ಮೇಷ ರಾಶಿ: ಸವಾಲಿನ ಕಾರ್ಯಗಳು ತೊಂದರೆ ನೀಡಬಹುದು. ಗೃಹೋಪಯೋಗಿ ವಸ್ತುಗಳ ಖರೀದಿಗೆ ಯೋಚಿಸುವಿರಿ. ಅಲ್ಪಸಹಾಯ ಮಾಡುವಿರಿ. ಹೂಡಿಕೆಯಿಂದ ದೂರವಿರಿ.
ವೃಷಭ ರಾಶಿ: ವ್ಯಾಪಾರದ ನಿರ್ಧಾರಗಳಲ್ಲಿ ಗೊಂದಲ. ಅನಧಿಕೃತ ಸಂಪರ್ಕದಿಂದ ತೊಂದರೆ. ಏಕಾಂಗಿತ್ವ ಅನಿವಾರ್ಯ. ನಿಮ್ಮನ್ನು ಪ್ರಕಟಪಡಿಸಿಕೊಳ್ಳಲು ಸಾಧ್ಯವಾಗದು.
ಮಿಥುನ ರಾಶಿ: ಹಣಕಾಸಿನ ಅಪಾಯ ಬೇಡ. ಸಂಬಂಧಗಳ ಸಮಸ್ಯೆ ಬಗೆಹರಿಸಿಕೊಳ್ಳಿ. ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ. ಸಂಗಾತಿಯ ಜೊತೆ ಸಂಬಂಧ ಗಟ್ಟಿಗೊಳಿಸಲು ತಂತ್ರ ಬಳಸುವಿರಿ.
ಕರ್ಕಾಟಕ ರಾಶಿ: ಕುಟುಂಬದೊಂದಿಗೆ ಪ್ರಯಾಣದ ಸಾಧ್ಯತೆ. ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಹೆಚ್ಚು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಅವಿವಾಹಿತರಿಗೆ ಮದುವೆಯ ಶುಭ ಸುದ್ದಿ.
ಸಿಂಹ ರಾಶಿ: ಸ್ನೇಹಿತರೊಂದಿಗೆ ಸಮಯ ಸಂತೋಷಕರ. ಹಣ ವಾಪಸಾಗುವುದರಲ್ಲಿ ಸಮಸ್ಯೆ. ಚರಾಸ್ತಿಗೆ ಕಾನೂನು ಹೋರಾಟ. ನೇರ ಮಾತಿನಿಂದ ತೊಂದರೆ.
ಕನ್ಯಾ ರಾಶಿ: ಗ್ರಾಹಕರಿಂದ ಹೆಚ್ಚಿನ ಲಾಭ. ಜೀವನದಲ್ಲಿ ಉತ್ಸಾಹ ತುಂಬುವ ವ್ಯಕ್ತಿಯನ್ನು ಹುಡುಕಿಕೊಳ್ಳಿ. ದೂರ ಪ್ರಯಾಣದಲ್ಲಿ ಎಚ್ಚರಿಕೆ. ಆಕಸ್ಮಿಕ ಧನಲಾಭ.
ತುಲಾ ರಾಶಿ: ದುಡುಕಿನ ನಿರ್ಧಾರ ಬೇಡ. ಹಿತಶತ್ರುಗಳಿಂದ ತೊಂದರೆ. ಧಾರ್ಮಿಕ ಭಾವ ಜಾಗೃತ. ಪ್ರೀತಿಯ ವಿಚಾರದಲ್ಲಿ ಬುದ್ಧಿವಾದ ಪಡೆಯುವಿರಿ.
ವೃಶ್ಚಿಕ ರಾಶಿ: ಪರರ ರಹಸ್ಯ ತಿಳಿಯುವ ಕುತೂಹಲ. ಗಣ್ಯರೊಂದಿಗೆ ಮಾತುಕತೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು. ಇಷ್ಟಪಟ್ಟ ವಸ್ತು ಕಳೆದುಕೊಳ್ಳುವ ಸಂದರ್ಭ.
ಧನು ರಾಶಿ: ಇಂದಿನ ಕಾರ್ಯದಲ್ಲಿ ಜಯ. ಆಸ್ತಿ ಹೂಡಿಕೆಯಲ್ಲಿ ಎಚ್ಚರಿಕೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವಿಕೆ. ಹಣಕಾಸಿನ ಆರೋಪದಿಂದ ದೂರವಿರಿ.
ಮಕರ ರಾಶಿ: ಸವಾಲಿನ ಕೆಲಸಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ. ಚಂಚಲ ಮನಸ್ಸು ಹಿನ್ನಡೆ ತರಬಹುದು. ಸಂಗಾತಿಯ ಮಾತಿನಿಂದ ಕಷ್ಟ. ಕುಟುಂಬದ ನಿರ್ಲಕ್ಷ್ಯದ ಭಾಸ.
ಕುಂಭ ರಾಶಿ: ಪ್ರೀತಿಯ ಸಂಬಂಧಗಳಲ್ಲಿ ಮಾಧುರ್ಯ. ವ್ಯವಹಾರದಲ್ಲಿ ಆತ್ಮವಿಶ್ವಾಸ. ಸ್ಥಿರಾಸ್ತಿ ಖರೀದಿಗೆ ಸಲಹೆ ಪಡೆಯಿರಿ. ಪಿತ್ರಾರ್ಜಿತ ಆಸ್ತಿಯಲ್ಲಿ ಅನುಮಾನ.
ಮೀನ ರಾಶಿ: ವ್ಯಾಪಾರದಲ್ಲಿ ಆರ್ಥಿಕ ಲಾಭ. ಶತ್ರು ನಿಗ್ರಹ. ಕೃಷಿಯಲ್ಲಿ ಲಾಭ. ಸರ್ಕಾರಿ ಕೆಲಸಗಳಲ್ಲಿ ವಿಳಂಬ. ಸಹೋದರರೊಂದಿಗಿನ ಸಂಬಂಧದಲ್ಲಿ ಜಾಗರೂಕತೆ ಅಗತ್ಯ.
