ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಕೆಲಸದ ಒತ್ತಡ, ನಿಮ್ಮ ರಾಶಿಗೆ ಶುಭವಾಗಲಿದೆಯೇ?

Rashi bavishya

ಇಂದಿನ ಗ್ರಹಗತಿಗಳ ಪ್ರಕಾರ, ಹಿತಶತ್ರುಗಳ ವಾಗ್ದಾಳಿಗೆ ಪ್ರತಿ ದಾಳಿ ನಡೆಸುವ ಸಂದರ್ಭ ಬರಬಹುದು. ಬಂಧುಗಳ ಆಗಮನ, ಮಕ್ಕಳ ಬಗ್ಗೆ ಕಾಳಜಿ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಭಾಗಿ ಅಥವಾ ಪ್ರಭಾವೀ ವ್ಯಕ್ತಿಗಳ ಸಂಪರ್ಕ ಇಂದಿನ ವಿಶೇಷತೆಗಳು. 12 ರಾಶಿಗಳ ಇಂದಿನ ಭವಿಷ್ಯ ಹೇಗಿದೆ ಎಂದು ನೋಡೋಣ.

ರಾಶಿ ಫಲಗಳು:

ಮೇಷ ರಾಶಿ:

ಯಶಸ್ಸಿಗೆ ಅಡ್ಡದಾರಿ ಹಿಡಿಯಬೇಡಿ. ಅನಗತ್ಯ ಹರಟೆ ನಿಮ್ಮ ಸಮಯ ವ್ಯರ್ಥ ಮಾಡಬಹುದು. ಹೊಸ ಯೋಜನೆಗಳು ಕೈ ಸೇರಲಿದ್ದು, ಹಳೆಯ ಸಂಬಂಧಗಳು ಸುಧಾರಿಸಲಿವೆ.

ವೃಷಭ ರಾಶಿ:

ಅತಿಯಾದ ಆಲಸ್ಯದಿಂದ ಕೆಲಸಗಳು ವಿಳಂಬವಾಗಲಿವೆ. ನೂತನ ಗೃಹ ಪ್ರವೇಶದ ಯೋಗವಿದೆ. ಇಂದು ನಿಮಗೆ ಒತ್ತಡದ ಕಾರ್ಯಗಳನ್ನು ನಿರ್ವಹಿಸುವುದು ಅಸಾಧ್ಯವೆನಿಸಬಹುದು. ದಾಂಪತ್ಯದಲ್ಲಿ ಸಂಯಮವಿರಲಿ.

ಮಿಥುನ ರಾಶಿ:

ಮಾತಿನ ಮೇಲೆ ನಿಗಾ ಇರಲಿ, ಇಲ್ಲವಾದರೆ ವಿಶ್ವಾಸಾರ್ಹತೆ ಕಳೆದುಕೊಳ್ಳುವಿರಿ. ಜಲಸಂಬಂಧಿ ಉದ್ಯೋಗಿಗಳಿಗೆ ಉತ್ತಮ ಅವಕಾಶಗಳಿವೆ. ಕಲಾವಿದರಿಗೆ ಸಾರ್ವಜನಿಕ ಪ್ರಶಂಸೆ ದೊರೆಯಲಿದೆ.

ಕರ್ಕಾಟಕ ರಾಶಿ:

ನಿಮ್ಮ ಪ್ರಭಾವೀ ವ್ಯಕ್ತಿತ್ವ ಇಂದು ಹೊರಹೊಮ್ಮಲಿದೆ. ಆಸ್ತಿ ವಿಚಾರದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ಟೀಕೆ ಮಾಡುವವರಿಂದ ದೂರವಿರುವುದು ಉತ್ತಮ.

ಸಿಂಹ ರಾಶಿ:

ಇಂದು ಕಬ್ಬಿಣದ ಕೆಲಸ ಮಾಡುವವರಿಗೆ ಅಧಿಕ ಒತ್ತಡ. ವೈವಾಹಿಕ ಜೀವನದಲ್ಲಿ ಕಲಹಗಳು ವಿಚ್ಛೇದನದ ಹಂತಕ್ಕೆ ಹೋಗದಂತೆ ಎಚ್ಚರಿಕೆ ವಹಿಸಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಕನ್ಯಾ ರಾಶಿ:

ಗುರುವಿನ ಅನುಗ್ರಹದಿಂದ ವ್ಯಾಪಾರದಲ್ಲಿ ಪ್ರಗತಿ ಕಾಣುವಿರಿ. ತಂದೆಯಿಂದ ಆರ್ಥಿಕ ಸಹಾಯ ಲಭ್ಯ. ಅಲ್ಪಾವಧಿ ಹೂಡಿಕೆಯಿಂದ ಲಾಭ ಪಡೆಯುವಿರಿ ಆದರೆ ಸಹವಾಸ ದೋಷದಿಂದ ದೂರವಿರಿ.

ತುಲಾ ರಾಶಿ:

ಒತ್ತಡದ ನಡುವೆಯೂ ಚಾಕಚಕ್ಯತೆಯಿಂದ ಕೆಲಸ ಮುಗಿಸುವಿರಿ. ನಿಮ್ಮ ಮಾತುಗಾರಿಕೆಯೇ ನಿಮ್ಮ ಯಶಸ್ಸಿನ ಗುಟ್ಟು. ಹೊಸ ಕೆಲಸ ಆರಂಭಿಸಲು ಇದು ಅತ್ಯಂತ ಸೂಕ್ತ ಸಮಯ.

ವೃಶ್ಚಿಕ ರಾಶಿ:

ಬಾಕಿ ಉಳಿದಿದ್ದ ಕೆಲಸಗಳು ಇಂದು ಪೂರ್ಣಗೊಳ್ಳಲಿವೆ. ಸರ್ಕಾರದ ಕೆಲಸಗಳಲ್ಲಿ ಮಾಹಿತಿಯ ಕೊರತೆ ಎದುರಾಗಬಹುದು. ಸ್ನೇಹಿತರ ಸಮಸ್ಯೆಗಳಿಗೆ ಸ್ಪಂದಿಸುವಿರಿ.

ಧನು ರಾಶಿ:

ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಸಾಹಸ ಪ್ರವೃತ್ತಿ ಇಂದು ಬೇಡ. ವೈದ್ಯಕೀಯ ಕ್ಷೇತ್ರದವರಿಗೆ ಬಿಡುವಿಲ್ಲದ ಕೆಲಸವಿರಲಿದೆ. ವಿದೇಶಿ ಶಿಕ್ಷಣಕ್ಕೆ ಅವಕಾಶಗಳು ತೆರೆಯಲಿವೆ.

ಮಕರ ರಾಶಿ:

ಕಚೇರಿಯಲ್ಲಿ ಶತ್ರುಗಳ ಬಗ್ಗೆ ಎಚ್ಚರವಿರಲಿ. ಯಾರ ಸಹಾಯವನ್ನೂ ನಿರೀಕ್ಷಿಸದೆ ಸ್ವಪ್ರಯತ್ನದಿಂದ ಮುನ್ನಡೆಯುವಿರಿ. ಸಂಬಂಧಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ.

ಕುಂಭ ರಾಶಿ:

ಜವಾಬ್ದಾರಿಗಳು ಕೈತಪ್ಪುವ ಸಾಧ್ಯತೆ ಇದೆ. ವೈಯಕ್ತಿಕ ಕೆಲಸಗಳಿಗಾಗಿ ದೂರ ಪ್ರಯಾಣ ಬೆಳೆಸುವಿರಿ. ರಾಜಕೀಯ ರಂಗದಲ್ಲಿ ಕೆಲವು ಮಹತ್ವದ ಬದಲಾವಣೆಗಳಾಗಲಿವೆ.

ಮೀನ ರಾಶಿ:

ಅನಿರೀಕ್ಷಿತ ಖುಷಿಯ ಸುದ್ದಿ ಸಿಗಲಿದೆ. ಉದರ ಸಂಬಂಧಿ (ಹೊಟ್ಟೆ ನೋವು) ಸಮಸ್ಯೆ ಕಾಡಬಹುದು, ಆಹಾರದ ಬಗ್ಗೆ ಎಚ್ಚರವಿರಲಿ. ಭೂ ವ್ಯವಹಾರದಲ್ಲಿ ಲಾಭ ನಿಶ್ಚಿತ.

Exit mobile version