ಮೇಷ ರಾಶಿ: ಇಂದು ನಿಮ್ಮ ವರ್ತನೆ ಸ್ವಲ್ಪ ವಿಭಿನ್ನವಾಗಿರಲಿದೆ. ಪ್ರಯಾಣದಲ್ಲಿ ಅಡೆತಡೆಗಳು ಎದುರಾದರೂ ನೀವು ಮಾತ್ರ ಧೈರ್ಯದಿಂದ ಮುನ್ನಡೆಯುವಿರಿ. ದೈಹಿಕ ಅಸಮತೋಲನ ಕಾಡಬಹುದು, ಆದ್ದರಿಂದ ಆರೋಗ್ಯದ ಕಡೆ ಗಮನ ಕೊಡಿ. ವ್ಯಾಪಾರದಲ್ಲಿ ಮಧ್ಯಮ ಫಲಿತಾಂಶ ಸಿಗಲಿದೆ.
ವೃಷಭ ರಾಶಿ: ದಾಂಪತ್ಯ ಜೀವನದಲ್ಲಿ ಮನಸ್ತಾಪ ಉಂಟಾದರೆ ಅದನ್ನು ತಕ್ಷಣ ಶಾಂತಗೊಳಿಸಿಕೊಳ್ಳಿ. ಸಂಗಾತಿಯ ಕಾರಣದಿಂದ ಸ್ವಲ್ಪ ಬೇಸರವಾಗಬಹುದು. ಸಮಯಕ್ಕೆ ಸರಿಯಾಗಿ ಊಟ ಮಾಡಿ. ಕೆಲವರು ನಿಮ್ಮ ದಾರಿ ತಪ್ಪಿಸುವ ಪ್ರಯತ್ನ ಮಾಡಬಹುದು. ಮನೆ ಕೆಲಸಗಳಲ್ಲಿ ಹೆಚ್ಚು ಸಮಯ ಕಳೆಯುವಿರಿ. ಅತಿಯಾದ ನಿರೀಕ್ಷೆ ಬೇಡ.
ಮಿಥುನ ರಾಶಿ: ಹಿರಿಯರ ಜವಾಬ್ದಾರಿ ನಿಮ್ಮ ಮೇಲೆ ಬರಬಹುದು. ಅನಿರೀಕ್ಷಿತ ಧನಾಗಮನದಿಂದ ಸಂತೋಷ ಹೆಚ್ಚಲಿದೆ. ಇನ್ನೊಬ್ಬರ ಗೌಪ್ಯತೆಯನ್ನು ಬಿಚ್ಚಿಡುವುದು ಸಂತೋಷದ ವಿಚಾರವಾಗಬಹುದು. ನಿಮ್ಮ ಚಿಂತನೆಗಳು ನಿಮಗೆ ಮಾತ್ರ ಸರಿ ಎನಿಸುವ ಸಾಧ್ಯತೆ ಇದೆ.
ಕರ್ಕಾಟಕ ರಾಶಿ: ಹಳೆಯ ಸಾಲವನ್ನು ಮರುಪಾವತಿ ಮಾಡಬೇಕಾದ ಪರಿಸ್ಥಿತಿ ಬರಬಹುದು. ಶತ್ರುಬಾಧೆಯಿಂದ ಸ್ವಲ್ಪ ತೊಂದರೆ ಇದೆ. ವಿದೇಶೀ ವ್ಯಾಪಾರದಿಂದ ಆದಾಯ ಹೆಚ್ಚಾಗಲಿದೆ. ಕೆಲವು ಸಮಸ್ಯೆಗಳನ್ನು ನೀವೇ ತಂದುಕೊಳ್ಳುವ ಸಾಧ್ಯತೆ ಇದೆ.
ಸಿಂಹ ರಾಶಿ: ಪೂರ್ವನಿರ್ಧಾರವಿಲ್ಲದೆ ವಿದೇಶ ಪ್ರಯಾಣ ಮಾಡುವಿರಿ. ಅಪಾತ್ರರಿಗೆ ವಸ್ತುಗಳನ್ನು ದಾನ ಮಾಡುವ ಸಾಧ್ಯತೆ ಇದೆ. ಆಹಾರದ ಬಗ್ಗೆ ಎಚ್ಚರ ವಹಿಸಿ. ದೂರದ ಸ್ಥಳಕ್ಕೆ ಉದ್ಯೋಗಕ್ಕೆ ಹೋಗಲು ಮನೆಯಿಂದ ನಕಾರಾತ್ಮಕ ಸೂಚನೆ ಸಿಗಬಹುದು.
ಕನ್ಯಾ ರಾಶಿ: ಸಹೋದ್ಯೋಗಿಗೆ ಸಹಾಯ ಮಾಡುವ ಸನ್ನಿವೇಶ ಬರಲಿದೆ. ಕೆಲಸದಲ್ಲಿ ಒತ್ತಡ ಕಡಿಮೆ ಇರುತ್ತದೆ. ನಿಮ್ಮ ಸ್ವಭಾವ ಇತರರಿಗೆ ಅಸಹಜವಾಗಿ ಕಾಣಬಹುದು. ಸಮಯವನ್ನು ವ್ಯರ್ಥ ಮಾಡಿಕೊಂಡು ಬೇಸರಪಟ್ಟುಕೊಳ್ಳಬೇಡಿ. ಯಾರ ಮೇಲೂ ಹಿಡಿತ ಸಾಧಿಸುವ ಪ್ರಯತ್ನ ಬೇಡ.
ತುಲಾ ರಾಶಿ: ನಿಮ್ಮ ವಿದ್ಯೆಗೆ ತಕ್ಕ ಅವಕಾಶಗಳು ಸಿಗಲಿವೆ. ದಾಯಾದಿ ಕಲಹದಿಂದ ಹಿಮ್ಮೆಟ್ಟಬೇಕಾದ ಸನ್ನಿವೇಶ ಬರಬಹುದು. ಮನಸ್ಸಿನ ಸ್ಥಿರತೆ ಕಾಪಾಡಿಕೊಳ್ಳುವುದು ಕಷ್ಟ. ವ್ಯಾಪಾರದಲ್ಲಿ ಜನರನ್ನು ಆಕರ್ಷಿಸುವ ಕಲೆ ಸಿದ್ಧಿಸಿದೆ.
ವೃಶ್ಚಿಕ ರಾಶಿ: ಗೃಹನಿರ್ಮಾಣದಲ್ಲಿ ಆಸಕ್ತಿ ತೋರುವಿರಿ. ನೆರೆಹೊರೆಯವರ ಮಾತಿನಿಂದ ಬೇಸರವಾಗಿ ಪ್ರತಿಯಾಗಿ ಏನಾದರೂ ಹೇಳುವ ಸಾಧ್ಯತೆ ಇದೆ. ಮೇಲಧಿಕಾರಿಗಳು ಕೆಲಸದಲ್ಲಿ ತೊಂದರೆ ಕೊಡಬಹುದು. ನಿಮಗೆ ಖುಷಿ ಕೊಡುವ ಸಂಗತಿಗಳ ಕಡೆ ಗಮನ ಹರಿಸಿ.
ಧನು ರಾಶಿ: ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ಗಮನಿಸಿ, ಅವರಿಗೆ ಮಾರ್ಗದರ್ಶನ ಮಾಡುವಿರಿ. ಪುಣ್ಯಕ್ಷೇತ್ರಗಳಿಗೆ ಕುಟುಂಬ ಸಮೇತ ಭೇಟಿ ನೀಡುವಿರಿ. ದೇಹದಂಡನೆಯಿಂದ ಆಯಾಸವಾಗಲಿದೆ. ವಿದ್ಯಾಭ್ಯಾಸದ ಹೆಸರಲ್ಲಿ ಹಣ ಪಡೆದು ಅನ್ಯ ಕಾರ್ಯಕ್ಕೆ ಬಳಸುವ ಸಾಧ್ಯತೆ ಇದೆ.
ಮಕರ ರಾಶಿ: ನಿರೀಕ್ಷಿತ ಗೌರವ ಸಿಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಸ್ವಲ್ಪ ಒತ್ತಡ ಇದೆ. ಹೆಣ್ಣು ಮಕ್ಕಳಿಂದ ಯಶಸ್ಸು ಸಿಗಲಿದೆ. ಹೊಸ ಉದ್ಯೋಗದ ಅಭಿವೃದ್ಧಿಗಾಗಿ ಪ್ರಯತ್ನಗಳು ಆರಂಭವಾಗಲಿವೆ. ಪಿತ್ರಾರ್ಜಿತ ಆಸ್ತಿ ತಾನಾಗಿಯೇ ಬರಬಹುದು.
ಕುಂಭ ರಾಶಿ: ಹೊಸ ಉದ್ಯಮದ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಲಿವೆ. ಅಪರೂಪದ ಬಂಧುಗಳ ಸಮಾಗಮದಿಂದ ಸಂತೋಷವಾಗಲಿದೆ. ವಾಹನ ಚಾಲನೆಯಲ್ಲಿ ಎಚ್ಚರ ವಹಿಸಿ, ಗಾಯದ ಸಾಧ್ಯತೆ ಇದೆ. ನಿಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವತ್ತ ಪ್ರಗತಿಯಲ್ಲಿದ್ದೀರಿ.
ಮೀನ ರಾಶಿ: ಸಂತೋಷಕ್ಕೆ ಅಡ್ಡಿಯಾಗುವ ಕಾರ್ಯ ಮಾಡಿಕೊಂಡು ಪಶ್ಚಾತ್ತಾಪ ಪಡುವ ಸಾಧ್ಯತೆ ಇದೆ. ಅಜಾಗರೂಕತೆಯಿಂದ ವಸ್ತು ನಷ್ಟವಾಗಬಹುದು. ಹೊಸ ವಾಹನ ಖರೀದಿಸುವ ಆಲೋಚನೆ ಇದೆ.
