ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ಉತ್ತರಾಯಣದ ಈ ದಿನ, ಗ್ರಹಗತಿಗಳ ಸಂಚಾರವು ಕೆಲವು ರಾಶಿಗಳಿಗೆ ಅದೃಷ್ಟ ತಂದರೆ, ಇನ್ನು ಕೆಲವರಿಗೆ ಎಚ್ಚರಿಕೆಯ ಸಂದೇಶ ನೀಡುತ್ತಿದೆ. ಇಂದು ವಾಗ್ವಾದಗಳಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆ ಇದ್ದು, ರಹಸ್ಯ ಮಾತುಗಳು ಮತ್ತು ಉದಾತ್ತ ಚಿಂತನೆಗಳು ನಿಮ್ಮ ದಿನದ ವಿಶೇಷವಾಗಿರಲಿವೆ. ಮಂಗಳವಾರದ ಈ ಹೊತ್ತಿನಲ್ಲಿ ಯಾವ ರಾಶಿಯವರ ಬದುಕು ಹೇಗಿರಲಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಮೇಷ ರಾಶಿ
ಇಂದು ಕುಟುಂಬದ ಜೊತೆ ಸಂತೋಷದಿಂದ ಕಾಲ ಕಳೆಯುವಿರಿ. ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ವಿದೇಶ ಪ್ರಯಾಣಕ್ಕೆ ಮಿತ್ರರ ಸಹಕಾರ ಸಿಗಬಹುದು. ಮನಸ್ಸಿನಲ್ಲಿ ನಾನಾ ಬಗೆಯ ಗೊಂದಲಗಳಿವೆ. ಹಣಕಾಸಿನ ನೆರವಿಗಾಗಿ ಯಾರನ್ನಾದರೂ ಕೇಳಬೇಕಾದ ಸ್ಥಿತಿ ಬರಬಹುದು.
ವೃಷಭ ರಾಶಿ
ಸಹೋದರರು ಮತ್ತು ಪತ್ನಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ಕುಟುಂಬ ವ್ಯವಸ್ಥೆ ಸರಿಯಾಗಲು ಕೆಲವನ್ನು ಬಿಟ್ಟುಕೊಡಬೇಕಾದೀತು. ಮನೆ ಬಿಟ್ಟು ಹೋಗುವಾಗ ಕಳ್ಳರ ಭಯ ಕಾಡಬಹುದು. ನಿಮ್ಮ ನಿರ್ಲಕ್ಷ್ಯದಿಂದ ಸ್ನೇಹಿತರು ದೂರಾಗಬಹುದು. ಇಷ್ಟವಿಲ್ಲದ ಚರ್ಚೆಗಳಿಂದ ದೂರವಿರುವಿರಿ.
ಮಿಥುನ ರಾಶಿ
ಅಮೂಲ್ಯ ವಸ್ತು ನಿಮ್ಮ ಪಾಲಾಗಬಹುದಾದ ಯಶಸ್ಸಿನ ದಿನ ಇದು. ಉದ್ಯೋಗಸ್ಥರಿಗೆ ಬಡ್ತಿ ಮತ್ತು ಕೊಡುಗೆ ಸಿಗಬಹುದು. ವ್ಯಾಪಾರಿಗಳಿಗೂ ಲಾಭದಾಯಕ ದಿನ. ಸಾಲ ಹಿಂಪಡೆಯಲು ತಿರುಗಾಟ ಮಾಡುವಿರಿ. ಕಲಾವಿದರಿಗೆ ಉತ್ತಮ ಲಾಭವಾಗಬಹುದು. ಬಹುದಿನಗಳಿಂದ ಬಾಕಿ ಇದ್ದ ಕೆಲಸಗಳು ಇಂದು ಪೂರ್ಣವಾಗುವವು. ಯಾರ ಬಗ್ಗೆಯೂ ಹಗುರವಾಗಿ ಮಾತನಾಡಬೇಡಿ.
ಕರ್ಕಾಟಕ ರಾಶಿ
ರಾಜಕೀಯ ಆಕಾಂಕ್ಷೆಗಳು ಈಡೇರುವ ಸಾಧ್ಯತೆ. ಮನಸ್ಸು ಚಂಚಲವಾಗಿರುತ್ತದೆ. ಆರ್ಥಿಕ ಪ್ರಗತಿ ಕಂಡುಬರಲಿದೆ. ಸರ್ಕಾರದಿಂದ ಸಾಲದ ಬೆಂಬಲ ದೊರೆಯಲಿದೆ. ಸಾಮಾಜಿಕ ಕಾರ್ಯಕರ್ತರಿಗೆ ಮನ್ನಣೆ ಸಿಗುವುದು. ಸಂಗಾತಿಯನ್ನು ಮರೆತು ವ್ಯವಹರಿಸುವಿರಿ. ಇತರರ ಮಾತಿನಿಂದ ಸಿಟ್ಟಾಗಬಹುದು. ಕೆಲವು ವಿಷಯಗಳಲ್ಲಿ ಕುಟುಂಬದ ವಿರೋಧವಿರುವುದು. ಸ್ನೇಹಿತರ ಜೊತೆ ಸುತ್ತಾಟ ಮತ್ತು ಉತ್ತಮ ಭೋಜನ ಮಾಡುವಿರಿ.
ಸಿಂಹ ರಾಶಿ
ಕೆಲಸದ ಸ್ಥಳದಲ್ಲಿ ಅನಗತ್ಯ ಜಗಳವನ್ನು ತಪ್ಪಿಸಿ. ತಂದೆಯಿಂದ ಬೆಂಬಲ ಸಿಗಲಿದೆ. ಆರ್ಥಿಕ ಲಾಭ ಉಂಟಾಗಲಿದೆ. ವ್ಯವಹಾರದ ಬೆಳವಣಿಗೆ ಪ್ರಯತ್ನಗಳು ಫಲಪ್ರದವಾಗದು. ತಾಳ್ಮೆ ಮತ್ತು ಪ್ರತಿಭೆಯಿಂದ ಶತ್ರುಗಳನ್ನು ಗೆಲ್ಲುವಿರಿ. ಸಣ್ಣ ವಿಷಯಕ್ಕೆ ಸ್ನೇಹಿತರ ಜೊತೆ ಸಂಬಂಧ ಹಾಳಾಗಬಹುದು. ನಿಮ್ಮಿಂದ ಕೆಲಸ ಮಾಡಿಸಿಕೊಂಡು ಬಿಟ್ಟುಬಿಡಬಹುದು.
ಕನ್ಯಾ ರಾಶಿ
ವಿವಾಹಿತರಿಗೆ ಸಂತೋಷದ ದಿನ. ಅವಿವಾಹಿತರು ಹೊಸ ಸಂಬಂಧ ಕಂಡುಕೊಳ್ಳಬಹುದು. ಸಂಗಾತಿಯ ಮಾತಿನಿಂದ ಸಾಲ ಮಾಡಬೇಕಾಗುವುದು. ನಿಮ್ಮ ನಿಲುವೇ ಸರಿ ಎಂದು ವರ್ತಿಸುವಿರಿ. ಮಕ್ಕಳನ್ನು ಸಂತೋಷವಾಗಿಡುವುದು ಕಷ್ಟವಾಗಬಹುದು. ಬಹಳ ದಿನಗಳ ಒತ್ತಡದಿಂದ ಇಂದು ವಿಶ್ರಾಂತಿಯಲ್ಲಿ ಕಾಲ ಕಳೆಯುವಿರಿ.
ತುಲಾ ರಾಶಿ
ಸಮಾಜ ನಿಮ್ಮನ್ನು ಸ್ವಾರ್ಥಿಯಾಗಿ ನೋಡಬಹುದು. ವ್ಯವಹಾರದಲ್ಲಿ ಹಣದ ಲಾಭ. ತಂದೆ-ತಾಯಿಯರ ಸೇವೆಯ ಅವಕಾಶ. ಮನೆ ಕೆಲಸ ಆಗಿಲ್ಲವೆಂದು ಕೋಪ ಪ್ರಕಟಿಸುವಿರಿ. ಉದ್ಯೋಗ ಕೊಡಿಸಲು ಹಣ ಕೇಳಬಹುದು. ಸತ್ಯ ಹೇಳುವ ಮನಸ್ಸಿದ್ದರೂ ಒತ್ತಡದಿಂದ ಮುಚ್ಚಿಡುವಿರಿ. ಹಿರಿಯರ ನಂಬಿಕೆ ಗಳಿಸಲು ಕಷ್ಟ. ಪಾಪಪ್ರಜ್ಞೆಯಿಂದ ಹೊರಬರಲು ಆಗದು.
ವೃಶ್ಚಿಕ ರಾಶಿ
ಹೊಸ ವ್ಯವಹಾರ ಆರಂಭಕ್ಕೆ ಅನುಕೂಲಕರ ಸಮಯ. ಮನೆಯಲ್ಲಿ ಹೊಸ ವಾಹನ ಖರೀದಿ ಸಾಧ್ಯತೆ. ಆತಂಕ ಮತ್ತು ನಿರಾಸಕ್ತಿಯಿಂದ ನಿಮ್ಮ ಮೇಲೆ ಹಿಡಿತ ಸಾಲದು. ಆಲಸ್ಯವನ್ನು ಶತ್ರುಗಳು ಅವಕಾಶವಾಗಿ ಬಳಸಿಕೊಳ್ಳುವರು. ಭೂಮಿಯಿಂದ ಸಂಪತ್ತು ಸಿಗಬಹುದು. ಹಿರಿಯರ ಮಾತು ಸಂಪೂರ್ಣ ಇಷ್ಟವಾಗದು. ಬೇಡವೆಂದು ಬಿಟ್ಟಿದ್ದನ್ನು ಮತ್ತೆ ಎತ್ತಿಕೊಳ್ಳಬೇಡಿ. ವಿದ್ಯಾರ್ಥಿಗಳು ಓದಿನತ್ತ ಹೆಚ್ಚು ಗಮನ ಹರಿಸಬೇಕು.
ಧನು ರಾಶಿ
ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶ. ತಾಯಿಯಿಂದ ಪ್ರೀತಿ ಮತ್ತು ವಿಶೇಷ ಬೆಂಬಲ. ಇದು ಶತ್ರುಗಳನ್ನು ಅಸಮಾಧಾನಗೊಳಿಸುವುದು. ಬಂಧುಗಳ ವಿಯೋಗವೂ ಆಗಬಹುದು. ಸ್ನೇಹಿತರಿಗೆ ಸಹಾಯ ಮಾಡದಿರುವುದು ಅನುಮಾನಕ್ಕೆ ಕಾರಣವಾಗಬಹುದು.
ಮಕರ ರಾಶಿ
ವ್ಯವಹಾರ ಮುನ್ನಡೆಸಲು ನಿರಂತರ ಪ್ರಯತ್ನ. ಕಠಿಣ ಪರಿಶ್ರಮ ನಿಷ್ಫಲವೆಂದು ಬೇಸರಿಸಬೇಡಿ – ಸಮಯ ಬೇಕಷ್ಟೇ. ಅನಗತ್ಯ ವಸ್ತುಗಳಿಗೆ ವ್ಯರ್ಥವಾಗಿ ಖರ್ಚಾಗಬಹುದು. ಸಾಮಾಜಿಕ ಚಟುವಟಿಕೆಗಳಲ್ಲಿ ಅಡಚಣೆ. ಮಕ್ಕಳಿಂದ ಸಂತೋಷದ ಸುದ್ದಿ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಅರಿವಿಲ್ಲದಿರಬಹುದು.
ಕುಂಭ ರಾಶಿ
ಜೀವನ ಬದಲಾಯಿಸಬಹುದಾದ ಒಳ್ಳೆಯ ಸುದ್ದಿ. ಕುಟುಂಬದಲ್ಲಿ ಸಂತೋಷ-ಶಾಂತಿ ಹೆಚ್ಚಳ. ಹಳೆಯ ವಿವಾದಗಳು ಕೊನೆಗೊಳ್ಳುವವು. ಯೋಜನೆಯನ್ನು ವಿಭಿನ್ನ ದೃಷ್ಟಿಯಿಂದ ನೋಡಬೇಕು. ಕೆಲಸದಲ್ಲಿ ಬದಲಾವಣೆ. ಶುಭ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ. ಅಧಿಕಾರ ವಿಚಾರದಲ್ಲಿ ಮಿತ್ರನ ವಂಚನೆ ಗೊತ್ತಾಗುವುದು. ಸಣ್ಣ ವಸ್ತು ಕಳೆದರೂ ಬೇಸರ.
ಮೀನ ರಾಶಿ
ವ್ಯಾಪಾರಿಗಳಿಗೆ ಲಾಭದಾಯಕ ದಿನ. ಸರ್ಕಾರದಿಂದ ಹಣ ಪಡೆಯಬಹುದು. ಸಂಗಾತಿಯಿಂದ ಕಾರ್ಯಗಳಿಗೆ ಬೆಂಬಲ. ಅನಪೇಕ್ಷಿತ ಮಾತುಗಳನ್ನಾಡಬೇಡಿ. ಪ್ರಭಾವಿ ವ್ಯಕ್ತಿಗಳ ಮೂಲಕ ಸರ್ಕಾರಿ ಕೆಲಸ ಮುನ್ನಡೆಸುವಿರಿ. ಆರೋಗ್ಯ ಕೆಡಬಹುದು. ಬರುವ ಆಸ್ತಿಯಲ್ಲಿ ಹೆಚ್ಚಿನ ಲಾಭ ಅಪೇಕ್ಷಿಸುವಿರಿ.
