ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಶರದ್ ಋತು, ಕಾರ್ತಿಕ ಚಾಂದ್ರ ಮಾಸ, ತುಲಾ ಸೌರ ಮಾಸ. ಮಹಾನಕ್ಷತ್ರ ಚಿತ್ರಾ, ವಾರ ಶನಿವಾರ, ಶುಕ್ಲ ಪಕ್ಷ, ಏಕಾದಶೀ ತಿಥಿ, ನಿತ್ಯನಕ್ಷತ್ರ ಪೂರ್ವಾಭಾದ್ರ, ಗಂಡ ಯೋಗ, ಕೌಲವ ಕರಣ. ಸೂರ್ಯೋದಯ ಬೆಳಿಗ್ಗೆ ೬:೧೪, ಸೂರ್ಯಾಸ್ತ ಸಂಜೆ ೫:೫೧. ಶುಭಾಶುಭ ಕಾಲ: ರಾಹುಕಾಲ ೯:೦೯–೧೦:೩೬, ಗುಳಿಕಕಾಲ ೬:೧೪–೭:೪೨, ಯಮಗಂಡ ೧:೩೦–೨:೫೭.
ಮೇಷ ರಾಶಿ
ಪರರ ಆಸ್ತಿಯ ಮೇಲೆ ಜೀವನ ನಡೆಸುವ ಸ್ಥಿತಿ ಬರಬಹುದು. ಮಾತಿನಲ್ಲಿ ಗೆಲ್ಲಲು ಕಷ್ಟ. ಕಾನೂನುಬದ್ಧ ಸಂಪಾದನೆ ಆಲೋಚಿಸಿ. ಭಯ, ಸುಖದ ಹಾದಿಯಲ್ಲಿ ಕ್ರಿಯಾಶೀಲತೆ ಕಡಿಮೆಯಾಗುವ ಸಾಧ್ಯತೆ. ಉಪಕಾರಕ್ಕೆ ಪ್ರತಿಯಾಗಿ ಉಪಕಾರ ಮಾಡುವ ಸ್ವಭಾವ. ಆಯುಧ, ವಾಹನ ಬಳಕೆಯಲ್ಲಿ ಜಾಗರೂಕತೆ. ವಾಹನ ಖರೀದಿಗೆ ಸಾಲ ಅನಿವಾರ್ಯ. ಮನೆಯ ಕೆಲಸಗಳು ದೊಡ್ಡದಾಗಿ ಕಾಣುವುದು, ಆಯಾಸಕ್ಕೆ ವಿಶ್ರಾಂತಿ ಬೇಕು. ಸಂಗಾತಿಯ ಮೇಲೆ ಅನುಮಾನ, ಪ್ರೇಮ ಸಂಬಂಧ ಮುರಿಯುವ ಭೀತಿ.
ವೃಷಭ ರಾಶಿ
ಪ್ರಿಯರಿಗೆ ಭರವಸೆ ಈಡೇರಿಸುವಿರಿ. ಅಸಾಮರ್ಥರಿಂದ ಸಹಕಾರ ಬೇಕಾಗಬಹುದು. ಪ್ರತಿನಿಧಿಗಳಿಂದ ಮಾನಸಿಕ ತೊಂದರೆ. ಸಹೋದರರ ಶೀತಲ ಸಮರ ಬಯಲಾಗಬಹುದು. ವ್ಯಾಪಾರದಲ್ಲಿ ನಿರ್ಲಕ್ಷ್ಯದಿಂದ ನಷ್ಟ. ಬಂಧು ಮನೆಯಲ್ಲಿ ವಾಸ ಸಾಧ್ಯ. ರಾಜಕೀಯ ನೋವು. ಅಲ್ಪ ಆದಾಯಕ್ಕೆ ತೃಪ್ತಿ. ಖುಷಿಯಿಂದ ಕೆಲಸ. ದಾಂಪತ್ಯಕ್ಕೆ ಎರಡೂ ಕಡೆ ಸಹಕಾರ ಬೇಕು. ಅಕ್ಷಮ್ಯ ತಪ್ಪಿಗೆ ಕ್ಷಮೆ. ಹೊಗಳಿಕೆಯಿಂದ ದುಃಖಕ್ಕೆ ವಿರಾಮ. ಉದ್ವೇಗ ನಿಯಂತ್ರಿಸಿ.
ಮಿಥುನ ರಾಶಿ
ಬುದ್ಧಿವಾದ ಕಹಿಯಾಗಬಹುದು. ಕಾರ್ಯಕ್ಕೆ ಆದ್ಯತೆ ನೀಡಿ. ದುಡುಕು ಮಾತಿನಿಂದ ನೆಮ್ಮದಿ ಕೇಡು. ವಿದ್ಯಾಭ್ಯಾಸದಲ್ಲಿ ಪ್ರಗತಿ. ಹಣದ ಹೊಂದಾಣಿಕೆ ಕಷ್ಟ. ವ್ಯಾಪಾರದಲ್ಲಿ ಹಿನ್ನಡೆ. ಕೃಷಿ ಚಟುವಟಿಕೆ ಹೆಚ್ಚು. ಮಾಧ್ಯಮ ಮಿತ್ರತ್ವದಲ್ಲಿ ಭಿನ್ನತೆ. ತಪ್ಪು ಹುಡುಕುವವರು ಇರುತ್ತಾರೆ. ಕೋಪ ನಿಯಂತ್ರಿಸಿ. ವಾಹನ ಎಚ್ಚರಿಕೆ. ಉತ್ಸಾಹ ತುಂಬುವ ದಿನ.
ಕರ್ಕಾಟಕ ರಾಶಿ
ಉಪಕಾರವನ್ನು ಮರೆಮಾಚುವುದು ಅಪಕೀರ್ತಿ. ಮಾತುಗಾರರಿಗೆ ಅವಕಾಶ. ಕುಟುಂಬ ಬದಲಾವಣೆ ಸ್ವೀಕರಿಸಲು ಕಷ್ಟ. ಬಂಧುಗಳ ಸ್ಥಿರಾಸ್ತಿ ಖರೀದಿ. ಕಾರ್ಯ ಪೂರ್ಣಗೊಳಿಸುವ ಛೇತ. ಗಾಂಭೀರ್ಯಕ್ಕೆ ಭಯ. ಆಸ್ತಿ ದಾಖಲೆ ಪರಿಶೀಲನೆ. ಕೆಲಸ ಮಂದಗತಿ. ಯಾರ ಮಾತೂ ಕೇಳದ ಮನೋಭಾವ. ಗೌಪ್ಯ ಧನಸಂಪಾದನೆ ಬಯಲಾಗಬಹುದು.
ಸಿಂಹ ರಾಶಿ
ಹಣವಿದ್ದರೂ ಭೂಮಿ ಪಡೆಯದಿರುವುದು ಕಾಲದ ಸೂಚನೆ. ಹಳೆಯ ಪರಿಚಯದಿಂದ ಸಹಾಯ. ವ್ಯವಹಾರ ತಂತ್ರ ಉತ್ತಮ. ಉದ್ಯೋಗದಲ್ಲಿ ತಿರುಗಾಟ. ಸಂಗಾತಿಯ ಮಾತು ಸ್ವಾಭಿಮಾನಕ್ಕೆ ತೊಂದರೆ. ಅಪಮಾನ ಸಹಿಸಿ ಕೆಲಸ. ಬಂಧುಗಳ ಪಾತ್ರ ಮುಖ್ಯ. ಸಾಮಾಜಿಕ ಬಾಂಧವ್ಯ. ಕೃಷಿಯಲ್ಲಿ ಖುಷಿ. ಅಕಾರಣ ದುಃಖ. ಪ್ರೀತಿಯ ಕೆಲಸ ಮಾಡಿ.
ಕನ್ಯಾ ರಾಶಿ
ಪುಣ್ಯ ಕರ್ಮಗಳ ಫಲ. ವಿಶ್ವಾಸವಿಲ್ಲದೇ ವ್ಯಾಪಾರ ಯಶಸ್ಸಿಲ್ಲ. ಆರ್ಥಿಕ ಬಲ. ದುರಭ್ಯಾಸದಿಂದ ನಷ್ಟ. ಮಿತ್ರರ ಮೋಸ. ಧಾರ್ಮಿಕ ತಿಳುವಳಿಕೆ. ವಿದೇಶ ಪ್ರವಾಸ ಮನಸ್ಸು. ಸ್ಥಿರಾಸ್ತಿ ನಷ್ಟ. ಅಧಿಕಾರ ದುರುಪಯೋಗ ಬೇಡ. ಸಕಾರಾತ್ಮಕತೆಗೆ ಪ್ರಶಂಸೆ. ವಿನ್ಯಾಸಕಾರರಿಗೆ ಬಿಡುವಿಲ್ಲ. ಸಹೋದ್ಯೋಗಿಯೊಂದಿಗೆ ಪ್ರೇಮ. ಪೆಟ್ಟೇ ಶಿಲ್ಪ ಮಾಡುತ್ತದೆ.
ತುಲಾ ರಾಶಿ
ದೂರದೃಷ್ಟಿ ಕೊರತೆ. ದ್ವಂದ್ವಕ್ಕೆ ಪರಿಹಾರ. ಮನಸ್ಸು ಏಕಾಗ್ರತೆ ಕಡಿಮೆ. ನಾಜೂಕ ಕಾರ್ಯಕ್ಕೆ ಪ್ರಶಂಸೆ-ಅಪಹಾಸ್ಯ. ಕೋಪದಿಂದ ಮನಸ್ಸು ಹಾಳು. ಕುಟುಂಬ ಕಲಹಕ್ಕೆ ಹೊಸ ಜೀವನ ಇಚ್ಛೆ. ಕಲಾವಿದರಿಗೆ ಅವಕಾಶ. ವ್ಯಾವಹಾರಿಕ ಸತ್ಯ ತಿಳಿಸಿ. ಖರ್ಚು ನಿಯಂತ್ರಣ. ವಸ್ತು ಕಾಣೆಯಾದ ಉದ್ವೇಗ. ಸ್ನೇಹಿತರ ನೋವಿಗೆ ಸ್ಪಂದನೆ. ಅಭಿರುಚಿಗೆ ಪ್ರೋತ್ಸಾಹ, ಪಶ್ಚಾತ್ತಾಪ.
ವೃಶ್ಚಿಕ ರಾಶಿ
ಪರರ ವಸ್ತು ನಿಮ್ಮದೆಂದು ವಾದ. ಭೂ ವ್ಯವಹಾರದಲ್ಲಿ ತಪ್ಪು. ಸಭ್ಯತೆ ಕಾಯ್ದುಕೊಳ್ಳಿ. ಸರ್ಕಾರಿ ಕೆಲಸ ಜಾಣ್ಮೆಯಿಂದ. ವಾಹನ ದುರಸ್ತಿ. ಅಡೆತಡೆಗಳನ್ನು ಧೈರ್ಯದಿಂದ ಎದುರಿಸಿ. ಮನೆಯ ಸಂತೋಷದಲ್ಲಿ ಪಾಲ್ಗೊಳ್ಳಲಾಗದು. ಕನಸು ಸಾಕಾರಕ್ಕೆ ಆಲೋಚನೆ. ಪ್ರೇಮ ಸಡಿಲ. ಧನ ಸಹಾಯ. ದಾಂಪತ್ಯ ಕಲಹ ಮಕ್ಕಳ ಮೇಲೆ ಪ್ರಭಾವ.
ಧನು ರಾಶಿ
ಮುರಿದ ವಿವಾಹ ಜೋಡಿಸುವ ಪ್ರಯತ್ನ. ಗಾಯ ಆರಲು ಸಮಯ ಬೇಕು. ಉದ್ಯೋಗದಲ್ಲಿ ತೃಪ್ತಿ ಕಡಿಮೆ. ಆರ್ಥಿಕ ಚೇತರಿಕೆ. ಮಹಿಳೆಯರಿಗೆ ಸಹಕಾರ. ಅಧಿಕಾರದ ಆಸೆ. ಅನಪೇಕ್ಷಿತ ಮಾತುಗಳಿಂದ ಸಮಯ ವ್ಯರ್ಥ. ಕಾರ್ಯಕೌಶಲಕ್ಕೆ ಬೆರಗು. ಶಿಕ್ಷೆಯಿಂದ ತಿದ್ದುಪಡಿ. ಕನಸು ಭಗ್ನ. ನಕಾರಾತ್ಮಕ ಚಿಂತನೆ ಬಿಟ್ಟು ಸಕಾರಾತ್ಮಕವಾಗಿ ಯೋಚಿಸಿ.
ಮಕರ ರಾಶಿ
ಮನೋರಂಜನೆಗೆ ದಾರಿಗಳು. ಪ್ರಯತ್ನದಲ್ಲಿ ಸಮಾಧಾನ. ಅವಕಾಶ ಪರೀಕ್ಷೆ. ಅನಪೇಕ್ಷಿತ ಘಟನೆಗಳು. ಗಣ್ಯರ ಭೇಟಿ. ಅಧಿಕಾರಿಗಳೊಂದಿಗೆ ಚರ್ಚೆ. ವಿದ್ಯಾಭ್ಯಾಸಕ್ಕೆ ಮನೆ ಬಿಟ್ಟು ಕಷ್ಟ. ಸಂಗಾತಿಯಿಂದ ಒತ್ತಡ. ರೂಪಕ್ಕೆ ಆಕರ್ಷಣೆ. ವಾಹನ ನಿಲ್ಲಿಸಿ. ಆಹಾರ ವಿಳಂಬ. ನೆರೆಹೊರೆ ವಾಗ್ವಾದ. ಕೊರತೆ ಮುಚ್ಚಿ.
ಕುಂಭ ರಾಶಿ
ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಉದ್ಯೋಗಕ್ಕೆ ದೂರ ಪ್ರಯಾಣ ಅನಿಷ್ಟ. ಸ್ಥಿತಿಯನ್ನು ಆಡಿಕೊಂಡಾರು. ದೇವತಾಕಾರ್ಯ ಅನಿವಾರ್ಯ. ಆರ್ಥಿಕ ಪ್ರಶ್ನೆ. ಹಳೆ ನೆನಪು ಕಾಡುವುದು. ಪ್ರಯಾಣ ಕಷ್ಟಕರ. ದಾಂಪತ್ಯಕ್ಕೆ ಸಮಯ. ಪುಣ್ಯ ಸ್ಥಳ ಮಾಹಿತಿ. ಸಾಲ ಮುಕ್ತಾಯ ಕಷ್ಟ. ತಾಯಿಯಿಂದ ಉಡುಗೊರೆ.
ಮೀನ ರಾಶಿ
ವಿರೋಧಿಗಳ ನಡುವೆ ಅಸ್ತಿತ್ವ ಸ್ಥಾಪಿಸಿ. ಭೇಟಿಯವರನ್ನು ಗೌರವಿಸಿ. ತಾಳ್ಮೆಯಿಂದ ಯಶಸ್ಸು. ಅನಾಯಾಸ ಅವಕಾಶ ಇಷ್ಟವಿಲ್ಲ. ಮಧ್ಯಸ್ಥಿಕೆ ವಹಿಸಿ. ವಿರುದ್ಧ ಮಾತುಗಳಿಗೆ ಸಿಟ್ಟು. ಕಳೆದುದನ್ನು ಮರಳಿ ಪಡೆಯಿರಿ. ಉದ್ಯೋಗ ದೃಢತೆ. ಸುಳ್ಳಿಗೆ ಕೋಪ. ಯೋಜನೆ ದಾರಿ ತಪ್ಪಬಹುದು. ಒತ್ತಡದಿಂದ ಹೊರಬರಲು ಚಟುವಟಿಕೆ.
