ಜನ್ಮಸಂಖ್ಯೆ ಆಧಾರಿತ ಇಂದಿನ ನಿಮ್ಮ ಭವಿಷ್ಯದ ಬಗ್ಗೆ ತಿಳಿಯಿರಿ..!

Untitled design 2025 12 11T064633.826
ಜನ್ಮಸಂಖ್ಯೆ 1 (1, 10, 19, 28)

ಕುಟುಂಬದಲ್ಲಿ ನಡೆಯುವ ಕೆಲವು ಅನಿರೀಕ್ಷಿತ ಬೆಳವಣಿಗೆಗಳು ನಿಮಗೆ ನಿರಾಶೆಯನ್ನುಂಟುಮಾಡಲಿವೆ. ಅದರಲ್ಲೂ ವಿಶೇಷವಾಗಿ ನಿಮ್ಮ ಸಲಹೆಗಳು ಅನುಕೂಲಕರ ಎಂದು ತಿಳಿದಿದ್ದರೂ ಅದನ್ನು ನಿರ್ಲಕ್ಷ್ಯ ಮಾಡುವವರಿಂದ ಹೆಚ್ಚಿನ ಬೇಸರವಾಗಲಿದೆ. ಇಂತಹ ಸಂದರ್ಭದಲ್ಲಿ ಮಾನಸಿಕ ನೆಮ್ಮದಿ ಕಾಪಾಡಿಕೊಳ್ಳುವುದು ಮುಖ್ಯ. ಮಕ್ಕಳ ಆಹಾರದ ಬಗ್ಗೆ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಕಾಳಜಿ ವಹಿಸಬೇಕು. ಉದ್ಯೋಗಸ್ಥರಿಗೆ ಇಂದು ಕೆಲವು ತಾಂತ್ರಿಕ ಅಡಚಣೆಗಳು ಮತ್ತು ಸವಾಲುಗಳು ಎದುರಾಗಲಿವೆ.

ಜನ್ಮಸಂಖ್ಯೆ 2 (2, 11, 20, 29)

ಹೊಸ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಇಂದು ತೀವ್ರವಾದ ಪ್ರಯತ್ನ ಮಾಡುವ ದಿನವಾಗಿದೆ. ಸಿ.ವಿ. (Bio-data) ಸಿದ್ಧತೆ, ಸೋಷಿಯಲ್ ನೆಟ್‌ವರ್ಕ್ ಮೂಲಕ ರೆಫರೆನ್ಸ್‌ಗಳನ್ನು ಪಡೆಯುವುದು ಹೀಗೆ ಎಲ್ಲವನ್ನು ಒಂದರ ನಂತರ ಒಂದರಂತೆ ಮಾಡುವುದರಲ್ಲಿ ದಿನದ ಹೆಚ್ಚಿನ ಸಮಯ ಕಳೆಯಲಿದೆ. ಮನೆಗೆ ಬೇಕಾದ ಕೆಲವು ಯಂತ್ರಗಳು, ಗ್ಯಾಜೆಟ್‌ಗಳನ್ನು ಖರೀದಿ ಮಾಡಲು ಹಣವನ್ನು ವೆಚ್ಚ ಮಾಡಲಿದ್ದೀರಿ.

ಜನ್ಮಸಂಖ್ಯೆ 3 (3, 12, 21, 30)

ಆನ್‌ಲೈನ್ ವ್ಯವಹಾರಗಳನ್ನು ಮಾಡುವಾಗ ಅತಿ ಹೆಚ್ಚು ಎಚ್ಚರಿಕೆಯನ್ನು ವಹಿಸುವುದು ಅಗತ್ಯ. ಏಕೆಂದರೆ, ಒಂದೇ ಪಾವತಿ ಎರಡು ಬಾರಿ (Double Payment) ಆಗಿ, ಆ ಹಣವನ್ನು ಹಿಂಪಡೆಯಲು ಕಷ್ಟಪಡಬೇಕಾಗಬಹುದು. ಉದ್ಯೋಗದ ಸ್ಥಳದಲ್ಲಿ ಈ ಹಿಂದೆ ಆದ ಘಟನೆಗಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇಂದು ಅವಕಾಶ ದೊರೆಯಬಹುದು, ಆದರೆ ಆ ದ್ವೇಷದ ಭಾವನೆಯಿಂದ ಹೊರಬರುವುದರಿಂದಲೇ ನಿಮಗೆ ನೆಮ್ಮದಿ ಸಿಗಲಿದೆ.

ಜನ್ಮಸಂಖ್ಯೆ 4 (4, 13, 22, 31)

ಬಡ್ಡಿಗೆ ಹಣ ನೀಡುವವರು, ಗಿರವಿ ಅಂಗಡಿ ನಡೆಸುವವರು, ಸಿನಿಮಾ ಹಣಕಾಸುದಾರರಾಗಿರುವವರಿಗೆ ಇಂದು ಆದಾಯದಲ್ಲಿ ಗಣನೀಯ ಹೆಚ್ಚಳವಾಗುವ ಯೋಗವಿದೆ. ನಿಮ್ಮ ಪ್ರಭಾವ ಮತ್ತಷ್ಟು ವಿಸ್ತಾರವಾಗುವ ಸಾಧ್ಯತೆ ಇದೆ. ಒಂದು ವೇಳೆ ನೀವು ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸುತ್ತಿದ್ದರೆ, ಸ್ವತಂತ್ರವಾಗಿ ವ್ಯವಹಾರ ಆರಂಭಿಸುವ ನಿರ್ಧಾರಕ್ಕೆ ಬರಲಿದ್ದೀರಿ. ನೀವು ನಿರೀಕ್ಷೆ ಮಾಡಿರದ ಹಣಕಾಸಿನ ಲಾಭ ಇಂದು ಕೈ ಸೇರಲಿದೆ.

ಜನ್ಮಸಂಖ್ಯೆ 5 (5, 14, 23)

ನೀವು ನಿಮ್ಮಷ್ಟಕ್ಕೆ ನೀವು ಇರಲು ಬಯಸಿದರೂ, ಕೆಲವರು ನಿಮ್ಮನ್ನು ವಾದ-ವಿವಾದಗಳಿಗೆ ಎಳೆಯಬಹುದು. ದೊಡ್ಡ ಗುಂಪು ಇರುವ ಸ್ಥಳಗಳಿಗೆ ಇಂದು ಹೋಗದಿರುವುದು ಉತ್ತಮ. ಒಂದು ವೇಳೆ ಅಂಥ ಸ್ಥಳದಲ್ಲಿ ಇರಲೇಬೇಕಾದರೆ, ಮೌನವಾಗಿರುವುದು ಕ್ಷೇಮ. ನೀವು ಸಹನೆಯಿಂದ ಬಹಳ ಸಮಯದಿಂದ ಕಾಯುತ್ತಾ ಬಂದಿದ್ದ ಕಾರ್ಯಗಳು ನಿಮ್ಮಿಷ್ಟದಂತೆಯೇ ಸಾರ್ಥಕವಾಗಲಿವೆ.

ಜನ್ಮಸಂಖ್ಯೆ 6 (6, 15, 24)

ನಿಮ್ಮ ಮೇಲೆ ದೈವಾನುಗ್ರಹ ಇರಲಿದೆ. ಬಹಳ ಕಷ್ಟವಾಗಬಹುದು ಎಂದುಕೊಂಡ ಕೆಲಸ-ಕಾರ್ಯಗಳು, ವ್ಯವಹಾರಗಳು ನಿರೀಕ್ಷೆಗಿಂತಲೂ ಸುಲಭವಾಗಿ ಪೂರ್ಣಗೊಳ್ಳಲಿವೆ. ಹಳೆಯ ವಸ್ತುಗಳ ಖರೀದಿ-ಮಾರಾಟದಲ್ಲಿ ತೊಡಗಿರುವವರಿಗೆ ಆದಾಯದಲ್ಲಿ ಹೆಚ್ಚಳವಾಗಲಿದೆ. ಬ್ರ್ಯಾಂಡೆಡ್ ವಸ್ತುಗಳನ್ನು ಉಡುಗೊರೆಯಾಗಿ ಸ್ವೀಕರಿಸುವ ಯೋಗವಿದೆ. ಈ ದಿನ ನೀವು ಪಾಲ್ಗೊಳ್ಳುವ ಸಮಾರಂಭ ಅಥವಾ ಕಾರ್ಯಕ್ರಮದಲ್ಲಿ ವಿವಾಹ ವಯಸ್ಕರಿಗೆ ಮನಸ್ಸಿಗೆ ಒಪ್ಪುವಂಥ ವಧು ಅಥವಾ ವರ ದೊರೆಯುವ ಸಂಭವವಿದೆ.

ಜನ್ಮಸಂಖ್ಯೆ 7 (7, 16, 25)

ನಿಮ್ಮ ಬಗ್ಗೆ ಗಾಸಿಪ್‌ಗಳು ಹೆಚ್ಚಾಗಿ ಹರಿದಾಡಲಿವೆ. ಅದರ ಮೂಲ ಯಾವುದು, ಯಾರು ಈ ರೀತಿ ವದಂತಿ ಹಬ್ಬಿಸುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ನೀವು ಹರಸಾಹಸ ಪಡುವಂತೆ ಆಗಲಿದೆ. ಮನೆಯ ಮಟ್ಟಿಗೆ ಮಾಡೋಣ ಎಂದುಕೊಂಡಿದ್ದ ಕಾರ್ಯಕ್ರಮವೊಂದನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಲು ಆಲೋಚನೆ ಮಾಡಲಿದ್ದೀರಿ. ಸಂಗೀತಗಾರರಿಗೆ ದೂರದ ಊರುಗಳಿಂದ ಕಾರ್ಯಕ್ರಮಕ್ಕೆ ಆಹ್ವಾನ ಬರಲಿದ್ದು, ಆ ಸ್ಥಳದೊಂದಿಗೆ ನಿಮ್ಮ ಬಾಂಧವ್ಯ ಗಟ್ಟಿಯಾಗಲಿದೆ.

ಜನ್ಮಸಂಖ್ಯೆ 8 (8, 17, 26)

ಯಾರು ಏನೆಂದುಕೊಂಡರೂ ಚಿಂತೆ ಇಲ್ಲ, ಅನಿಸಿದ್ದನ್ನು ನೇರಾನೇರ ಹೇಳಿಬಿಡುತ್ತೇನೆ ಎಂಬ ದಿಟ್ಟ ಮನಸ್ಥಿತಿಯಲ್ಲಿ ಇಂದು ನೀವು ಇರಲಿದ್ದೀರಿ. ನಿಮ್ಮ ಈ ಸ್ವಭಾವದಿಂದ ಕುಟುಂಬ ಸದಸ್ಯರಲ್ಲಿ ಆತಂಕ ಎದುರಾಗಲಿದೆ ಮತ್ತು ಕೆಲವರು ನಿಮಗೆ ತಿಳಿಹೇಳುವ ಪ್ರಯತ್ನ ಮಾಡಲಿದ್ದಾರೆ. ತಾತ್ಕಾಲಿಕ ಉದ್ಯೋಗದಲ್ಲಿ ಇರುವವರಿಗೆ ಈಗಿನ ಕೆಲಸವೇ ಕಾಯಂ ಆಗುವ ಅಥವಾ ಬೇರೆಡೆ ಉತ್ತಮ ಉದ್ಯೋಗ ಸಿಗುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 9 (9, 18, 27)

ಹೊಸ ವಿಚಾರಗಳು ಮತ್ತು ನೀವು ಈ ತನಕ ಕಂಡಿರದ ಕೆಲವು ಸನ್ನಿವೇಶಗಳನ್ನು ಕಾಣಲಿದ್ದೀರಿ. ಇವು ನಿಮ್ಮ ಜೀವನದಲ್ಲಿ ಹೊಸ ಬದಲಾವಣೆಗಳನ್ನು ತರಲಿದ್ದು, ಒಂದು ಬಗೆಯ ಸುರಕ್ಷತೆಯ ಭಾವ ನಿಮ್ಮಲ್ಲಿ ಮನೆ ಮಾಡಲಿದೆ. ಸ್ನೇಹಿತರ ಸಲಹೆ ನಿಮಗೆ ದೊಡ್ಡ ಮಟ್ಟದಲ್ಲಿ ಸಹಾಯಕ್ಕೆ ಬರಲಿದೆ. ದಾನ-ಧರ್ಮಕ್ಕಾಗಿ ಸ್ವಲ್ಪ ಮೊತ್ತದ ಹಣವನ್ನಾದರೂ ಖರ್ಚು ಮಾಡಲಿದ್ದೀರಿ.

Exit mobile version