ದೈನಂದಿನ ರಾಶಿ ಭವಿಷ್ಯ: ಯಾವ ರಾಶಿಗೆ ಧನಲಾಭ? ಯಾರಿಗೆ ನಷ್ಟದ ಎಚ್ಚರಿಕೆ?

Rashi bavishya

ಅಕ್ಟೋಬರ್ 17, 2025 ರಂದು ಶಾಲಿವಾಹನ ಶಕೆ 1948, ವಿಶ್ವಾವಸು ಸಂವತ್ಸರದ ಶರದ್ ಋತುವಿನ ಆಶ್ವಯುಜ ಕೃಷ್ಣ ಪಕ್ಷದ ಏಕಾದಶೀ ತಿಥಿಯ ಶುಕ್ರವಾರದ ದಿನದ ರಾಶಿ ಭವಿಷ್ಯವನ್ನು ತಿಳಿಯಿರಿ. ಈ ದಿನ ಗಂಭೀರ ಚಿಂತನೆ, ಸಂಗಾತಿಗೆ ಸಾಂತ್ವನ, ವಾಗ್ವಾದದಲ್ಲಿ ಗೆಲವು, ಸಾಮಾಜಿಕ ಕಾರ್ಯ,  ಚಿಕಿತ್ಸೆ, ಮತ್ತು ಧನಾಗಮನದಂತಹ ವಿಶೇಷತೆಗಳಿವೆ. ಎಲ್ಲಾ 12 ರಾಶಿಗಳಿಗೆ ಕುಟುಂಬ, ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಬಗ್ಗೆ ಸಂಪೂರ್ಣ ಭವಿಷ್ಯವನ್ನು ವಿವರಿಸಲಾಗಿದೆ.

ಮೇಷ 

ಸೃಜನಾತ್ಮಕ ಕಾರ್ಯಗಳಿಂದ ಕೀರ್ತಿ ಮತ್ತು ಧನಲಾಭ. ಆದರೆ, ಪಿತ್ರಾರ್ಜಿತ ಆಸ್ತಿಯ ವಿಷಯದಲ್ಲಿ ಸಹೋದರರೊಂದಿಗೆ ವಿವಾದ ಸಾಧ್ಯತೆ. ಆಪ್ತರ ನಡುವೆ ಸಂದೇಹದಿಂದ ತೊಂದರೆ. ಗೃಹನಿರ್ಮಾಣ ಯೋಜನೆಗೆ ಒಳ್ಳೆಯ ದಿನ. ಉನ್ನತ ಸ್ಥಾನಕ್ಕೆ ಅಡೆತಡೆಗಳು ಹೆಚ್ಚು. ಕಿವಿಕಚ್ಚುವಿಕೆಯಿಂದ ಉದ್ಯೋಗದಲ್ಲಿ ತೊಂದರೆ. ಗಂಭೀರ ಚಿಂತನೆಯಿಂದ ಮಾನಸಿಕ ಒತ್ತಡ. ಶತ್ರುಗಳ ತೊಂದರೆ ತಡೆಯಲು ಕಾನೂನಿನ ಸಹಾಯ ಪಡೆಯಿರಿ.ಯಾರ ಮಾತಿಗೂ ತಕ್ಷಣ ಪ್ರತಿಕ್ರಿಯಿಸಬೇಡಿ.

ವೃಷಭ 

ಸ್ಥಿರಾಸ್ತಿಯ ಒಡೆತನ ಸಿಗುವ ಸಾಧ್ಯತೆ. ಆದರೆ, ಅಪರಿಚಿತರಿಂದ ಹಣದ ನಷ್ಟದ ಎಚ್ಚರ. ಸಂಗಾತಿಯ ಭಾವನೆಗೆ ಸ್ಪಂದಿಸಲು ತೊಂದರೆ, ಮನಸ್ತಾಪ ಸಾಧ್ಯ. ಸ್ವಂತ ಪ್ರಪಂಚ ನಿರ್ಮಿಸಿಕೊಂಡು ತಟಸ್ಥರಾಗಿರಿ. ಕಷ್ಟಕ್ಕೆ ಯಾರೂ ಸಹಾಯಕ್ಕೆ ಬಾರದಿರಬಹುದು. ಅನಿರೀಕ್ಷಿತ ಸುದ್ದಿಯಿಂದ ಮನಸ್ಸಿಗೆ ತೊಂದರೆ. ಕಾನೂನು ವಿರುದ್ಧ ಕಾರ್ಯಕ್ಕೆ ಆಮಿಷಕ್ಕೆ ಒಳಗಾಗಬೇಡಿ.

ಮಿಥುನ 

ಅಪ್ರಾಮಾಣಿಕತೆಯಿಂದ ತಾತ್ಕಾಲಿಕ ಲಾಭ. ಸ್ವಯಂ ಸ್ಪೂರ್ತಿಯಿಂದ ಲಾಭ ಪಡೆಯಿರಿ. ಮಕ್ಕಳ ಮೇಲೆ ಪ್ರೀತಿ ಇದ್ದರೂ, ಹುಸಿ ಮುನಿಸು ಅಗತ್ಯ. ಸಜ್ಜನರ ಭೇಟಿಯಿಂದ ಯಶಸ್ಸು. ಕಾರ್ಯವನ್ನು ಕಷ್ಟವಾಗಿಸಿಕೊಳ್ಳಬೇಡಿ. ಸ್ವಲ್ಪ ಆಯಾಸ. ಆರೋಗ್ಯದ ಬಗ್ಗೆ ಗಮನವಿರಲಿ. ತಪ್ಪಿಗೆ ಕ್ಷಮೆ ಯಾಚಿಸಿ, ಸರಳತೆಯಿಂದ ಕಾರ್ಯ ನಿರ್ವಹಿಸಿ.

ಕರ್ಕಾಟಕ 

ಆಸ್ತಿ ಸ್ವಾಯತ್ತಕ್ಕೆ ತಂತ್ರ. ಹಣಕಾಸಿನಲ್ಲಿ ಎಚ್ಚರಿಕೆ ಬೇಕು. ಸಂಗಾತಿಗಾಗಿ ಖರ್ಚು. ಮನೆಯ ಜವಾಬ್ದಾರಿಯಿಂದ ಕ್ರಿಯಾಶೀಲತೆ ಕಡಿಮೆ. ವೃತ್ತಿಯ ಸ್ಥಳದಲ್ಲಿ ಖುಷಿಯ ವಾತಾವರಣ. ತಾಂತ್ರಿಕ ಪರಿಣತರಿಗೆ ಒಳ್ಳೆಯ ದಿನ. ತಪ್ಪನ್ನು ಇತರರ ಮೇಲೆ ಹಾಕುವುದರಿಂದ ಮಾನಸಿಕ ಒತ್ತಡ. ಮಾತು ಸರಳವಾಗಿರಲಿ, ಅನ್ಯರ ದೋಷ ಹುಡುಕಬೇಡಿ.

ಸಿಂಹ 

ಸಂಪತ್ತಿನ ಸದುಪಯೋಗಕ್ಕೆ ತೊಂದರೆ. ಹಣಕಾಸಿನ ಒಪ್ಪಂದ ಎಚ್ಚರಿಕೆಯಿಂದ ಮಾಡಿ. ಮಕ್ಕಳೊಂದಿಗೆ ಸಮಯ ಕಳೆಯಿರಿ. ಸಂಗಾತಿಯೊಂದಿಗೆ ದ್ವೇಷ ತಪ್ಪಿಸಿ. ಕಾರ್ಯದಲ್ಲಿ ಗೊಂದಲ. ಶ್ರಮದಿಂದ ಯಶಸ್ಸು ಸಾಧ್ಯ. ವಾಹನ ಚಾಲನೆಯಲ್ಲಿ ಎಚ್ಚರಿಕೆ. ಆಯಾಸ ಸಾಧ್ಯ. ಹಿರಿಯರಿಗೆ ಗೌರವ ನೀಡಿ, ಮುಂಗೋಪವನ್ನು ಕಡಿಮೆ ಮಾಡಿ.

ಕನ್ಯಾ 

ಭೂಮಿ ವ್ಯವಹಾರದಲ್ಲಿ ಆಸಕ್ತಿ. ಹೂಡಿಕೆಗೆ ಸರಿಯಾದ ಸ್ಥಳ ಆಯ್ಕೆ ಮಾಡಿ. ಸಂಗಾತಿಯನ್ನು ಸಂಭಾಳಿಸಲು ತೊಂದರೆ. ಬಂಧುಗಳೊಂದಿಗೆ ವಾಗ್ವಾದ.  ಶತ್ರುಗಳ ತಂತ್ರ ನಿಮಗೆ ಪೂರಕ. ವ್ಯವಹಾರದಲ್ಲಿ ಚುರುಕುತನ ಬೇಕು. ಅಸಮಯದ ಭೋಜನದಿಂದ ಆರೋಗ್ಯ ಸಮಸ್ಯೆ. ಮನಸ್ಸನ್ನು ಸಮಸ್ಥಿತಿಯಲ್ಲಿ ಇರಿಸಿ, ಸಾಹಿತ್ಯಾಸಕ್ತರಿಗೆ ಲಾಭ.

ತುಲಾ 

ಭೋಗ ವಸ್ತುಗಳಿಗೆ ಖರ್ಚು. ಸಂಶೋಧನಾ ಕಾರ್ಯಕ್ಕೆ ಧನಲಾಭ. ಸಂಗಾತಿಯ ಸಿಡುಕಿನ ಮಾತು ನೋವು ತರಬಹುದು. ಕುಟುಂಬದ ಮರ್ಯಾದೆ ಕಾಪಾಡಿ. ಸ್ಪರ್ಧಾತ್ಮಕ ಕಾರ್ಯದಲ್ಲಿ ಸೋಲು. ಸರಿಯಾದ ಮಾರ್ಗದರ್ಶನ ಪಡೆಯಿರಿ. ಜೀರ್ಣಾಂಗ ಸಮಸ್ಯೆ ಸಾಧ್ಯ. ಆಹಾರದಲ್ಲಿ ಎಚ್ಚರಿಕೆ. ಸಾಮಾಜಿಕವಾಗಿ ಸಭ್ಯರಾಗಿರಿ, ಅಕ್ಕಪಕ್ಕದವರನ್ನು ನಿರ್ಲಕ್ಷ್ಯ ಮಾಡಬೇಡಿ.

ವೃಶ್ಚಿಕ 

ಗೃಹನಿರ್ಮಾಣಕ್ಕೆ ಸಹಾಯ. ಆಕಸ್ಮಿಕ ಧನಲಾಭ ಸಾಧ್ಯ. ದಾಂಪತ್ಯದಲ್ಲಿ ಹೊಂದಾಣಿಕೆ. ಸ್ನೇಹಿತರ ಭೇಟಿಯಿಂದ ಆನಂದ. ಕಛೇರಿಯ ಕೆಲಸದಲ್ಲಿ ಉತ್ಸಾಹ. ಶಿಸ್ತಿನಿಂದ ಕಾರ್ಯ ನಿರ್ವಹಿಸಿ. ಮಾನಸಿಕ ಅಸ್ವಾಸ್ಥ್ಯ. ವೈದ್ಯರ ಸಲಹೆ ಮುಂದುವರಿಸಿ. ಸಂವಹನ ತರಬೇತಿ ಪಡೆಯಿರಿ, ಕೋಪವನ್ನು ನಿಯಂತ್ರಿಸಿ.

ಧನು

ವಸ್ತ್ರಾಭರಣ ಖರೀದಿಯಲ್ಲಿ ಮಿತವಾಗಿರಿ. ವ್ಯಾಪಾರದಲ್ಲಿ ಚುರುಕುತನ ಬೇಕು. ಸಂಬಂಧಗಳಲ್ಲಿ ಬಿರುಕು ಸಾಧ್ಯ. ಮಕ್ಕಳ ವಿಷಯದಲ್ಲಿ ಎಚ್ಚರಿಕೆ.ಅತಿಯಾದ ಆತ್ಮವಿಶ್ವಾಸದಿಂದ ಕಾರ್ಯ ಅರ್ಧಕ್ಕೆ ನಿಲ್ಲಬಹುದು.ಅನಿರೀಕ್ಷಿತ ವಿಷಯಗಳಿಂದ ಮಾನಸಿಕ ಒತ್ತಡ. ಮಾತು ಹಿತವಾಗಿರಲಿ, ಪ್ರಭಾವಿ ವ್ಯಕ್ತಿಗಳೊಂದಿಗೆ ಸೌಹಾರ್ದದಿಂದ ವರ್ತಿಸಿ.

ಮಕರ 

ವ್ಯವಹಾರದ ನಷ್ಟ ತುಂಬಲು ಯೋಜನೆ. ಆಕಸ್ಮಿಕ ಧನಲಾಭ ಸಾಧ್ಯ. ಕುಟುಂಬದೊಂದಿಗೆ ಖುಷಿಯ ಸಮಯ. ಸಂಗಾತಿಯ ದುಃಖದಲ್ಲಿ ಸಾಂತ್ವನ. ಹೊಸ ಕಾರ್ಯ ಕಷ್ಟಕರ. ನಿರಂತರ ಪರಿಶ್ರಮದಿಂದ ಯಶಸ್ಸು. ಪ್ರಯಾಣದ ಆಯಾಸ. ವಿಶ್ರಾಂತಿಗೆ ಒತ್ತು ನೀಡಿ. ಕಠೋರ ಹಣಕಾಸು ನಿರ್ಧಾರ ತೆಗೆದುಕೊಳ್ಳಿ.

ಕುಂಭ 

ಹಣದ ಹಂಚಿಕೆಯಲ್ಲಿ ಕಲಹ. ಖರ್ಚಿಗೆ ಕಡಿವಾಣ ಹಾಕಿ. ಮನಸ್ಸಿಗೆ ಇಷ್ಟವಾಗದ ಘಟನೆಯಿಂದ ಒತ್ತಡ.ಕಾರ್ಯದ ಒತ್ತಡ. ನಿಷ್ಠೆಯಿಂದ ಕೆಲಸ ಮಾಡಿ ಕೀರ್ತಿ ಪಡೆಯಿರಿ. ನಿರುದ್ಯೋಗದಿಂದ ಮಾನಸಿಕ ಸಮಸ್ಯೆ. ಆಹ್ಲಾದಕರ ಕಾರ್ಯದಲ್ಲಿ ತೊಡಗಿರಿ. ಯಾರನ್ನೂ ಅತಿಯಾಗಿ ನಂಬಬೇಡಿ.

ಮೀನ 

ಗಳಿಸಿದ ಹಣ ಖರ್ಚಾಗಬಹುದು. ವಸ್ತುಗಳನ್ನು ಸಂರಕ್ಷಿಸಿ. ಸಂಗಾತಿಯ ಮಾತು ಬೇಸರ ತರಬಹುದು. ಪುತ್ರ ವ್ಯಾಮೋಹ ಕಡಿಮೆ ಮಾಡಿ. ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ. ಯಶಸ್ಸಿಗೆ ಪ್ರೋತ್ಸಾಹಕ ಕಾರ್ಯ.  ದುರಭ್ಯಾಸದಿಂದ ದೂರವಿರಿ.  ಗಂಭೀರವಾಗಿ ಯಾರ ಮಾತನ್ನೂ ಪರಿಗಣಿಸಬೇಡಿ.

Exit mobile version