ಮೇಷ ರಾಶಿ
ಇಂದು ಪಾಲುದಾರಿಕೆ ವ್ಯವಹಾರಗಳಲ್ಲಿ ಸಮಾಧಾನ ಅತಿ ಮುಖ್ಯ. ಸಣ್ಣ ವಿಷಯಕ್ಕೂ ತಾಳ್ಮೆ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಇರಲಿ. ಆಸ್ತಿ ಖರೀದಿ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಆತಂಕ ಕಾಡಬಹುದು.
ವೃಷಭ ರಾಶಿ
ಇಂದು ತಮ್ಮ ಸ್ವಂತ ಉದ್ಯೋಗದ ವಿಸ್ತರಣೆಯತ್ತ ಹೆಚ್ಚಿನ ಗಮನ ಹರಿಸಲಿದ್ದಾರೆ. ನಿಮ್ಮ ಶ್ರಮಕ್ಕೆ ತಕ್ಕಂತೆ ಇಂದಿನ ಗುರಿಯನ್ನು ಬೇಗನೆ ತಲುಪುವಿರಿ. ಹಳೆಯ ಸಾಲಗಳಿಂದ ಮುಕ್ತಿ ಪಡೆಯುವ ಲಕ್ಷಣಗಳಿವೆ. ಆದರೆ, ಕುಟುಂಬದಲ್ಲಿ ಮಕ್ಕಳ ಜೊತೆ ವಾದಕ್ಕಿಳಿಯಬೇಡಿ.
ಮಿಥುನ ರಾಶಿ
ಇಂದು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಬಾಯಿ ಚಪಲಕ್ಕೆ ಬಿದ್ದು ಹೊರಗಿನ ಆಹಾರ ಸೇವಿಸಿ ತೊಂದರೆಗೆ ಸಿಲುಕಬೇಡಿ. ವಾಹನ ಚಾಲನೆ ಮಾಡುವಾಗ ಏಕಾಗ್ರತೆ ಇರಲಿ. ಮಿತ್ರರ ಸಹಾಯದಿಂದ ಭೂಮಿ ಅಥವಾ ಆಸ್ತಿ ಖರೀದಿ ಮಾಡುವ ಯೋಗವಿದೆ.
ಕರ್ಕಾಟಕ ರಾಶಿ
ಇಂದು ಗೆಲುವಿನ ಮುನ್ಸೂಚನೆ ಆರಂಭದಲ್ಲೇ ಸಿಗಲಿದೆ. ಬಂಧುಗಳ ಆರೋಗ್ಯದ ವಿಚಾರವಾಗಿ ಓಡಾಟ ನಡೆಸಬೇಕಾಗಬಹುದು. ಸಂಬಂಧಗಳಲ್ಲಿ ಅತಿಯಾದ ಹಸ್ತಕ್ಷೇಪ ಬೇಡ, ಮಿತವಾದ ಬಂಧವಿರಲಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.
ಸಿಂಹ ರಾಶಿ
ವೃತ್ತಿ ಜೀವನದಲ್ಲಿ ಇಂದು ಸ್ವಲ್ಪ ಗೊಂದಲವಿರಲಿದೆ. ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾದ ಅನಿವಾರ್ಯತೆ ಎದುರಾಗಬಹುದು. ಆದರೂ ನಿಮ್ಮ ಸತತ ಪ್ರಯತ್ನದಿಂದ ಆರ್ಥಿಕ ಸಮತೋಲನ ಕಾಯ್ದುಕೊಳ್ಳುವಿರಿ. ಹಿರಿಯರ ಸೇವೆಯಿಂದ ಮನಸ್ಸಿಗೆ ಶಾಂತಿ ಸಿಗಲಿದೆ. ಸಿಟ್ಟಿನ ಮೇಲೆ ನಿಯಂತ್ರಣವಿರಲಿ.
ಕನ್ಯಾ ರಾಶಿ
ಇಂದು ಮಿಶ್ರಫಲದ ದಿನ. ಗೃಹ ನಿರ್ಮಾಣದ ಕೆಲಸಗಳು ಅಂದುಕೊಂಡಷ್ಟು ಸುಲಭವಾಗಿ ಸಾಗದು. ಸಹೋದರಿಯ ಜೊತೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ಕೆಲಸದ ಒತ್ತಡದಿಂದಾಗಿ ಯಾರ ಮಾತಿಗೂ ಕಿವಿಗೊಡುವ ತಾಳ್ಮೆ ನಿಮ್ಮಲ್ಲಿ ಇರುವುದಿಲ್ಲ.
ತುಲಾ ರಾಶಿ
ಇಂದು ಅಸಾಧ್ಯವಾದುದನ್ನು ಸಾಧಿಸುವ ಹಠವಿರುತ್ತದೆ. ವಾಸ್ತವಕ್ಕಿಂತ ಭಿನ್ನವಾಗಿ ಯೋಚಿಸುವಿರಿ. ರಾಜಕೀಯ ಪ್ರವೇಶಕ್ಕೆ ತುಡಿಯುವವರಿಗೆ ಹೊಸ ಮಾರ್ಗಗಳು ಗೋಚರಿಸಲಿವೆ. ಮಕ್ಕಳ ಮೇಲಿನ ಅತಿಯಾದ ವ್ಯಾಮೋಹ ನಿಮಗೆ ಅರಿವಿಲ್ಲದಂತೆ ಬಂಧನವಾಗಿ ಕಾಡಬಹುದು. ನಿಮ್ಮ ಉತ್ಸಾಹ ಇಂದು ಉತ್ತುಂಗದಲ್ಲಿರುತ್ತದೆ.
ವೃಶ್ಚಿಕ ರಾಶಿ
ಇಂದು ಮಾತಿನ ಮೇಲೆ ನಿಗಾ ಇಡಬೇಕು. ನಿಮ್ಮ ಕಟು ಮಾತುಗಳು ಶತ್ರುಗಳನ್ನು ಸೃಷ್ಟಿಸಬಹುದು. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಇಂದು ಪೂರ್ಣಗೊಳ್ಳಲಿವೆ. ಅಪರಿಚಿತರಿಗೆ ಹಣ ನೀಡುವಾಗ ಎಚ್ಚರವಿರಲಿ. ವಿದ್ಯಾರ್ಥಿಗಳಿಗೆ ಇಂದು ಶುಭ ದಿನವಾಗಿದ್ದು, ಗೊಂದಲಗಳು ಬಗೆಹರಿಯಲಿವೆ.
ಧನು ರಾಶಿ
ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ಪಡೆಯಲಿದ್ದಾರೆ. ವ್ಯಾಪಾರದಲ್ಲಿ ಜಾಣ್ಮೆಯ ನಿರ್ಧಾರಗಳು ಲಾಭ ತಂದುಕೊಡಲಿವೆ. ತಂದೆಯ ಆರೋಗ್ಯದ ಬಗ್ಗೆ ನಿಗಾ ಇರಲಿ. ನಿಮ್ಮ ಸೋಲನ್ನು ಒಪ್ಪಿಕೊಳ್ಳಲು ನಿಮಗೆ ಕಷ್ಟವೆನಿಸಬಹುದು. ದೈವಿಕ ಚಿಂತನೆ ಅಥವಾ ಪುಣ್ಯ ಕ್ಷೇತ್ರಗಳ ಭೇಟಿ ಮನಸ್ಸಿಗೆ ನೆಮ್ಮದಿ ನೀಡಲಿದೆ.
ಮಕರ ರಾಶಿ
ಇಂದು ಜವಾಬ್ದಾರಿಗಳ ಸುರಿಮಳೆಯೇ ಇರಲಿದೆ. ಹತ್ತಾರು ಕೆಲಸಗಳನ್ನು ಮೈಮೇಲೆ ಎಳೆದುಕೊಂಡು ಒತ್ತಡಕ್ಕೆ ಒಳಗಾಗುವಿರಿ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಸಿಗದೆ ಸಮಾಧಾನ ಇರುವುದಿಲ್ಲ. ವಾಹನ ಅಥವಾ ಉದ್ಯಮದಲ್ಲಿ ನಷ್ಟವಾಗುವ ಸಂಭವವಿರುವುದರಿಂದ ಯಾವುದೇ ಹೂಡಿಕೆ ಮಾಡುವ ಮೊದಲು ನೂರು ಬಾರಿ ಯೋಚಿಸಿ.
ಕುಂಭ ರಾಶಿ
ಇಂದು ಪ್ರಾಮಾಣಿಕತೆಗೆ ತಕ್ಕ ಗೌರವ ಪಡೆಯಲಿದ್ದಾರೆ. ಅಂದುಕೊಂಡ ಕೆಲಸಗಳು ಸುಗಮವಾಗಿ ಸಾಗಲಿವೆ. ಆದರೆ ಮಕ್ಕಳ ವಿಚಾರದಲ್ಲಿ ಅಧಿಕ ಖರ್ಚು ಬರಬಹುದು. ನಿಮ್ಮ ಸ್ವಂತಿಕೆಯನ್ನು ಪ್ರದರ್ಶಿಸಲು ಇಂದು ಸೂಕ್ತ ವೇದಿಕೆ ಸಿಗಲಿದೆ. ಕೆಲಸದ ವಿಷಯದಲ್ಲಿ ಸ್ವಲ್ಪ ಅತೃಪ್ತಿ ಕಾಡಬಹುದು.
ಮೀನ ರಾಶಿ
ಇಂದು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಬಿಗುವಿನ ವಾತಾವರಣವಿರುತ್ತದೆ. ಕೊಟ್ಟ ಸಾಲವನ್ನು ಹಿಂಪಡೆಯಲು ಹರಸಾಹಸ ಪಡಬೇಕಾಗಬಹುದು. ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ ಎಚ್ಚರವಿರಲಿ. ನಿಮ್ಮ ಹಾಸ್ಯ ಪ್ರವೃತ್ತಿಯನ್ನು ಇತರರು ಗಂಭೀರವಾಗಿ ಪರಿಗಣಿಸಿ ಮನಸ್ತಾಪ ಮಾಡಿಕೊಳ್ಳಬಹುದು. ಮನಸ್ಸು ಚಂಚಲವಾಗಿರುವುದರಿಂದ ಧ್ಯಾನ ಮಾಡುವುದು ಉತ್ತಮ.
ಇಂದಿನ ಪಂಚಾಂಗದ ವಿಶೇಷ
-
ಸಂವತ್ಸರ: ಪರಾಭವ ಸಂವತ್ಸರ, ಉತ್ತರಾಯಣ
-
ತಿಥಿ: ಚೈತ್ರ ಶುಕ್ಲ ಚತುರ್ಥೀ
-
ನಕ್ಷತ್ರ: ಅಶ್ವಿನೀ
-
ಶುಭ ಕಾಲ: ರಾಹು ಕಾಲ (17:04 – 18:34) ರ ಅವಧಿಯಲ್ಲಿ ಶುಭ ಕಾರ್ಯಗಳನ್ನು ಮಾಡದಿರುವುದು ಒಳ್ಳೆಯದು.
