ಸಂಖ್ಯಾಶಾಸ್ತ್ರದ ಪ್ರಕಾರ ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ? ಇಲ್ಲಿ ತಿಳಿಯಿರಿ

Untitled design (5)

1. ಜನ್ಮಸಂಖ್ಯೆ 1 (1, 10, 19, 28ನೇ ತಾರೀಕು ಹುಟ್ಟಿದವರು)
ನಿಮ್ಮ ಆಲೋಚನೆಗಳಿಗೆ ಈ ದಿನ ಮನ್ನಣೆ ದೊರೆಯಲಿದೆ. ಇದುವರೆಗೆ ನಿಮ್ಮ ಅಭಿಪ್ರಾಯಕ್ಕೆ ಬೆಲೆ ಕೊಡದವರಿಗೆ ಈ ದಿನ ನಿಮ್ಮ ಸಾಮರ್ಥ್ಯವನ್ನು ತೋರಿಸುವ ಅವಕಾಶ ಸಿಗಲಿದೆ. ಆಸ್ತಿ ವ್ಯವಹಾರದಲ್ಲಿ ಒಳ್ಳೆಯ ಲಾಭ ಸಿಗಬಹುದು, ಕೆಲವರಿಗೆ ನಿರೀಕ್ಷೆಗಿಂತ ಹೆಚ್ಚಿನ ಬೆಲೆ ದೊರೆಯಬಹುದು. ಹಳೆಯ ಸ್ನೇಹಿತರಿಂದ ಸಿಗುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. ವ್ಯಾಪಾರಕ್ಕೆ ಸಂಬಂಧಿಸಿದ ಯಾವುದೇ ಅವಕಾಶದ ಬಗ್ಗೆ ತಕ್ಷಣ ಸ್ಪಂದಿಸಿ. ಯಾವುದೇ ಕಾರಣಕ್ಕೂ “ನಂತರ ನೋಡಿಕೊಳ್ಳೋಣ” ಎಂಬ ಧೋರಣೆಯನ್ನು ಬಿಡಿ.

2. ಜನ್ಮಸಂಖ್ಯೆ 2 (2, 11, 20, 29ನೇ ತಾರೀಕು ಹುಟ್ಟಿದವರು)
ಈ ದಿನ ನಿಮ್ಮ ಪ್ರಯತ್ನಗಳಿಗೆ ಯಶಸ್ಸು ಖಚಿತ. ಹಣಕಾಸಿನ ವಿಷಯದಲ್ಲಿ ಇತರರ ಪರವಾಗಿ ಮಾತನಾಡಿದರೆ ಒಳ್ಳೆಯ ಫಲಿತಾಂಶ ಸಿಗಲಿದೆ. ನಿಮ್ಮ ಪ್ರಭಾವ ಹೆಚ್ಚಲಿದೆ. ಮಕ್ಕಳಿಗಾಗಿ ವಾಹನ ಖರೀದಿ ಅಥವಾ ಪ್ರವಾಸ ಯೋಜನೆ ಮಾಡುವ ಸಾಧ್ಯತೆ ಇದೆ. ಕೆಲವರು ಪ್ರವಾಸದ ಸೀಟು ಬುಕ್ ಮಾಡಬಹುದು. ಸಂಗಾತಿಯ ಕಡೆಯಿಂದ ಸಂಬಂಧಿಕರಿಗೆ ಸಹಾಯ ಮಾಡುವ ಜವಾಬ್ದಾರಿ ಬರಬಹುದು. ಈಗಿನ ಉದ್ಯೋಗದ ಜೊತೆಗೆ ಹೊಸ ವ್ಯಾಪಾರದ ಬಗ್ಗೆ ಯೋಚಿಸುವಿರಿ.

3. ಜನ್ಮಸಂಖ್ಯೆ 3 (3, 12, 21, 30ನೇ ತಾರೀಕು ಹುಟ್ಟಿದವರು)
ನಿಮ್ಮ ಯೋಜನೆಗಳ ಬಗ್ಗೆ ಇತರರಿಗೆ ಗೊತ್ತಾಗುವುದು ತೊಂದರೆಯಾಗಬಹುದು. ಯಾರು ಅಡೆತಡೆ ಮಾಡುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ಸಮಯ ಹಿಡಿಯಬಹುದು. ಆಪ್ತರ ಬಗ್ಗೆ ಗೊಂದಲದ ಆಲೋಚನೆಗಳು ಮೂಡಬಹುದು. ಕೆಲಸದ ಜವಾಬ್ದಾರಿಗಳನ್ನು ಒಪ್ಪಿಕೊಳ್ಳುವ ಮುನ್ನ ಎಚ್ಚರಿಕೆಯಿಂದ ಯೋಚಿಸಿ. ಒಮ್ಮೆ ಒಪ್ಪಿಕೊಂಡರೆ, ಒತ್ತಡ ಹೆಚ್ಚಾಗಬಹುದು. ಹಣಕಾಸಿನ ವಿಷಯದಲ್ಲಿ ವಿಶೇಷ ಎಚ್ಚರಿಕೆ ವಹಿಸಿ.

4. ಜನ್ಮಸಂಖ್ಯೆ 4 (4, 13, 22, 31ನೇ ತಾರೀಕು ಹುಟ್ಟಿದವರು)
ನೀವು ಯಾವುದನ್ನು ಸಾಧಿಸಲು ಯತ್ನಿಸುತ್ತಿದ್ದೀರೋ ಅದು ಈ ದಿನ ಯಶಸ್ವಿಯಾಗಲಿದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ, ಒಳ್ಳೆಯ ಸಂಸ್ಥೆಯಿಂದ ಅವಕಾಶ ಸಿಗಬಹುದು. ಇತರರಿಗೆ ಕಷ್ಟಕರವಾದ ಕೆಲಸವನ್ನು ನೀವು ಸುಲಭವಾಗಿ ಮಾಡಿ ಮುಗಿಸುವಿರಿ. ಸಾಲಕ್ಕಾಗಿ ಶಿಫಾರಸು ದೊರೆತರೆ, ಕೆಲಸ ಸುಲಭವಾಗಬಹುದು. ಮನೆಯ ಸಿವಿಲ್ ಕೆಲಸಗಳಿಗೆ ಉತ್ತಮ ಕೆಲಸಗಾರರ ಪರಿಚಯವಾಗಿ, ಕಡಿಮೆ ವೆಚ್ಚದಲ್ಲಿ ಕೆಲಸ ಮುಗಿಯಲಿದೆ.

5. ಜನ್ಮಸಂಖ್ಯೆ 5 (5, 14, 23ನೇ ತಾರೀಕು ಹುಟ್ಟಿದವರು)
ಕೆಲವು ಹಿಂದಿನ ಅನುಭವಗಳಿಂದ ಕೋಪವನ್ನು ತಡೆದುಕೊಂಡು ಕೆಲಸ ಮಾಡಬೇಕಾಗುತ್ತದೆ. ಇತರರ ಜೊತೆ ವ್ಯವಹರಿಸುವಾಗ ಒತ್ತಡ ಎದುರಾಗಬಹುದು. ಸ್ನೇಹಿತರ ನಿರೀಕ್ಷೆಗೆ ತಕ್ಕಂತೆ ನಡೆಯುವುದು ಶ್ರಮದಾಯಕವಾಗಬಹುದು. ಸ್ವಂತ ವ್ಯಾಪಾರ ಮಾಡುವವರಿಗೆ ದೊಡ್ಡ ಅವಕಾಶಗಳು ಕಾಣಿಸಿದರೂ, ಅದನ್ನು ನಿರ್ವಹಿಸುವುದು ಸವಾಲಾಗಿರಲಿದೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಕಟ್ಟುವ ಸಾಧ್ಯತೆ ಇದೆ, ಎಚ್ಚರಿಕೆ.

6. ಜನ್ಮಸಂಖ್ಯೆ 6 (6, 15, 24ನೇ ತಾರೀಕು ಹುಟ್ಟಿದವರು)
ಇಷ್ಟವಾದ ವ್ಯಕ್ತಿಯ ಭೇಟಿಯಿಂದ ಸಂತೋಷ ಸಿಗಲಿದೆ. ಕಿರು ಪ್ರವಾಸಕ್ಕೆ ತೆರಳಬಹುದು ಅಥವಾ ರೆಸ್ಟೋರೆಂಟ್‌ನಲ್ಲಿ ಸಮಯ ಕಳೆಯಬಹುದು. ಪ್ರೀತಿಯಲ್ಲಿ ಮನಸ್ತಾಪವಿದ್ದರೆ, ಅದನ್ನು ಬಗೆಹರಿಸಿಕೊಳ್ಳಲು ಅವಕಾಶ ಸಿಗಲಿದೆ. ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸುವಿರಿ. ಆರೋಗ್ಯದಲ್ಲಿ ಕಫ, ಶೀತದ ಸಮಸ್ಯೆ ಕಾಡಬಹುದು, ಜಾಗ್ರತೆ.

7. ಜನ್ಮಸಂಖ್ಯೆ 7 (7, 16, 25ನೇ ತಾರೀಕು ಹುಟ್ಟಿದವರು)
ಸಂಕೋಚದಿಂದ ಸುಮ್ಮನಿರುವುದು ಒಳಿತಲ್ಲ ಎಂದು ತಿಳಿಯಲಿದೆ. ತಪ್ಪಾಗಿ ವರ್ತಿಸುವವರಿಗೆ ಎಚ್ಚರಿಕೆ ನೀಡುವಿರಿ. ಮನದಲ್ಲಿ ಇಟ್ಟುಕೊಂಡಿದ್ದ ವಿಷಯಗಳನ್ನು ಹೇಳಿಬಿಡುವಿರಿ. ಪ್ರೀತಿಯ ವಿಷಯದಲ್ಲಿ ಮಾತನಾಡಲು ಅವಕಾಶ ಸಿಗಲಿದೆ. ಆರೋಗ್ಯ ಸಮಸ್ಯೆಗೆ ಪರಿಹಾರ ದೊರೆಯಬಹುದು. ಕೋರ್ಟ್ ವಿಷಯಗಳಲ್ಲಿ ಸಂಧಾನದ ಮಾರ್ಗ ಕಾಣಿಸಲಿದೆ.

8. ಜನ್ಮಸಂಖ್ಯೆ 8 (8, 17, 26ನೇ ತಾರೀಕು ಹುಟ್ಟಿದವರು)
ಜವಾಬ್ದಾರಿಗಳು ಒಮ್ಮೆಗೆ ಬಂದರೂ, ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಫೋನ್, ಲ್ಯಾಪ್‌ಟಾಪ್ ಖರೀದಿಗೆ ಯೋಗ ಇದೆ. ಕ್ರೆಡಿಟ್ ಕಾರ್ಡ್ ಅಥವಾ ಇಎಂಐ ಮೂಲಕ ಖರೀದಿ ಸಾಧ್ಯತೆ ಇದೆ. ಅಗತ್ಯಕ್ಕಿಂತ ಹೆಚ್ಚು ಖರೀದಿಯಿಂದ ದೂರವಿರಿ. ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳು ಪ್ರಾಮುಖ್ಯತೆ ಪಡೆಯಲಿದೆ.

9. ಜನ್ಮಸಂಖ್ಯೆ 9 (9, 18, 27ನೇ ತಾರೀಕು ಹುಟ್ಟಿದವರು)
ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ, ಆಸ್ತಮಾ ಅಥವಾ ಉಸಿರಾಟದ ಸಮಸ್ಯೆ ಉಲ್ಬಣಿಸಬಹುದು. ಅಲರ್ಜಿಯ ಆಹಾರದಿಂದ ದೂರವಿರಿ. ಮಾತಿನಿಂದ ಸಮಸ್ಯೆ ತಂದುಕೊಳ್ಳದಿರಿ. ಕೂದಲು, ಚರ್ಮದ ಸಮಸ್ಯೆ ಕಾಡಬಹುದು, ಔಷಧಿಗಳಿಂದ ಎಚ್ಚರಿಕೆಯಿರಲಿ.

Exit mobile version