ಜನವರಿ 30, ಶುಕ್ರವಾರದ ದಿನವು ಕೆಲ ರಾಶಿಗಳಿಗೆ ಅದೃಷ್ಟ, ಲಾಭ ಹಾಗೂ ಸುಖದ ಸಂದೇಶವನ್ನು ತಂದಿದ್ದರೆ, ಕೆಲವು ರಾಶಿಗಳಿಗೆ ಎಚ್ಚರಿಕೆ ಅಗತ್ಯವಿರುವ ದಿನವಾಗಿದೆ. ಗ್ರಹಗಳ ಸಂಚಾರದ ಪ್ರಭಾವದಿಂದ ಧನ, ಆರೋಗ್ಯ, ಉದ್ಯೋಗ, ಕುಟುಂಬ ಹಾಗೂ ವೈಯಕ್ತಿಕ ಜೀವನದಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳಲಿವೆ. ಪ್ರತಿಯೊಬ್ಬರೂ ತಮ್ಮ ರಾಶಿಯ ಅನುಗುಣವಾಗಿ ದೇವರ ಆರಾಧನೆ ಹಾಗೂ ಸದುಪಯೋಗದ ಕ್ರಮಗಳನ್ನು ಅನುಸರಿಸುವುದರಿಂದ ದಿನವನ್ನು ಉತ್ತಮವಾಗಿ ಕಳೆಯಬಹುದು. ಇಲ್ಲಿದೆ ಇಂದಿನ 12 ರಾಶಿಗಳ ಸಂಪೂರ್ಣ ಭವಿಷ್ಯ.
ಮೇಷ
ಇಂದು ಲಾಭದಾಯಕ ದಿನ. ವಿದೇಶ ವಹಿವಾಟು, ಔಷಧ ವ್ಯಾಪಾರ ಹಾಗೂ ವ್ಯಾಪಾರ ಚಟುವಟಿಕೆಗಳಲ್ಲಿ ಉತ್ತಮ ಲಾಭ ದೊರೆಯಲಿದೆ. ಬಂಧುಗಳ ಸಹಕಾರ ಸಿಗುತ್ತದೆ. ಕಾರ್ಯಗಳಲ್ಲಿ ಅನುಕೂಲವಾಗುತ್ತದೆ. ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ದಿನದ ಶುಭಫಲಕ್ಕಾಗಿ ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸುವುದು ಶ್ರೇಯಸ್ಕರ.
ವೃಷಭ
ಕುಟುಂಬದಲ್ಲಿ ಸುಖಮಯ ವಾತಾವರಣ ನಿರ್ಮಾಣವಾಗುತ್ತದೆ. ರುಚಿಕರವಾದ ಆಹಾರ ಲಭ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅನುಕೂಲ. ಆದರೆ ಕಾರ್ಯಗಳಲ್ಲಿ ಸ್ವಲ್ಪ ತೊಡಕು ಎದುರಾಗಬಹುದು. ಶಾಂತಚಿತ್ತದಿಂದ ಕಾರ್ಯನಿರ್ವಹಿಸಿ. ಸುಬ್ರಹ್ಮಣ್ಯ ಸ್ವಾಮಿಗೆ ರುದ್ರಾಭಿಷೇಕ ಮಾಡಿಸುವುದರಿಂದ ಶ್ರೇಯಸ್ಸು.
ಮಿಥುನ
ಕಾರ್ಯಗಳಲ್ಲಿ ಯಶಸ್ಸು ಕಂಡುಬರುವುದು. ಧನಸಂಪಾದನೆ ಹೆಚ್ಚಾಗುತ್ತದೆ. ನಿಮ್ಮ ಮಾತಿಗೆ ಗೌರವ ದೊರೆಯಲಿದೆ. ಆದರೆ ಶ್ರದ್ಧೆ ಕಡಿಮೆಯಾಗುವ ಸಾಧ್ಯತೆ ಇದೆ. ತಂದೆ-ಮಕ್ಕಳ ನಡುವೆ ಸ್ವಲ್ಪ ಮನಸ್ತಾಪ ಉಂಟಾಗಬಹುದು. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಈಶ್ವರ ಪ್ರಾರ್ಥನೆ ಉಪಯುಕ್ತ.
ಕರ್ಕ
ಇಂದು ಅಲೆದಾಟ ಹೆಚ್ಚಾಗುವ ದಿನ. ಕಾರ್ಯಗಳಲ್ಲಿ ಅನುಕೂಲವಿದ್ದರೂ ವಸ್ತುನಷ್ಟ ಸಂಭವಿಸುವ ಸಾಧ್ಯತೆ ಇದೆ. ವ್ಯಸನಗಳಿಂದ ದೂರವಿರುವುದು ಒಳಿತು. ಧಾರ್ಮಿಕ ಚಿಂತನೆ ಹಾಗೂ ಶಿವಾರಾಧನೆ ಮನಸ್ಸಿಗೆ ಶಾಂತಿ ನೀಡುತ್ತದೆ.
ಸಿಂಹ
ಲಾಭದಾಯಕ ದಿನ. ಕೃಷಿ ಹಾಗೂ ಹಾಲು ಉತ್ಪಾದನಾ ಕ್ಷೇತ್ರದಲ್ಲಿ ಉತ್ತಮ ಆದಾಯ ಸಿಗುತ್ತದೆ. ಶಿಕ್ಷಕರಿಗೆ ವಿಶೇಷ ಅನುಕೂಲ. ಆದರೆ ದಾಂಪತ್ಯ ಜೀವನದಲ್ಲಿ ಸ್ವಲ್ಪ ಮನಸ್ತಾಪ ಉಂಟಾಗಬಹುದು. ಶಿವಶಕ್ತಿ ಆರಾಧನೆ ಶುಭಫಲ ನೀಡುತ್ತದೆ.
ಕನ್ಯಾ
ಕಾರ್ಯಗಳಲ್ಲಿ ಯಶಸ್ಸು ಕಂಡುಬರುವುದು. ಆದರೆ ದಾಂಪತ್ಯ ಜೀವನದಲ್ಲಿ ಅಸಮಾಧಾನ ಕಾಣಿಸಿಕೊಳ್ಳಬಹುದು. ಆರೋಗ್ಯದಲ್ಲಿ ವಿಶೇಷವಾಗಿ ಹೊಟ್ಟೆ ಸಂಬಂಧಿತ ತೊಂದರೆ ಕಾಡಬಹುದು. ನಾಗಕವಚ ಪಠಣ ಮಾಡುವುದರಿಂದ ರಕ್ಷಣೆ ದೊರೆಯುತ್ತದೆ.
ತುಲಾ
ಧಾರ್ಮಿಕ ಶ್ರದ್ಧೆ ಹೆಚ್ಚಾಗುತ್ತದೆ. ಕೆಲಸದಲ್ಲಿ ಅನುಕೂಲ, ಮಿತ್ರರಿಂದ ಸಹಾಯ ದೊರೆಯಲಿದೆ. ಪ್ರಯಾಣ ಸುಖಕರ. ಆದರೆ ಮಕ್ಕಳ ವಿಚಾರದಲ್ಲಿ ಸ್ವಲ್ಪ ಬೇಸರ ಉಂಟಾಗಬಹುದು. ಲಲಿತಾ ಸಹಸ್ರನಾಮ ಪಠಣೆ ಮನಶಾಂತಿ ನೀಡುತ್ತದೆ.
ವೃಶ್ಚಿಕ
ಕಾರ್ಯಗಳಲ್ಲಿ ಪ್ರಗತಿ ಇದ್ದರೂ ದಾಂಪತ್ಯದಲ್ಲಿ ಹಾಗೂ ಆತ್ಮೀಯರಿಂದ ಮನಸ್ತಾಪ ಉಂಟಾಗಬಹುದು. ನಿದ್ರಾಹೀನತೆ ಹಾಗೂ ಹೃದಯ ಸಂಬಂಧಿತ ತೊಂದರೆ ಕಾಡಬಹುದು. ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ. ನಾಗಪ್ರಾರ್ಥನೆ ಮಾಡುವುದು ಲಾಭಕರ.
ಧನು
ಕಾರ್ಯಗಳಲ್ಲಿ ಯಶಸ್ಸು. ಸ್ನೇಹಿತರು ಹಾಗೂ ಬಂಧುಗಳಿಂದ ಉತ್ತಮ ಸಹಕಾರ. ದಾಂಪತ್ಯ ಜೀವನದಲ್ಲಿ ಸಾಮರಸ್ಯ. ಆದರೆ ಗಂಟಲು ಮತ್ತು ಕಿವಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಾಗಕವಚ ಪಠಣೆ ಶುಭಕರ.
ಮಕರ
ಆಹಾರ ಮತ್ತು ಹಣಕಾಸಿನಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳಬಹುದು. ಕುಟುಂಬ ಹಾಗೂ ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾಗುವ ಸಾಧ್ಯತೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಕಾರ್ಯಗಳಲ್ಲಿ ಅನುಕೂಲ ದೊರೆಯಲಿದೆ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಶುಭಫಲ ನೀಡುತ್ತದೆ.
ಕುಂಭ
ಆರೋಗ್ಯದಲ್ಲಿ ವ್ಯತ್ಯಾಸ, ವಿಶೇಷವಾಗಿ ಕಣ್ಣು ಸಂಬಂಧಿತ ತೊಂದರೆ ಕಾಣಿಸಿಕೊಳ್ಳಬಹುದು. ಕೆಲಸದ ಒತ್ತಡ ಹೆಚ್ಚಾಗುತ್ತದೆ. ಆದರೆ ಮಕ್ಕಳಿಂದ ಸಹಕಾರ ದೊರೆಯಲಿದೆ. ಶಿವನಿಗೆ ಅಭಿಷೇಕ ಮಾಡಿಸುವುದು ಲಾಭಕರ.
ಮೀನ
ಇಂದು ಸೌಖ್ಯದ ದಿನ. ಸ್ನೇಹಿತರು ಮತ್ತು ಬಂಧುಗಳ ಜೊತೆ ಉತ್ತಮ ಸಮಯ ಕಳೆಯುವಿರಿ. ಕೃಷಿಕರಿಗೆ ಅನುಕೂಲಕರ. ಕಾಲಿಗೆ ಪೆಟ್ಟು ಬೀಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ನಾಗಕವಚ ಪಠಣೆ ಶುಭ.
