ಲಖನೌ/ಜಾಲೌನ್: ಉತ್ತರ ಪ್ರದೇಶದ ಜಾಲೌನ್ ಜಿಲ್ಲೆಯ ಓರೈ ಪೊಲೀಸ್ ಠಾಣೆಯಲ್ಲಿ ಇಬ್ಬರು ಕಾನ್ಸ್ಟೇಬಲ್‌ಗಳು ಆತ್ಮೀಯವಾಗಿ ವರ್ತಿಸುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಹಿಳಾ ಕಾನ್ಸ್ಟೇಬಲ್ ತಮ್ಮ ಪುರುಷ ಸಹೋದ್ಯೋಗಿಯನ್ನು ಹಿಂದಿನಿಂದ ಅಪ್ಪಿಕೊಂಡು, ಆತ್ಮೀಯವಾಗಿ ಮಾತನಾಡುತ್ತಿರುವ ದೃಶ್ಯವನ್ನು ಕಾಣಬಹುದು. ಈ ಘಟನೆ ತಡರಾತ್ರಿ ನಡೆದಿದ್ದು, ಕರ್ತವ್ಯದ ವೇಳೆ ಇಬ್ಬರೂ ಸಾಮಾನ್ಯ ಉಡುಪಿನಲ್ಲಿದ್ದರು. ಆದರೆ ಪುರುಷ ಕಾನ್ಸ್ಟೇಬಲ್ ಕರ್ತವ್ಯದಲ್ಲಿದ್ದನು ಎನ್ನಲಾಗಿದೆ.
ಏನಿದ್ದು ಆ ವೈರಲ್ ವಿಡಿಯೋದಲ್ಲಿ?
ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದ್ದು, ಕಂಪ್ಯೂಟರ್ ಕೆಲಸದಲ್ಲಿ ನಿರತನಾಗಿದ್ದ ಪುರುಷ ಕಾನ್ಸ್ಟೇಬಲ್ ಅರವಿಂದ್ ಅವರ ಬಳಿಗೆ ಮಹಿಳಾ ಕಾನ್ಸ್ಟೇಬಲ್ ಬಂದು ಅವರ ಹಿಂದಿನಿಂದ ಅಪ್ಪಿಕೊಳ್ಳುತ್ತಾರೆ. ನಂತರ ಇಬ್ಬರೂ ಠಾಣೆಯೊಳಗೆ ಆತ್ಮೀಯವಾಗಿ ಮಾತನಾಡುತ್ತಾ, ನಡೆದಾಡುತ್ತಿರುವ ದೃಶ್ಯವೂ ಈ ವಿಡಿಯೋದಲ್ಲಿದೆ. ಈ ದೃಶ್ಯವನ್ನು ಸೋರಿಕೆ ಮಾಡಿದವರು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ ಕೆಲವು ವರದಿಗಳ ಪ್ರಕಾರ, ಕರ್ತವ್ಯದಲ್ಲಿದ್ದ ಸಹೋದ್ಯೋಗಿಯೊಬ್ಬರು ಈ ಸಿಸಿಟಿವಿ ದೃಶ್ಯವನ್ನು ಮೊಬೈಲ್‌ಲ್ಲಿ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
🚨 उत्तर प्रदेश पुलिस का रोमांस करते हुए CCTV
जालौन की उरई कोतवाली का एक कथित CCTV वीडियो सामने आया है जिसमें ड्यूटी के दौरान एक महिला व पुरुष पुलिसकर्मी आपस में रोमांटिक मूड में दिखाई दे रहे है।
ड्यूटी दौरान अनुशासन न होना और उत्तर प्रदेश की कार्यशैली को दर्शाता है। pic.twitter.com/hT2NFVWVCH
— Adv Deepak Babu (@dbabuadvocate) June 25, 2026
ಪೊಲೀಸ್ ಇಲಾಖೆ ಕ್ರಮ
ವೈರಲ್ ವಿಡಿಯೋ ತೀವ್ರ ಟೀಕೆಗೆ ಗುರಿಯಾಗುತ್ತಿದ್ದಂತೆ, ಜಾಲೌನ್ ಪೊಲೀಸ್ ವರಿಷ್ಠಾಧಿಕಾರಿಗಳು ಪುರುಷ ಕಾನ್ಸ್ಟೇಬಲ್ ಅರವಿಂದ್ ಅವರನ್ನು ತಕ್ಷಣ ಅಮಾನತುಗೊಳಿಸಲಾಯಿತು. ಶಿಸ್ತುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆಂಬ ಕಾರಣಕ್ಕೆ ಅರವಿಂದ್ ಅವರನ್ನು ಅಮಾನತುಗೊಳಿಸಲಾಯಿತು. ಅಲ್ಲದೇ, ಘಟನೆಯ ಸಂಪೂರ್ಣ ತನಿಖೆಯನ್ನು ನಗರ ಉಪವಿಭಾಗಾಧಿಕಾರಿ (SDM) ಅವರಿಗೆ ವಹಿಸಿಕೊಡಲಾಗಿದೆ. ತನಿಖಾ ವರದಿ ಬಂದ ನಂತರವೇ ಮುಂದಿನ ಶಿಸ್ತುಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಆದರೆ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಪುರುಷ ಕಾನ್ಸ್ಟೇಬಲ್ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗಿದ್ದು, ಮಹಿಳಾ ಕಾನ್ಸ್ಟೇಬಲ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. “ಇಬ್ಬರೂ ಸಮಾನವಾಗಿ ಅಪರಾಧ ಮಾಡಿದ್ದಾರೆ. ಆದರೆ ಮಹಿಳೆಗೆ ಶಿಸ್ತುಕ್ರಮವಿಲ್ಲ, ಪುರುಷನಿಗೆ ಮಾತ್ರ ಅಮಾನತು ಎಂದರೆ ಅದು ಸ್ಪಷ್ಟ ಲಿಂಗ ತಾರತಮ್ಯ” ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ, ಪೊಲೀಸ್ ಠಾಣೆಗಳ ಗೌರವವನ್ನು ಉಳಿಸುವ ನಿಟ್ಟಿನಲ್ಲಿ ಕಠಿಣ ಕ್ರಮಗಳ ಅಗತ್ಯವಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. “ಇಂತಹ ವರ್ತನೆಗಳು ಪೊಲೀಸ್ ಇಲಾಖೆಯ ಪ್ರತಿಷ್ಠೆಗೆ ಕುಂದು ತರುತ್ತವೆ. ಎಲ್ಲರೂ ತಮ್ಮ ವೈಯಕ್ತಿಕ ಬದುಕು ಮತ್ತು ಕರ್ತವ್ಯದ ನಡುವೆ ಅಂತರ ಕಾಯ್ದುಕೊಳ್ಳಬೇಕು” ಎಂದು ಅವರು ತಿಳಿಸಿದ್ದಾರೆ.
