ಇಂದು ನಾಜೂಕುತನ, ಅಮೂಲ್ಯ ವಸ್ತು ಕಳೆದುಕೊಳ್ಳುವ ಭಯ, ವಿಶ್ವಾಸಘಾತ, ಒಂಟಿತನ, ಉದ್ಯೋಗ ಚಿಂತೆ – ಆದರೆ ಅದೇ ಸಮಯದಲ್ಲಿ ಹಲವು ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯುತ್ತಿದೆ.
ಮೇಷ ರಾಶಿ
ಮನೆಯಿಂದ ಪ್ರೀತಿ-ವಾತ್ಸಲ್ಯ ಸಿಗಲಿದೆ. ಹಣಕಾಸು ಸಾಮಾನ್ಯ ಲಾಭ. ದೇಹಕ್ಕೆ ವಿಶ್ರಾಂತಿ ಬೇಕು. ಖರ್ಚು ಸ್ವಲ್ಪ ಹೆಚ್ಚು. ವಾಹನ ಖರೀದಿ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ. ಸ್ತ್ರೀಯರಿಗೆ ವಿಶೇಷ ಲಾಭ. ಆಧ್ಯಾತ್ಮಿಕ ಚಿಂತನೆಯಿಂದ ಮನಸ್ಸಿಗೆ ಬಲ.
ವೃಷಭ ರಾಶಿ
ಉತ್ಸಾಹ ತುಂಬಿದ ದಿನ ಆರ್ಥಿಕವಾಗಿ ನೆಮ್ಮದಿ. ಸಂಬಂಧಗಳಲ್ಲಿ ಸ್ಪಷ್ಟತೆ ಬೇಕು. ಸೃಜನಶೀಲತೆಯಿಂದ ಅಚ್ಚರಿ. ಹೊಸ ಕಲ್ಪನೆಗಳು ಯಶಸ್ಸು ತಂದೊಡ್ಡುತ್ತವೆ. ಆದರೆ ವಿಶ್ವಾಸಘಾತದಿಂದ ಸ್ವಲ್ಪ ನೋವು ಸಾಧ್ಯ.
ಮಿಥುನ ರಾಶಿ
ಮಿತವ್ಯಯ ಮುಖ್ಯ. ಕಚೇರಿಯಲ್ಲಿ ಒತ್ತಡ. ಸರ್ಕಾರಿ ಕೆಲಸಕ್ಕೆ ತೊಂದರೆ. ಪತ್ನಿಯಿಂದ ದೂಷಣೆ ಸಾಧ್ಯ. ಆದರೆ ಪ್ರಾಮಾಣಿಕತೆಗೆ ಒಳ್ಳೆಯ ಫಲ ಕಾಣುತ್ತದೆ.
ಕರ್ಕಾಟಕ ರಾಶಿ
ಕಚೇರಿಯ ಕ್ಲೇಶ ಕಡಿಮೆಯಾಗುತ್ತದೆ. ಪ್ರಯಾಣ ಲಾಭದಾಯಕ. ಭೂಮಿ ವ್ಯವಹಾರಕ್ಕೆ ಉತ್ತಮ ದಿನ. ಮಕ್ಕಳಿಂದ ಶುಭ ಸುದ್ದಿ. ಸ್ನೇಹಿತರಿಂದ ಕಠೋರ ಮಾತು ಕೇಳಬಹುದು.
ಸಿಂಹ ರಾಶಿ
ರಹಸ್ಯ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಸಾಲದ ಹಣ ವಾಪಸ್. ಸಂಗಾತಿಯ ಜೊತೆ ಬಾಂಧವ್ಯ ಗಟ್ಟಿಯಾಗುತ್ತದೆ. ಆದರೆ ಆರೋಗ್ಯದಲ್ಲಿ ಸ್ವಲ್ಪ ತೊಂದರೆ.
ಕನ್ಯಾ ರಾಶಿ
ವಿದ್ಯಾರ್ಥಿಗಳಿಗೆ ಪ್ರಶಂಸೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ಮಕ್ಕಳಿಂದ ತೊಂದರೆ ಸಾಧ್ಯ. ಮಾನಸಿಕ ಸಮತೋಲನ ಕಾಪಾಡಿ. ವ್ಯವಹಾರವನ್ನು ಸಂಗಾತಿಗೆ ಬಿಟ್ಟರೆ ಒಳ್ಳೆಯದು.
ತುಲಾ ರಾಶಿ
ಒತ್ತಡಗಳನ್ನು ಬದಿಗಿಟ್ಟು ನಿರಾಳವಾಗಿರಿ. ಸಹೋದ್ಯೋಗಿಗಳ ಜೊತೆ ವೈಮನಸ್ಯ ಸಾಧ್ಯ. ಭೂಮಿ ವಿಚಾರದಲ್ಲಿ ಸ್ವಲ್ಪ ನಷ್ಟ. ಮಾನಸಿಕ ಶಾಂತಿ ಲಭಿಸುತ್ತದೆ.
ವೃಶ್ಚಿಕ ರಾಶಿ
ಹೊಸ ಅವಕಾಶಗಳು ಬಾಗಿಲು ತಟ್ಟುತ್ತವೆ. ಮನೆಯಲ್ಲಿ ಗೌರವ. ನಾಯಕತ್ವ ಗುಣ ಮಿಂಚುತ್ತದೆ. ಮಕ್ಕಳ ಸುಖ. ಅಧಿಕಾರವನ್ನು ಸದುಪಯೋಗ ಮಾಡಿಕೊಳ್ಳಿ.
ಧನು ರಾಶಿ
ಶುಭಕಾರ್ಯದಲ್ಲಿ ಭಾಗಿ. ಸಂಗಾತಿಯ ಮನಸ್ಥಿತಿ ಬದಲಾವಣೆ ಸಮಸ್ಯೆ ತರುವುದು. ಆದರೆ ಕೆಲಸದಲ್ಲಿ ಒಳ್ಳೆಯ ಸುದ್ದಿ. ಭಾವನಾತ್ಮಕ ಸ್ಥಿರತೆ ಬೇಕು.
ಮಕರ ರಾಶಿ
ನಾಜೂಕ ಕೆಲಸದಲ್ಲಿ ಮೆಚ್ಚುಗೆ. ಹಳೆಯ ವಿರೋಧಿಗಳು ಮತ್ತೆ ತಲೆ ಎತ್ತಬಹುದು. ಸಂವಹನದಿಂದ ಲಾಭ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ.
ಕುಂಭ ರಾಶಿ
ಕುಟುಂಬದಲ್ಲಿ ಸೌಹಾರ್ದತೆ. ಪ್ರೀತಿಪಾತ್ರರ ಜೊತೆ ಆಪ್ತ ಸಮಯ. ಸಹನೆಯೇ ಬಲ. ಹಳೆಯ ಸಮಸ್ಯೆಗೆ ಪರಿಹಾರ. ಸಂಪತ್ತು ನಷ್ಟದ ಬಗ್ಗೆ ಎಚ್ಚರ.
ಮೀನ ರಾಶಿ
ಭಾವನೆಗಳು ತೀವ್ರವಾಗುತ್ತವೆ. ಆರ್ಥಿಕವಾಗಿ ಉತ್ತಮ. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ. ಹೊಸ ಯೋಜನೆ ಆರಂಭಿಸಲು ಶುಭ ದಿನ.
ಇಂದು ವಿಶೇಷ ಸಲಹೆ: ಇಂದು ಹಲವು ರಾಶಿಗಳಿಗೆ ಸ್ತ್ರೀಯರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಅತು ಅತೀವ ಅಗತ್ಯ. ಸ್ವಲ್ಪ ತಾಳ್ಮೆ, ಸ್ವಲ್ಪ ಸಮಜಾಯಿಷಿ ದಿನವನ್ನು ಸುಗಮಗೊಳಿಸುತ್ತದೆ.
