದುರಾಳಿಯ ಮಾತು ಕೂಡ ಕೇಳಿ. ಹಿಂದೆ ತಿರಸ್ಕರಿಸಿದ್ದ ಕೆಲಸ ಅಥವಾ ಪ್ರಾಜೆಕ್ಟ್ ಮತ್ತೆ ಬಾಗಿಲು ತಟ್ಟಬಹುದು. ಈ ಬಾರಿ ಇತರರ ಅಭಿಪ್ರಾಯಕ್ಕೂ ಮಹತ್ವ ನೀಡಿ ಮುಂದುವರಿಯಿರಿ.

ಜನ್ಮಸಂಖ್ಯೆ 8 (8, 17, 26)

ತೀರ್ಮಾನಕ್ಕೆ ಬಾರದಿದ್ದ ವಿಷಯಕ್ಕೆ ಇಂದು ಅಂತ್ಯಗೊಳಿಸಲು ಮನಸ್ಸು ಮಾಡುತ್ತೀರಿ. ಪ್ರಕೃತಿ ಚಿಕಿತ್ಸೆಗೆ ಒಲವು ಹೆಚ್ಚಾಗಬಹುದು. ವಿವಾಹ ಪ್ರಯತ್ನದಲ್ಲಿರುವವರಿಗೆ ಹಿಂದೆ ಬಂದಿದ್ದ ಒಳ್ಳೆಯ ಸಂಬಂಧವೇ ಮತ್ತೆ ಕಾಣಿಸಿಕೊಳ್ಳಬಹುದು. ವಾಸ್ತು–ಜ್ಯೋತಿಷ್ಯ ಕ್ಷೇತ್ರದವರಿಗೆ ಕೆಲವು ಅಸಹಕಾರ ಪರಿಸ್ಥಿತಿಗಳು ಎದುರಾಗಬಹುದು; ಕೆಲವು ಸಹೋದ್ಯೋಗಿಗಳು ನಿಮ್ಮಿಂದ ದೂರ ಹೋಗುವ ಸಂಭವ ಇದೆ.

ಜನ್ಮಸಂಖ್ಯೆ 9 (9, 18, 27)

ನಿಮ್ಮ ಸಮಸ್ಯೆಯನ್ನು ಅತಿರೇಕವಾಗಿ ಚಿತ್ರಿಸುವುದು ಬೇಡ. ಹಣ ಮತ್ತು ಸಮಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಮಾಡಿ. ಹಣಕಾಸಿನ ಒತ್ತಡ ಹೆಚ್ಚಾದರೂ ಹೊಸ ವ್ಯವಹಾರ ಅವಕಾಶಗಳು ಸಿಗಬಹುದು. ನೀವು ರಹಸ್ಯವೆಂದು ಹೇಳಿದ್ದ ವಿಷಯಗಳು ಹೊರಬರುವ ಸಾಧ್ಯತೆ—ದೋಷ ನಿಯಂತ್ರಣಕ್ಕೆ ಕ್ರಮ ರೂಪಿಸುವ ಅಗತ್ಯ. ರಾಜೀ ಸಾಧ್ಯವೆನಿಸಲಿಲ್ಲವೆಂದಿದ್ದ ವಿಚಾರದಲ್ಲೂ ಈ ಬಾರಿ ಮಾಡಬೇಕಾಗಬಹುದು.

Exit mobile version