ಸಂಖ್ಯಾಶಾಸ್ತ್ರದ ಪ್ರಕಾರ ಯಾವ ಜನ್ಮಸಂಖ್ಯೆಗೆ ಲಾಭ, ಯಾರಿಗೆ ಎಚ್ಚರಿಕೆ? ಇಲ್ಲಿದೆ ವಿವರ

Untitled design 2025 12 04T071408.916

ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆಯು ವ್ಯಕ್ತಿಯ ಸ್ವಭಾವ, ಆಲೋಚನೆ, ನಿರ್ಧಾರಗಳು ಹಾಗೂ ದಿನನಿತ್ಯದ ಘಟನೆಗಳ ಮೇಲೆ ಪ್ರಭಾವ ಬೀರುತ್ತದೆ ಎನ್ನಲಾಗುತ್ತದೆ. ಫೆಬ್ರವರಿ 10 ಮಂಗಳವಾರದ ದಿನ ಕೆಲವರಿಗೆ ಸಂತೋಷ, ಯಶಸ್ಸು ತರಬಹುದಾದರೆ, ಇನ್ನೂ ಕೆಲವರಿಗೆ ಎಚ್ಚರಿಕೆ ಅಗತ್ಯವಿರುವ ದಿನವಾಗಿರಲಿದೆ. ಹಣಕಾಸು, ಆರೋಗ್ಯ, ಕುಟುಂಬ, ಸಂಬಂಧಗಳು ಹಾಗೂ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಯಾವ ಜನ್ಮಸಂಖ್ಯೆಗೆ ಯಾವ ಫಲಿತಾಂಶಗಳು ಎದುರಾಗಲಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ರಂದು ಜನಿಸಿದವರು)

ಈ ದಿನ ಪ್ರಯಾಣ ಮಾಡುವವರಿಗೆ ವಿಶೇಷ ಎಚ್ಚರಿಕೆ ಅಗತ್ಯ. ಬೆಲೆಬಾಳುವ ವಸ್ತುಗಳು, ದಾಖಲೆಗಳು ಕಳೆದು ಹೋಗದಂತೆ ಗಮನ ವಹಿಸಿ. ಮನೆಯಲ್ಲಿರುವ ಪ್ರಮುಖ ದಾಖಲೆಗಳು ಸುರಕ್ಷಿತವಾಗಿವೆಯೇ ಎಂದು ಪರಿಶೀಲಿಸಿಕೊಳ್ಳುವುದು ಉತ್ತಮ. ದಾಖಲೆಗಳ ಕಾಳಜಿ ಇಂದು ಅತಿ ಮುಖ್ಯ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ರಂದು ಜನಿಸಿದವರು)

ಒಟ್ಟಾರೆ ಸಂತೋಷದ ದಿನವಾಗಿರಲಿದೆ. ಬಹುಕಾಲದ ನಂತರ ಪ್ರೀತಿಪಾತ್ರರನ್ನು ಭೇಟಿಯಾಗುವ ಅವಕಾಶ ದೊರೆಯಲಿದೆ. ಸ್ನೇಹಿತರಾಗಿರಬಹುದು ಅಥವಾ ಸಂಬಂಧಿಗಳಾಗಿರಬಹುದು. ಅವರ ಜೊತೆ ಕಳೆದ ಸಮಯ ಮನಸ್ಸಿಗೆ ತೃಪ್ತಿ ನೀಡಲಿದೆ. ಧನಾತ್ಮಕ ಚಿಂತನೆಗಳು ಹೆಚ್ಚಾಗಿ ದಿನವಿಡೀ ಖುಷಿಯ ಮನಸ್ಥಿತಿಯಲ್ಲಿ ಇರುತ್ತೀರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ರಂದು ಜನಿಸಿದವರು)

ಹಿಂದಿನ ಕೆಲವು ಘಟನೆಗಳು ನಿಮ್ಮ ಜೀವನದಲ್ಲಿ ಮಹತ್ವದ ಬದಲಾವಣೆ ತರಲಿದೆ. ನಿಮ್ಮ ಸಿದ್ಧತೆ ಹಾಗೂ ಆತ್ಮವಿಶ್ವಾಸ ಇತರರ ಮೆಚ್ಚುಗೆಗೆ ಪಾತ್ರವಾಗಲಿದೆ. ವಿವಾಹ ಯೋಚನೆಯಲ್ಲಿ ಇರುವವರಿಗೆ ಮ್ಯಾಟ್ರಿಮೋನಿ ವೆಬ್‌ಸೈಟ್ ಅಥವಾ ವಧು-ವರರ ಸಮಾವೇಶಗಳ ಮೂಲಕ ಸೂಕ್ತ ಸಂಬಂಧ ದೊರೆಯುವ ಯೋಗವಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ರಂದು ಜನಿಸಿದವರು)

ಇಷ್ಟು ದಿನ ಇತರರಿಗಾಗಿ ಕೆಲಸ ಮಾಡುತ್ತಿದ್ದವರಿಗೆ ಜನರ ವರ್ತನೆ ಬಗ್ಗೆ ಗೊಂದಲ ಶುರುವಾಗಬಹುದು. ಕೆಲಸ ಮುಗಿದ ನಂತರ ಜನರು ಬದಲಾಗುತ್ತಿದ್ದಾರೆ ಎಂಬ ಭಾವನೆ ಬಲವಾಗುತ್ತದೆ. ಇದರಿಂದ ನೀವು ಹೆಚ್ಚು ವಾಸ್ತವಿಕವಾಗಿ ಹಾಗೂ ಎಲ್ಲ ಸಾಧ್ಯತೆಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಲು ಆರಂಭಿಸುತ್ತೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ರಂದು ಜನಿಸಿದವರು)

“ಇಷ್ಟು ದಿನ ಬೇರೆ, ಇಂದಿನಿಂದ ಬೇರೆ” ಎಂಬ ಮನೋಭಾವನೆ ಮೂಡಲಿದೆ. ಆದಾಯ ನಿರೀಕ್ಷಿತ ಮಟ್ಟಕ್ಕೆ ಇಲ್ಲದಿರುವುದು, ಕೆಲಸದ ವೇಗ ಕಡಿಮೆಯಾಗಿರುವುದು ಯಾಕೆ ಎಂಬುದನ್ನು ಆಲೋಚಿಸಿ, ನಿಮ್ಮ ಜೀವನಶೈಲಿ ಮತ್ತು ಕಾರ್ಯವಿಧಾನದಲ್ಲಿ ಬದಲಾವಣೆ ಮಾಡುವ ನಿರ್ಧಾರಕ್ಕೆ ಬರಬಹುದು.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ರಂದು ಜನಿಸಿದವರು)

ನವವಿವಾಹಿತರಿಗೆ ಕುಟುಂಬದ ಜೊತೆ ಸಮಯ ಕಳೆಯುವ ಅವಕಾಶ. ಸಿನಿಮಾ, ರೆಸ್ಟೋರೆಂಟ್ ಅಥವಾ ರೆಸಾರ್ಟ್‌ಗೆ ತೆರಳುವ ಯೋಗವಿದೆ. ಕೆಲವರಿಗೆ ಕಿರು ಪ್ರವಾಸವೂ ಸಾಧ್ಯ. ಆದರೆ ಮಕ್ಕಳ ಹಾಗೂ ಮನೆಯ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸುವುದು ಒಳಿತು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ರಂದು ಜನಿಸಿದವರು)

ಸಾಲಕ್ಕೆ ಸಂಬಂಧಿಸಿದ ಒತ್ತಡ ಎದುರಾಗಬಹುದು. ನೀವು ಹಿಂದೆಯೇ ನಿಧಾನವಾಗಿ ಕೊಟ್ಟ ಹಣವನ್ನು ಕೆಲವು ಮಂದಿ ತುರ್ತಾಗಿ ಹಿಂದಿರುಗಿಸಲು ಕೇಳಬಹುದು. ಯಾರಿಗೆ ಹೇಗೆ ಉತ್ತರಿಸಬೇಕು ಎಂಬ ಗೊಂದಲ ಮನಸ್ಸನ್ನು ಕಾಡಬಹುದು. ಶಾಂತವಾಗಿ ನಿರ್ಧಾರ ತೆಗೆದುಕೊಳ್ಳಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ರಂದು ಜನಿಸಿದವರು)

ಹಣಕಾಸಿನ ಒತ್ತಡ ಹೆಚ್ಚಾಗಬಹುದು. ಬ್ಯಾಂಕ್ ಸಾಲ ಅಥವಾ ಚಿನ್ನ ಅಡಮಾನ ಮಾಡುವ ಸಂದರ್ಭ ಎದುರಾಗಬಹುದು. ರಕ್ತದೊತ್ತಡದ ಸಮಸ್ಯೆ ಇರುವವರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಸ್ವಯಂ ವೈದ್ಯೋಪಚಾರಕ್ಕಿಂತ ತಜ್ಞರ ಸಲಹೆ ಪಡೆಯುವುದು ಉತ್ತಮ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ರಂದು ಜನಿಸಿದವರು)

ಆತುರ ಮತ್ತು ಒತ್ತಡದಿಂದ ತಪ್ಪುಗಳಾಗದಂತೆ ಎಚ್ಚರಿಕೆ ಅಗತ್ಯ. ವಾಹನ ಚಾಲನೆ ಮಾಡುವವರು ವಿಶೇಷವಾಗಿ ಜಾಗರೂಕರಾಗಿರಬೇಕು. ಚೀಟಿ ಅಥವಾ ಹೂಡಿಕೆಗಳಲ್ಲಿ ಹಣ ಹಾಕಿರುವವರು ಸರಿಯಾದ ಸಮಯಕ್ಕೆ ಹಣ ಪಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ನಿರ್ಧಾರ ಮಾಡುತ್ತಾರೆ.

Exit mobile version