ರಾಶಿಭವಿಷ್ಯ: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ, ಹಿರಿಯರ ಸಲಹೆಯನ್ನು ಗೌರವದಿಂದ ಸ್ವೀಕರಿಸಿ!

ಷ್ಯ (22)

ಶಾಲಿವಾಹನ ಶಕ 1949, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸದ ಕೃಷ್ಣ ಪಕ್ಷದ ಚತುರ್ಥೀ ತಿಥಿಯ ಭಾನುವಾರವು ಕೆಲವು ರಾಶಿಗಳಿಗೆ ಶುಭಫಲಗಳನ್ನು ತಂದುಕೊಟ್ಟರೆ, ಇನ್ನೂ ಕೆಲವು ರಾಶಿಯವರಿಗೆ ಎಚ್ಚರಿಕೆಯಿಂದ ಹೆಜ್ಜೆ ಇಡುವ ಅಗತ್ಯವಿದೆ. ಇಂದಿನ ದಿನ ಪರಸ್ಪರ ವಾಗ್ವಾದ, ಅನಿರೀಕ್ಷಿತ ಖರ್ಚು, ಮಾನಸಿಕ ಒತ್ತಡ, ತುರ್ತು ಓಡಾಟ ಮತ್ತು ಕೆಲವೊಂದು ಅಸಮಾಧಾನಕರ ಬೆಳವಣಿಗೆಗಳು ಕಂಡುಬರುವ ಸಾಧ್ಯತೆ ಇದೆ. ಹಾಗಾದರೆ ಮೇಷದಿಂದ ಮೀನದವರೆಗೆ ನಿಮ್ಮ ರಾಶಿಯ ಫಲ ಹೇಗಿದೆ ನೋಡೋಣ.

ಮೇಷ: ಇಷ್ಟವಿಲ್ಲದ ಜವಾಬ್ದಾರಿಗಳು ನಿಮ್ಮನ್ನು ಕಾಡಬಹುದು. ಕಚೇರಿಯಲ್ಲಿ ಹಳೆಯ ಭಿನ್ನಾಭಿಪ್ರಾಯಗಳು ಮತ್ತೆ ತಲೆದೋರಬಹುದು. ಸಂಗಾತಿಯ ಸಹಕಾರ ಸಿಗಲಿದ್ದರೂ, ಎಲ್ಲರ ಮೇಲೂ ನಂಬಿಕೆ ಇಡುವುದು ಸೂಕ್ತವಲ್ಲ. ನಿಮ್ಮ ಆತ್ಮೀಯರನ್ನು ಮಾತ್ರ ಹತ್ತಿರ ಇರಿಸಿಕೊಳ್ಳಲು ಬಯಸುವಿರಿ. ಸಮಸ್ಯೆಗಳನ್ನು ತಾಳ್ಮೆಯಿಂದ ಎದುರಿಸಿದರೆ ಪರಿಹಾರ ದೊರೆಯಲಿದೆ.

ವೃಷಭ: ಸ್ವಪ್ರಯತ್ನದಿಂದ ಉತ್ತಮ ಲಾಭ ಗಳಿಸುವ ಸಾಧ್ಯತೆ ಇದೆ. ನಿಮ್ಮ ಮಾತಿಗೆ ಮೆಚ್ಚುಗೆ ದೊರೆಯಲಿದೆ. ಆದರೆ ಕಾನೂನಿಗೆ ವಿರುದ್ಧವಾದ ಕೆಲಸಗಳಿಂದ ದೂರವಿರುವುದು ಉತ್ತಮ. ಕಳೆದುಕೊಂಡ ವಸ್ತುವನ್ನು ಮರಳಿ ಪಡೆಯಲು ಪ್ರಯತ್ನ ಫಲಿಸಬಹುದು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.

ಮಿಥುನ: ನಿಧಾನವಾಗಿ ಕೆಲಸ ಮಾಡಿದರೂ ಯಶಸ್ಸು ನಿಮ್ಮದಾಗಲಿದೆ. ತಂದೆಯೊಂದಿಗೆ ವ್ಯವಹಾರ ಸಂಬಂಧಿತ ಭಿನ್ನಾಭಿಪ್ರಾಯ ಉಂಟಾಗಬಹುದು. ಹಿರಿಯರ ಸಲಹೆಯನ್ನು ಗೌರವದಿಂದ ಸ್ವೀಕರಿಸಿ. ಕೋಪವನ್ನು ನಿಯಂತ್ರಿಸಿಕೊಂಡರೆ ದಿನ ಉತ್ತಮವಾಗಿ ಸಾಗಲಿದೆ.

ಕರ್ಕಾಟಕ: ದುಶ್ಚಟಗಳಿಂದ ದೂರವಿರಲು ಮನಸ್ಸಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಅಥವಾ ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಮಕ್ಕಳಿಂದ ಸಂತಸದ ಸುದ್ದಿ ಕೇಳಬಹುದು. ಅಪರಿಚಿತರನ್ನು ಅತಿಯಾಗಿ ನಂಬುವುದು ಸಮಸ್ಯೆಗೆ ಕಾರಣವಾಗಬಹುದು.

ಸಿಂಹ: ನಿರ್ಮಾಣ ಕಾರ್ಯಗಳು ಅಥವಾ ಹೊಸ ಯೋಜನೆಗಳಲ್ಲಿ ಯಶಸ್ಸು ಸಿಗಲಿದೆ. ಆದರೆ ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದ ಕಡೆಗೂ ಗಮನ ಹರಿಸುವುದು ಮುಖ್ಯ. ಆರೋಗ್ಯದ ವಿಚಾರದಲ್ಲಿ ಉದರ ಸಮಸ್ಯೆ ಕಾಡಬಹುದು.

ಕನ್ಯಾ: ಹೂಡಿಕೆ ಮಾಡುವ ಮೊದಲು ಸೂಕ್ತ ಚಿಂತನೆ ಮಾಡಿ. ಕುಟುಂಬದ ಹಿರಿಯರ ಮಾತನ್ನು ಕಡೆಗಣಿಸಬೇಡಿ. ಸಂಗ್ರಹಿಸಿದ ಹಣವನ್ನು ಉತ್ತಮ ಕಾರ್ಯಕ್ಕೆ ಬಳಸುವ ಅವಕಾಶ ದೊರೆಯಲಿದೆ. ಕೃತಜ್ಞತೆಯ ಮನೋಭಾವ ನಿಮ್ಮ ಗೌರವವನ್ನು ಹೆಚ್ಚಿಸಲಿದೆ.

ತುಲಾ: ನೀವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಆದರೆ ನಿಮ್ಮ ಮಾತುಗಳ ಬಗ್ಗೆ ಇತರರು ಅನುಮಾನ ಪಡಬಹುದು. ಶ್ರಮ ಹೆಚ್ಚಾಗಲಿದೆ. ಇತರರ ನೋವಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳುವುದು ಒಳಿತು.

ವೃಶ್ಚಿಕ: ಸಹಾಯ ಮಾಡುವ ಉದ್ದೇಶದಿಂದ ಕೊಟ್ಟ ಹಣ ಮರಳಿ ಸಿಗದ ಸಾಧ್ಯತೆ ಇದೆ. ಹಳೆಯ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ಸು ಕಾಣುವಿರಿ. ಅಧಿಕಾರವನ್ನು ಜವಾಬ್ದಾರಿಯಿಂದ ಬಳಸುವುದು ಉತ್ತಮ. ಎಲ್ಲರ ಅಭಿಪ್ರಾಯಕ್ಕೂ ಗೌರವ ನೀಡಬೇಕು.

ಧನು: ಉದ್ಯೋಗ ಕ್ಷೇತ್ರದಲ್ಲಿ ವೇಗವಾಗಿ ಕೆಲಸಗಳು ಸಾಗಲಿವೆ. ಮನೆಯ ದುರಸ್ತಿ ಕಾರ್ಯಗಳು ನಡೆಯಬಹುದು. ಆತುರದ ನಿರ್ಧಾರಗಳಿಂದ ನಷ್ಟ ಉಂಟಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಅಹಂಕಾರವನ್ನು ದೂರವಿಡುವುದು ಉತ್ತಮ.

ಮಕರ: ಭಯ ಮತ್ತು ಆತಂಕ ನಿಮ್ಮನ್ನು ಕಾಡಬಹುದು. ವಿವಾಹ ಮಾತುಕತೆಯಲ್ಲಿ ಮಾತಿನ ಎಚ್ಚರಿಕೆ ಅಗತ್ಯ. ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದ್ದರೂ ಸಾಲದ ಹೊರೆ ಸ್ವಲ್ಪ ಕಡಿಮೆಯಾಗಬಹುದು. ಉನ್ನತ ಶಿಕ್ಷಣದ ಯೋಜನೆ ಮುಂದೂಡಬೇಕಾಗಬಹುದು.

ಕುಂಭ: ಸರ್ಕಾರಿ ಉದ್ಯೋಗದತ್ತ ಪ್ರಯತ್ನ ಮಾಡುವವರಿಗೆ ಅನುಕೂಲಕರ ದಿನ. ನಿಮ್ಮ ಬೆಳವಣಿಗೆಯನ್ನು ಕಂಡು ಕೆಲವರು ಅಸೂಯೆ ಪಡಬಹುದು. ತಾಯಿಯಿಂದ ಆರ್ಥಿಕ ಸಹಾಯ ದೊರೆಯಬಹುದು. ವ್ಯಾಪಾರದಲ್ಲಿ ಸಣ್ಣ ಮಟ್ಟಿನ ನಷ್ಟ ಕಂಡುಬರುವ ಸಾಧ್ಯತೆ ಇದೆ.

ಮೀನ: ನಿಮ್ಮನ್ನು ಭೇಟಿ ಮಾಡುವವರೊಂದಿಗೆ ಸೌಜನ್ಯದಿಂದ ವರ್ತಿಸಿ. ದೀರ್ಘಕಾಲದ ಕನಸೊಂದು ನನಸಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಜೀವನಶೈಲಿಯಲ್ಲಿ ಉತ್ತಮ ಬದಲಾವಣೆಗಳನ್ನು ಆರಂಭಿಸಲು ಇದು ಸೂಕ್ತ ಸಮಯ. ಒತ್ತಡದಿಂದ ಹೊರಬರಲು ಧನಾತ್ಮಕ ಚಿಂತನೆ ಸಹಕಾರಿಯಾಗಲಿದೆ.

Exit mobile version