ದಿನ ಭವಿಷ್ಯ: ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ.!

Untitled design 2026 07 03T064452.834
ಮೇಷ ರಾಶಿ

ವೈದ್ಯಕೀಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಇಂದು ಹೆಚ್ಚಿನ ತೊಂದರೆ ಎದುರಾಗಬಹುದು. ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ತೊಡಗಿರುವವರಿಗೆ ಬರಬೇಕಾದ ಹಣ ಬಾರದೇ ನಿರಾಸೆಯಾಗುವುದು. ಭೂಮಿಗೆ ಸಂಬಂಧಿಸಿದ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿ ಬಗೆಹರಿಯದೆ ಇರಬಹುದು. ನಿಮ್ಮ ಅತಿಯಾದ ಕಲ್ಪನೆಗಳು ಭಗ್ನವಾಗಿ ಮನಸ್ಸಿಗೆ ನೋವುಂಟಾಗಬಹುದು. ಆದರೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದುವರಿಯುವಿರಿ. ಕಳೆದುಕೊಂಡ ವಸ್ತುವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿರುವಿರಿ.

ವೃಷಭ ರಾಶಿ

ಹಣ ಉಳಿಸುವ ಪ್ರಯತ್ನ ವಿಫಲವಾಗಿ, ಅನಿವಾರ್ಯವಾಗಿ ಖರ್ಚು ಹೆಚ್ಚಾಗುವ ಸಂದರ್ಭ. ಅತಿಯಾದ ಪ್ರಯಾಣ ಬೇಡ. ಹಣದ ವಿಚಾರವಾಗಿ ಮನೆಯಲ್ಲಿ ವಾಗ್ವಾದ ಉಂಟಾಗಬಹುದು. ವಾಹನಕ್ಕೆ ಅನ್ಯರಿಂದ ಅಪಾಯ ಸಂಭವಿಸುವ ಸಾಧ್ಯತೆ. ಸೋಲಿಸುವ ಮನೋಭಾವದಿಂದ ಆಟವಾಡುವುದು ತಪ್ಪಿಸಿ. ಸಂಗಾತಿಯನ್ನು ತಮಾಷೆ ಮಾಡಲು ಹೋಗಿ ಅಹಿತಕರ ಪರಿಸ್ಥಿತಿ ಎದುರಾಗಬಹುದು. ನಿದ್ರೆಯಲ್ಲಿ ಆಗಾಗ ಎಚ್ಚರಿಕೆಯಾಗುವ ಸಾಧ್ಯತೆ. ವಾತಶಮನಕ್ಕೆ ವೈದ್ಯರ ಸಲಹೆ ಪಡೆಯಿರಿ.

ಮಿಥುನ ರಾಶಿ

ಕೇವಲ ಚಿಂತನೆಯಿಂದ ಬಂದ ಸಮಸ್ಯೆಗಳನ್ನು ಬಗೆಹರಿಸಲು ಕಷ್ಟವಾಗುವುದು. ಸಂಪತ್ತಿನ ಜೊತೆಗೆ ಶತ್ರುಗಳೂ ಸೃಷ್ಟಿಯಾಗುವ ಸಾಧ್ಯತೆ. ದಾನವಾಗಿ ಕೊಟ್ಟದ್ದನ್ನು ಮತ್ತೆ ಕೇಳಿ ಪಡೆಯಬೇಕಾದ ಸ್ಥಿತಿ. ಕುಟುಂಬದವರ ಬಗ್ಗೆ ಕಾಳಜಿ ಹೆಚ್ಚಿದ್ದು, ಕುಟುಂಬ ನಿರ್ವಹಣೆಯ ಜವಾಬ್ದಾರಿ ಸಿಗಬಹುದು. ಅನವಶ್ಯಕ ವಸ್ತುಗಳತ್ತ ಆಕರ್ಷಣೆ ಹೆಚ್ಚು. ಸಂತೋಷವಾಗಿರಲು ಹೊಸ ಕ್ರಮಗಳನ್ನು ಅನುಸರಿಸುವಿರಿ.

ಕರ್ಕಾಟಕ ರಾಶಿ

ವಾಹನದಿಂದ ಬಿದ್ದು ಗಾಯವಾಗದಿರಲು ಜಾಗರೂಕರಾಗಿರಿ. ನಿಮ್ಮ ನಡೆಯನ್ನು ಜನರು ಅರ್ಥಮಾಡಿಕೊಳ್ಳಲು ಕಷ್ಟಪಡುವರು – ಮಾತಿನಲ್ಲಿ ಸ್ಪಷ್ಟತೆ ಅಗತ್ಯ. ಯೋಜನೆಗಳನ್ನು ಸರಿಯಾಗಿ ಬಿತ್ತರಿಸಿ. ಕೆಲಸವನ್ನು ಒಂಟಿಯಾಗಿ ಮಾಡಲು ಹಿಂಜರಿಕೆ. ಎಲ್ಲವೂ ಬಂಧನದಂತೆ ಅನ್ನಿಸುವುದು. ಪ್ರೀತಿಯ ವಸ್ತುವೊಂದು ಹಾಳಾಗಬಹುದು. ಮನಸ್ಸಿನ ದುಗುಡವನ್ನು ಶಾಂತಗೊಳಿಸಿಕೊಳ್ಳುವಿರಿ.

ಸಿಂಹ ರಾಶಿ

ಏಕಮುಖ ನಿರ್ಧಾರ ತೆಗೆದುಕೊಂಡು ಒಂಟಿಯಾಗಬೇಕಾದೀತು. ನಿಮ್ಮ ಮಾತು ಇತರರಿಗೆ ಪ್ರೇರಣೆಯಾಗಬಹುದು. ಎಲ್ಲರ ಜೊತೆ ಚರ್ಚಿಸಿ ಮುಂದುವರಿಯಿರಿ. ಕೋಪದಿಂದ ಏನೂ ಸಾಧ್ಯವಿಲ್ಲ ಎಂಬ ಅರಿವಾಗುವುದು. ಪ್ರಯಾಣದಿಂದ ಆಯಾಸ. ಮಕ್ಕಳಿಲ್ಲದ ಬೇಸರ ಕಾಡಬಹುದು. ಏಕಾಂಗಿಯಾಗಿ ಸಮಸ್ಯೆಗಳನ್ನು ಎದುರಿಸುವುದು ಕಷ್ಟವಾಗಬಹುದು.

ಕನ್ಯಾ ರಾಶಿ

ನಿಮ್ಮ ಜೀವನದಲ್ಲಿ ಪ್ರಮುಖರು ಯಾರೆಂಬುದು ಅರಿವಾಗುವುದು. ಇಂದು ನಿಮ್ಮ ಲೆಕ್ಕಾಚಾರಗಳು ತಲೆಕೆಳಗಾಗಬಹುದು. ಪ್ರಯಾಣದ ಸಂದರ್ಭ ಬರಬಹುದು, ದೂರದ ಯಾತ್ರೆ ಮುಂದೂಡಲ್ಪಡಬಹುದು. ಹಣಕಾಸಿನ ವಿಚಾರದಲ್ಲಿ ಅಡಚಣೆ. ಪರೋಕ್ಷವಾಗಿ ಯಾರಾದರೂ ನಿಂದಿಸಬಹುದು. ಮನಸ್ಸಿನಲ್ಲಿ ಸಾವಧಾನತೆ ಇರುವುದಿಲ್ಲ.

ತುಲಾ ರಾಶಿ

ತಂದೆ-ತಾಯಿಯರಿಂದ ಬೇಸರ ವ್ಯಕ್ತವಾಗಬಹುದು. ವಿವಾಹ ಯೋಗವನ್ನು ನಿರ್ಲಕ್ಷಿಸಬೇಡಿ. ಮಕ್ಕಳು ಸಂತಸ ತಂದುಕೊಡುವರು. ಹೊಸ ಕೌಶಲದತ್ತ ಗಮನ ಹೆಚ್ಚುವುದು. ಬಂಧುಗಳ ವಿಯೋಗದಿಂದ ಮನಸ್ಸಿಗೆ ಭಾರ. ವಿದ್ಯಾರ್ಥಿಗಳು ಆಲಸ್ಯ ಅನುಭವಿಸಬಹುದು. ಸಂಗಾತಿಯ ಜೊತೆ ಸುಖ-ದುಃಖ ಹಂಚಿಕೊಳ್ಳುವಿರಿ. ಅಮೂಲ್ಯ ವಸ್ತುಗಳನ್ನು ಪಡೆದುಕೊಳ್ಳುವಿರಿ.

ವೃಶ್ಚಿಕ ರಾಶಿ

ಪ್ರಾಮಾಣಿಕ ಪ್ರಯತ್ನಗಳನ್ನು ವಂಚನೆಯಿಲ್ಲದೇ ಮಾಡಿ. ಆರ್ಥಿಕವಾಗಿ ಸಬಲರಾಗುವಿರಿ. ಕೆಲಸದಲ್ಲಿ ಅಡ್ಡಿ ಆತಂಕವಿದೆ. ವಿದೇಶ ಪ್ರಯಾಣದ ಕನಸು ನನಸಾಗಬಹುದು. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಅವರ ಅಭಿಪ್ರಾಯ ಕೇಳಿ ತೀರ್ಮಾನಿಸಿ. ಹಿತಶತ್ರುಗಳು ಯಶಸ್ಸಿಗೆ ಅಡ್ಡಿಯುಂಟುಮಾಡಬಹುದು. ಮೋಸಕ್ಕೆ ಒಳಗಾಗುವ ಸಾಧ್ಯತೆ – ಸ್ವಲ್ಪ ವಿಳಂಬ ಮಾಡಿ. ನೀವು ಹೇಳಿದ ಕೆಲಸ ವೇಗವಾಗಿ ಮುಗಿಯದು. ಸ್ನೇಹಿತರ ಜೊತೆ ಸಮಸ್ಯೆ ಕಳೆಯುವಿರಿ.

ಧನು ರಾಶಿ

ಬೇಡದ ವಸ್ತುಗಳನ್ನು ಸಂಗ್ರಹಿಸಿಡುವಿರಿ. ನಿಮ್ಮನ್ನು ಕಂಡು ಹೊಟ್ಟೆಕಿಚ್ಚು ಪಡುವವರು ಸುತ್ತಮುತ್ತಲಿದ್ದಾರೆ. ಅವರನ್ನು ಅಲಕ್ಷಿಸಿ ಅಥವಾ ದೂರವಿರಿ. ಚರಾಸ್ತಿ ವಿಚಾರವಾಗಿ ಮನೆಯಲ್ಲಿ ಚರ್ಚೆ. ಆಲಸ್ಯದಿಂದ ವಿಶ್ರಾಂತಿ. ಸಂಗಾತಿಯ ಜೊತೆ ಮುನಿಸು ಕಡಿಮೆ ಮಾಡಿಕೊಳ್ಳಿ. ಪ್ರೇಮಕ್ಕಾಗಿ ಹೆಚ್ಚು ಖರ್ಚಾಗಬಹುದು. ಹಿತಶತ್ರುಗಳ ಬಗ್ಗೆ ನಿಮ್ಮ ಊಹೆ ತಪ್ಪಾಗಬಹುದು.

ಮಕರ ರಾಶಿ

ಸರ್ಕಾರಿ ಕೆಲಸಗಳು ವಿಳಂಬವಾಗುವುದು. ಮಾತಿನಿಂದ ಮಾತ್ರ ಎಲ್ಲವೂ ಸರಿಯಾಗುತ್ತದೆ ಎನ್ನುವ ಭ್ರಮೆ ಬಿಡಿ. ಗೃಹನಿರ್ಮಾಣ ಕಾರ್ಯ ಹಣಕಾಸಿನ ಅಭಾವದಿಂದ ಸ್ಥಗಿತಗೊಳ್ಳಬಹುದು. ನಿರುದ್ಯೋಗ ನಿವಾರಣೆಗೆ ತಾತ್ಕಾಲಿಕ ಕೆಲಸ ಸಿಗಬಹುದು. ಮಾತಿನ ಮೇಲೆ ಹಿಡಿತವಿಟ್ಟು, ಆಲೋಚಿಸಿ ಮಾತನಾಡಿ. ಆ ಕ್ಷಣದಲ್ಲೇ ನಿರ್ಧಾರ ತೆಗೆದುಕೊಂಡು ನಂತರ ಚಿಂತಿಸುವಂತಾಗಬಾರದು.

ಕುಂಭ ರಾಶಿ

ಯಾರೊಂದಿಗೂ ಸಂಪೂರ್ಣ ಸತ್ಯವನ್ನು ಹೇಳಿಬಿಡಬೇಡಿ. ಪ್ರಮುಖ ಕೆಲಸಗಳಿಗೆ ಮನೆಯವರ ಸಹಾಯ ಕೇಳುವಿರಿ. ನಿಮ್ಮ ಶಿಸ್ತಿನ ಕೆಲಸದಿಂದ ಕೆಲವರಿಗೆ ಅಸಮಾಧಾನ. ದೂರದ ಬಂಧುಗಳ ಪರಿಚಯವಾಗುವುದು. ಒತ್ತಡಗಳಿದ್ದರೂ ಕೆಲಸ ಮುಗಿಸುವಿರಿ. ದಾಂಪತ್ಯದಲ್ಲಿ ಕಲಹವಿದ್ದರೂ ನೆಮ್ಮದಿ ಇರಲಿದೆ. ಕಳೆದುಕೊಂಡ ವಸ್ತು ಮರಳಿ ಪಡೆಯುವಿರಿ. ಆಪ್ತರೆಂದು ಮಾತಿನಲ್ಲಿ ಅತಿರೇಕವಾಗಬಹುದು.

ಮೀನ ರಾಶಿ

ಯೋಚಿಸದೇ ಸಾಹಸ ಕಾರ್ಯದತ್ತ ಮುನ್ನುಗ್ಗಬೇಡಿ. ಯಾರನ್ನೂ ನಿರೀಕ್ಷಿಸುತ್ತ ಖಾಲಿಯಾಗಿರಬೇಡಿ. ಉದ್ಯೋಗದ ನಿಮಿತ್ತ ದೂರ ಪ್ರಯಾಣ ಅನಿವಾರ್ಯ. ಸಂತಾನದ ಶುಭವಾರ್ತೆಯಿಂದ ಸಂತಸ. ಯೋಜಿತ ಕಾರ್ಯಗಳನ್ನು ಒಂದೊಂದಾಗಿ ಮಾಡಿ. ಅವಶ್ಯವಿದ್ದರೆ ಮಾತ್ರ ಮುಂದುವರಿಯಿರಿ. ಭವಿಷ್ಯದ ಬಗ್ಗೆ ಅತಿಯಾಗಿ ಯೋಚಿಸಬೇಡಿ – ಎಲ್ಲವನ್ನೂ ಖುಷಿಯಿಂದ ಸ್ವೀಕರಿಸಿ.

Exit mobile version