24 ಡಿಸೆಂಬರ್ 2025, ತಿಥಿ: ಪಂಚಮಿ, ನಕ್ಷತ್ರ: ಮೂಲಾ, ಧನಿಷ್ಠ,ಯೋಗ: ವಜ್ರ, ಶುಭ ಕಾಲ: ಸೂರ್ಯೋದಯ ಬೆಳಗ್ಗೆ 06:47 AM, ರಾಹುಕಾಲ: ಮಧ್ಯಹ್ನ 01:49 ರಿಂದ 03:13ರ ವರಗೆ.
ಮೇಷ: ಧಾರ್ಮಿಕ ಶ್ರದ್ಧೆ ಶಾಂತಿ ನೀಡುತ್ತದೆ. ಆಸ್ತಿ ರಕ್ಷಣೆಗೆ ಕ್ರಮ ಕೈಗೊಳ್ಳಿ. ವೃತ್ತಿ ಸ್ಥಳದಲ್ಲಿ ಬದಲಾವಣೆ ಇರಲಿದೆ. ಸ್ನೇಹಿತನ ಮಾತಿನಿಂದ ಹಣ ಕೊಡಬೇಕಾದ ಸಂದರ್ಭ ಬರಬಹುದು. ನಿಮ್ಮ ವಸ್ತುಗಳನ್ನು ಜಾಗರೂಕತೆಯಿಂದ ರಕ್ಷಿಸಿಕೊಳ್ಳಿ.
ವೃಷಭ: ನೀವು ಮಂಡಿಸುವ ವಿಚಾರದಲ್ಲಿ ಭಿನ್ನತೆ ಕಾಣಿಸಬಹುದು. ಧಾರ್ಮಿಕ ಮುಖಂಡತ್ವ ವಹಿಸಬೇಕಾಗಬಹುದು. ಸೇವಾ ಕಾರ್ಯಗಳಿಂದ ಗುರುತಿಸಲ್ಪಡುವಿರಿ. ಒಳಜಗಳ ಬೀದಿಗೆ ಬರಬಹುದು.
ಮಿಥುನ: ದೀರ್ಘಕಾಲದ ಹೂಡಿಕೆ, ಗೃಹನಿರ್ಮಾಣ ಯೋಜನೆಗಳ ಮೇಲೆ ಗಮನ. ಸ್ಪರ್ಧೆಯಲ್ಲಿ ಶ್ರಮ ಫಲಿಸಲಿದೆ. ತುರ್ತು ಹಣದ ಅಗತ್ಯ ಕಾಡಬಹುದು. ಯಾವ ಕಾರಣಕ್ಕೂ ಸಾಲ ಮಾಡಲು ಹೋಗಬೇಡಿ.
ಕರ್ಕಾಟಕ: ಕುಟುಂಬದಲ್ಲಿ ವಿಚಾರಭೇದದಿಂದ ಅಸಮಾಧಾನ. ಆಸ್ತಿ ಸ್ಥಿರತೆಗೆ ನಿಶ್ಚಯ ಮಾಡಿಕೊಳ್ಳಿ. ಹೂಡಿಕೆ ವಿಸ್ತರಣೆ ಯೋಚಿಸಬಹುದು. ಗೃಹನಿರ್ಮಾಣ ಶುಭಾರಂಭ. ವಿವಾಹ ವಿಚಾರದಲ್ಲಿ ನಿಮ್ಮ ನಿರ್ಧಾರ ಸ್ಪಷ್ಟವಾಗಿರಲಿ.
ಸಿಂಹ: ಗುಪ್ತ ವಿರೋಧದಿಂದ ಬೇಸರ. ಸೇವೆಯಿಂದ ಆತ್ಮಶಕ್ತಿ ಜಾಗೃತಗೊಳ್ಳುತ್ತದೆ. ಪಕ್ಷಪಾತದಿಂದ ಒಂಟಿತನ ಅನುಭವಿಸಬಹುದು. ಗೃಹನಿರ್ಮಾಣ ವಿಳಂಬವಾಗುತ್ತದೆ.
ಕನ್ಯಾ: ಆಸ್ತಿ ವಿಚಾರದಲ್ಲಿ ಸಂಧಾನ ಸಾಧ್ಯ. ಹೂಡಿಕೆಯಿಂದ ಸಮಾಧಾನಕರ ಲಾಭ. ಗೃಹನಿರ್ಮಾಣ ಚರ್ಚೆ ನಡೆಯಬಹುದು. ಸ್ನೇಹಿತರ ವಿವಾಹದಲ್ಲಿ ನೀವು ಮುಖ್ಯ ಪಾತ್ರ ವಹಿಸಬಹುದು. ಹಣಕಾಸಿನ ದಾಖಲೆಗಳನ್ನು ಜೋಪಾನವಾಗಿಡಿ.
ತುಲಾ: ಸಣ್ಣ ವಿಷಯಗಳಿಂದ ಮನಸ್ತಾಪ. ಸೇವೆಯಿಂದ ಪ್ರಶಂಸೆ. ಆಸ್ತಿ ಲೆಕ್ಕಾಚಾರ ಮುಖ್ಯ. ಕಛೇರಿಯ ಕಾರ್ಯ ಕುಂಟುತ್ತ ಸಾಗಬಹುದು. ಆಮಿಷಕ್ಕೆ ಒಳಗಾಗಿ ಸಿಕ್ಕಿಬೀಳಬಹುದು.
ವೃಶ್ಚಿಕ: ಸೇವೆಯಿಂದ ನಾಯಕತ್ವ ಪ್ರಾಪ್ತಿ. ಹೂಡಿಕೆಯಲ್ಲಿ ಲಾಭದ ಸೂಚನೆ. ಸ್ಪರ್ಧೆಯಲ್ಲಿ ಮೇಲುಗೈ. ಮಕ್ಕಳ ವಿಷಯದಲ್ಲಿ ಅಸಮಾಧಾನ. ಸಂಗಾತಿಯೊಂದಿಗೆ ವಾಗ್ವಾದ ಆಗಬಹುದು.
ಧನು: ಆಸ್ತಿ ರಕ್ಷಣೆಗೆ ಕ್ರಮ. ಹೂಡಿಕೆ ದೀರ್ಘಾವಧಿಗೆ ಒಳ್ಳೆಯದು. ಗೃಹನಿರ್ಮಾಣ ತಾತ್ಕಾಲಿಕ ನಿಲ್ಲಬಹುದು. ಭಾವನಾತ್ಮಕವಾಗಿ ಭೇದಭಾವ ನೋವು ಕೊಡಬಹುದು. ಧಾರ್ಮಿಕ ಆಚರಣೆ ಧೈರ್ಯ ನೀಡುತ್ತದೆ.
ಮಕರ: ಮಾತಿನಲ್ಲಿ ಭೇದಭಾವದ ಅನುಭವ. ಸೇವಾಭಾವದಿಂದ ಸ್ನೇಹ ವೃದ್ಧಿ. ಸಾಲ ತೀರಿಸಲು ಯೋಜನೆ ಮಾಡಿ. ಹೂಡಿಕೆಯಲ್ಲಿ ಅಪಾಯ ತಪ್ಪಿಸಿ.
ಕುಂಭ: ಸೇವೆಯಿಂದ ಮನಸ್ಸಿಗೆ ನಿಶ್ಚಲತೆ. ಆಸ್ತಿ ವಿಷಯದಲ್ಲಿ ಕುಟುಂಬದ ಬೆಂಬಲ. ಗೃಹ ಯೋಜನೆ ರೂಪುಗೊಳ್ಳುತ್ತದೆ. ಧನಸಂಪಾದನೆಯ ಚಿಂತೆ ಇರಬಹುದು.
ಮೀನ: ಭೇದಭಾವದಿಂದ ಮನಸ್ಸು ಕಲುಷಿತ. ಧಾರ್ಮಿಕ ಆಚರಣೆ ಶಾಂತಿ ನೀಡುತ್ತದೆ. ಆಸ್ತಿ ರಕ್ಷಣೆ ಅಗತ್ಯ. ಧಾರ್ಮಿಕ ಕಾರ್ಯಗಳಿಂದ ಹಣ ಸಂಪಾದನೆಯಾಗಬಹುದು. ನಿಮ್ಮ ಮಾತಿನಿಂದ ಕುಟುಂಬದ ಸಮಸ್ಯೆ ದೂರಾಗಬಹುದು.
