ಫೆಬ್ರವರಿ 24, 2026ರ ಮಂಗಳವಾರದ ರಾಶಿ ಭವಿಷ್ಯ ಇಲ್ಲಿದೆ. ಎಲ್ಲಾ 12 ರಾಶಿಗಳಿಗೆ ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯದ ಕುರಿತು ವಿಶೇಷ ಒಳನೋಟಗಳು. ಜ್ಯೋತಿಷ್ಯದ ಮಾರ್ಗದರ್ಶನದೊಂದಿಗೆ ಇಂದಿನ ದಿನವನ್ನು ಉತ್ತಮಗೊಳಿಸಿಕೊಳ್ಳಿ. ಯಾವ ಅವಕಾಶಗಳನ್ನು ಬಳಸಿಕೊಳ್ಳಬೇಕು, ಯಾವ ವಿಷಯಗಳಲ್ಲಿ ಎಚ್ಚರ ವಹಿಸಬೇಕು ಎಂಬುದನ್ನು ತಿಳಿಯಿರಿ.
ಮೇಷ ರಾಶಿ :
ಇಂದು ಆಪಾಯದ ಸೂಚನೆ ಗಮನಿಸಿ. ವ್ಯಾಪಾರವನ್ನು ಅಚ್ಚುಕಟ್ಟಾಗಿ ಮುಗಿಸುವ ಕೌಶಲ ನಿಮ್ಮಲ್ಲಿದೆ. ಹೂಡಿಕೆಯ ವಿಚಾರದಲ್ಲಿ ಯಾರಾದರೂ ದಾರಿ ತಪ್ಪಿಸಬಹುದು ಎಚ್ಚರ. ಬೇರೆ ಕ್ಷೇತ್ರದ ಉದ್ಯಮಿಗಳ ಭೇಟಿ, ಭೂಮಿ ಖರೀದಿಗೆ ಸೂಕ್ತ ಸಮಯ. ಸಂಗಾತಿಯ ಮಾತಿನಿಂದ ನೆಮ್ಮದಿ ಕಳೆದುಕೊಳ್ಳಬಹುದು. ಯೋಗ ಮಾಡಿ ಮನಸ್ಸಿನ ಚಾಂಚಲ್ಯ ನಿವಾರಿಸಿ.
ವೃಷಭ ರಾಶಿ :
ಯಾರ ಜೊತೆಗೂ ಮುಚ್ಚುಮರೆ ಇಲ್ಲದೇ ಸರಿಯಾಗಿ ಹೇಳಿ. ದೈವದ ಮೇಲಿನ ನಂಬಿಕೆ ಸತ್ಯವಾಗುತ್ತದೆ. ಕೃಷಿ ಉತ್ಪನ್ನ ಮಾರಾಟಕ್ಕೆ ಒಳ್ಳೆಯದು. ಖರ್ಚು-ಆದಾಯ ಸಮಾನ. ಮಿತಿಮೀರಿದ ಆಸೆಗೆ ಕಡಿವಾಣ ಹಾಕಿ. ನೀವು ಹೋದಲ್ಲಿ ವಾತಾವರಣವನ್ನು ನಿಮ್ಮ ಹಾಗೆ ಸೃಷ್ಟಿಸುತ್ತೀರಿ.
ಮಿಥುನ ರಾಶಿ :
ದಕ್ಷ ಕಾರ್ಯ ಎಲ್ಲರಿಗೂ ಮಾದರಿ. ವಿನಯಶೀಲತೆ ಬೆಳೆಸಿ. ಅನಗತ್ಯ ಅಲೆದಾಟ ನಿಲ್ಲಿಸಿ ಕಾರ್ಯದಲ್ಲಿ ಮಗ್ನರಾಗಿ. ಸುಳ್ಳು ಮಾತುಗಳಿಗೆ ಇಷ್ಟವಿಲ್ಲ. ಕಲಾವಿದರು ಪ್ರಶಂಸೆಗೆ ಪಾತ್ರರು. ಹಣವಿದ್ದರೂ ಸಮಯಕ್ಕೆ ಸರಿಯಾಗಿ ಸಿಗದೆ ಸಾಲ ಮಾಡಬೇಕಾಗಬಹುದು.
ಕರ್ಕಾಟಕ ರಾಶಿ :
ನಿಂತ ಕಾರ್ಯಕ್ಕೆ ಚಾಲನೆ. ನಿದ್ರೆ ಇಲ್ಲದೆ ಮಾನಸಿಕವಾಗಿ ಕುಗ್ಗುವಿರಿ. ಸ್ಪರ್ಧೆಯ ಶ್ರಮ ವ್ಯರ್ಥವಾಗಬಹುದು. ಸದಾ ಅನುಮಾನದಿಂದ ಇರುವುದು. ಗೌರವಕ್ಕೆ ತೊಂದರೆಯಾಗುವ ಕಡೆ ಹೋಗಬೇಡಿ.
ಸಿಂಹ ರಾಶಿ :
ಎಲ್ಲವೂ ಆಗಿಹೋದಂತೆ ಅನಿಸಬಹುದು. ಹಳೆಯರ ಬಗ್ಗೆ ಆಲೋಚನೆ ಬೇಡ. ಸ್ನೇಹಿತರೊಂದಿಗೆ ಪ್ರವಾಸ ಸಂಭವ. ಸಂತಾನ ವಿಚಾರದಲ್ಲಿ ಅಶಾಂತಿ. ಸಣ್ಣ ವಿಷಯಕ್ಕೆ ದ್ವೇಷ ಮಾಡಬೇಡಿ. ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚು ಶ್ರಮ ಬೇಕು.
ಕನ್ಯಾ ರಾಶಿ :
ವ್ಯಾಪಾರ ಸ್ಥಳದಲ್ಲಿ ಇಕ್ಕಟ್ಟು. ತಾಳ್ಮೆ ಕಳೆದುಕೊಳ್ಳಬೇಡಿ. ಅನಾರೋಗ್ಯದಿಂದ ಉತ್ಸಾಹ ಕಡಿಮೆ. ದಿನದ ಕೆಲಸಗಳು ಅಪೂರ್ಣವಾಗಿ ಅಸಮಾಧಾನ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಿ.
ತುಲಾ ರಾಶಿ :
ಪಾಲುದಾರಿಕೆ ಭೂ ಸಂಬಂಧದ ಕಾರ್ಯದಿಂದ ಲಾಭ. ದಾಂಪತ್ಯದಲ್ಲಿ ಸೌಹಾರ್ದ. ಮಕ್ಕಳ ವಿಚಾರದಲ್ಲಿ ಅನವಶ್ಯಕ ಖರ್ಚು ಬೇಡಿ. ಅಸತ್ಯವನ್ನು ಸರಳವಾಗಿ ಕಂಡುಹಿಡಿಯುವಿರಿ. ಸಮಯಕ್ಕೆ ಬೆಲೆ ಕೊಟ್ಟು ಕಾರ್ಯ ಮುಗಿಸಿ.
ವೃಶ್ಚಿಕ ರಾಶಿ :
ಮಿತ್ರರು ವರ್ತನೆ ವಿರೋಧಿಸಬಹುದು. ಅಮೂಲ್ಯ ವಸ್ತು ಖರೀದಿ ಕಷ್ಟವಾದರೂ ಮಾಡುವಿರಿ. ಬಂಧುಗಳ ಆಗಮನ. ವಿವಾಹ ಮಾತುಕತೆ ಘಟಿಸಬಹುದು. ಸಂಗಾತಿಯ ಮಾತುಗಳಿಂದ ಬೇಸರ.
ಧನು ರಾಶಿ :
ಆಸ್ತಿ ಮಾರಾಟಕ್ಕೆ ತಿರುಗಾಟ. ಮಕ್ಕಳ ವಿದ್ಯಾಭ್ಯಾಸ ಖರ್ಚು ಆರ್ಥಿಕತೆಗೆ ಹಿನ್ನಡೆ. ಹಳೆಯ ಸ್ನೇಹಿತರ ಭೇಟಿ. ಲಾಭ ಅರಿತು ಯೋಜನೆ ರೂಪಿಸಿ. ಮನಸ್ಸಿಗೆ ಒಪ್ಪಿಗೆಯಾದರೆ ಮಾತ್ರ ಮುಂದುವರಿಯಿರಿ.
ಮಕರ ರಾಶಿ :
ಸ್ತ್ರೀಯರಿಗೆ ಮಾನಸಿಕ ಕಿರಿಕಿರಿ. ಯಂತ್ರೋತ್ಪನ್ನಗಳಲ್ಲಿ ಹಿನ್ನಡೆ. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ. ಚರಾಸ್ತಿ ರಕ್ಷಣೆ ಕಷ್ಟ. ಸ್ವಾಭಿಮಾನಕ್ಕೆ ತೊಂದರೆ. ಸಂಗಾತಿಯ ಭಾವನೆಗಳಿಗೆ ಸ್ಪಂದಿಸಿ.
ಕುಂಭ ರಾಶಿ :
ಮಕ್ಕಳ ಗೊಂದಲ ದೂರ ಮಾಡಿ. ಆದಾಯಕ್ಕೆ ಹಲವು ಮೂಲಗಳು. ಆಕಸ್ಮಿಕ ಆರೋಗ್ಯ ಸಮಸ್ಯೆ. ವಿದೇಶ ವ್ಯವಹಾರದಲ್ಲಿ ಪಾಲುದಾರಿಕೆ. ಕಾರ್ಯಸ್ಥಳ ಬದಲಾವಣೆ ಸಾಧ್ಯತೆ. ಕೋಪ ವ್ಯರ್ಥ.
ಮೀನ ರಾಶಿ :
ವೈವಾಹಿಕ ಜೀವನಕ್ಕೆ ಸಲಹೆಗಳು. ದಾಂಪತ್ಯದ ಮೇಲೆ ಇತರರ ದೃಷ್ಟಿ. ಪಾಲುದಾರಿಕೆ ವಿಚಾರ ಇತ್ಯರ್ಥ ಮಾಡಿ. ಉನ್ನತ ವಿದ್ಯಾಭ್ಯಾಸಕ್ಕೆ ಹೊರಗಡೆ. ಶತ್ರುಗಳ ಭೇಟಿ. ಮಾತನಾಡುವಾಗ ಎಚ್ಚರ.
